ರಾಶಿ ಭವಿಷ್ಯ: ಪ್ರತಿಯೊಂದು ರಾಶಿಯ ಎರಡು ಮುಖಗಳು

Posted By: Deepu
Subscribe to Boldsky

ಪ್ರತಿಯೊಂದು ರಾಶಿಯಲ್ಲೂ ಕೆಲವೊಂದು ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಇದ್ದೇ ಇರುತ್ತದೆ. ನಮ್ಮ ಶಕ್ತಿಯನ್ನು ಬಳಸಿಕೊಂಡು ಮತ್ತು ದೌರ್ಬಲ್ಯವನ್ನು ನಿವಾರಣೆ ಮಾಡಿ ಹೇಗೆ ಮುಂದುವರಿಯಬೇಕು ಎಂದು ನಮಗೆ ತಿಳಿದಿರಬೇಕು. ಪ್ರತಿಯೊಂದು ರಾಶಿಗೂ ಎರಡು ಮುಖಗಳು ಇವೆ. ಇದನ್ನು ತಿಳಿಯಲು ನಿಮಗೆ ತುಂಬಾ ಕುತೂಹಲವಿರಬಹುದು. ಅದು ಹೇಗೆ ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಿ.

ಮೇಷ

ಮೇಷ

ಈ ರಾಶಿಯ ಜನರಲ್ಲಿ ಶಕ್ತಿಯ ಸಮೃದ್ಧತೆವಾಗಿರುವುದು ಮತ್ತು ಜೀವನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವರು. ಈ ರಾಶಿಯವರು ಭಾವೋದ್ರಿಕ್ತ. ಪ್ರೇರಣೆ ಮತ್ತು ತುಂಬಾ ಮಹತ್ವಪೂರ್ಣ ವ್ಯಕ್ತಿಗಳಾಗಿರುವರು. ಅವರು ಎಲ್ಲರನ್ನು ಆಕರ್ಷಿಸಬಲ್ಲರು. ಆತ್ಮವಿಶ್ವಾಸ ಮತ್ತು ಬಲವಾದ ಇಚ್ಛೆ ಹೊಂದಿರುವ ವ್ಯಕ್ತಿ ಇವರು. ಯಾವುದೇ ಸವಾಲುಗಳಿಗೆ ಹೆದರಲ್ಲ.

ಇವರ ಎರಡು ಮುಖಗಳು

ಇವರ ಎರಡು ಮುಖಗಳು

ಇವರಲ್ಲಿನ ಸಕಾರಾತ್ಮಕತೆಯನ್ನು ಹೊರತುಪಡಿಸಿದರೆ ಈ ರಾಶಿಯವರು ಬೇಗನೆ ಕಿರಿಕಿರಿಗೆ ಒಳಗಾಗಿ ಆಕ್ರಮಣಶೀಲರಾಗುತ್ತಾರೆ. ಪರಿಸ್ಥಿತಿ ತಮ್ಮ ಪರವಾಗಿ ಇಲ್ಲದೆ ಇರುವಾಗ ಅವರು ಕೋಪಗೊಳ್ಳುತ್ತಾರೆ. ಅವರು ತಮ್ಮದೇ ದಾರಿಯಲ್ಲಿ ಇರಲು ಬಯಸುವರು ಮತ್ತು ಇತರರ ಮಾತು ಕೇಳಲ್ಲ. ಇತರರಿಗೆ ಬೆಳಕು ನೀಡಲು ತಮ್ಮ ಬೆಂಕಿಯನ್ನು ಬಳಸಬಹುದೆಂದು ಅವರು ನೆನಪಿಟ್ಟುಕೊಳ್ಳಬೇಕು.

ವೃಷಭ

ವೃಷಭ

ಜೀವನದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಈ ರಾಶಿಯವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರು ತಮ್ಮ ಪ್ರೀತಿಪಾತ್ರರಿಗೆ ಮೀಸಲು ಮತ್ತು ದೀರ್ಘಾವಧಿಯ ಸಂಬಂಧದಲ್ಲಿ ನಂಬಿಕಸ್ತರಾಗಿರುವರು. ಒಳ್ಳೆಯ ವಿಚಾರಗಳನ್ನು ಪ್ರೀತಿಸುವರು ಮತ್ತು ಕಠಿಣ ಕೆಲಸಗಾರರಾಗಿರುವರು. ಈ ವ್ಯಕ್ತಿಗಳು ಪ್ರೀತಿಪಾತ್ರರು, ವಿಶ್ವಾಸಾರ್ಹರು ಮತ್ತು ಸರಳವಾಗಿರುವವರು.

ಎರಡು ಮುಖಗಳು

ಎರಡು ಮುಖಗಳು

ಈ ರಾಶಿಯವರು ಮೊಂಡುತನದ, ಕಟ್ಟುನಿಟ್ಟು ಮತ್ತು ರಾಜಿಯಾಗದವರು. ಈ ರಾಶಿಯಲ್ಲಿನ ಜನರು ಸಂಬಂಧಗಳಲ್ಲಿ ಸ್ವಾಮ್ಯಸೂಚಕರಾಗಲು ಪ್ರವೃತ್ತಿ ಹೊಂದಿದ್ದಾರೆ. ಸಂಬಂಧಗಳಿಗೆ ಪರಿಣಾಮ ಬೀರುವ ಕ್ಷುಲ್ಲಕ ವಿಚಾರಗಳಿಗೆ ಇವರು ಹೆಚ್ಚು ತಲೆಕೆಡಿಸಿಕೊಳ್ಳುವರು.

ಮಿಥುನ

ಮಿಥುನ

ಈ ರಾಶಿಯವರನ್ನು ಅವಳಿಗಳು ಎಂದು ಕರೆಯಲಾಗುತ್ತದೆ. ಈ ರಾಶಿಯಲ್ಲಿನ ಇಬ್ಬರು ವ್ಯಕ್ತಿಗಳು ಒಂದೇ ರೀತಿಯ ಗುಣಸ್ವಭಾವ ಹೊಂದಿರುವರು. ಇವರು ತುಂಬಾ ಸ್ನೇಹಮಹಿ ಹಾಗೂ ತೆರೆದ ಮನಸ್ಸಿನವರಾದರೂ ಜೀವನವನ್ನು ಜಟಿಲಗೊಳಿಸಲ್ಲ. ಇವರು ತುಂಬಾ ಸ್ನೇಹಿತರನ್ನು ಹೊಂದಿರುವರು ಮತ್ತು ಯಾವುದೇ ಸಾಹಸಕ್ಕೆ ಕೈಹಾಕಲು ಹೆದರಲ್ಲ.

ಈ ರಾಶಿಯ ಎರಡು ಮುಖಗಳು

ಈ ರಾಶಿಯ ಎರಡು ಮುಖಗಳು

ಇವರು ಕೆಲವೊಮ್ಮೆ ಹೆಚ್ಚು ವಿಶ್ರಾಂತಿ ಪಡೆಯಬಹುದು ಮತ್ತು ತುಂಬಾ ಕೆಲವು ಕಠಿಣ ನಿರ್ದಾರ ತೆಗೆದುಕೊಳ್ಳಬಹುದು. ಒತ್ತಡದಲ್ಲಿರುವಾಗ ಅಥವಾ ಆಸಕ್ತಿ ಕಳಕೊಂಡಾಗ ಅವರ ಇನ್ನೊಂದು ವ್ಯಕ್ತಿತ್ವವು ಹೊರಬರುವುದು. ಈ ವ್ಯಕ್ತಿತ್ವದಿಂದಾಗಿಯೇ ಮಿಥುನ ರಾಶಿಯವರು ಪ್ರಕ್ಷುಬ್ದತೆ ಅನುಭವಿಸುವರು.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರಿಗೆ ಹಲವಾರು ಧನಾತ್ಮಕ ಗುಣಗಳಿವೆ. ಇವರು ಕಡಿಮೆ ಸ್ವಾಭಿಮಾನಿ. ತುಂಬಾ ಕಾಳಜಿಯುಳ್ಳ, ಭಾವಪರವಶತೆ, ಭಕ್ತಿಯುಳ್ಳ, ನಿಷ್ಠಾವಂತಿಗೆ ಇವರಿಗೆ ನೈಸರ್ಗಿಕವಾಗಿ ಬರುತ್ತದೆ. ಅವರು ಅತ್ಯುತ್ತಮ ಕೇಳುಗರಾಗಿದ್ದಾರೆ. ಅವರ ನಂಬಿಕೆಗೆ ಅರ್ಹರಾದರೆ ಅವರ ಭುಜದ ಮೇಲೆ ಅಳಲು ಬಿಡುತ್ತಾರೆ. ಅವರು ಸೃಜನಾತ್ಮಕ, ಪ್ರಾಮಾಣಿಕ, ಸೂಕ್ಷ್ಮ ಮತ್ತು ಸುಂದರ ಜನರಾಗಿದ್ದಾರೆ.

ಮತ್ತೊಂದು ಮುಖ

ಮತ್ತೊಂದು ಮುಖ

ಇವರು ಕೆಲವೊಂದು ಸಲ ರಾಕ್ಷಸರೊಂದಿಗೂ ವ್ಯವಹರಿಸುವರು. ಇವರು ತುಂಬಾ ಸೂಕ್ಷ್ಮಮತಿಗಳಾಗಿರುವ ಕಾರಣದಿಂದಾಗಿ ಅತಂಕ, ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಗೆ ಬೇಗನೆ ಗುರಿಯಾಗುವರು.

ಸಿಂಹ

ಸಿಂಹ

ಇವರು ಜನ್ಮತಃ ನಾಯಕನ ಗುಣ ಹೊಂದಿರುವರು. ಇವರು ತುಂಬಾ ಮಹಾತ್ವಕಾಂಕ್ಷೆಯ, ತಮಾಷೆಯ ಹಾಗೂ ಆಕರ್ಷಕ ಜನರಾಗಿರುವರು.

ಇನ್ನೊಂದು ಮುಖ

ಇನ್ನೊಂದು ಮುಖ

ಇವರ ಇನ್ನೊಂದು ಮುಖವೆಂದರೆ ಇವರು ತುಂಬಾ ನಾಟಕೀಯವಾಗಿ ಕಾಣಿಸುವರು. ಇವರು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಸ್ವಲ್ಪ ಸಮಯದಲ್ಲೇ ಕಲಿಯಲು ಬಯಸುತ್ತಾರೆ. ಇದರಲ್ಲಿ ಅವರು ಕೆಲವೊಮ್ಮೆ ಮೇಲುಗೈ ಪಡೆಯುವರು.

ಕನ್ಯಾ

ಕನ್ಯಾ

ಇವರು ಯಾವುದೇ ವಿಚಾರ ಕಂಡುಕೊಳ್ಳಬೇಕಾದರೆ ತುಂಬಾ ವಿಶ್ಲೇಷಣೆ ಮಾಡಿಕೊಳ್ಳುತ್ತಾರೆ. ಇವರು ಯಾವುದೇ ವಿಚಾರವಾದರೂ ತುಂಬಾ ತಾರ್ಕಿಕ, ವಿಶ್ಲೇಷಣಾತ್ಮಕವಾಗಿ ನೋಡುವರು. ಇವರು ಸಮಸ್ಯೆ ಬೇಗ ಪರಿಹರಿಸುವರು ಮತ್ತು ಒಳ್ಳೆಯ ಕೇಳುಗರು.

ಇನ್ನೊಂದು ಮುಖ

ಇನ್ನೊಂದು ಮುಖ

ಇವರು ಜೀವನವನ್ನು ತುಂಬಾ ಗಂಭೀರವಾಗಿ ಪರಿಗಣಿಸುವರು. ಇವರು ಸಮತೋಲಿತ ಮತ್ತು ಆಧಾರವಾಗಿರುವವರು. ಇವರು ತಮ್ಮನ್ನು ಮತ್ತು ಇತರರನ್ನು ವಿಪರೀತವಾಗಿ ಟೀಕಿಸುವರು.

ತುಲಾ

ತುಲಾ

ಇವರು ಜೀವನದಲ್ಲಿ ಶಾಂತಿ ಕಾಯ್ದುಕೊಳ್ಳಲು ಬಯಸುವರು. ಇವರು ಪ್ರತಿಯೊಬ್ಬರನ್ನು ತುಂಬಾ ಗೌರವ ಮತ್ತು ಆದರದಿಂದ ಬರಮಾಡುವರು. ಇತರರಿಗೆ ನೆರವು ನೀಡುವುದು ಇವರಿಗೆ ನೈಸರ್ಗಿಕವಾಗಿ ಬಂದ ಗುಣವಾಗಿದೆ. ಇವರು ತಮ್ಮ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಒಳ್ಳೆಯ ಕೆಲಸ ಮಾಡುವರು.

ಇನ್ನೊಂದು ಮುಖ

ಇನ್ನೊಂದು ಮುಖ

ಇವರು ಯಾವುದೇ ಹಂತದಲ್ಲಿ ಸಂಘರ್ಷ ತಪ್ಪಿಸುವರು. ಆದರೆ ಕೆಲವೊಂದು ಸಂದರ್ಭದಲ್ಲಿ ಉಂಟಾಗುವ ಘರ್ಷಣೆ ವೇಳೆ ಇವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುವರು ಎಂದು ಮುಖ್ಯವಾಗಿರುತ್ತದೆ. ಇವರು ನಿರ್ಲಕ್ಷ್ಯದವರಾಗಿರುವರು. ಇವರಿಗೆ ಹತ್ತಿರವಾಗುವುದು ಕಷ್ಟ.

ವೃಶ್ಚಿಕ

ವೃಶ್ಚಿಕ

ಇವರು ತ್ವರಿತ ಬುದ್ಧಿ ಮತ್ತು ಹಾಸ್ಯ ಸ್ವಭಾವದವರಾಗಿರುವರು. ಇವರು ಮನಸ್ಸಿನಲ್ಲಿಯೇ ಭಾವನೆಗಳನ್ನು ಅಡಗಿಸಿಟ್ಟುಕೊಳ್ಳುವರು. ಇವರು ತುಂಬಾ ಭಾವೋದ್ರಿಕ ಮತ್ತು ಸ್ವತಂತ್ರರಾಗಿರುವರು. ಇದರಿಂದ ಜನರಿಗೆ ಇವರಿಂದ ಲಾಭ ಸಿಗುವುದಿಲ್ಲ.

ಇನ್ನೊಂದು ಮುಖ

ಇನ್ನೊಂದು ಮುಖ

ಚೇಳಿನ ಕೆಟ್ಟ ಭಾಗ ಮುಟ್ಟಿದರೆ ಅದು ಹೇಗೆ ಪ್ರತಿಕ್ರಿಯಿಸುವುದು ಮತ್ತು ದ್ವೇಷ ಸಾಧಿಸುವುದು ಎಂದು ನಿಮಗೆ ತಿಳಿದಿರಬಹುದು. ಅವರು ಯಾವುದೇ ಜಗಳವಾದರೂ ಅಲ್ಲಿಂದ ಹೊರನಡೆಯುವರು ಮತ್ತು ದ್ವೇಷ ಸಾಧಿಸಲು ಯಾವಾಗಲೂ ಪ್ರಯತ್ನಿಸುವರು.

ಧನು

ಧನು

ತಾವು ಜನರನ್ನು ಸೆಳೆಯಬಲ್ಲೆವು ಎನ್ನುವ ಭಾವನೆ ಇವರಲ್ಲಿರುತ್ತದೆ. ಆದರೆ ಇದು ದೀಪದ ಕಡೆಗೆ ಬರುವ ಚಿಟ್ಟೆಯಂತೆ. ಇವರು ತುಂಬಾ ಆಶಾವಾದಿ, ಸಾಹಸ, ವಿನೋಧ ಹಾಗೂ ಸ್ಪೂರ್ತಿದಾಯಕವಾಗಿರುವರು.

ಇನ್ನೊಂದು ಮುಖ

ಇನ್ನೊಂದು ಮುಖ

ಕೆಲಸದ ಕಡೆ ಗಮನ ಕೇಂದ್ರೀಕರಿಸಲು ಇವರಿಗೆ ತುಂಬಾ ಕಷ್ಟವಾಗುವುದು. ಇವರು ತುಂಬಾ ತೀವ್ರತೆಯ ಸ್ವಭಾವ ಹೊಂದಿರುವರು. ಯಾವುದೇ ಗುರಿ ಇಲ್ಲದೆ ಇರುವ ಕಾರಣದಿಂದಾಗಿ ತುಂಬಾ ಪ್ರಕ್ಷುಬ್ದ ಮತ್ತು ಬೇಸರ ಹೊಂದುವರು.

ಮಕರ

ಮಕರ

ಈ ರಾಶಿಯವರು ತುಂಬಾ ಕಠಿಣ ಕೆಲಸಗಾರರಾಗಿರುವರು. ಇವರಿಗೆ ಸಂಪತ್ತು ಹಾಗೂ ಯಶಸ್ಸು ಲಭಿಸಿರುವುದು. ಇವರು ಅತ್ಯುತ್ತಮ ಕೆಲಸ ಮಾಡಲು ಒಳ್ಳೆಯ ಶಕ್ತಿ ಹೊಂದಿರುವರು. ಇವರು ತುಂಬಾ ಸ್ಫೂರ್ತಿ, ಬುದ್ಧಿವಂತ ಮತ್ತು ತಾರ್ಕಿಕವಾಗಿರುವರು. ಇವರಿಗೆ ಕೆಲಸವು ಜೀವನದ ಮುಖ್ಯ ಸಂಗತಿಯಾಗಿದೆ.

ಇನ್ನೊಂದು ಮುಖ

ಇನ್ನೊಂದು ಮುಖ

ಇವರು ಮೊಂಡುತನ, ರಾಜಿಯಾಗ ಮತ್ತು ಅಸಹನೆ ಹೊಂದಿರುವರು. ಇತರರ ಆಲೋಚನೆಗಳ ಬಗ್ಗೆ ಕಠಿಣ ಸಮಯ ಕಳೆಯುವರು. ಇವರು ಕೆಟ್ಟ ಮನೋಭಾವ ಹೊಂದಿರುವರು ಮತ್ತು ಬೇಗನೆ ಸಿಟ್ಟಾಗುವರು.

ಕುಂಭ

ಕುಂಭ

ರಾಶಿಗಳಲ್ಲಿ ಇವರು ತುಂಬಾ ಆಸಕ್ತಿಯ ಜನರಾಗಿದ್ದಾರೆ. ಇವರು ಪ್ರಯಾಣ ಮಾಡಲು, ಹೊಸ ಜನರನ್ನು ಭೇಟಿಯಾಗಲು ಮತ್ತು ಬುದ್ದಿಗೆ ಸವಾಲಾಗುವ ಕೆಲಸ ಇಷ್ಟಪಡುವರು. ಇವರು ವೈವಿಧ್ಯಮ ಆಸಕ್ತಿ ಹೊಂದಿರುವ ಕಾರಣದಿಂದಾಗಿ ಒಂದು ವಿಷಯದ ಬಗ್ಗೆ ಗಂಟೆಗಟ್ಟಲೆ ಮಾತನಾಡಬಲ್ಲರು. ಇವರು ಮಹಾನ್ ನಾಯಕರಾಗುವರು.

ಇನ್ನೊಂದು ಮುಖ

ಇನ್ನೊಂದು ಮುಖ

ಇವರು ಕೆಲವೊಮ್ಮೆ ಏಕಾಂಗಿಯಾಗಿ ಮತ್ತು ಭಾವನಾತ್ಮಕವಾಗಿರಲು ಬಯಸುವರು. ಇವರು ವಿಷಯಗಳನ್ನು ಪ್ರಾಯೋಗಿಕವಾಗಿ ನೋಡುವರು. ಇದು ಕೆಟ್ಟ ವಿಷಯವಲ್ಲ. ತಮ್ಮ ಭಾವನೆಗಳನ್ನು ನಿಯಂತ್ರಿಸಲು ಕಲಿಯದೇ ಇದ್ದರೆ ಅವರ ಸಂಬಂಧಗಳಿಗೆ ಕಷ್ಟವಾಗಬಹುದು.

ಮೀನ

ಮೀನ

ಇವರು ತುಂಬಾ ಭಾವನಾತ್ಮಕ, ಸೂಕ್ಷ್ಮ ಮತ್ತು ಆರೈಕೆ ಮಾಡುವ ವ್ಯಕ್ತಿಗಳಾಗಿರುವರು. ಇವರು ತುಂಬಾ ಸಹಾನೂಭೂತಿ ಹೊಂದಿರುವರು. ಒಳ್ಳೆಯ ಸ್ನೇಹಿತರು ಮತ್ತು ಜೊತೆಗಾರರನ್ನು ಹೊಂದಿರುವರು. ಪ್ರೀತಿಪಾತ್ರರಿಗೆ ನಿಷ್ಠರಾಗಿರುವ ಇವರು ಅವರಿಗಾಗಿ ಏನೂ ಬೇಕಾದರೂ ಮಾಡಬಲ್ಲರು.

ಇನ್ನೊಂದು ಮುಖ

ಇನ್ನೊಂದು ಮುಖ

ಇವರು ವಾಸ್ತವದಲ್ಲಿ ವ್ಯವಹರಿಸುವಾಗ ತುಂಬಾ ಕಠಿಣ ಸಮಯ ಎದುರಿಸುವರು ಮತ್ತು ಇದರಿಂದ ತಪ್ಪಿಸಲು ಪ್ರಯತ್ನಿಸುವರು. ಒಂಟಿಯಾಗಿರಲು ಮತ್ತು ತಮ್ಮದೇ ಆದ ಸಮಯ ಕಳೆಯಲು ಬಯಸುವರು.

English summary

The Two Sides Of Each Zodiac Sign Explained

Each zodiac sign has a flip side to it and the details about the flip side of each zodiac sign is surprising to know, as this is totally opposite of the typical characteristic traits of the zodiac signs.We are here to enlighten you about the flip side of each zodiac sign and how it is contradictory of the particular zodiac... Check out to know more on this.