For Quick Alerts
ALLOW NOTIFICATIONS  
For Daily Alerts

  ಚಿಟ್ಟೆಯ ಮೈ ಬಣ್ಣ ಮನುಷ್ಯನ ಭವಿಷ್ಯ ನಿರ್ಧರಿಸುತ್ತದೆಯಂತೆ!!

  By Divya Pandith
  |

  ವಿಜ್ಞಾನ ತಂತ್ರಜ್ಞಾನಗಳಲ್ಲಿ ಮುಂದುವರಿದಿದೇವೆ. ಇತರ ಪ್ರಾಣಿಗಳಿಗಿಂತ ಮನುಷ್ಯ ಜನ್ಮ ಶ್ರೇಷ್ಠ ಹಾಗೂ ಭಿನ್ನವಾದದ್ದು. ನಾವು ನಾಗರೀಕ ಜೀವನವನ್ನು ಸಾಗಿಸುತ್ತೇವೆ. ನಮಗೆ ಒಂಬತ್ತು ಬಗೆಯ ನವರಸಗಳ ಭಾವನೆಗಳಿವೆ. ನಾವು ವನಗಳಲ್ಲಿ ಬದುಕುವುದಿಲ್ಲ. ನಗರದಲ್ಲಿ ಜೀವಿಸುತ್ತೇವೆ. ಅನೇಕ ವಿಷಯಗಳನ್ನು ಹಿಡಿದು ನಾವು ಎಷ್ಟೇ ಶೇಷ್ಠರು ಎಂದುಕೊಂಡರೂ ನಮಗೆ ಪ್ರಕೃತಿಯೊಂದಿಗೆ ನಂಟಿದೆ. ಅದರ ಮಡಿಲಲ್ಲಿ ನಾವು ಒಂದು ಪುಟ್ಟ ಜೀವಿಗಳು ಎನ್ನುವುದನ್ನು ಮರೆಯುವಂತಿಲ್ಲ.

  ಪ್ರಕೃತಿಯ ಮಡಿಲಲ್ಲಿ ಇರುವ ನಾವು ವನ್ಯ ಜೀವಿಗಳಿಂದ ದೂರವಾಗಿದ್ದರೂ ಅವು ನಮ್ಮ ಭವಿಷ್ಯ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಅರೇ! ಹೌದಾ? ಎನ್ನುವ ಆಶ್ಚರ್ಯ ಉಂಟಾಗಬಹುದು. ಆದರೆ ಇದು ಸತ್ಯ. ಒಂದು ಕೀಟವಾಗಿ ಹುಟ್ಟಿ ಮತ್ತೊಂದು ಜನ್ಮದಲ್ಲಿ ಎಲ್ಲರ ಮನ ಗೆಲ್ಲುವ ಚಿಟ್ಟೆಯಾಗಿ ಹಾರಾಡುವ ಅವುಗಳ ವರ್ಣನೆ ಹೇಳಲಸಾಧ್ಯ. ಅಂತಹ ಒಂದು ಚಿಟ್ಟೆಯನ್ನು ನೋಡಿದಾಗ ನಮ್ಮ ಮನಸ್ಸು ಒಂದು ಬಗೆಯ ಖುಷಿಯನ್ನು ಅನುಭವಿಸುತ್ತದೆ. ಕ್ಷಣಾರ್ಧದಲ್ಲಿ ನಿರಾಳ ಭಾವಕ್ಕೆ ಬರುತ್ತದೆ. 

  ಅಂಗೈಯ ಹುಟ್ಟು ಮಚ್ಚೆ-ವ್ಯಕ್ತಿಯ ವ್ಯಕ್ತಿತ್ವ ಹೇಳುವ ಭವಿಷ್ಯವಾಣಿ!

  ವರ್ಣ ರಂಜಿತವಾಗಿ ಹಾರಾಡುವ ಈ ಚಿಟ್ಟೆಗಳು ಕೇವಲ ತಮ್ಮ ಬಣ್ಣಗಳಲ್ಲಷ್ಟೇ ವಿಶೇಷ ಎನಿಸಿಕೊಂಡಿಲ್ಲ. ಬದಲಾಗಿ ತನ್ನ ಬಣ್ಣಗಳ ವಿಶೇಷತೆಯಿಂದ ಮನುಷ್ಯರ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ಸಾರುತ್ತದೆ. ನಿಜ, ಇಂತಹ ಒಂದು ಅಪರೂಪದ ಸಂಗತಿಯೊಂದಿಗೆ ಭವಿಷ್ಯವನ್ನು ಹೇಳುವ ಚಿಟ್ಟೆಗಳ ಬಣ್ಣವು ನೀವು ಯಾವ ತಿಂಗಳಿನಲ್ಲಿ ಹುಟ್ಟಿರುವಿರಿ? ಅದು ಯಾವವ್ಯಕ್ತಿತ್ವದ ಸಂಕೇತ? ಭವಿಷ್ಯವೇನು ಎನ್ನುವುದನ್ನು ತೆರೆದಿಡುತ್ತದೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಅರಿಯಬೇಕೆಂದರೆ ಈ ಮುಂದಿರುವ ವಿವರಣೆಯನ್ನು ಓದಿ... 

  ಜನವರಿ

  ಜನವರಿ

  ಈ ತಿಂಗಳಲ್ಲಿ ಹುಟ್ಟಿದವರು ಸಾಮಾಜಿಕವಾಗಿ ಹೆಚ್ಚು ಗಮನ ಸೆಳೆಯುತ್ತಾರೆ. ಅಲ್ಲದೆ ಉತ್ತಮ ಶ್ರೋತೃಗಳೆಂದು ಪರಿಗಣಿಸಲಾಗುತ್ತದೆ. ಇವರ ವೈಯಕ್ತಿಕ ವಿಚಾರಗಳನ್ನು ಹೇಳಬೇಕೆಂದರೆ, ಇವರಲ್ಲಿರುವ ಅನನ್ಯವಾದ ಗುಣಗಳಿಂದ ಬಹಳಷ್ಟು ಸ್ನೇಹಿತರನ್ನು ಸಂಪಾದಿಸುತ್ತಾರೆ. ತಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆಗಳಿಂದ ಇತರರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುವಿರಿ. ಸ್ವಾತಂತ್ರ್ಯ ಮತ್ತು ಸೌಂದರ್ಯವನ್ನು ಪ್ರೀತಿಸುವ ನೀವು ಒಂದು ಸಭೆಯಲ್ಲಿ ಅಥವಾ ಜನ ಮಧ್ಯೆ ಇದ್ದರೆ ಆ ವಾತಾವರಣವು ಸಂತೋಷದಿಂದ ತುಂಬಿರುತ್ತದೆ. ನಿಮ್ಮ ಸೆಳೆತ ಹಾಗೂ ಆಕರ್ಷಣೆ ಬಹಳ ತೀಕ್ಷ್ಣತೆಯನ್ನು ಹೊಂದಿರುತ್ತದೆ. ಆ ಕಾರಣದಿಂದಲೇ ಜನರು ನಿಮ್ಮೆಡೆಗೆ ಉಪೇಕ್ಷೆಯಿಂದ ಆಕರ್ಷಿಸಲ್ಪಡುತ್ತಾರೆ.

  ಹುಟ್ಟಿದ ದಿನಾಂಕ, ವರ್ಷ, ತಿಂಗಳು ಗೊತ್ತಿದ್ದರೆ ಸಾಕು, ವ್ಯಕ್ತಿತ್ವ ತಿಳಿಯುವುದು

  ಫೆಬ್ರುವರಿ

  ಫೆಬ್ರುವರಿ

  ಚಿಟ್ಟೆಯ ಬಣ್ಣದ ಅನುಸಾರ ಈ ತಿಂಗಳಲ್ಲಿ ಜನಿಸಿದವರು ತಮ್ಮ ವ್ಯಕ್ತಿತ್ವದ ಬಗ್ಗೆ ಹಾಗೂ ವರ್ತನೆಗಳ ಕುರಿತು ವಿಶೇಷವಾದ ಭರವಸೆಯನ್ನು ಹೊಂದಿರುತ್ತಾರೆ. ಇವರು ಒಂದು ಗುಂಪಿನಲ್ಲಿರುವಾಗ ಆ ಗುಂಪಿನ ನಾಯಕರಾಗಿ ಕಾರ್ಯ ನಿರ್ವಹಿಸಬಲ್ಲರು. ಇದು ಇವರ ವಿಶೇಷ ಸಾಮಥ್ರ್ಯ ಎನ್ನುವುದು ಎದ್ದು ಕಾಣಿಸುತ್ತದೆ. ಇಷ್ಟೇ ಅಲ್ಲದೆ ಈ ಮಾಸದಲ್ಲಿ ಹುಟ್ಟಿದವರು ತಮ್ಮ ವಿಶೇಷ ಗುಣಗಳಿಂದ ಜನರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತಾರೆ. ಮೋಡಿ ಮಾಡುವ ಇವರ ಗುಣದಿಂದ ಹೆಚ್ಚು ಜನಪ್ರಿತಯೆತನ್ನು ಹೊಂದಿರುತ್ತಾರೆ.

   ಮಾರ್ಚ್

  ಮಾರ್ಚ್

  ಈ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಎಂದಿಗೂ ಬಿಟ್ಟುಕೊಡದ ಅತ್ಯುತ್ತಮ ಗುಣವನ್ನು ಹೊಂದಿರುತ್ತಾರೆ. ಪ್ರತಿಯೊಂದು ಕೆಲಸದಲ್ಲೂ ಹೆಚ್ಚು ಪ್ರಯತ್ನವನ್ನು ಮಾಡುತ್ತಾರೆ. ಜೀವನದಲ್ಲಿ ಸ್ಥಿರವಾದ ವೇಗವನ್ನು ಹೊಂದಲು ಇಷ್ಟಪಡುವ ಇವರು ಸನ್ನಿವೇಶಕ್ಕೆ ತಕ್ಕಂತೆ ಸೂಕ್ತ ನಿರ್ಣಯವನ್ನು ಕೈಗೊಳ್ಳುತ್ತಾರೆ. ಉತ್ತಮ ನಡತೆಯುಳ್ಳ ಇವರ ಅಂತದೃಷ್ಟಿಯು ಬಲವಾಗಿರುತ್ತದೆ ಎಂದು ಈ ತಿಂಗಳ ಚಿಟ್ಟೆಯ ಬಣ್ಣವು ವರ್ಣಿಸುತ್ತದೆ.

  ಏಪ್ರಿಲ್

  ಏಪ್ರಿಲ್

  ಈ ಮಾಸದಲ್ಲಿ ಜನಿಸಿದವರು ಹೆಚ್ಚು ಭಾವನಾತ್ಮಕವಾದ ವರ್ತನೆಯನ್ನು ಹೊಂದಿರುತ್ತಾರೆ. ಚಿಕ್ಕ ಪುಟ್ಟ ವಿಚಾರಗಳಿಗೂ ಹೆಚ್ಚು ಚಿಂತನೆ ನಡೆಸುತ್ತಾರೆ. ಎಲ್ಲಾ ವಿಚಾರದಲ್ಲೂ ಹೆಚ್ಚು ಕಾಳಜಿವಹಿಸುವ ಸೂಕ್ಷ್ಮ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಹೆಚ್ಚು ಶಾಂತವಾಗಿರುವುದನ್ನು ಪ್ರೀತಿಸುತ್ತಾರೆ. ತಮ್ಮ ಸಕಾರಾತ್ಮಕ ಮತ್ತು ಶಾಂತಿಯುತವಾದ ಸ್ವಭಾವದೊಂದಿಗೆ ತನ್ನ ಸುತ್ತಲ ವಾತಾವರಣ ಹೆಚ್ಚು ಪ್ರೀತಿಯಿಂದ ಕೂಡಿರುವಂತೆ ಮಾಡಿಕೊಳ್ಳುತ್ತಾರೆ. ಘರ್ಷಣೆಗಳಲ್ಲಿ ಇವರು ಪಾತ್ರವಹಿಸಿದರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮಥ್ರ್ಯವಿರುತ್ತದೆ.

  ಮೇ

  ಮೇ

  ಈ ತಿಂಗಳಲ್ಲಿ ಹುಟ್ಟಿದವರು ಒಂದು ಅದ್ಭುತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ತಮ್ಮನ್ನು ತಾವು ಹೆಚ್ಚು ಪ್ರೀತಿಸುತ್ತಾರೆ. ಅವರು ಸಾಮಾನ್ಯವಾಗಿ ಕೆಲವು ವಿಚಾರಗಳ ಬಗ್ಗೆ ಅವರು ಯಾರಿಗೂ ಏನನ್ನೂ ಹೇಳಲು ಬಯಸುವುದಿಲ್ಲ. ತಮ್ಮ ಪ್ರೀತಿಪಾತ್ರರನ್ನು ಹೆಚ್ಚು ಪ್ರೀತಿಸುತ್ತಾರೆ. ಪ್ರಾಯೋಗಿಕ ಚಿಂತನೆ ಹಾಗೂ ವರ್ತನೆಯನ್ನು ಹೊಂದಿರುವ ಇವರು ಕುಟುಂಬವನ್ನು ಆಳವಾಗಿ ಪ್ರೀತಿಉತ್ತಾರೆ ಎಂದು ಈ ತಿಂಗಳ ಚಿಟ್ಟೆಯ ಬಣ್ಣ ಹೇಳುತ್ತದೆ.

  ಜೂನ್

  ಜೂನ್

  ಅದ್ಭುತ ವ್ಯಕ್ತಿತ್ವವನ್ನು ಹೊಂದಿರುವ ಇವರು ಯಾವುದೇ ರೀತಿಯ ಘರ್ಷಣೆ ಉಂಟಾಗುವುದನ್ನು ತಡೆಯುವ ಸಮಥ್ರ್ಯವನ್ನು ಹೊಂದಿರುತ್ತಾರೆ. ತಮ್ಮ ಪ್ರೀತಿಯಿಂದಲೇ ತನ್ನ ಸುತ್ತಲಿನ ಜನರನ್ನು ಹಾಗೂ ಸಮಾಜವನ್ನು ಗೆಲ್ಲುತ್ತಾರೆ. ಚಿನ್ನದಂತಹ ಗುಣ ಹಾಗೂ ಹೃದಯ ವಿಶಾಲತೆ ಹೊಂದಿರುವ ಇವರು ಇತರರ ಭಾವನೆಗೆ ಹಾಗೂ ಅಭಿಪ್ರಾಯಕ್ಕೆ ಬೆಲೆಕೊಡುತ್ತಾರೆ. ಅಲ್ಲದೆ ಉತ್ತಮವಾದ ಸಂಗಾತಿಯಾಗಿ ಇರುತ್ತಾರೆ.

  ಜುಲೈ

  ಜುಲೈ

  ಇವರ ಧೈರ್ಯ ಮತ್ತು ಶೌರ್ಯದೊಂದಿಗೆ ಅವರು ಬಲವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಹೇಳಬಹುದು. ಇವರಲ್ಲಿರುವ ಸೂಕ್ಷ್ಮವಾದ ಭಾವನೆ ಹಾಗೂ ವರ್ತನೆಗಳನ್ನು ಇತರರಿಗೆ ಕಾಣದಂತೆ ಮರೆ ಮಾಚುತ್ತಾರೆ ಎಂದು ಚಿಟ್ಟೆಯ ಬಣ್ಣ ಈ ತಿಂಗಳಿಗನುಸಾರವಾಗಿ ಹೇಳುತ್ತದೆ. ಜಗತ್ತಿನಿಂದ ಮರೆ ಮಾಚುವ ಇವರ ಸ್ವಭಾವವನ್ನು ಕೆಲವೇ ಕೆಲವು ವ್ಯಕ್ತಿಗಳು ಗುರುತಿಸುತ್ತಾರೆ ಎಂದು ಹೇಳಲಾಗುತ್ತದೆ. ಇವರ ಸುತ್ತ ಯಾವುದಾದರೂ ತಪ್ಪು ಸಂಗತಿಗಳು ಸಂಭವಿಸಿದರೆ ಅದರ ಪರವಾಗಿ ನಿಲ್ಲುತ್ತಾರೆ.

  ಆಗಸ್ಟ್

  ಆಗಸ್ಟ್

  ಈ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ಪ್ರಾಮಾಣಿಕರಾಗಿರುತ್ತಾರೆ. ಅಲ್ಲದೆ ಅಷ್ಟೇ ಕ್ರೂರಿಗಳು ಆಗಿರುತ್ತಾರೆ ಎನ್ನಲಾಗುವುದು. ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕವಾಗಿರುವುದನ್ನು ಬಯಸುವ ಇವರು ತಮ್ಮ ಉತ್ತಮ ಗುಣಲಕ್ಷಣಗಳಿಂದ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ. ಇವರು ಆಕರ್ಷಣೀಯ ವ್ಯಕ್ತಿಯಾಗಿರಲು ಇಷ್ಟಪಡುತ್ತಾರೆ. ಇವರ ವರ್ತನೆಗಳು ಹಾಗೂ ವ್ಯಕ್ತಿತ್ವವು ಇವರಿಗೆ ಸಹಾಯ ಮಾಡುತ್ತದೆ. ಸಮಾಜದಲ್ಲಿ ಕೇಂದ್ರೀಯ ವ್ಯಕ್ತಿಗಳಾಗಿ ಆಕರ್ಷಿತರಾಗಲು ಹೆಚ್ಚು ಕೆಲಸ ಮಾಡಬೇಕೆಂದೇನು ಇಲ್ಲ.

  ಸಪ್ಟೆಂಬರ್

  ಸಪ್ಟೆಂಬರ್

  ಇವರು ಇತರರಿಗೆ ಎದ್ದುಕಾಣುವ ಕಲ್ಪನೆಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಇವರ ಜಿಜ್ಞಾಸೆಯ ಸ್ವಭಾವವು ಎಲ್ಲವನ್ನು ಪ್ರಶ್ನಿಸುವಂತೆ ಮಾಡುತ್ತದೆ. ಕ್ಲಿಷ್ಟ ಪರಿಸ್ಥಿತಿ ಎದುರಾದಾಗ ಸುಲಭವಾಗಿ ಅದರಿಂದ ಆಚೆ ಬರುತ್ತಾರೆ. ಇವರ ಸಾಮಥ್ರ್ಯಕ್ಕೆ ಜನಮನ್ನಣೆ ಪಡೆದುಕೊಳ್ಳುತ್ತಾರೆ. ಅಲ್ಲದೆ ಜನರು ಸಹ ನಾಯಕನನ್ನಾಗಿ ಕಾಣಲು ಸಿದ್ಧರಾಗಿರುತ್ತಾರೆ.

  ಅಕ್ಟೋಬರ್

  ಅಕ್ಟೋಬರ್

  ಈ ತಿಂಗಳಲ್ಲಿ ಜನಿಸದವರಿಗೆ ಸಮಸ್ಯೆ ಹಾಗೂ ಪರಿಹಾರಗಳು ಒಟ್ಟಿಗೆ ಒದಗಿ ಬರುತ್ತವೆ. ಇವರು ಯಾವುದೇ ವಿಚಾರಕ್ಕಾದರೂ ಪಕ್ಷಪಾತವಿಲ್ಲದ ವರ್ತನೆಯನ್ನು ತೋರುತ್ತಾರೆ. ಇದು ಇತರರಿಗೆ ಇವರೊಂದಿಗೆ ಬೆರಯಲು ಅನುವು ಮಾಡಿಕೊಡುತ್ತದೆ. ಇವರು ಎಲ್ಲರ ಸಮಸ್ಯಗಳನ್ನು ಆಲಿಸುತ್ತಾರೆ. ಇವರು ಹೆಚ್ಚು ಚಿಂತನಾ ಶೀಲರು ಎಂದು ಚಿಟ್ಟೆಯ ಬಣ್ಣ ವರ್ಣಿಸುತ್ತದೆ.

  ನವೆಂಬರ್

  ನವೆಂಬರ್

  ಇವರು ಬಹಳ ಅಭಿವ್ಯಕ್ತವಾದ ಮನಸ್ಸನ್ನು ಹೊಂದಿರುತ್ತಾರೆ. ಇವರ ಮನಸ್ಸು ಸದಾ ನವೀನ ವಿಚಾರಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ. ತಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ದೃಢವಾದ ಮನಸ್ಸನ್ನು ಹೊಂದಿರುವ ಇವರು ವಾಸ್ತವ ವಿಚಾರಕ್ಕೆ ದೃಢಚಿಂತನೆಯನ್ನು ನಡೆಸುತ್ತಾರೆ.

  ಡಿಸೆಂಬರ್

  ಡಿಸೆಂಬರ್

  ಈ ತಿಂಗಳಲ್ಲಿ ಹುಟ್ಟಿದವರು ಹೆಚ್ಚು ಮಹತ್ವ ಕಾಂಕ್ಷಿಗಳಾಗಿರುತ್ತಾರೆ. ಇವರ ಭಾವನೆಗಳನ್ನು ಜಗತ್ತಿಗೆ ತೋರ್ಪಡಿಸಲು ಹಿಂಜರಿಯುತ್ತಾರೆ. ಇವರ ಈ ಗುಣವನ್ನು ಸುತ್ತಲಿನ ಜನರು ಮೆಚ್ಚುತ್ತಾರೆ. ತಾವು ಮಾಡಿದ ತಪ್ಪುಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಳ್ಳುತ್ತಾರೆ. ಹೆಚ್ಚು ಸಾಧನೆ ಮಾಡುವ ಇವರು ತಮ್ಮ ಬಗ್ಗೆ ಶಾಶ್ವತವಾದ ಭರವಸೆಯನ್ನು ಹೊಂದಿರುತ್ತಾರೆ ಎಂದು ಚಿಟ್ಟೆಯ ಬಣ್ಣ ಈ ತಿಂಗಳಿಗನುಸಾರವಾಗಿ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.

  English summary

  What Do These Butterflies Reveal About Your Birthday Month

  These colourful butterflies are considered to be powerful symbols of life and each butterfly is said to represent some specific characteristics of each month that it is associated with. So, what are you waiting for? Find out what does your birth month butterfly reveal about you and your personality traits.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more