Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
30-11-2017 ಗುರುವಾರದ ದಿನ ಭವಿಷ್ಯ

ಪ್ರತಿಯೊಬ್ಬರು ಜೀವನದಲ್ಲಿ ಸುಖವನ್ನು ಬಯಸುತ್ತಾರೆ. ಸುಖ ಎನ್ನುವುದನ್ನು ಯಾವುದೇ ಕೈಗಾರಿಕೆಯಲ್ಲಿ ಉತ್ಪಾದಿಸುವುದಿಲ್ಲ. ಯಾವುದೇ ಅಂಗಡಿಯಲ್ಲೂ ಮಾರುವುದಿಲ್ಲ. ಇನ್ನೊಬ್ಬರ ಏಳಿಗೆಗೆ ಸಹಾಯ ಮಾಡಿದಾಗ ನಮಗೇ ಅರಿವಿಲ್ಲದಂತೆ ನಮ್ಮ ಪುಣ್ಯ ಹೆಚ್ಚುವುದು. ಸುಖ ಸಂತೋಷವು ನಮಗೆ ಲಭಿಸುವುದು. ಪರರಿಗೆ ಅನ್ಯಾಯ ಮಾಡದೆ, ಪ್ರೀತಿ ವಿಶ್ವಾಸದಿಂದ ಕಂಡಾಗ ಜೀವನವು ಸಾರ್ಥಕವಾಗುವುದು.
ಅಲ್ಲದೆ ಆ ಭಗವಂತನು ನಮ್ಮ ಇಷ್ಟಾರ್ಥಗಳನ್ನು ಪೂರೈಸುವನು. ಗುರುವಾರಾದ ಇಂದು ನಿಮ್ಮ ಕುಂಡಲಿಯಲ್ಲಿ ಗ್ರಹ ಗತಿಗಳು ಯಾವ ಬಗೆಯಲ್ಲಿ ಪರಿಣಾಮ ಬೀರುತ್ತವೆ. ಅದಕ್ಕೆ ದೇವರ ಆಶೀರ್ವಾದ ಲಭಿಸುವುದೇ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಿದ್ದರೆ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ...

ಮೇಷ
ಸಹೋದರರಿಂದ ಧನಾತ್ಮಕ ಸಹಾಯವನ್ನು ಪಡೆಯುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ. ಬಂಧು ಬಾಂಧವರು ನಿಮ್ಮ ಸಹಾಯಕ್ಕೆ ನಿಲ್ಲುವರು. ಉದಾರ ಗುಣದವರಾದ ನಿಮಗೆ ದೇವರ ಆಶೀರ್ವಾದ ಲಭಿಸುವುದು. ಇನ್ನಷ್ಟು ಒಳಿತಿಗಾಗಿ ಗುರುವಿನ ಪ್ರಾರ್ಥನೆ ಹಾಗೂ ವಿಷ್ಣುವಿನ ಆರಾಧನೆ ಮಾಡಿ.

ವೃಷಭ
ಸಮಾಧಾನದ ಬದುಕನ್ನು ಕಾಣಲಿದ್ದೀರಿ. ನಿಮ್ಮ ನಿರೀಕ್ಷೆಗಳು ನೆರವೇರುವುದು. ಮಕ್ಕಳ ವಿವಾಹ ಕಾರ್ಯ ನಡೆಸಲು ಅನುಕೂಲವಾಗುವುದು. ಸ್ಥಿರಾಸ್ತಿಯಿಂದ ಅಲ್ಪ ಪ್ರಮಾಣದ ಲಾಭ ಉಂಟಾಗುವುದು. ಯಶಸ್ವಿ ಬದುಕು ಹಾಗೂ ಕಷ್ಟಗಳ ನಿವಾರಣೆಗೆ ಗಣೇಶನ ಆರಾಧನೆ ಮಾಡಿ.

ಮಿಥುನ
ಇಂದು ನಿಮಗೆ ಸಮಾಧಾನದ ದಿನ. ನಿರೀಕ್ಷಿತ ಮಟ್ಟಕ್ಕಿಂತ ಮಿಗಿಲಾಗಿ ಸ್ತ್ರೀಯರ ಸಹಕಾರ ಸಿಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಹಾಗೂ ಆರ್ಥಿಕವಾಗಿ ಸುಧಾರಣೆಯನ್ನು ಕಾಣುವಿರಿ. ಬಂಧು ಮಿತ್ರರ ಸಹಕಾರವು ದೊರೆಯುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಕರ್ಕ
ಇಂದು ನಿಮಗೆ ಅದೃಷ್ಟದ ದಿನ. ನೀವು ಅಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಸುಗಮವಾಗಿ ನೆರವೇರುವುದು. ಎರಡು ವರ್ಷಗಳಿಂದ ಸಂಕಷ್ಟಗಳನ್ನು ಅನುಭವಿಸಿದ್ದ ನಿಮಗೆ ಇದೀಗ ಸಮಾಧಾನ ಹಾಗೂ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಕಲಾವಿದರಿಗೆ ಅನುಕೂಲ. ಮಾಡುತ್ತಿರುವ ಕೆಲಸದಲ್ಲಿ ಲಾಭಗಳ ಸುರಿಮಳೆ ಹಾಗೂ ವಿದೇಶ ಪ್ರಯಾಣದ ಕನಸು ನನಸಾಗುವದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಇನ್ನಷ್ಟು ಉತ್ತಮ ಫಲಕ್ಕಾಗಿ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

ಸಿಂಹ
ಪಂಚಮ ಶನಿ ಇರುವುದರಿಂದ ವಿಪರೀತವಾದ ಮಾನಸಿಕ ವೈಪರೀತ್ಯವನ್ನು ಅನುಭವಿಸುವಿರಿ. ಆರೋಗ್ಯದಲ್ಲೂ ಅಡೆತಡೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅವಮಾನ ಉಂಟಾಗುವುದು. ದೂರದ ಸಂಬಂಧಿಕರು ಅಗಲಿದ ಸುದ್ದಿ ಕೇಳುವಿರಿ. ರಾಹು ಕಾಲದ ಪ್ರಯಾಣ ಮಾಡದಿರಿ. ಮಕ್ಕಳಿಂದಲೇ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ಗುರುವಿನ ಆರಾಧನೆ ಮಾಡಿ.

ಕನ್ಯಾ
ನಿಮಗೆ ಇಂದು ಉತ್ತಮವಾದ ದಿನ. ಮನೆಯಲ್ಲಿ ನೆಮ್ಮದಿ ಸಿಗುವುದು. ಸ್ತ್ರೀಯರಿಂದ ಸಕಾರಾತ್ಮಕ ವರ್ತನೆ ಕಾಣುವಿರಿ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಅತ್ಯಗತ್ಯ. ಕೈಗಾರಿಕಾ ಕ್ಷೇತ್ರದಲ್ಲಿ ಲಾಭ ಉಂಟಾಗುವುದು. ವಿದ್ಯಾರ್ಥಿಗಳಿಗೆ ಶುಭ ದಿನ. ಇನ್ನಷ್ಟು ಸಮಾಧಾನ ಹಾಗೂ ಯಶಸ್ವಿ ಬದುಕಿಗಾಗಿ ಗುರುವಿನ ಉಪಾಸನೆ ಮಾಡಿ.

ತುಲಾ
ಅಧಿಕ ಪ್ರಮಾಣದ ಲಾಭವನ್ನು ಪಡೆಯುವಿರಿ. ಎಲ್ಲಾ ವ್ಯಾಪಾರ ವಹಿವಾಟುಗಳಲ್ಲೂ ಲಾಭ ದೊರೆಯುವುದು. ಚಾಲಕರಿಗೆ ಸಮಾಧಾನ ದೊರೆಯುವುದು. ಪ್ರಗತಿಪರ ಜೀವನವನ್ನು ನೀವು ಅನುಭವಿಸಲಿದ್ದೀರಿ. ಇತರರ ಮಾತಿನ ನಡುವೆ ನೀವು ಮಧ್ಯಸ್ಥಿಕೆ ತೋರಬೇಡಿ. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ
ನಿಮ್ಮ ಆಂತರಿಕ ವಿಚಾರವನ್ನು ಯಾರೊಂದಿಗೂ ಚರ್ಚಿಸದಿರಿ. ಮನೆಯಲ್ಲಿ ಪೂರ್ಣ ಪ್ರಮಾಣದ ನೆಮ್ಮದಿ ದೊರೆಯದು. ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಶಿವ ಸ್ಮರಣೆ ಮಾಡಿದರೆ ಕಷ್ಟಗಳು ದೂರಾಗುವುದು. ಹಿರಿಯರು ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆಗಳಿವೆ. ಮಾಡಿದ ನಿರ್ಧಾರವನ್ನು ಕೈಬಿಡದಿರಿ. ಶಿವನ ಆರಾಧನೆ ಹಾಗೂ ವಿಷ್ಣುವಿನ ಸ್ಮರಣೆ ಮಾಡಿ ಉತ್ತಮ ಭವಿಷ್ಯ ನಿಮ್ಮದಾಗುವುದು.

ಧನು
ಹೆಚ್ಚು ಕಾಳಜಿಯಿಂದ ಇರಿ. ನೀವು ಮಾಡದ ತಪ್ಪಿಗೆ ಹೊಣೆಯಾಗಬೇಕಾಗುವುದು. ನಿಮಗೆ ಇದೊಂದು ಪರೀಕ್ಷೆಯ ಸಮಯ ಎನ್ನಬಹುದು. ಹಿತ ಶತ್ರುಗಳಿಂದಲೇ ತೊಂದರೆ ಉಂಟಾಗುವುದು. ಆದಷ್ಟು ಸತ್ಯ ನಿಷ್ಠೆಯಿಂದ ವರ್ತಿಸಿ. ಕಪ್ಪು ಬಟ್ಟೆಯನ್ನು ತೊಡದಿರಿ. ಹಿರಿಯರ ಮಾತನ್ನು ಮೀರದಿರಿ. ಕಷ್ಟಗಳ ನಿವಾರಣೆಗೆ ಶನಿಯ ಅಷ್ಟೋತ್ತರವನ್ನು ಓದಿ.

ಮಕರ
ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಮನೆಯಲ್ಲಿ ಕಿರಿಕಿರಿ ಹಾಗೂ ಬಂಧು ಮಿತ್ರರರ ನಡುವೆ ಕಲಹದ ವಾತಾವರಣ ಸೇರಿದಂತೆ ಅಶುಭ ಫಲವನ್ನು ಹೆಚ್ಚು ಕಾಣಬೇಕಾದಂತಹ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕುಂಬ
ಇಂದು ಸಮಾಧಾನಕರವಾದ ದಿನ. ಸ್ತ್ರೀಯರಿಗೆ ಇಂದು ಅದೃಷ್ಟದ ದಿನ. ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ದೂರದ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವಿರಿ. ರೂಪದರ್ಶಿಗಳಿಗೆ ಅನುಕೂಲಕರವಾದ ದಿನ. ಕಬ್ಬಿಣ ಹಾಗೂ ಕೈಗಾರಿಕೆ ಕೆಲಸದಲ್ಲಿರುವವರಿಗೆ ಲಾಭ ಉಂಟಾಗುವುದು. ಉತ್ತಮ ಪ್ರಗತಿ ಹಾಗೂ ಯಶಸ್ವಿ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಮೀನ
ಶುಭವಾದಂತಹ ದಿನ. ನೆಮ್ಮದಿಯನ್ನು ಕಾಣುವಿರಿ. ಆರೋಗ್ಯದ ಸುಧಾರಣೆ ಆಗುವುದು. ಮನೆಯಲ್ಲಿ ಹರ್ಷದ ವಾತಾವರಣ ಉಂಟಾಗುವುದು. ವಿದೇಶ ಪ್ರಯಾಣ ಕೈಗೊಳ್ಳುವಿರಿ. ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ. ಜೊತೆಗೆ ಅಧಿಕವಾದ ಖುಷಿಯು ನಿಮಗೆ ಲಭಿಸುವುದು. ಇನ್ನಷ್ಟು ಸಮಾಧಾನದ ಬದುಕಿಗಾಗಿ ಗಣೇಶನ ಮತ್ತು ಗುರುವಿನ ಆರಾಧನೆ ಮಾಡಿ.



Click it and Unblock the Notifications