For Quick Alerts
ALLOW NOTIFICATIONS  
For Daily Alerts

ನೋಡಿ ಈ ಪ್ರಾಣಿಯನ್ನು ಇವರು ವೇಶ್ಯೆಯಂತೆ ಬಳಸಿಕೊಳ್ಳುತ್ತಿದ್ದರು!

By Arshad
|

ಪ್ರಾಣಿಗಳನ್ನು ಪಳಗಿಸಿ ಗುಲಾಮರಂತೆ ಬಳಸುವುದನ್ನು ತಡೆಯಲು ಭಾರತದಲ್ಲಿಯೂ ಒಂದು ಕಾನೂನಿದೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಕಟ್ಟಲೆಗಳೂ, ಪೀಟಾದಂತಹ ಹಲವಾರು ಸಂಸ್ಥೆಗಳೂ ಇವೆ. ಆದರೆ ಇವು ಎಷ್ಟರ ಮಟ್ಟಿಗೆ ಫಲಕಾರಿಯಾಗಿವೆ? ಪ್ರಾಣಿಗಳ ಮೇಲಿನ ದೌರ್ಜನ್ಯ ಕಡಿಮೆಯಾಗಿದೆಯೇ?

ಬುದ್ಧಿಶಕ್ತಿಯಲ್ಲಿ ಮನುಷ್ಯರಿಗೇ ಸವಾಲೆಸೆಯುವ ಪ್ರಾಣಿ, ಪಕ್ಷಿಗಳು

ಈ ಭೂಮಿಯ ಮೇಲಿರುವ ಅತ್ಯಂತ ಅಪಾಯಕಾರಿಯಾದ ಪ್ರಾಣಿ ಯಾವುದು ಎಂದು ಪ್ರಶ್ನಿಸಿದರೆ ಮನುಷ್ಯ ಎಂದು ನಿರ್ವಿವಾದವಾಗಿ ಹೇಳಬಹುದು. ಏಕೆಂದರೆ ನಾವು, ಮಾನವರು, ನಮ್ಮ ಸ್ವಾರ್ಥವನ್ನೇ ಬಯಸುತ್ತೇವೆಯೇ ವಿನಃ ಈ ಜಗತ್ತಿನ ಬೇರೆ ಜೀವಿಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ....

ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ಪ್ರಾಣಿ ಬಲಿ! ಏನಿದು ಘಟನೆ?

ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಹಲವಾರು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವರ ಮೂಲಕ ನೂರಾರು ದೌರ್ಜನ್ಯದ ಪ್ರಕರಣಗಳು ಹೊರಬಂದಿವೆ. ಇವುಗಳಲ್ಲೊಂದು ಪ್ರಕರಣ ಅತ್ಯಂತ ಮನಕಲಕುವ ಹಾಗೂ ನಂಬಲೇ ಸಾಧ್ಯವಿಲ್ಲದ ವಾಸ್ತವಗಳು ಬಯಲಾಗಿವೆ. ಈ ಪ್ರಕರಣದಲ್ಲಿ ಹೆಣ್ಣು ಒರಾಂಗುಟಾನ್ (ಚಿಂಪಾಂಜಿಯನ್ನು ಹೋಲುವ ವಾನರ) ಒಂದನ್ನು ವೇಶ್ಯೆಯಂತೆ ಬಳಸಿಕೊಳ್ಳಲಾಗುತ್ತಿತ್ತು. ಬನ್ನಿ, ಈ ಹೇಯ ಕೃತ್ಯಕ್ಕೆ ಪ್ರಾಣಿಯನ್ನು ಬಳಸಲಾಗುತ್ತಿದ್ದ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ....

ಈ ಒರಾಂಗುಟಾನ್ ಬಗ್ಗೆ ಒಂದಿಷ್ಟು

ಈ ಒರಾಂಗುಟಾನ್ ಬಗ್ಗೆ ಒಂದಿಷ್ಟು

ಈ ಹೆಣ್ಣು ಒರಾಂಗುಟಾನ್‌ನ ಹೆಸರು ಪೋನಿ ಹಾಗೂ ಈ ಒರಾಂಗುಟಾನ್ ಬೋರ್ನಿಯೋ ದೇಶದ ಒಂದು ಹಳ್ಳಿಯ ಬಳಿಕ ಕಾಡಿನಲ್ಲಿ ವಾಸವಾಗಿತ್ತು. ಇಲ್ಲಿಂದ ಈ ಒರಾಂಗುಟಾನ್ ಅನ್ನು ಹಿಡಿದು ಒಂದು ಮನೆಯಲ್ಲಿ ಕೂಡಿ ಹಾಕಲಾಗಿತ್ತು. ಈ ಮನೆಯ ಒಡತಿ ಈ ಒರಾಂಗುಟಾನ್ ಅನ್ನು ಸಾಕುತ್ತಿದ್ದು ಇದರ ಮೂಲಕ ವೇಶ್ಯಾವೃತ್ತಿಯನ್ನು ನಡೆಸಿ ಹಣ ಸಂಪಾದಿಸುತ್ತಿದ್ದಳು.

Image Courtesy

ಹಣ ಸಂಪಾದಿಸಲು ಇದು ಒಳ್ಳೆಯ ಮಾರ್ಗವಾಗಿತ್ತು

ಹಣ ಸಂಪಾದಿಸಲು ಇದು ಒಳ್ಳೆಯ ಮಾರ್ಗವಾಗಿತ್ತು

ಪೋನಿ ಯ ಮೂಲಕ ಒಡತಿಗೆ ಭಾರೀ ಪ್ರಮಾಣದ ಆದಾಯ ಬರುತ್ತಿತ್ತು. ಏಕೆಂದರೆ ಮಹಿಳೆಯನ್ನೇ ಹೆಚ್ಚು ಕಡಿಮೆ ಹೋಲುವ ದೇಹದ ಒರಾಂಗುಟಾನ್ ಸಂಗವನ್ನು ಬಯಸುವ ವಿಕೃತ ಮನಸ್ಸಿನ ಪುರುಷರು ಹೆಚ್ಚಿನ ಹಣ ಕೊಡಲು ತಯಾರಿದ್ದರು. ಈ ಕೆಲಸಕ್ಕೆ ಪೋನಿಯನ್ನು ಇಷ್ಟರ ಮಟ್ಟಿಗೆ ತರಬೇತಿಗೊಳಿಸಲಾಗಿತ್ತು ಎಂದರೆ ಪುರುಷರನ್ನು ಕಂಡ ಕೂಡಲೇ ತಿರುಗಿ ಕಾಮೋದ್ರೇಕದ ಭಂಗಿಯಲ್ಲಿ ತನಗೆ ತಾನು ಒಡ್ಡಿಕೊಳ್ಳುವಂತೆ ಕಲಿಸಲಾಗಿತ್ತು.

Image Source

ಒರಾಂಗುಟಾನ್ ಅನ್ನು ಸುಂದರವಾಗಿ ಕಾಣಿಸುವಂತೆ ಸಿಂಗರಿಸಲಾಗುತ್ತಿತ್ತು

ಒರಾಂಗುಟಾನ್ ಅನ್ನು ಸುಂದರವಾಗಿ ಕಾಣಿಸುವಂತೆ ಸಿಂಗರಿಸಲಾಗುತ್ತಿತ್ತು

ವಾನರಗಳ ಚರ್ಮದಲ್ಲಿ ಅತಿ ಹೆಚ್ಚಿನ ರೋಮವಿರುತ್ತದೆ. ಒರಾಂಗುಟಾನ್ ಗಳಿಗೂ ಹೆಚ್ಚು ರೋಮವಿರುತ್ತದೆ. ಆದರೆ ಈ ಭಾರೀ ಪ್ರಮಾಣದ ರೋಮಗಳಿಂದ ಇವುಗಳ ಸೌಂದರ್ಯ ಕುಂದಬಹುದು ಎಂದು ಭಾವಿಸಿ ರೇಜರ್ ಬಳಸಿ ರೋಮಗಳನ್ನು ನಿವಾರಿಸಲಾಗುತ್ತಿತ್ತು. ಈ ಮೂಲಕ ಒರಾಂಗುಟಾನ್ ನ ಸೂಕ್ಷ್ಮ ಚರ್ಮ ರೋಮವಿಲ್ಲದೇ ಕೆಲವಾರು ಸೋಂಕುಗಳಿಗೆ ತೆರೆದಿತ್ತು ಹಾಗೂ ಇದರ ಸೂಕ್ಷ್ಮ ಚರ್ಮವನ್ನು ಸೊಳ್ಳೆ ಹಾಗೂ ಇತರ ಕ್ರಿಮಿಗಳು ಸುಲಭವಾಗಿ ಕಚ್ಚಿ ರಕ್ತ ಹೀರುತ್ತಿದ್ದವು. ಓಡಿಹೋಗದಂತೆ ಸರಪಳಿಯಿಂದ ಕಟ್ಟಿದ್ದ ಭಾಗವೂ ಗಾಯಗೊಂಡಿತ್ತು.

Image Source

ಒರಾಂಗುಟಾನ್ ರಕ್ಷಣೆಗೆ ಹಳ್ಳಿಗರಿಂದಲೇ ಅಡ್ಡಿ

ಒರಾಂಗುಟಾನ್ ರಕ್ಷಣೆಗೆ ಹಳ್ಳಿಗರಿಂದಲೇ ಅಡ್ಡಿ

ಈ ಬಗ್ಗೆ ಕೊಂಚಕಾಲದಲ್ಲಿಯೇ ಪ್ರಾಣಿದಯಾ ಸಂಸ್ಥೆಯವರಿಗೆ ಮಾಹಿತಿ ಸಿಕ್ಕಿ ಈ ಒರಾಂಗುಟಾನ್ ನನ್ನು ರಕ್ಷಿಸಲು ಬಂದಾಗ ಹಳ್ಳಿಯವರೇ ಇದಕ್ಕೆ ಅಡ್ಡಿಯಾಗಿದ್ದರು. ಪೋಲೀಸರ ನೆರವು ಪಡೆದು ಬಂದರೂ ಹಳ್ಳಿಗರು ವಿಷಲೇಪಿತ ಕತ್ತಿ ಹಾಗೂ ಬಂದೂಕುಗಳನ್ನು ಹಿಡಿದು ಅಡ್ಡಿಯಾಗುತ್ತಿದ್ದರು. ಬೋರ್ನಿಯೋ ದೇಶದ ಪ್ರಮುಖ ಪ್ರಾಣಿದಯಾ ಸಂಸ್ಥೆಯಾದ Borneo Orangutan Survival Foundation ಸಹಾ ಸರ್ಕಾರದ ವಿಶೇಷ ಅನುಮತಿ ಪಡೆದೇ ಹೋಗಿದ್ದರು ಪೋನಿಯನ್ನು ತರಲು ವಿಫಲವಾಗಿತ್ತು.

Image Source

ಕಟ್ಟಕಡೆಗೂ ರಕ್ಷಿಸಲ್ಪಟ್ಟ ಪೋನಿ

ಕಟ್ಟಕಡೆಗೂ ರಕ್ಷಿಸಲ್ಪಟ್ಟ ಪೋನಿ

ಹಲವಾರು ಪ್ರಯತ್ನಗಳು ವಿಫಲಗೊಂಡರೂ ಪ್ರಾಣಿದಯಾ ಸಂಸ್ಥೆಯ ಸದಸ್ಯರು ಒಮ್ಮೆ ಪೋನಿಯನ್ನು ತಂದೇ ತರುತ್ತೇವೆಂಬ ಹಟದಿಂದ ಒಂದು ದಿನ ಸುಮಾರು ಮೂವತ್ತೈದು ಪೋಲೀಸರೊಂದಿಗೆ ಏಕಾಏಕಿ ಧಾಳಿ ನಡೆಸಿದರು. ಇವರೆಲ್ಲರ ಬಳಿ ಏಕೆ -47 ಬಂದೂಕುಗಳಿದ್ದವು. ಇವರಿಗೆ ಕೇಂದ್ರೀಯ ಮೀಸಲು ಪಡೆಯಾದ Central Kalimantan Conservation and Natural Resources Authority ಯ ನೆರವೂ ದೊರಕಿತ್ತು. ಈ ಭಾರೀ ಧಾಳಿಯನ್ನು ಎದುರಿಸಲಾಗದೇ ಹಳ್ಳಿಗರು ಹಿಮ್ಮೆಟ್ಟಿದರು. ಪರಿಣಾಮವಾಗಿ ಪೋನಿಯನ್ನು ಬಂಧಮುಕ್ತಗೊಳಿಸಿ ತರಲಾಯಿತು. ಈ ಘಟನೆ ಎಷ್ಟು ಭಾವಪೂರ್ಣವಾಗಿತ್ತು ಎಂದರೆ ಸ್ಥಳೀಯ ಟೀವಿ ಮಾಧ್ಯಮವೊಂದು ಇಡಿಯ ಪ್ರಕರಣವನ್ನು ಚಿತ್ರೀಕರಿಸಿಕೊಂಡಿತ್ತು.

Image Source

ಬಳಿಕ ಹತ್ತು ವರ್ಷಗಳೇ ಬೇಕಾದವು

ಬಳಿಕ ಹತ್ತು ವರ್ಷಗಳೇ ಬೇಕಾದವು

ಈ ಧಾಳಿ ನಡೆದದ್ದು 2003. ಅಲ್ಲಿಯವರೆಗೂ ಈ ಒರಾಂಗುಟಾನ್ ಅನ್ನು ಎಲ್ಲಿಂದ ಅಪಹರಿಸಲಾಗಿತ್ತು, ಎಲ್ಲಿ ಬೆಳೆದಿತ್ತು ಎಂಬುದನ್ನು ತಿಳಿಯಲು ಮುಂದಿನ ಹತ್ತು ವರ್ಷಗಳ ಕಾಲ ಕೆಲವಾರು ಪ್ರಯತ್ನಗಳನ್ನು ನಡೆಸಲಾಯಿತು. ಬಂಧನದಲ್ಲಿದ್ದ ಒರಾಂಗುಟಾನ್ ಒಡತಿಯ ಕೈಯಿಂದಲೇ ತಿನ್ನುತ್ತಿತ್ತು ಹಾಗೂ ಹಾಸಿಗೆಯ ಮೇಲೆ ಮಲಗುತ್ತಿತ್ತು. ಆ ದಿನದಿಂದಲೂ ಈ ಒರಾಂಗುಟಾನ್ Palangkaraya ಎಂಬ ಸ್ಥಳದಲ್ಲಿರುವ Nyaru Menteng Orangutan Reintroduction Center ಎಂಬ ಪ್ರಾಣಿಸಂಗ್ರಹಾಲಯದಲ್ಲಿ ಮತ್ತೆ ಕಾಡಿನಲ್ಲಿ ವಾಸಿಸಲು ತರಬೇತಿ ನೀಡಲಾಯಿತು. ಈ ತರಬೇತಿಗೆ ಸ್ಪಂದನೆ ಕಂಡು ಬಂದ ಬಳಿಕವೇ 2013ರಲ್ಲಿ ಬಂಧನಮುಕ್ತಗೊಳಿಸಿ ಕಾಡಿಗೆ ಬಿಡಲಾಯಿತು.

ಅಂತೂ ಹಣಕ್ಕಾಗಿ ಪ್ರಾಣಿಗಳನ್ನೂ ಬಿಡದ ಮನುಷ್ಯನ ಹಪಾಹಪಿಗೆ ಯಾವಾಗ ಕೊನೆಯಾಗುತ್ತದೆ ಎಂದು ಚಿಂತಿಸುವಂತೆ ಮಾಡುತ್ತಿದೆ ಪೋನಿಯ ಪ್ರಕರಣ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.

Image Source

English summary

The Story Of An Orangutan Who Was Used As A Sex Slave!

There have been stories of people fighting for the rights of animals and to stop their abuse, but how far do you think the abuse on animals has stopped? Humans should be considered to be the worst animals on this planet, as we are known to only think about ourselves and not care about any other living creature on earth. Check out the case of the orangutan that was used for pleasing men. Find out more about this bizarre case of using animals for prostitution.
X
Desktop Bottom Promotion