For Quick Alerts
ALLOW NOTIFICATIONS  
For Daily Alerts

  ಶನಿಯ ಸಂಚಾರದಿಂದ ಉಂಟಾಗುವ ಲಾಭ ನಷ್ಟಗಳು ಯಾವುವು?

  By Divya Pandith
  |

  ಶನಿ ಎಂದಾಕ್ಷಣ ಸಾಮಾನ್ಯವಾಗಿ ಕಷ್ಟ, ದುಃಖ, ನಷ್ಟ ಉಂಟಾಗುವುದು ಎನ್ನುವ ಭಯ ಆರಂಭವಾಗುತ್ತದೆ. ಶನಿಯ ಪ್ರಭಾವದಿಂದ ಕೇವಲ ಕೆಟ್ಟದ್ದೇ ಉಂಟಾಗುವುದು ಎಂದು ಅನೇಕರು ಅಂದುಕೊಂಡಿದ್ದಾರೆ. ಆದರೆ ಶನಿ ಹಾಗಲ್ಲ. ತನ್ನ ಸಂಚಾರದ ಆರಂಭದಲ್ಲಿ ಕೆಟ್ಟದನ್ನು ಮಾಡಿದರೆ, ಸಂಚಾರ ಮುಗಿಸುವ ಸಮಯದಲ್ಲಿ ಒಳ್ಳೆಯದನ್ನು ಮಾಡಿ ಹೋಗುತ್ತಾನೆ ಎನ್ನುತ್ತಾರೆ. ಶನಿಯ ಉದ್ದೇಶ ಜೀವನದ ಅರ್ಥ ಹಾಗೂ ಸಂದರ್ಭಗಳನ್ನು ನಿಭಾಯಿಸುವ ಮನೋಶಕ್ತಿ ಉಂಟಾಗುವಂತೆ ಮಾಡುತ್ತಾನೆ. ಮನುಷ್ಯನಲ್ಲಿರುವ ಅಹಂಕಾರವನ್ನು ಕಳೆದು ಸದ್ಗುಣಗಳಿಂದ ತುಂಬಿಕೊಳ್ಳುವಂತೆ ಮಾಡುವವನೆ ಶನಿ.

  ನಿಮ್ಮ ರಾಶಿಯ ಮೇಲೆ ಶನಿಯ ಪ್ರಭಾವ ಹೀಗಿದೆ ನೋಡಿ....

  ಹೌದು, ವಿಶೇಷತೆಯನ್ನು ಹೊಂದಿರುವ ಶನಿಯು ಇದೇ ಅಕ್ಟೋಬರ್ 26ರಂದು ತನ್ನ ಪತವನ್ನು ಬದಲಾಯಿಸಿದ್ದಾನೆ. ವೃಶ್ಚಿಕ ರಾಶಿಯಿಂದ ಧನುರಾಶಿಗೆ ಕಾಲಿಟ್ಟಿದ್ದಾನೆ. ಇದರಿಂದ ರಾಶಿ ಫಲಗಳ ಮೇಲೆ ಗಣನೀಯ ಪರಿಣಾಮ ಬೀರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಶನಿ ತನ್ನ ಮನೆಯನ್ನು ಬದಲಾಯಿಸಿರುವುದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಅದೃಷ್ಟ ಹಾಗೂ ಕೆಲವು ರಾಶಿಯವರಿಗೆ ಕಷ್ಟದ ಕಾಲ ಎಂದು ಹೇಳಬಹುದಾಗಿದೆ.

  ನೀವು ಈ ಬದಲಾವಣೆಯಿಂದ ಭವಿಷ್ಯದಲ್ಲಿ ಯಾವ ಬದಲಾವಣೆ ಉಂಟಾಗಲಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲದಲ್ಲಿದ್ದರೆ ಈ ಕೆಳಗಿನ ವಿವರಣೆಯನ್ನು ಪರಿಶೀಲಿಸಿ. ನಿಮ್ಮ ರಾಶಿಗೆ ಶನಿಯ ಸಂಚಾರ ಯಾವ ಬದಲಾವಣೆಯನ್ನು ತಂದಿದೆ ಎನ್ನುವುದನ್ನು ಅರಿಯಿರಿ.

  ಸಂಚಾರದಿಂದ ಉಂಟಾಗುವ ಪರಿಣಾಮ

  ಸಂಚಾರದಿಂದ ಉಂಟಾಗುವ ಪರಿಣಾಮ

  ಕ್ರೂರ ಹಾಗೂ ಪಾಪಿ ಗ್ರಹವೆಂದು ಕರೆಯುವ ಶನಿಯು ನ್ಯಾಯಕ್ಕಾಗಿ ನಿಲ್ಲುತ್ತಾನೆ. ವ್ಯಕ್ತಿಯ ಅದೃಷ್ಟ ಹಾಗೂ ದುರಾದೃಷ್ಟವನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಇದೀಗ ಶನಿಯು ತನ್ನ ಸಂಚಾರ ಬದಲಾಯಿಸಿರುವ ಹಿನ್ನೆಲೆಯಲ್ಲಿ ವೃಶ್ಚಿಕ ರಾಶಿಯವರಿಗೆ ಇಷ್ಟು ದಿನ ಇದ್ದ ಸಂಕಷ್ಟಗಳು ಕಳೆದು ಒಳ್ಳೆಯ ಸಮಯ ಬರಲಿದೆ. ಬಯಸಿದ್ದು ನಿಧಾನಗತಿಯಲ್ಲಿ ಕೈಗೂಡಿ ಬರುವುದು. ಧನು ರಾಶಿಯವರಿಗೆ ಮುಂದಿನ ದಿನಗಳು ಸ್ವಲ್ಪ ಕಷ್ಟದ ದಿನಗಳಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ಮೇಷ

  ಮೇಷ

  ಜೂನ್ ಮತ್ತು ಅಕ್ಟೋಬರ್ ನಡುವಿನ ಅವಧಿಯು ಆರೋಗ್ಯದ ವಿಷಯದಲ್ಲಿ ಈ ರಾಶಿಚಕ್ರಕ್ಕೆ ಬಹಳ ತೊಂದರೆಯ ದಿನವಾಗಿತ್ತು. ಮುಂದಿನ ದಿನದಲ್ಲಿ ನಿಮ್ಮ ಆರೋಗ್ಯವೂ ಕುದುರೆಯ ವೇಗದಂತೆ ಬದಲಾವಣೆಯನ್ನು ಕಾಣುವುದು. ನಿಮ್ಮವರು ಹಾಗೂ ಸಂಬಂಧಿಕರು ನಿಮಗೆ ಪೂರಕವಾಗಿ ವರ್ತಿಸುವರು. ಅಲ್ಲದೆ ಹೆಚ್ಚು ಅನುಕೂಲಕರ ಸಮಯವು ಒದಗಿ ಬರುವುದು.

  ಮೇಷ ರಾಶಿಗೆ ಸಂಬಂಧಿಸಿದ ಇನ್ನಷ್ಟು ವಿಚಾರಗಳು:

  ಮೇಷ ರಾಶಿಗೆ ಸಂಬಂಧಿಸಿದ ಇನ್ನಷ್ಟು ವಿಚಾರಗಳು:

  ಜ್ಯೋತಿಷ್ಯದ ಪ್ರಕಾರ ಈ ವರ್ಷ ವ್ಯಾಪಾರ ಏರಿಳಿತ ಅಥವಾ ಉದ್ಯಮಶೀಲತೆಯ ವಿಷಯದಲ್ಲಿ ಮೇಷ ರಾಶಿಗೆ ಬಹಳ ಮಂಗಳಕರವಾದ ದಿನ ಎಂದು ಹೇಳಲಾಗುವುದು. ನಿಮ್ಮ ಜೀವನದಲ್ಲಿ ಒಂದು ಪ್ರಮುಖವಾದ ಘಟನೆಯು ಮುಂದಿನ 6 ತಿಂಗಳಲ್ಲಿ ಅಂತಿಮವಾಗಿ ನಡೆಯಲಿದೆ. ಸಂತೋಷವು ನಿಮ್ಮ ಹಾದಿಯಲ್ಲಿದೆ ಎಂದು ಹೇಳಬಹುದಾಗಿದೆ.

  ಸಿಂಹ

  ಸಿಂಹ

  ಈ ರಾಶಿಯವರು ಇಷ್ಟು ದಿನ ಅನುಭವಿಸಿರುವ ಕಷ್ಟ ನಷ್ಟಗಳಿಂದ ಪಾರಾಗಲಿದ್ದಾರೆ. ಅಲ್ಲದೆ ನಿಧಾನವಾಗಿ ಮುಂದಿನ ದಿನಗಳಲ್ಲಿ ಚೇತರಿಕೆ ಕಾಣುವುದು. ಮುಂದಿನ ವರ್ಷದ ಮಧ್ಯ ಭಾಗದಲ್ಲಿ ನಿಮ್ಮ ಸ್ವಂತ ಮನೆಗೆ ಹೋಗುವ ಅವಕಾಶ ಒದಗಿ ಬರುವುದು.

  ಸಿಂಹ ರಾಶಿಗೆ ಸಂಬಂಧಿಸಿದ ಇನ್ನಷ್ಟು ವಿಚಾರಗಳು

  ಸಿಂಹ ರಾಶಿಗೆ ಸಂಬಂಧಿಸಿದ ಇನ್ನಷ್ಟು ವಿಚಾರಗಳು

  ಈ ರಾಶಿಯವರಿಗೆ ಉತ್ತಮವಾದ ವಿತ್ತೀಯ ಲಾಭ ಉಂಟಾಗುವುದು. ಮೇಲಾಧಿಕಾರಿಗಳು ಮತ್ತು ಹಿರಿಯರು ನಿಮ್ಮೊಂದಿಗೆ ಬಹಳ ಪ್ರಭಾವಿತರಾಗಬಹುದು. ಇದೀಗ ಸುವರ್ಣ ಸಮಯವು ನಿಮ್ಮ ಸುತ್ತಲೂ ಇದೆ ಎಂದು ಹೇಳಬಹುದು. ನಿಮ್ಮ ಆಕ್ರೋಶಗಳು ನಿಮ್ಮ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ಉದ್ವೇಗಗಳನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತೀರಿ.

  ತುಲಾ

  ತುಲಾ

  ಈ ರಾಶಿಯವರು ಮೂರು ವರ್ಷದಿಂದ ಅನುಭವಿಸುತ್ತಿರುವ ಸಾಡೇ ಸಾತ್ ಅವಧಿಯಲ್ಲಿ ಆನಂದದ ದಿನಗಳನ್ನು ಕಾಣಲಿದ್ದಾರೆ. ಬಾಕಿ ನೀಡಬೇಕಾದ ಹಣಗಳು ಹಾಗೂ ವೈಯಕ್ತಿಕ ಜೀವನದಲ್ಲಿ ಒಳ್ಳೆಯದಾಗುತ್ತದೆ.

  ಸಿಂಹ ರಾಶಿಗೆ ಸಂಬಂಧಿಸಿದ ಇನ್ನಷ್ಟು ವಿಚಾರಗಳು

  ಸಿಂಹ ರಾಶಿಗೆ ಸಂಬಂಧಿಸಿದ ಇನ್ನಷ್ಟು ವಿಚಾರಗಳು

  ಸಂಗಾತಿಯೊಂದಿಗಿನ ಸಂಬಂಧವನ್ನು ಸುಧಾರಿಸಿಕೊಳ್ಳಲು ಇದೊಂದು ಉತ್ತಮವಾದ ಸಮಯ. ನಿಮ್ಮ ವೃತ್ತಿಪರ ಮುಂಭಾಗದಲ್ಲಿ ನೀವು ಭಯ ಮತ್ತು ಅಭದ್ರತೆಗಳನ್ನು ಪಕ್ಕಕ್ಕೆ ಹಾಕಿದರೆ ನಿಮ್ಮ ಜೀವನವು ಸ್ಥಿರವಾಗಿ ಸಾಗುವುದು. ಪ್ರವಾಸ ಕೈಗೊಳ್ಳುವುದು ಹಾಗೂ ಹೊಸ ಕೆಲಸ ಸಿಗುವ ಸಾಧ್ಯತೆಗಳು ಇವೆ ಎಂದು ಹೇಳಬಹುದಾಗಿದೆ.

  English summary

  Shani Moves Out Of Scorpio & Brings In Good Luck!

  The ones belonging to Scorpio, well you can finally breathe in and out carefree now, as 26th October, 2017, is going to turn lucky for Scorpions and two other zodiac signs, as the Shani, or the Saturn planet, is said to move out of Scorpio during the day.So, check out on what all happens to Scorpio and the two other zodiac signs, as Shani which is considered to be the most powerful planet in Vedic Astrology, has a huge impact on the lives of the natives...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more