Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಗುರುವಾರದ ದಿನ ಭವಿಷ್ಯ

ನಿತ್ಯವೂ ನಮ್ಮೊಡನೆ ಅನೇಕರ ಸ್ನೇಹ ಸಂಬಂಧಗಳ ಬೆಸುಗೆ ಇರುತ್ತದೆ. ಹಾಗಾಗಿ ಜೀವನದಲ್ಲಿ ಹಣಕಾಸಿನ ವಿಚಾರದಂತೆಯೇ ಸಂಬಂಧಗಳ ಪಾಲನೆ ಪಾಲನೆಯಲ್ಲೂ ಹೆಚ್ಚು ಗಮನ ನೀಡಬೇಕು. ಬಂಧಗಳನ್ನು ಕಳೆದುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಒಳ್ಳೆಯ ಸಂಸಾರ, ಆತ್ಮೀಯ ವ್ಯಕ್ತಿಗಳು ಸಿಗಬೇಕೆಂದರೆ ಅದು ನಮ್ಮ ಕುಂಡಲಿ ಹಾಗೂ ಅದೃಷ್ಟವನ್ನು ಅವಲಂಭಿಸಿರುತ್ತದೆ.
ಗುರುವಾರದ ಈ ಶುಭದಿನ ನಮ್ಮ ಬದುಕಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗುತ್ತವೆ? ಹಣಕಾಸಿನ ಸ್ಥಿತಿ-ಗತಿ, ಉದ್ಯೋಗ ಕ್ಷೇತ್ರದಲ್ಲಾಗುವ ಬದಲಾವಣೆಗಳು, ವೈವಾಹಿಕ ಜೀವನ ಹೀಗೆ ಪ್ರಭಾವ ಉಂಟಾಗುವುದು ಎನ್ನುವ ಸೂಕ್ತ ವಿವರಣೆಯನ್ನು ಇಂದಿನ ರಾಶಿಭವಿಷ್ಯದ ಮೂಲಕ ಬೋಲ್ಡ್ ಸ್ಕೈ ತಿಳಿಸಿಕೊಡುತ್ತದೆ...

ಮೇಷ
ಇಂದು ನಿಮಗೆ ನೆಮ್ಮದಿಯ ದಿನ. ಮನೆಯಲ್ಲಿ ಎಲ್ಲರಿಂದಲೂ ಪ್ರೀತಿ ಸಹಕಾರ ದೊರೆಯುವುದು. ದೇವರ ಕೃಪೆ ಇಂದು ನಿಮ್ಮ ಮೇಲೆ ಇರುವುದು. ಮಕ್ಕಳಿಂದ ಶುಭ ಸುದ್ದಿ. ಸ್ನೇಹಿತರಿಂದ ಸಕಾರಾತ್ಮಕ ನೆರವು ದೊರೆಯುವುದು. ನೀವು ಅಂದುಕೊಂಡದ್ದನ್ನು ಸುಲಭವಾಗಿ ಪಡೆಯುವಿರಿ. ನಿಮ್ಮ ಗುರಿಯನ್ನು ತಲುಪಿರುವ ಖುಷಿ ನಿಮ್ಮದಾಗಲಿದೆ. ಉತ್ತಮ ಭವಿಷ್ಯಕ್ಕಾಗಿ ಗಣೇಶನ ಆರಾಧನೆ ಹಾಗೂ ಗುರುವಿನ ಸ್ಮರಣೆ ಮಾಡಿ.

ವೃಷಭ
ನಿಮಗೆ ಆರ್ಥಿಕವಾಗಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವ್ಯವಸ್ಥೆ ಕುಸಿಯುವುದು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡದಿರಿ. ನಿಮ್ಮವರೇ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಕಪ್ಪು ಬಟ್ಟೆಯ ಧಾರಣೆಯನ್ನು ಮಾಡದಿರಿ. ಸ್ತ್ರೀಯರ ಮಾತನ್ನು ಧಿಕ್ಕರಿಸದಿರಿ. ಹಾಗೊಮ್ಮೆ ಧಿಕ್ಕರಿಸಿದರೆ ಅಪಜಯ ಉಂಟಾಗುವುದು. ವಿದ್ಯಾರ್ಥಿಗಳಿಗೂ ಅಪಜಯ ಉಂಟಾಗುವುದು. ಹತ್ತಾರು ಸಮಸ್ಯೆಗಳು ಒಮ್ಮೆಲೇ ಕೈಗೂಡಿ ಬರುವ ಸಾಧ್ಯತೆ ಇದೆ. ಆದ್ದರಿಂದ ಇವರು ಗಣೇಶನ ಆರಾಧನೆ ಹಾಗೂ ಗುರುವಿನ ಪ್ರಾರ್ಥನೆ ಮಾಡಿ.

ಮಿಥುನ
ಸಮಾಧಾನಕರವಾದ ಬದುಕನ್ನು ನೀವು ಕಾಣುವಿರಿ. ಮನೆ ಮಠಗಳನ್ನು ಮಾಡಿಕೊಳ್ಳಬೇಕು ಎನ್ನುವ ನಿಮ್ಮ ಕನಸು ನನಸಾಗುವುದು. ಸ್ಥಿರಾಸ್ತಿಯಿಂದ ಲಾಭ ಉಂಟಾಗುವುದು. ಸುಂದರಮಯವಾದ ನಿಮ್ಮ ಹೊಸ ಜೀವನ ಆರಂಭವಾಗುವುದು. ಆಪ್ತರು ಇದಕ್ಕೆ ಸಹಾಯ ಮಾಡುವರು. ಪ್ರೇಮಿಗಳಿಗೆ ಪ್ರೇಮ ವೈಫಲ್ಯ ಉಂಟಾಗುವ ಸಾಧ್ಯತೆಗಳಿವೆ. ಸ್ತ್ರೀಯರು ಆದಷ್ಟು ಜಾಗ್ರತರಾಗಿರಬೇಕು. ಮೋಸಗಾರರ ಬಲೆಗೆ ಬೀಳುವ ಸಾಧ್ಯತೆ ಇದೆ. ನಿಮ್ಮ ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

ಕರ್ಕ
ಪಂಚಮ ಶನಿ ನಿಮ್ಮನ್ನು ಬಿಟ್ಟಿರುವುದರಿಂದ ಇದೀಗ ನಿಮಗೆ ನಿರಾಳವಾದ ಬದುಕು ಪ್ರಾಪ್ತಿಯಾಗುವುದು. ಆರ್ಥಿಕ ಕ್ಷೇತ್ರವು ಬಲಗೊಳ್ಳುವುದು. ಸರ್ಕಾರಿ ಉದ್ಯಮವು ಅನುಕೂಲ ತಂದುಕೊಡುವುದು. ನಿಮ್ಮ ಸುಂದರ ಕನಸುಗಳು ನನಸಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣವು ನಿಮಗೆ ದೊರೆಯಲಿದೆ. ಬಂಧು ಮಿತ್ರರಿಂದ ಅನುಕೂಲ ಉಂಟಾಗುವುದು. ವಿದ್ಯಾರ್ಥಿಗಳಿಗೂ ಯಶಸ್ಸು ದೊರೆಯುವುದು. ಆಸ್ತಿಗಳಿಂದ ಉತ್ತಮ ಲಾಭ ಉಂಟಾಗುವುದು. ಯಶಸ್ವಿ ಬದುಕಿಗಾಗಿ ಕುಲದೇವರ ಸ್ಮರಣೆ ಮತ್ತು ಗಣೇಶನ ಆರಾಧನೆ ಮಾಡಿ.

ಸಿಂಹ
ಇಂದು ನಿಮಗೆ ಅಷ್ಟು ಶುಭಕರವಲ್ಲದ ದಿನ ಎಂತಲೇ ಹೇಳಬಹುದು. ಇಲ್ಲ ಸಲ್ಲದ ಅಪವಾದಗಳು ನಿಮ್ಮ ಬೆನ್ನೇರುವ ಸಾಧ್ಯತೆಯಿದೆ. ಮನಸ್ಸಿಗೆ ಕಿರಿಕಿರಿ ಉಂಟಾಗುವುದು. ಮಿತ್ರರಿಂದ ದ್ರೋಹ ಉಂಟಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಅನಾನುಕೂಲ ಉಂಟಾಗುವುದು. ನೀವು ವಿವೇಚನಯುತವಾಗಿ ನಡೆದುಕೊಂಡರೆ ಭಗವಂತನು ನಿಮ್ಮ ಸಮಸ್ಯೆಗಳನ್ನು ನಿವಾರಿಸುವನು. ಸಾಲ ನೀಡುವುದು, ಪಡೆಯುವುದು ಅಥವಾ ಜಾಮೀನು ನೀಡುವ ಕೆಲಸಕ್ಕೆ ಮುಂದಾಗದಿರಿ. ಯಶಸ್ವಿ ಬದುಕಿಗಾಗಿ ನರಸಿಂಹ ದೇವರ ಆರಾಧನೆ ಮಾಡಿ.

ಕನ್ಯಾ
ಇಂದು ಅಷ್ಟು ಉತ್ಕøಷ್ಟವಾದ ದಿನವಲ್ಲ. ಸಾಮಾನ್ಯವಾದ ದಿನ ಎನ್ನಬಹುದು. ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಬಂಧು ಮಿತ್ರರ ಸಹಕಾರವು ದೊರೆಯುವುದು. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ದೂರದ ಸ್ಥಳಗಳಿಗೆ ಅನಿವಾರ್ಯವಾಗಿ ಪ್ರಯಾಣ ಕೈಗೊಳ್ಳಬೇಕಾಗುವುದು. ಹಿರಿಯರು ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡುವ ಉದ್ದೇಶಕ್ಕೆ ಸ್ನೇಹಿತರೊಡನೆ ಚರ್ಚೆ ನಡೆಸುವರು. ರಕ್ತದೊತ್ತಡ, ಮಧುಮೇಹ ಇದ್ದವರು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ವ್ಯಾಪಾರ ವಹಿವಾಟಿನಲ್ಲಿ ಸಾಧಾರಣ ಲಾಭ ಉಂಟಾಗುವುದು. ಹೆಚ್ಚಿನ ಅನುಕೂಲಕ್ಕೆ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

ತುಲಾ
ಇಂದು ನಿಮಗೆ ದೇವರು ಜಯವನ್ನು ನೀಡುತ್ತಾನೆ. ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುವುದು. ಸುಖಪ್ರದವಾದ ಜೀವನವನ್ನು ಪಡೆದುಕೊಳ್ಳುವಿರಿ. ವಿವಾಹದ ಅಡೆತಡೆಗಳು ದೂರವಾಗುವುದು. ಸುಂದರ ಜೀವನಕ್ಕೆ ಬೇಕಾದ ಅನುಕೂಲಗಳು ನಿಮಗೆ ಲಭ್ಯವಾಗುವುದು. ನಿಮ್ಮ ನಿರ್ದಿಷ್ಟ ಗುರಿಯನ್ನು ನೀವು ತಲುಪಲಿದ್ದೀರಿ. ಬಂಧು ಮಿತ್ರರ ಸಹಕಾರ ದೊರೆಯುವುದು. ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ
ಇಂದು ನಿಮಗೆ ಅಷ್ಟು ಅನುಕೂಲಕರವಾದ ದಿನವಲ್ಲ ಎಂದೇ ಹೇಳಬೇಕು. ಅವಮಾನಗಳು ಉಂಟಾಗುವ ಸಾಧ್ಯತೆಗಳು ಇವೆ. ಬಂಧು ಮಿತ್ರರಲ್ಲಿ ವೈಮನಸ್ಸು ಮತ್ತು ಕಿರಿ ಕಿರಿ ಉಂಟಾಗುವ ಸಾಧ್ಯತೆಗಳಿವೆ. ಹಲವಾರು ದಿನಗಳಿಂದ ಮಾಡಿಕೊಂಡಿದ್ದ ಯೋಜನೆಗಳು ಕೈತಪ್ಪಿ ಹೋಗುವ ಸಾಧ್ಯತೆಗಳಿವೆ. ಮಕ್ಕಳಿಂದ ಕಿರಿಕಿರಿ ವಾತಾವರಣ ಸೃಷ್ಟಿಯಾಗುವುದು. ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗದು. ವಾಹನಗಳ ಚಾಲನೆ ಮತ್ತು ಪ್ರಯಾಣದಿಂದ ಆಘಾತ ಉಂಟಾಗುವ ಸಾಧ್ಯತೆಗಳಿವೆ. ಉತ್ತಮ ಭವಿಷ್ಯಕ್ಕಾಗಿ ಹನುಮಂತನ ಪ್ರಾರ್ಥನೆ ಮಾಡಿ.

ಧನು
ನೀವು ಹೆಚ್ಚು ಜಾಗರೂಕರಾಗಿರಬೇಕು. ಮನೆಯಲ್ಲಿ ಕಿರಿಕಿರಿ ವಾತಾವರಣ ಉಂಟಾಗುವುದು. ಕಪ್ಪು ಬಟ್ಟೆಯನ್ನು ಧರಿಸದಿರುವುದು ಸೂಕ್ತ. ಮಾಡದ ತಪ್ಪಿಗೆ ಶಿಕ್ಷೆ ಪಡೆಯಬೇಕಾಗುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಸೋಲು, ವಿಪರೀತವಾದ ಆಯಾಸ ಹಾಗೂ ಆರೋಗ್ಯದಲ್ಲಿ ಏರು ಪೇರು ಉಂಟಾಗುವ ಸಾಧ್ಯತೆಗಳಿವೆ. ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮತ್ತು ಕುಲದೇವರ ಪ್ರಾರ್ಥನೆ ಮಾಡಿ.

ಮಕರ
ನಿಮಗೆ ಒಳ್ಳೆಯ ದಿನ. ಮನೆಯಲ್ಲಿ ಉತ್ತಮ ವಾತಾವರಣ ದೊರೆಯುವುದು. ಮನಸ್ಸಿನ ನೆಮ್ಮದಿಗೆ ಕುಲದೇವರ ಪ್ರಾರ್ಥನೆ ಮಾಡುವುದು ಸೂಕ್ತ. ಆರ್ಥಿಕವಾಗಿ ಅನುಕೂಲಕರ ದಿನ ಎಂದು ಹೇಳಬಹುದು. ಯಶಸ್ವಿ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಕುಂಬ
ಇಂದು ನಿಮಗೆ ಒಳ್ಳೆಯ ದಿನ. ಮಾನಸಿಕವಾಗಿ ಅಂದುಕೊಂಡಿರುವುದೆಲ್ಲಾ ಕೈಗೂಡಿ ಬರುವುದು. ಕಲಾವಿದರು ನಿರ್ದಿಷ್ಟ ಗುರಿಯನ್ನು ತಲುಪುವರು ಹಾಗೂ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಮಕ್ಕಳಿಗೆ ಶುಭ ದಿನ. ವಿದೇಶ ಯಾನದ ಕನಸು ನನಸಾಗುವುದು. ಪತ್ನಿ ಹಾಗೂ ಮಕ್ಕಳೊಂದಿಗೆ ವಿಹಾರಕ್ಕೆ ಹೋಗುವ ಯೋಜನೆ ಮಾಡುವಿರಿ. ಯಶಸ್ವಿ ಬದುಕಿಗೆ ಗಣೇಶನ ಆರಾಧನೆ ಮಾಡಿ.

ಮೀನ
ಸುಂದರ ಕನಸು ನನಸಾಗಲು ನೀರೆರೆಯುವಂತಹ ಕಾರ್ಯ ನಡೆಯುವುದು. ಭಗವಂತನ ಕೃಪೆಯೂ ದೊರೆಯುವುದು. ಉದ್ಯೋಗ ಕ್ಷೇತ್ರದಲ್ಲಿ ಪ್ರಶಂಸೆ ಹಾಗೂ ನೆಮ್ಮದಿಯನ್ನು ಪಡೆಯುವಿರಿ. ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಯಶಸ್ವಿ ಬದುಕಿಗಾಗಿ ಗಣೇಶ ಮತ್ತು ಆಂಜನೇಯನ ಆರಾಧನೆ ಮಾಡಿ.



Click it and Unblock the Notifications