Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಗುರುವಾರದ ದಿನ ಭವಿಷ್ಯ
ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ ಯಶಸ್ಸು ಉಂಟಾಗುವುದು ಎನ್ನಲಾಗುತ್ತದೆ.
ಗುರುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ಗುರುವು ಈದಿನ ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಿದ್ದಾನೆ ಎನ್ನುವುದನ್ನು ಅರಿಯಬೇಕೆಂದರೆ ಈ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ....

ಮೇಷ
ಯಾವುದೇ ಬಗೆಯ ಜಂಟಿ ವ್ಯವಹಾರಕ್ಕೆ ಕೈಹಾಕದಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ಸಂಗಾತಿಯಿಂದ ಸಹಕಾರ. ಎಲ್ಲಾ ಕೆಲಸದಲ್ಲೂ ಒಳ್ಳೆಯ ಫಲಿತಾಂಶ ದೊರೆಯುವುದು. ಅಷ್ಟಮ ಶನಿಯಿಂದ ಪಡೆದಂತಹ ಕಷ್ಟಗಳು ದೂರವಾಗುತ್ತಿದೆ. ವೃತ್ತಿ ಕ್ಷೇತ್ರದಲ್ಲೂ ಉತ್ತಮ ಫಲಿತಾಂಶ ದೊರೆಯುವುದು. ಮಕ್ಕಳಿಂದ ಶುಭವಾರ್ತೆ. ಸ್ಥಿರಾಸ್ತಿ ಖರೀದಿಯಲ್ಲೂ ಒಳ್ಳೆಯ ಫಲಿತಾಂಶ ಸಿಗುವುದು. ವ್ಯಾಪಾರಿಗಳಿಗೆ ಉತ್ತಮ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಗುರುವಿನ ಆರಾಧನೆ ಮಾಡಿ.

ವೃಷಭ
ಹೆಚ್ಚು ಜಾಗೃತರಾಗಿರಿ. ಕಪ್ಪು ಬಟ್ಟೆಯನ್ನು ಯಾವುದೇ ಕಾರಣಕ್ಕೂ ತೊಡದಿರಿ. ಮಾನಸಿಕವಾಗಿ ಕಿರಿಕಿರಿ ಉಂಟಾಗುತ್ತಲೇ ಇರುತ್ತದೆ. ವಿಪರೀತ ಆಯಾಸವನ್ನು ಅನುಭವಿಸಬೇಕಾಗುವುದು. ಆರ್ಥಿಕವಾಗಿಯೂ ಸಾಕಷ್ಟು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಮಾಡದ ತಪ್ಪಿಗೆ ದಂಡ ತೆರಬೇಕಾದ ಸಂದರ್ಭ ಬರುವುದು. ಇದು ನಿಮಗೆ ಅಷ್ಟಮ ಶನಿಯ ಪ್ರಭಾವದಿಂದ ಉಂಟಾಗುತ್ತಿದೆ ಎಂದು ಹೇಳಬಹುದು. ಸ್ತ್ರೀಯರು ಆಂತರಿಕ ವಿಚಾರವನ್ನು ಅದೆಷ್ಟೇ ಆಪ್ತರಾಗಿದ್ದರೂ ಅವರಲ್ಲಿ
ಹಂಚಿಕೊಳ್ಳದಿರುವುದು ಸೂಕ್ತ. ಅವಮಾನವೂ ಉಂಟಾಗುವ ಸಾಧ್ಯತೆ ಇದೆ. ಯಶಸ್ವಿ ಬದುಕಿಗಾಗಿ ಗುರುವಿನ ಆರಾಧನೆ ಮಾಡುವುದು ಮುಖ್ಯ.

ಮಿಥುನ
ಇಂದು ನಿಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ಮನಸ್ಸಿಗೂ ಉಲ್ಲಾಸ ಇರುತ್ತದೆ. ಬಂಧುಗಳಿಂದಲೂ ಸಹಕಾರ ಸಿಗುವುದು. ಕಾರ್ಮಿಕ ವರ್ಗದವರಿಗೆ ಅನುಕೂಲವಾಗುವುದು. ಸಣ್ಣಪುಟ್ಟ ವ್ಯಾಪಾರಿಗಳಿಗೂ ಉತ್ತಮ ಲಾಭ ಉಂಟಾಗುವುದು. ಇನ್ನಷ್ಟು ಉತ್ತಮ ಭವಿಷ್ಯಕ್ಕಾಗಿ ಗುರುವಿನ ಆರಾಧನೆ ಮಾಡಿ. ಇಂದು ನಿಮಗೆ ಸುಗಮವಾದಂತಹ ದಿನ ಹೇಳಬಹುದು. ಮಕ್ಕಳಿಂದಲೂ ಶುಭವಾರ್ತೆ ಕೇಳುವಿರಿ. ಇಷ್ಟು ದಿನದಿಂದ ಹದಗೆಟ್ಟ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಹಣಕಾಸಿನ ವ್ಯವಹಾರದಲ್ಲಿ ಆದಷ್ಟು ಎಚ್ಚರ ವಹಿಸಿ. ಇತರರಿಗೆ ಹಣ ನೀಡುವ ಗೋಜಿಗೆ ಹೋಗದಿರಿ. ಇನ್ನಷ್ಟು ಒಳಿತಾಗಲು ಗುರುವಿನ ಆರಾಧನೆ ಮಾಡಿ.

ಕರ್ಕ
ಇಂದು ನಿಮಗೆ ಅದೃಷ್ಟದ ದಿನ ಎಂದು ಹೇಳಬಹುದು. ಬಂಧುಗಳ ಆಗಮನ ಹಾಗೂ ಸಿಹಿ ಭೂಜನ ದೊರೆಯುವುದು. ಹಿರಿಯರು ಹೆಚ್ಚು ಆಹಾರ ಸ್ವೀಕರಿಸದಿರಿ. ಮಾಂಸಹಾರ ಒಳ್ಳೆಯದಲ್ಲಾ. ಉತ್ತಮ ಯಶಸ್ಸಿಗಾಗಿ ಗುರುವಿನ ಆರಾಧನೆ ಮಾಡಿ.

ಸಿಂಹ
ನಿಮಗೆ ವಿಪರೀತ ಸಮಸ್ಯೆಗಳು ಕಾಡಬಹುದು. ಪತ್ನಿಯಿಂದ ಅಪಮಾನ ಉಂಟಾಗುವುದು. ಗೌಪ್ಯ ವಿಚಾರವು ಆಚೆ ಬರುವುದು. ಆಪ್ತರು ಎನಿಸಿಕೊಂಡವರಿಂದಲೇ ದ್ರೋಹ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ಮುಗ್ಗಟ್ಟು ಉಂಟಾಗುವುದು. ಉದ್ಯೋಗ ಕಳೆದುಕೊಳ್ಳಬಹುದು. ಇದು ಪಂಚಮ ಶನಿಯ ಪ್ರಭಾವದಿಂದ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಆಂಜನೇಯ ಮತ್ತು ಗುರುವಿನ ಆರಾಧನೆ ಮಾಡಿ.

ಕನ್ಯಾ
ಮನೆಯಲ್ಲಿ ಪತ್ನಿಯಿಂದ ಅನುಕೂಲವಾಗುವುದು. ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಮಕ್ಕಳಲ್ಲಿ ಉತ್ತಮ ಪ್ರಗತಿ ಉಂಟಾಗುವುದು. ವಾಹನ ಚಲಾಯಿಸುವಾಗ ಜಾಗೃತರಾಗಿ ಚಲಾಯಿಸಿ. ಬಂಧುಗಳು ಅಗಲಿದ ವಿಚಾರವನ್ನು ಕೇಳಬೇಕಾಗುವುದು. ಸಣ್ಣ ಪುಟ್ಟ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಇನ್ನಷ್ಟು ಸಮಾಧಾನಕ್ಕೆ ಕುಲದೇವರ ಆರಾಧನೆ ಹಾಗೂ ರಾಯರ ಆರಾಧನೆ ಮಾಡಿ.

ತುಲಾ
ಇಂದು ನಿಮಗೆ ಅನುಕೂಲಕರ ದಿನ. ರೈತರಿಗೆ ನೆಮ್ಮದಿ ದೊರೆಯುವುದು. ಸರ್ಕಾರಿ ಉದ್ಯೋಗಿಗಳಿಗೆ ಅಧಿಕ ಪ್ರಮಾಣದ ಧನಾಗಮನ ಯೋಗ. ಬರಲಿರುವ ಹಣವು ಬರುವುದು. ಭಡ್ತಿ ಸಿಗುವ ಸಾಧ್ಯತೆ ಇದೆ. ಉತ್ತಮ ಭವಿಷ್ಯಕ್ಕಾಗಿ ಗುರುವಿನ ಆರಾಧನೆ ಮಾಡುವುದು ಸೂಕ್ತ.

ವೃಶ್ಚಿಕ
ಬಂಧುಗಳಿಂದ ಕಿರಿಕಿರಿ. ಅವಮಾನ ಉಂಟಾಗುವ ಸಾಧ್ಯತೆ ಇದೆ. ಅಂದುಕೊಂಡ ಕಾರ್ಯವು ಸುಗಮವಾಗಿ ಕೈಗೂಡಿ ಬರದು. ಅಪರಿಚಿತ ವ್ಯಕ್ತಿಯ ದುರ್ಮರಣಕ್ಕೆ ಹಣ ವ್ಯಯಮಾಡುವ ಅನಿವಾರ್ಯತೆ ಒದಗಿ ಬರುವುದು. ಕಾರ್ಯದಲ್ಲಿ ಅಪಜಯ ಉಂಟಾಗುವ ಸಾಧ್ಯೆತೆ ಇದೆ. ಪ್ರಗತಿಗಾಗಿ ಶಿವ ಹಾಗೂ ಗುರುವಿನ ಆರಾಧನೆ ಮಾಡುವುದು ಒಳಿತು.

ಧನು
ವಿಪರೀತ ದೈಹಿಕ ಆಯಾಸ. ಮಾಡದಿರುವ ತಪ್ಪಿಗೆ ಶಿಕ್ಷೆ ಪಡೆಯಬೇಕಾಗುವುದು. ಸಾಮಾಜಿಕ ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ. ಆದಷ್ಟು ಜಾಗೃತರಾಗಿರಿ. ಮೂರನೇ ವ್ಯಕ್ತಿಯ ಮಾತಿಗೆ ಹೆಚ್ಚು ತಲೆಕೆಡಿಕೊಳ್ಳದಿರಿ. ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗದಿರಿ. ಉತ್ತಮ ಪ್ರಗತಿಗೆ ಗುರುವಿನ ಆರಾಧನೆ ಮಾಡಿ.

ಮಕರ
ಸ್ತ್ರೀಯರಿಗೆ ಕಿರಿ ಕಿರಿ ಉಂಟಾಗುವುದು. ಬಂಧುಗಳು ಅಪವಾದಗಳಂತಹ ದುರ್ವಾರ್ತೆಗಳನ್ನು ಬಿತ್ತಬಹುದು. ಕೆಲವು ಮೂಲಗಳಿಂದ ಅವಮಾನ ಉಂಟಾಗುವ ಸಾಧ್ಯಯೂ ಹೆಚ್ಚಿದೆ. ಆದಷ್ಟು ಒಳ್ಳೆಯ ವಿಚಾರದ ಬಗ್ಗೆ ಚಿಂತಿಸಿ. ಪ್ರಗತಿಪರ ಜೀವನಕ್ಕಾಗಿ ಗುರುವಿನ ಆರಾಧನೆ ಮಾಡಿ.

ಕುಂಬ
ಹೋಮ್ ಇಂಡಸ್ಟ್ರೀಗಳಲ್ಲಿ ಕೆಲಸಮಾಡುವವರಿಗೆ ಲಾಭ ಉಂಟಾಗುವುದು. ಸ್ತ್ರೀಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಉಂಟಾಗುವುದು. ಮನೆಯಲ್ಲಿ ನೆಮ್ಮದಿ. ಮಕ್ಕಳಿಂದ ಶುಭವಾರ್ತೆ. ಚೈತನ್ಯ ಭರಿತ ವಿಷಯಗಳನ್ನು ಕೇಳುವಿರಿ. ಮನೆಯಿಂದ ಹೊರಡುವಾಗ ಮಕ್ಕಳ ಮುಖ ದರ್ಶನ ಹಾಗೂ ಗುರುವಿನ ಪಾರ್ಥನೆಯನ್ನು ಮಾಡಿ ಹೋಗಿ. ಇದರಿಂದ ನಿಮಗೆ ಅದೃಷ್ಟ ಉಂಟಾಗುವುದು.

ಮೀನ
ಇಂದು ನಿಮಗೆ ಸುಖಪ್ರದವಾದ ದಿನ ಎಂದು ಹೇಳಬಹುದು. ವಾಹನ ಚಲಾಯಿಸುವಾಗ "ದುರ್ಗಾಳಿ ನಮಃ' ಎಂದು ಹೇಳುತ್ತಾ ಸಾಗಿ. ಇದರಿಂದ ಕೆಟ್ಟ ಶಕ್ತಿಗಳು ಹತ್ತಿರ ಸುಳಿಯದು. ನಿಮ್ಮ ಕನಸುಗಳು ನನಸಾಗುವುದು. ಚಿರಾಸ್ತಿಯಿಂದ ಲಾಭ ಉಂಟಾಗುವುದು. ಮಿತ್ರರಿಂದ ಸಹಕಾರ ಹಾಗೂ ಅನುಕೂಲವಾಗುವುದು. ಉತ್ತಮ ಬದುಕಿಗಾಗಿ ಶಿವ ಮತ್ತು ಗುರುವಿನ ಆರಾಧನೆ ಮಾಡಿ.



Click it and Unblock the Notifications