For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ರಾಶಿಚಕ್ರಕ್ಕೆ ತಕ್ಕಂತೆ ಕೆಲಸ ಮಾಡಿದ್ರೆ, ಕೈ ತುಂಬಾ ಹಣ ಗ್ಯಾರಂಟಿ...

  By Divya Pandith
  |

  ನಮ್ಮ ವೈಯಕ್ತಿಕ ಜೀವನದಲ್ಲಿ ನಮ್ಮ ವೃತ್ತಿಯು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಮ್ಮನ್ನು ಜಗತ್ತಿಗೆ ಗುರುತಿಸುವುದು ಹಾಗೂ ಆರ್ಥಿಕವಾಗಿ ನಮ್ಮನ್ನು ಸಬಲರಾಗುವುದು ನಾವು ಯಾವ ವೃತ್ತಿಯನ್ನು ಮಾಡುತ್ತಿದ್ದೇವೆ ಎನ್ನುವ ಆಧಾರದ ಮೇಲೆಯೇ. ಕೆಲವೊಮ್ಮೆ ನಾವು ಮಾಡುವ ಕೆಲಸದ ಮೇಲೆ ಅತ್ಯಂತ ಗೌರವವನ್ನು ಪಡೆದುಕೊಳ್ಳುತ್ತೇವೆ. ಒಂದು ಉತ್ತಮವಾದ ವೃತ್ತಿಯನ್ನು ಮಾಡುವುದರಿಂದ ಎಲ್ಲರಿಗೂ ಒಂದೇ ಬಗೆಯ ಸ್ಥಾನ ಮಾನ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ.

  ನಾವು ಮಾಡುತ್ತಿರುವ ಕೆಲಸವು ನಮ್ಮ ರಾಶಿಚಕ್ರದ ಅನುಗುಣವಾಗಿದ್ದರೆ ಮಾತ್ರ ನಾವು ಅಲ್ಪ ಪ್ರಯತ್ನ ಮಾಡಿದರೂ ಮಹತ್ತರವಾದ ಪರಿಣಾಮವನ್ನು ಪಡೆದುಕೊಳ್ಳಬಹುದು. ಪ್ರತಿಯೊಂದು ರಾಶಿಗೆ ಕೆಲವು ವೃತ್ತಿ ಹಾಗೂ ವ್ಯಾಪಾರಗಳು ಮಹತ್ತರವಾದ ಲಾಭವನ್ನು ತಂದುಕೊಡುತ್ತವೆ. ನಿಮಗೂ ನಿಮ್ಮ ರಾಶಿಚಕ್ರದ ಅನುಗುಣವಾಗಿ ಯಾವೆಲ್ಲಾ ಕೆಲಸವನ್ನು ಮಾಡಬಹುದು? ಎನ್ನುವ ವಿಚಾರವನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗದಲ್ಲಿರುವ ವಿವರಣೆಯನ್ನು ಪರಿಶೀಲಿಸಿ.... 

   ಮೇಷ

  ಮೇಷ

  ಮೇಷ ರಾಶಿಯವರು ಉತ್ಸಾಹಿಗಳು ಮತ್ತು ಸ್ಪರ್ಧಾತ್ಮಕ ನಾಯಕರು ಎಂದು ಹೇಳಲಾಗುವುದು. ಇವರಿಗೆ ಮಿಲಿಟರಿ, ಸರ್ಕಾರಿ ಉದ್ಯೋಗ, ಅಥ್ಲೆಟಿಕ್ಸ್, ಮ್ಯಾನೇಜ್‍ ಮೆಂಟ್ ಮತ್ತು ಜಾಹೀರಾತುಗಳಲ್ಲಿ ಉದ್ಯೋಗಗಳನ್ನು ಶ್ರಮಶೀಲರಾಗಿ ಮಾಡಬಹುದು. ಈ ಉದ್ಯೋಗಗಳು ಉತ್ತಮ ಲಾಭ ಹಾಗೂ ಗೌರವ ತಂದುಕೊಡುವುದು. ಇವರ ಬುದ್ಧಿ ಬಲಿಷ್ಠವಾಗಿರುವುದು. ಬೇರೆಯವರ ಸಲಹೆ ಅಥವಾ ಆದೇಶ ಪಾಲಿಸುವುದಿಲ್ಲ. ಇವರು ಯಾವಾಗಲೂ ನಾಯಕ ಅಥವಾ ಕಂಪನಿಯ ಮಾಲಕರಾಗುವರು. ಇವರಿಗೆ ಕೈಕೆಳಗೆ ಕೆಲಸ ಮಾಡಲು ಆಗುವುದಿಲ್ಲ. ಇವರಿಗೆ ತುಂಬಾ ಸ್ಪರ್ಧೆಯಿರುವ ಕೆಲಸ ಬೇಕಾಗಿದೆ.

  ವೃಷಭ

  ವೃಷಭ

  ಇವರು ಕೆಲವು ವಿಷಯಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳಬಲ್ಲರು. ಮಸಾಜ್ ಥೆರಪಿಸ್ಟ್, ಬಾಣಸಿಗ, ಹೂಗಾರ ಅಥವಾ ಕಲಾತ್ಮಕವಾಗಿ ಆಸಕ್ತಿ ತೋರಿದರೆ ಚಿತ್ರಕಲೆ, ಶಿಲ್ಪ ಕಲಾಕೃತಿ, ಸ್ಟಾಕ್ ಬ್ರೋಕರ್, ಆಭರಣ ವ್ಯಾಪಾರ, ವ್ಯವಹಾರ ಕಾರ್ಯನಿರ್ವಾಹಕ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ನಿರ್ವಹಿಸಬಹುದು. ಇವರು ಈ ಕೆಲಸವನ್ನು ಹೆಚ್ಚು ಆನಂದಿಸಿಕೊಂಡು ಕೆಲಸ ಮಾಡುವರು. ಈ ರಾಶಿಯವರಿಗೆ ಅಸುರಕ್ಷತೆ, ಹಠಾತ್ ಬದಲಾವಣೆ ಅಥವಾ ಅಚ್ಚರಿ, ತಕ್ಷಣ ನಿರೋದ್ಯೋಗಿ ಯಾಗುವುದನ್ನು ಸಂಭಾಲಿಸಲು ಆಗಲ್ಲ. ಇವರು ಹಣದ ರಿಸ್ಕ್ ತೆಗೆದುಕೊಳ್ಳುವರು. ಆದರೆ ಬೇರೆಯವರ ಹಣ ಮಾತ್ರ!. ಯಾವುದೇ ಸ್ಥಿರ ಕೆಲಸ ಅಥವಾ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವಾಗ ಇವರು ತುಂಬಾ ಸಂತೋಷವಾಗಿರುವರು.

  ಮಿಥುನ

  ಮಿಥುನ

  ಇವರು ಇಬ್ಬರು ಸೇರಿ ಮಾಡುವ ಕೆಲಸದಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಇವರು ಬೇಸರದಿಂದ ಇರಲು ಇಷ್ಟಪಡುವುದಿಲ್ಲ. ಇವರಿಗೆ ಆಸಕ್ತಿದಾಯಕ ಮತ್ತು ಅತ್ಯಾಕರ್ಷಕ ಕೆಲಸ, ಸಹ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ.ಇವರು ಸ್ಟಾಕ್ ಬ್ರೋಕರ್, ಜಾಹೀರಾತು, ಮನರಂಜನೆ, ರೇಡಿಯೋ, ಮಾರ್ಕೆಟಿಂಗ್, ಟೆಕ್ ಸಪೋರ್ಟ್, ಶಿಕ್ಷಕ ವೃತ್ತಿ, ವಾಸ್ತು ಶಿಲ್ಪಗಳಲ್ಲಿ ಹೆಚ್ಚು ಹಣವನ್ನು ಗಳಿಸಬಹುದು. ಅಲ್ಲದೆ ಮಾನಸಿಕ ಉತ್ತೇಜನ ಸಂತೋಷವಾಗಿಡಲು ಈ ರಾಶಿಯವರಿಗೆ ಕೆಲಸ ಬೇಕು. ಇವರು ತಮ್ಮ ಸಂವಹನ ಸಾಮರ್ಥ್ಯದಿಂದಲೇ ಕೆಲಸ ಮಾಡಿಕೊಳ್ಳುತ್ತಾರೆ.ಇವರಿಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಏಕತಾನತೆಯ ಕೆಲಸ ಇವರಿಗೆ ಇಷ್ಟವಿಲ್ಲ.ಇವರು ಸಾಮಾಜಿಕ ಕೆಲಸ ಕಾರ್ಯ ಅಥವಾ ಯಾವುದಾದರೂ ಹವ್ಯಾಸದಲ್ಲಿ ತೊಡಗಿಕೊಂಡು ತಮ್ಮ ವೃತ್ತಿಯ ಬೇಸರ ಕಡಿಮೆ ಮಾಡಿಕೊಳ್ಳುವರು.

  ಕರ್ಕ

  ಕರ್ಕ

  ಕರ್ಕ ರಾಶಿಯಲ್ಲಿ ಜನಿಸಿದವರಿಗೆ ಕಾಳಜಿ ಮತ್ತು ಪೋಷಣೆ ಮಾಡುವ ಕೆಲಸವು ಹೆಚ್ಚು ಆಸಕ್ತಿದಾಯಕವಾಗಿರುತ್ತದೆ. ಇವರು ಶಿಕ್ಷಕರಾಗಿ, ವೈದ್ಯರಾಗಿ, ತೋಟಗಾರಿಕೆ, ಭೂದೃಶ್ಯ, ಸಾಮಾಜಿಕ ಕಾರ್ಯಕರ್ತ ಅಥವಾ ದಾದಿಯ ವೃತ್ತಿಯನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರಿಗೆ ಕೆಲಸದಲ್ಲಿ ಸುರಕ್ಷತೆಯಿರುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದಾಗಿ ಒಳ್ಳೆಯ ಸಂಬಳ ಸಿಗುವ ಕೆಲಸ ಇವರು ಆಯ್ಕೆ ಮಾಡಿಕೊಳ್ಳುವರು. ಇವರು ಕೆಲವೊಮ್ಮೆ ತುಂಬಾ ಭಾವನಾತ್ಮಕವಾಗಿ ವರ್ತಿಸುವ ಕಾರಣದಿಂದ ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಕೆಲಸವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುವರು. ಇತರರನ್ನು ಪಾಲನೆ ಮಾಡುವ ಉದ್ಯೋಗ ಇವರಿಗೆ ಒಳ್ಳೆಯದು.

  ಸಿಂಹ

  ಸಿಂಹ

  ಇವರು ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಕೇಂದ್ರಬಿಂದುವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇವರಿಗೆ ಸೂಕ್ತವಾಗುವ ಉದ್ಯೋಗ ಸಿಇಓ, ಪ್ರವಾಸ ಮಾರ್ಗದರ್ಶಿ, ನಿರ್ವಾಹಕ ಕಾರ್ಯಕ್ರಮ ಯೋಜಕ, ಉದ್ಯಮಿ, ರಿಯಲ್ ಎಸ್ಟೇಟ್, ಕಲಾವಿದ/ಮನರಂಜನೆ ಮತ್ತು ಮಾರಾಟಗಾರನಾಗಿ ಕೆಲಸ ನಿರ್ವಹಿಸಬಲ್ಲರು. ಇವು ಉತ್ತಮ ಲಾಭ ತಂದುಕೊಡುತ್ತವೆ. ಈ ರಾಶಿಯವರ ಕಠಿಣ ಪರಿಶ್ರಮದಿಂದಲೇ ಇವರ ಕೆಲಸವು ಗುರುತಿಸಲ್ಪಡುವುದು. ಇವರು ಪ್ರಾಜೆಕ್ಟ್ ಗಳನ್ನು ಆಯೋಜಿಸುವ ಸಾಮರ್ಥ್ಯ ಹೊಂದಿರುವರು. ಏಕಾಂಗಿಯಾಗಿ ಅಥವಾ ತಂಡವಾಗಿ ಅವರು ತಮ್ಮ ಕೆಲಸ ಮಾಡಬಲ್ಲರು. ಅವರು ಕೆಲಸದಲ್ಲಿ ತುಂಬಾ ಭಾವನಾತ್ಮಕವಾಗಿ ತೊಡಗಿಕೊಳ್ಳುವರು.

  ಕನ್ಯಾ

  ಕನ್ಯಾ

  ಈ ರಾಶಿಯಲ್ಲಿ ಜನಿಸಿದವರು ಸಂಘಟಿತ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರು ಮಾಡುವ ಕೆಲಸದಲ್ಲಿ ಅಚ್ಚುಕಟ್ಟನ್ನು ಪರಿಗಣಿಸುತ್ತಾರೆ. ಇವರಿಗೆ ಗ್ರಂಥಾಲಯಗಳು, ಹಸ್ತಾಲಂಕಾರಿಗಳು, ಯಂತ್ರಶಾಸ್ತ್ರಜ್ಞರು, ವಾಸ್ತುಶಿಲ್ಪಿಗಳು, ಸಂಪಾದಕರು, ಬರಹಗಾರರು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು ಅಥವಾ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ತಮ್ಮ ಬುದ್ಧಿಯು ಕೆಲಸ ಮಾಡುತ್ತಾ ಇರಬೇಕೆಂದರೆ ಇವರಿಗೆ ಪ್ರತೀ ದಿನವು ಸಾವಿರಾರು ಮಾಹಿತಿಗಳು ಬೇಕೇಬೇಕು. ಸಣ್ಣ ವಿಚಾರಗಳನ್ನು ಸಂಭಾಲಿಸುವಲ್ಲಿ ಇವರು ಒಳ್ಳೆಯ ರೀತಿ ಕೆಲಸ ಮಾಡುವರು. ಬೇರೆಯವರು ಪಾಲಿಸಬೇಕಾದ ವೇಳಾಪಟ್ಟಿ ತಯಾರಿಸಲು ಇವರಿಗೆ ಯಾವುದೇ ಸಮಸ್ಯೆಯಿಲ್ಲ. ಇತರರನ್ನು ಟೀಕಿಸುವಂತಹ ತಮ್ಮ ನಡವಳಿಕೆ ಬಗ್ಗೆ ಗಮನವಿಡಬೇಕು.

  ತುಲಾ

  ತುಲಾ

  ಈ ರಾಶಿಯವರು ಹುಟ್ಟಿನಿಂದಲೇ ಉತ್ತಮ ಮಾತುಗಾರಿಕೆಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ವಕೀಲ ವೃತ್ತಿ, ಪ್ರಾಧ್ಯಾಪಕ, ಬರಹ, ಪತ್ರಿಕೋದ್ಯಮ, ಮಾರುಕಟ್ಟೆ, ಜಾಹೀರಾತು, ಮಾರಾಟ ಮತ್ತು ಪ್ರಯಾಣ ಏಜೆಂಟ್ ಕೆಲಸವು ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಇವರು ಕೆಲಸ ಮಾಡುವಾಗ ಬೇರೆಯವರು ತಮ್ಮ ಸುತ್ತಲು ಇರಬೇಕೆಂದು ಬಯಸುವರು. ಗ್ರಾಹಕರು, ಸಹೋದ್ಯೋಗಿಗಳು ಅಥವಾ ತಮ್ಮ ಸಿಬ್ಬಂದಿ ಯಾರೇ ಆದರೂ ತಮ್ಮ ಜತೆಗಿರಬೇಕೆಂದು ಬಯಸುವರು. ಅವರಿಗೆ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪಾಗುವ ಭೀತಿಯಿರುತ್ತದೆ. ಇದರಿಂದ ತುಂಬಾ ದೀರ್ಘ ಸಮಯ ಇದನ್ನು ಮುಂದೂಡುವರು. ಇತರರು ತೆಗೆದುಕೊಳ್ಳುವ ಕಠಿಣ ನಿರ್ಧಾರದಂತಹ ಕೆಲಸಗಳಲ್ಲಿ ತುಲಾ ರಾಶಿಯವರು ಸಂತೋಷವಾಗಿರುವರು. ಇಂತಹ ಕೆಲಸಗಳು ಇವರಿಗೆ ಹೊಂದಿಕೊಳ್ಳುವುದು.

  ವೃಶ್ಚಿಕ

  ವೃಶ್ಚಿಕ

  ಈ ರಾಶಿಯಲ್ಲಿ ಜನಿಸಿದವರು ಅಂತರ್ಬೋಧೆಯಿಂದ ಯೋಚಿಸುವ ಅತ್ಯಂತ ತೀವ್ರವಾದ ವ್ಯಕ್ತಿಗಳಾಗಿರುತ್ತಾರೆ. ಇವರು ವೈದ್ಯರು, ವಕೀಲರು, ಸಮಾಲೋಚಕರು, ಪತ್ತೆದಾರರು, ವಿಜ್ಞಾನಿಗಳು, ಭೌತವಿಜ್ಞಾನಿಗಳು ಅಥವಾ ಕಾನೂನು ಅಧಿಕಾರಿಗಳಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇವರು ಸಾಕಷ್ಟು ಏಕಾಗ್ರತೆಯಲ್ಲಿ ಉದ್ಯೋಗ ಮಾಡುವ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೆ ಇವರು ಕೆಲಸ ಮಾಡುವಾಗ ಬೇರೆಯವರು ತಮ್ಮ ಸುತ್ತಲು ಇರಬೇಕೆಂದು ಬಯಸುವರು. ಗ್ರಾಹಕರು, ಸಹೋದ್ಯೋಗಿಗಳು ಅಥವಾ ತಮ್ಮ ಸಿಬ್ಬಂದಿ ಯಾರೇ ಆದರೂ ತಮ್ಮ ಜತೆಗಿರಬೇಕೆಂದು ಬಯಸುವರು. ಅವರಿಗೆ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪಾಗುವ ಭೀತಿಯಿರುತ್ತದೆ. ಇದರಿಂದ ತುಂಬಾ ದೀರ್ಘ ಸಮಯ ಇದನ್ನು ಮುಂದೂಡುವರು. ಇತರರು ತೆಗೆದುಕೊಳ್ಳುವ ಕಠಿಣ ನಿರ್ಧಾರದಂತಹ ಕೆಲಸಗಳಲ್ಲಿ ತುಲಾ ರಾಶಿಯವರು ಸಂತೋಷವಾಗಿರುವರು. ಇಂತಹ ಕೆಲಸಗಳು ಇವರಿಗೆ ಹೊಂದಿಕೊಳ್ಳುವುದು.

  ಧನು

  ಧನು

  ಈ ರಾಶಿಯವರು ಹೆಚ್ಚು ಶಕ್ತಿಯುಳ್ಳವರು. ಹೊರಾಂಗಣವನ್ನು ಇಷ್ಟಪಡುವ ವ್ಯಕ್ತಿಗಳು. ಪ್ರಯಾಣ ಮಾಡಲು ಇಷ್ಟಪಡುವ ಆಧ್ಯಾತ್ಮಿಕ ಜನರು. ಇವರು ಪ್ರಾಣಿ ಮತ್ತು ಜನರನ್ನು ಹೆಚ್ಚು ಇಷ್ಟಪಡುವರು. ಶಿಕ್ಷಕರ, ಟ್ರಾವೆಲ್ ಏಜೆಂಟ್, ಬರಹಗಾರ/ಸಂಪಾದಕ, ನಟ, ಆಧ್ಯಾತ್ಮಿಕ ನಾಯಕ, ತರಬೇತುದಾರ, ಪ್ರಾಣಿ ತರಬೇತುದಾರ ಕೆಲಸವು ಹೆಚ್ಚು ಆಸಕ್ತಿ ಹಾಗೂ ಲಾಭವನ್ನು ತರುವಂತಹ ಕೆಲಸವಾಗಿದೆ. ಶಿಸ್ತಿನ ದೈನಂದಿನ ಚಟುವಟಿಕೆಯು ಈ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಇವರು ಸ್ವಾತಂತ್ರ್ಯವಾಗಿ ಅಂದರೆ ಯಾವುದೇ ಕಟ್ಟುಪಾಡು ಇಲ್ಲದೆ ಕೆಲಸ ಮಾಡಿದರೆ ತಮ್ಮ ಶ್ರೇಷ್ಠ ಶ್ರಮ ವಹಿಸುವರು. ಪ್ರಯಾಣ ಇರುವಂತಹ ವೃತ್ತಿಯಲ್ಲಿ ಇವರು ಉತ್ತಮವಾಗಿರುವರು. ಯಾವುದೇ ಬದಲಾವಣೆಗೆ ಇವರು ಹೊಂದಿಕೊಳ್ಳುವರು. ಇವರು ತಮ್ಮ ಕೆಲಸದ ಬಗ್ಗೆ ಸಂತೋಷವಾಗಿರುವರು. ಆದರೆ ಬೇರೆ ಯಾರಾದರೂ ಯೋಜನೆಗಳ ವರದಿ ಓದಲಿ ಎಂದು ಬಯಸುವರು.

  ಮಕರ

  ಮಕರ

  ಇವರು ವೃತ್ತಿ ಜೀವನದಲ್ಲಿ ಹೆಚ್ಚು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಹಾಗಾಗಿಯೇ ಇವರು ವೃತ್ತಿ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಇವರು ತುಂಬಾ ಜವಾಬ್ದಾರರಾಗಿ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಇವರು ಐಟಿ, ವಿಜ್ಞಾನಿ, ಮ್ಯಾನೇಜರ್, ಬ್ಯಾಂಕರ್, ಸಂಪಾದಕ, ವಾಣಿಜ್ಯೋದ್ಯಮಿ ಮತ್ತು ಆಡಳಿತಗಾರರಾಗಿ ಕೆಲಸ ನಿರ್ವಹಿಸಬಹುದು. ಆರ್ಥಿಕ ಹಾಗೂ ಸ್ಥಾನಮಾನವನ್ನು ಬಯಸುವಂತಹ ರಾಶಿಯವರು ಇವರಾಗಿರುವರು. ಇವರು ತುಂಬಾ ಮುಂದಾಲೋಚನೆ ಮಾಡುವವರು. ಪ್ರಾಯೋಗಿಕವಾಗಿ ಏನು ಸರಿಯಾಗಿದೆಯೋ ಅದನ್ನೇ ಇವರು ನೆಚ್ಚಿಕೊಳ್ಳುವರು. ಇವರಿಗೆ ದೈನಂದಿನ ಚಟುವಟಿಕೆ ಬಗ್ಗೆ ಸಮಸ್ಯೆಯಿಲ್ಲ. ಆದರೆ ಎಲ್ಲವೂ ಮೊದಲೇ ತಿಳಿಯಬೇಕೆಂದು ಬಯಸುವರು. ತಮ್ಮ ಅಧಿಕಾರದಲ್ಲಿ ಯಾರಿಗೂ ಪಾಲು ಕೊಡಲ್ಲ.

  ಕುಂಬ

  ಕುಂಬ

  ಇವರು ಬಹಳಷ್ಟು ಕೆಲಸವನ್ನು ನಿರ್ವಹಿಸಬಲ್ಲರು. ಇವರು ತಾಂತ್ರಿಕ ಮತ್ತು ವೈಜ್ಞಾನಿಕ ವಿಷಯಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ಒಬ್ಬ ವಿಜ್ಞಾನಿಗಳು ಎಂದು ಹೇಳಬಹುದು. ಇವರು ಸಂಶೋಧಕ, ಡಿಸೈನರ್, ಸಾವಯವ ರೈತ, ಏವಿಯೇಟರ್, ರಾಜಕೀಯ ಮತ್ತು ತಂತ್ರಜ್ಞರಾಗಿ ಕೆಲಸ ನಿರ್ವಹಿಸಬಹುದು. ಇವು ಅವರಿಗೆ ಉತ್ತಮ ಹೆಸರು ಮತ್ತು ಲಾಭವನ್ನು ತಂದುಕೊಡುತ್ತವೆ. ಇವರು ತಮ್ಮ ಕೆಲಸದಲ್ಲಿ ಸಂತೋಷವಾಗಿರುವರು. ಇವರು ಎರಡು ರೀತಿಯ ಗೊಂದಲದಲ್ಲಿ ಸಿಲುಕಿಕೊಂಡಿರುವಂತೆ ಇರುವರು. ಒಂದು ಕಡೆ ಇವರು ಏಕಾಂಗಿಯಾಗಿರುವಾಗ ಜನರೊಂದಿಗೆ ಸಂಪರ್ಕ ಸಾಧಿಸಲು ಬಯಸುವರು. ಇನ್ನೊಂದೆಡೆಯಲ್ಲಿ ಇವರು ತಮ್ಮ ಕೆಲಸದಲ್ಲಿ ಶಾಂತಿ ಬಯಸುವರು ಮತ್ತು ಯಾರು ಕೂಡ ತಮ್ಮ ಕೆಲಸದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಬಯಸುವರು.

  ಮೀನ

  ಮೀನ

  ಈ ರಾಶಿಯಲ್ಲಿ ಜನಿಸಿದವರು ಸೃಜಾನಾತ್ಮಕ, ಭಾವೋದ್ರಿಕ್ತ ಮತ್ತು ಸಹಾನೂಭೂತಿಯುಳ್ಳ ಜನರಾಗಿದ್ದಾರೆ. ಇವರು ಆರೋಗ್ಯ, ಕಲೆ, ನರ್ಸ್, ವೈದ್ಯರು, ಭೌತಿಕ ಚಿಕಿತ್ಸಕ, ಪಶುವೈದ್ಯ, ಜ್ಯೋತಿಷ್ಯ, ಬರಹಗಾರ, ಗ್ರಾಫಿಕ್ ಕಲೆ, ಚಲನಚಿತ್ರ, ಕೇಶ ವಿನ್ಯಾಸಕಾರರಾಗಿ ಕೆಲಸ ನಿರ್ವಹಿಸಬಹುದು. ಇವು ಉತ್ತಮ ಹೆಸರು ಮತ್ತು ಲಾಭವನ್ನು ತಂದುಕೊಡುತ್ತವೆ. ಈ ರಾಶಿಯವರು ಗುಪ್ತ ಶಕ್ತಿಯ ಪ್ರವೀಣರು ಎಂದು ನಂಬಲಾಗಿದೆ. ನಿಷ್ಕ್ರೀಯ ನಿರೋಧಕತೆ ಬಳಸಿಕೊಳ್ಳುವಲ್ಲಿ ಇವರು ಉತ್ತಮವರು. ಇತರರನ್ನು ತುಂಬಾ ಕುಶಲತೆಯಿಂದ ಭಾವನಾತ್ಮಕವಾಗಿ ಮೋಹಗೊಳಿಸುವರು. ಇವರು ರಹಸ್ಯ ತಿಳಿದುಕೊಳ್ಳುವರು. ಕೆಲಸದಿಂದ ಸಂತೋಷವಾಗಿದ್ದರೂ ಇವರು ಉನ್ನತ ಉದ್ದೇಶದಿಂದ ವೃತ್ತಿಯಲ್ಲಿರಲು ಬಯಸುವರು.

  English summary

  The best job for your zodiac sign

  Our career is as important as our personal life. It is what carves our identity in the world and also helps to fuel the engine of our domestic life...learn which careers suit you the most as per your zodiac sign.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more