Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮಗೆ ಗೊತ್ತಾ? ಸಮಯ ಹೇಳುವುದು ನಿಮ್ಮ ವ್ಯಕ್ತಿತ್ವ!
ಹಗಲಿನ ವೇಳೆಯಲ್ಲಿ ಜನಿಸಿದ ಮಕ್ಕಳಿಗೂ ರಾತ್ರಿಯ ವೇಳೆ ಜನಿಸಿದ ಮಕ್ಕಳಿಗೂ ಭವಿಷ್ಯದಲ್ಲಿ ಭಿನ್ನವಾದ ವ್ಯಕ್ತಿತ್ವವಿರುತ್ತದೆ.....
ಜೋತಿಷ್ಯಾಸ್ತ್ರ ಹಾಗೂ ವೇದಗಳ ಅಧ್ಯಯನದ ಪ್ರಕಾರ ವ್ಯಕ್ತಿಯ ಜನ್ಮದಿನಾಂಕ ಮತ್ತು ಸಮಯ ತುಂಬಾ ಮುಖ್ಯವಾಗಿದ್ದು ಆ ವ್ಯಕ್ತಿಯ ಜೀವನದ ಮೇಲೆ ಅಪಾರವಾದ ಪ್ರಭಾವ ಬೀರುತ್ತದೆ. ಹಗಲಿನ ವೇಳೆಯಲ್ಲಿ ಜನಿಸಿದ ಮಕ್ಕಳಿಗೂ ರಾತ್ರಿಯ ವೇಳೆ ಜನಿಸಿದ ಮಕ್ಕಳಿಗೂ ಭವಿಷ್ಯದಲ್ಲಿ ಭಿನ್ನವಾದ ವ್ಯಕ್ತಿತ್ವವಿರುತ್ತದೆ. ಜನ್ಮದಿನಾಂಕದ ರಹಸ್ಯ: ಸಂಖ್ಯೆ ಹೇಳಿ, ಭವಿಷ್ಯ ಕೇಳಿ...!
ಇಂದಿನ ಲೇಖನದಲ್ಲಿ ರಾತ್ರಿಯ ವೇಳೆ ಜನಿಸಿದ ಮಕ್ಕಳು ದೊಡ್ಡವರಾದ ಬಳಿಕ ಹೊಂದುವ ವ್ಯಕ್ತಿತ್ವದ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ಒದಗಿಸಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ರಾತ್ರಿಯ ವೇಳೆ ಜನಿಸಿದ ಮಕ್ಕಳು ದೊಡ್ಡವರಾದ ಬಳಿಕ ತಮ್ಮ ತಾಯಿಯ ಬಗ್ಗೆ ಹೆಚ್ಚಿನ ಅಕ್ಕರೆ ಹಾಗೂ ಕ್ರಿಯಾತ್ಮಕ ವ್ಯಕ್ತಿತ್ವ ಹೊಂದಿರುತ್ತಾರೆ....

ಮಾಹಿತಿ #1
ಸೂರ್ಯಾಸ್ತದ ಬಳಿಕ ಆದರೆ ಚಂದ್ರೋದಯಕ್ಕೂ ಮುನ್ನ ಜನಿಸಿದ ವ್ಯಕ್ತಿಗಳು ಅತ್ಯುತ್ತಮ ಚಿಂತಕರೂ ದೂರದೃಷ್ಟಿಯುಳ್ಳವರೂ ಆಗಿರುತ್ತಾರೆ. ಇವರಿಗೆ ಕಲೆ ಮತ್ತು ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ.

ಮಾಹಿತಿ #2
ರಾತ್ರಿ ವೇಳೆ ಜನಿಸಿದ ಮಕ್ಕಳು ದೊಡ್ಡವರಾದ ಬಳಿಕ ತಮ್ಮ ತಾಯಿಯ ಪ್ರತಿ ಉಳಿದವರಿಗಿಂತಲೂ ಹೆಚ್ಚಿನ ಅಕ್ಕರೆ ಹೊಂದಿರುತ್ತಾರೆ. ಇವರು ತಮ್ಮ ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಗುಣದವರಾಗಿದ್ದು, ವಿಶೇಷವಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರೆ.

ಮಾಹಿತಿ #3
ಈ ವ್ಯಕ್ತಿಗಳು ಹೆಚ್ಚು ಆತ್ಮವಿಶ್ವಾಸಿಗಳಾಗಿರುತ್ತಾರೆ. ಇವರು ಯಾವುದೇ ಪ್ರಲೋಭನೆಗೂ ತಮ್ಮ ಆತ್ಮಸಮ್ಮಾನವನ್ನು ಬಲಿಕೊಡಲಾರರು. ಇವರಿಂದ ಹೆಚ್ಚಿನ ಫಲವನ್ನು ನಿರೀಕ್ಷಿಸಬಹುದು ಹಾಗೂ ಸಾಮಾನ್ಯವಾಗಿ ಇವರು ದಿನದ ಕಾರ್ಯಕ್ರಮಗಳಿಗಿಂತ ಸೂರ್ಯಾಸ್ತದ ಬಳಿಕ ಪ್ರಾರಂಭವಾಗುವ ಕಾರ್ಯಕ್ರಮಗಳಿಗೇ ಹೆಚ್ಚಿನ ಆದ್ಯತೆ ನೀಡುವವರಾಗಿರುತ್ತಾರೆ.

ಮಾಹಿತಿ #4
ಇವರು ಹೆಚ್ಚು ಚೈತನ್ಯಶೀಲರೂ ಹೆಚ್ಚು ಹೆಚ್ಚು ಬಯಸುವವರೂ ಆಗಿರುತ್ತಾರೆ. ಇವರಿಗೆ ಅತಿ ಹೆಚ್ಚಿನ ಕಲ್ಪನಾ ಶಕ್ತಿ ಇದ್ದು ಈ ಶಕ್ತಿಯೇ ಇವರನ್ನು ಹೆಚ್ಚು ಕ್ರಿಯಾತ್ಮಕವಾಗಿಸುತ್ತದೆ.

ಮಾಹಿತಿ #5
ಇವರು ಸೂಕ್ಷ್ಮಮತಿಗಳಾಗಿದ್ದು ಯಾವುದೇ ವಿಷಯವನ್ನು ಧನಾತ್ಮಕವಾಗಿ ವಿಮರ್ಶಿಸಬಲ್ಲವರಾಗಿರುತ್ತಾರೆ. ಇವರು ಸದಾ ತಮ್ಮ ಸುತ್ತ ಮುತ್ತಲ ಸುದ್ದಿಗಳನ್ನು ಪಡೆದು ಜಾಗೃತರಾಗಿರುತ್ತಾರೆ. ಇವರಿಗೆ ಉತ್ತಮ ಸ್ನೇಹಿತರ ವೃಂದವೂ ಇರುತ್ತದೆ. ಒಂದು ವೇಳೆ ನೀವೂ ಈ ವರ್ಗಕ್ಕೆ ಸೇರಿದವರಾಗಿದ್ದರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಮಗೆ ಖಂಡಿತಾ ಒದಗಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಉಪಯೋಗಿಸಿ.



Click it and Unblock the Notifications
