Latest Updates
-
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
10-12-2017 ಭಾನುವಾರದ ದಿನ ಭವಿಷ್ಯ

ಭರವಸೆ ಎನ್ನುವುದು ಯಶಸ್ವಿ ಜೀವನಕ್ಕೆ ದಾರಿ ದೀಪ. ನಾವು ಅಂದುಕೊಂಡಿರುವುದೆಲ್ಲಾ ಜೀವನದಲ್ಲಿ ನಡೆಯುವುದಿಲ್ಲ. ಹಾಗೊಮ್ಮೆ ನಾವು ಅಂದುಕೊಂಡಂತೆ ಪ್ರಪಂಚದ ಬದಲಾವಣೆಯಾಗುವುದಾದರೆ ಯಾವ ವ್ಯಕ್ತಿಗೂ ಕಷ್ಟ-ನಷ್ಟಗಳ ಅನುಭವವೇ ಆಗುತ್ತಿರಲಿಲ್ಲ. ನಮ್ಮ ಕಲ್ಪನೆಗೂ ಮೀರಿದ ಸಂಗತಿಗಳು, ಸನ್ನಿವೇಶಗಳು ನಮಗೆ ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಹಿಂಜರಿಕೆ ತೋರದೆ ಧೈರ್ಯದಿಂದ, ಭರವಸೆಯ ಹೆಜ್ಜೆಯನ್ನು ಮುಂದಿಡಬೇಕು. ಆಗಲೇ ಬದುಕು ಸಾರ್ಥಕವಾಗುವುದು.
ಭಾನುವಾರವಾದ ಇಂದು ಸಾಮಾನ್ಯವಾಗಿ ಎಲ್ಲರೂ ಕೊಂಚ ವಿರಾಮದ ಮನಃಸ್ಥಿತಿಯಲ್ಲಿ ಇರುತ್ತಾರೆ. ಬದುಕಲ್ಲಿ ಇಂದಾದರೂ ಒಳ್ಳೆಯದು ನಡೆಯಬಹುದೇ ಎನ್ನುವ ಕಾತುರದಲ್ಲಿ ಇರುತ್ತಾರೆ. ಹಾಗಾದರೆ ಇನ್ನೇಕೆ ತಡ? ಇಂದು ಅದೆಂತಹ ಸನ್ನಿವೇಶಗಳು ಎದುರಾಗಬಹುದು ಎನ್ನುವುದನ್ನು ರಾಶಿ ಭವಿಷ್ಯವನ್ನು ಓದಿ ತಿಳಿಯಿರಿ...

ಮೇಷ
ಇಂದು ನಿಮಗೆ ಸಮಾಧಾನಕರವಾದ ದಿನವಾಗಿರುತ್ತದೆ. ಸ್ನೇಹಿತರೊಂದಿಗೆ ದೂರದ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ. ಅತಿಯಾದ ಹಣದ ವ್ಯಯದಿಂದ ಭವಿಷ್ಯದಲ್ಲಿ ತೊಂದರೆಯುಂಟಾಗಬಹುದು. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು. ವಿದ್ಯಾರ್ಥಿಗಳಿಗೂ ಶುಭ ದಿನ. ಮನೆಯನ್ನು ಖರೀದಿಸುವ ಸಾಧ್ಯತೆಗಳಿವೆ. ಯಶಸ್ವಿ ಬದುಕಿಗಾಗಿ ನಾರಾಯಣನ ಆರಾಧನೆ ಮಾಡಿ.

ವೃಷಭ
ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಸಮಾಧಾನವನ್ನು ಕಾಣುವಿರಿ. ಮಿತ್ರರ ನಡುವೆ ಇದ್ದ ವೈಮನಸ್ಸು ಉಪಶಮನವಾಗುವುದು. ತಂದೆ ಮಕ್ಕಳ ನಡುವೆ ಸಮಾಧಾನ ಉಂಟಾಗುವುದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿಮ್ಮ ಜನಪ್ರಿಯತೆಗೆ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ರಾಜಕಾರಣಿಗಳಿಗೆ ಕಿರಿಕಿರಿಯ ವಾತಾವರಣ. ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಮಿಥುನ
ಇಂದು ನಿಮಗೆ ಸಮಾಧಾನದ ಬದುಕು ಲಭ್ಯವಾಗುವುದು. ಗೃಹ ಕೈಗಾರಿಕೆಗಳಲ್ಲಿ ತೊಡಗಿಕೊಂಡವರಿಗೆ ಲಾಭ ಹಾಗೂ ಸಮಾಧಾನ ಲಭಿಸುವುದು. ಸ್ತ್ರೀಯರಿಗೆ ಉದ್ಯೋಗದಲ್ಲಿ ಪ್ರಗತಿ ಉಂಟಾಗುವುದು. ಮಾಡುತ್ತಿರುವ ಉದ್ಯೋಗವನ್ನೇ ಮುಂದುವರಿಸಿ. ವಿದ್ಯಾರ್ಥಿಗಳಿಗೆ ಇಂದು ಶುಭ ದಿನ. ಎಲ್ಲಾ ವಿಚಾರದಲ್ಲೂ ಇಂದು ನೀವು ಪ್ರಗತಿಯನ್ನು ಕಾಣುವಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ಕರ್ಕ
ಇಂದು ನಿಮಗೆ ಅದೃಷ್ಟದ ದಿನ. ನೀವು ಯಾವುದೇ ಕೆಲಸಕ್ಕೆ ಇಂದು ಮುಂದಾದರೂ ಜಯ ಹಾಗೂ ಲಾಭ ಲಭಿಸುವುದು. ಅತಿಯಾದ ಸಿಹಿ ತಿಂಡಿಯನ್ನು ಸೇವಿಸದಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರ್ಥಿಕ ವಲಯದಲ್ಲಿ ಉಂಟಾಗುವ ಲಾಭದಿಂದ ನೆಮ್ಮದಿಯನ್ನು ಕಾಣುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಿಂದಲೂ ಲಾಭಾಂಶ ದೊರೆಯುವುದು. ವಾಹನ ಹಾಗೂ ತೈಲೋದ್ಯಮಗಳಲ್ಲಿ ಇರುವವರಿಗೆ ಉತ್ತಮ ಲಾಭ ಉಂಟಾಗುವುದು. ಇನ್ನಷ್ಟು ಪ್ರಗತಿಯುತ ಜೀವನಕ್ಕೆ ವಿಷ್ಣುವಿನ ಆರಾಧನೆ ಮಾಡಿ.

ಸಿಂಹ
ಬಹಳ ಎಚ್ಚರಿಕೆಯಂದ ಹೆಜ್ಜೆಯಿಡಿ. ಪಂಚಮ ಶನಿಯ ಪ್ರಭಾವ ಇರುವುದರಿಂದ ವಿಪರೀತವಾದ ಆರೋಗ್ಯ ಸಮಸ್ಯೆ ಹಾಗೂ ಇಲ್ಲ ಸಲ್ಲದ ಆರೋಪಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಬಹುದು. ಆರ್ಥಿಕ ಸ್ಥಿತಿಯಲ್ಲಿ ಏರು ಪೇರು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮತ್ತು ಕುಲದೇವರ ಪ್ರಾರ್ಥನೆ ಮಾಡಿ.

ಕನ್ಯಾ
ಸಮಾಧಾನದಿಂದ ಇರಿ. ಮಾಡುತ್ತಿರುವ ಉದ್ಯೋಗದಲ್ಲಿ ಲಾಭಾಂಶ ದೊರೆಯುವುದು. ಯಂತ್ರೋಪಕರಣಗಳಿಂದ ಲಾಭ ಉಂಟಾಗುವುದು. ರೈತರಿಗೆ ಸಮೃದ್ಧಿ ಉಂಟಾಗುವುದು. ಸಹೋದರಿಯ ಸಹಕಾರ ಲಭಿಸುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ತಲೆದೂರುವುದು. ಹಲವಾರು ವಿಚಾರದಲ್ಲಿ ಲಾಭ ಮತ್ತು ಯಶಸ್ಸು ಕೈಗೂಡಿ ಬರುವುದು. ಇನ್ನಷ್ಟು ಉತ್ತಮ ಮತ್ತು ಪ್ರಗತಿಪರ ಜೀವನಕ್ಕಾಗಿ ಗಣೇಶ ಮತ್ತು ಕುಲದೇವರ ಆರಾಧನೆ ಮಾಡಿ.

ತುಲಾ
ಇಂದು ನೀವು ಸಮಾಧಾನಕರ ಬದುಕನ್ನು ಕಾಣುವಿರಿ. ಆರೋಗ್ಯದ ಸುಧಾರಣೆ ಆಗುವುದು. ಬಂಧುಗಳು ಅಗಲಿದ ವಿಚಾರವನ್ನು ಕೇಳುವ ಸಾಧ್ಯತೆಗಳಿವೆ. ಬರಬೇಕಾದ ಹಣದಲ್ಲಿ ಲಾಭಾಂಶ ದೊರೆಯುವುದು. ಮನೆಗೆ ಬರುವ ಬಂಧು ಮಿತ್ರರಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಶುಭ ಮತ್ತು ಜಯ ಸಿಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಶ್ಚಿಕ
ಇಂದು ನೀವು ಸಂಪೂರ್ಣವಾದ ಸಮಾಧಾನವನ್ನು ಕಾಣಲು ಸಾಧ್ಯವಿಲ್ಲ. ಮನೆಯಲ್ಲಿ ಕಿರಿಕಿರಿಯ ವಾತಾವರಣ ಇರುವುದು. ವಾಹನಗಳ ಉದ್ಯಮಿಗಳಿಗೆ ಅಧಿಕ ನಷ್ಟವಾಗುವ ಸಾಧ್ಯತೆಗಳಿವೆ. ನೀವು ನೀರೀಕ್ಷಿಸಿರುವ ವಿಚಾರಗಳು ಗುರಿಯನ್ನು ತಲುಪದ. ತೀರ್ಮಾನಗಳಿಂದ ಉಂಟಾದ ಏರು ಪೇರು ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳುಮಾಡಬಹುದು. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಧನು
ವಿಪರೀತವಾದ ದೇಹಾಯಾಸ. ಇಲ್ಲಸಲ್ಲದ ಆರೋಪಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳುಮಾಡುವುದು. ಸಹೋದರರಿಂದ ತೊಂದರೆ ಹಾಗೂ ಹಿತ ಶತ್ರುಗಳಿಂದ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಮಕರ
ಪೂರ್ಣ ಪ್ರಮಾಣದ ಸಮಾಧಾನಕರ ಜೀವನ ಕಾಣಲು ಸಾಧ್ಯವಾಗದು. ಬಂಧು ಮಿತ್ರರಿಂದ ಕಿರಿಕಿರಿ ಉಂಟಾಗುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಲ್ಲಿ ಉಂಟಾಗುವ ಏರು ಪೇರು ಮಾನಸಿಕ ಸ್ಥಿತಿಯನ್ನು ಹಾಳುಮಾಡುವುದು. ಸಂತಾನ ಭಾಗ್ಯ ಪ್ರಾಪ್ತಿಯಾಗುವುದು. ಹಿರಿಯರಿಗೆ ತೀರ್ಥ ಕ್ಷೇತ್ರಕ್ಕೆ ಹೋಗುವ ಶುಭ ಯೋಗ ಲಭಿಸುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕುಂಬ
ಮನೆಯಲ್ಲಿ ಸಮಾಧಾನ. ಮಾನಸಿಕ ನೆಮ್ಮದಿ. ಸ್ತ್ರೀಯರಿಗೆ ತವರು ಮನೆಯಿಂದ ಉಡುಗೊರೆ. ಹತ್ತಾರು ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ಸಂತೋಷದ ಬದುಕನ್ನು ಅನುಭವಿಸುವಿರಿ. ಅಂದುಕೊಂಡ ವಿಚಾರದಲ್ಲಿ ಪ್ರಗತಿ ಉಂಟಾಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಮೀನ
ಇಂದು ನಿಮಗೆ ಸುಂದರವಾದ ಜೀವನ ಲಭಿಸುವುದು. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಅನೇಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವಿರಿ. ಸ್ನೇಹಿತರ ಸಹಕಾರವು ಲಭ್ಯವಾಗುವುದು. ಅನಿರೀಕ್ಷಿತ ಲಾಭಾಂಶಗಳನ್ನು ನೀವು ಪಡೆದುಕೊಳ್ಳುವಿರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಉತ್ತಮ ಜೀವನ ಹಾಗೂ ಲಾಭವನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ವಿಷ್ಣು ಮತ್ತು ಶಿವನ ಆರಾಧನೆ ಮಾಡಿ.



Click it and Unblock the Notifications