Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
09-12-2017 ಶನಿವಾರದ ದಿನ ಭವಿಷ್ಯ

ಜೀವನದಲ್ಲಿ ಸೋಲು ಗೆಲುವು ಸಹಜ. ಯಾರು ತಾವು ಮಾಡುತ್ತಿರುವ ಕಾರ್ಯದಲ್ಲಿ ಮೊದಲ ಬಾರಿಯೇ ಗೆಲುವನ್ನು ಸಾಧಿಸುತ್ತಾರೋ ಅವರು ತಮ್ಮ ಬದುಕಿನಲ್ಲಿ ಗೆಲ್ಲುತ್ತಾರೆ. ಯಾರು ತಾವು ಮಾಡುವ ಕೆಲಸದಲ್ಲಿ ಮೊದಲು ಸೋಲುತ್ತಾರೋ ಅವರು ಜಗತ್ತನ್ನೇ ಗೆಲ್ಲಬಲ್ಲರು. ಏಕೆಂದರೆ ಸೋಲಿನ ನೋವು, ಗೆಲ್ಲಲೇ ಬೇಕೆಂಬ ಛಲದಿಂದ ಮತ್ತೆ ಮತ್ತೆ ಪ್ರಯತ್ನಗಳನ್ನು ಮಾಡುತ್ತಾರೆ. ಪ್ರತಿಯೊಂದು ಪ್ರಯತ್ನದಲ್ಲೂ ಸಾಕಷ್ಟು ಅನುಭವವನ್ನು ಪಡೆಯುತ್ತಾರೆ.
ಒಳ್ಳೆಯ ಅನುಭವ ಹಾಗೂ ಪರಿಶ್ರಮದಿಂದ ಜಗತ್ತನ್ನೇ ಗೆದ್ದು ತೋರಿಸುತ್ತಾರೆ. ಹಾಗಾಗಿ ಜೀವನದಲ್ಲಿ ಸೋಲು ಉಂಟಾಯಿತೆಂದು ಬೇಸರ ಪಡಬೇಡಿ. ಗೆಲುವಿನ ಮೆಟ್ಟಿಲನ್ನು ಏರಲು ಇನ್ನಷ್ಟು ಪ್ರಯತ್ನವನ್ನು ಮಾಡಿ. ಆಗ ಜೀವನದಲ್ಲಿ ಯಶಸ್ಸಿನ ತಿರುವನ್ನು ಪಡೆದುಕೊಳ್ಳುವಿರಿ. ಶನಿವಾರ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಒಂದು ರೀತಿಯ ಭಯ ಹಾಗೂ ಅಶುಭ ಎನ್ನುವ ಮನೋಭಾವನ್ನು ತಳೆಯುತ್ತಾರೆ. ನಿಜ ಅರ್ಥದಲ್ಲಿ ಹೇಳುವುದಾದರೆ ಶನಿವಾರವೂ ಒಂದು ಪವಿತ್ರವಾದ ದಿನ. ಈ ದಿನ ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆ ಉಂಟಾಗುತ್ತದೆ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಈ ಮುಂದೆ ನೀಡಿರುವ ರಾಶಿ ಭವಿಷ್ಯವನ್ನು ಪರಿಶೀಲಿಸಿ...

ಮೇಷ
ಇಂದು ನಿಮಗೆ ಶುಭ ದಿನ. ಆದಷ್ಟು ಕಪ್ಪು ಬಟ್ಟೆಯನ್ನು ತೊಡದಿರಿ. ಮೂರನೇ ವ್ಯಕ್ತಿಯ ಮಾತಿಗೆ ಕಿವಿಕೊಡದಿರಿ. ಮಾಡುತ್ತಿರುವ ಉದ್ಯೋಗವನ್ನು ಮುಂದುವರಿಸಿ. ಸರ್ಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿರುವವರಿಗೆ ಲಾಭ ಉಂಟಾಗುವುದು. ವಿದ್ಯಾರ್ಥಿಗಳಿಗೂ ಇಂದು ಶುಭ ದಿನ. ಸಹಪಾಠಿಗಳ ಸಹಕಾರ ದೊರೆಯುವುದು. ಜೀವನದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಸಂತೋಷಕರವಾದ ಬದುಕಿಗೆ ಆಂಜನೇಯನ ಆರಾಧನೆ ಮಾಡಿ.

ವೃಷಭ
ಆದಷ್ಟು ಜಾಗ್ರತರಾಗಿರಿ. ಇಲ್ಲ ಸಲ್ಲದ ಆರೋಪಗಳು ನಿಮ್ಮ ಬೆನ್ನೇರುವ ಸಾಧ್ಯತೆಗಳಿವೆ. ಬಂಧುಮಿತ್ರರು ಸಹ ಕಿರಿಕಿರಿ ಉಂಟುಮಾಡಬಹುದು. ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಸ್ಥಿರಾಸ್ತಿಯಿಂದಲೂ ಲಾಭ ಉಂಟಾಗದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಮಿಥುನ
ಸಮಾಧಾನದ ಬದುಕು ನಿಮ್ಮದಾಗುವುದು. ನೆಮ್ಮದಿಯನ್ನು ಕಾಣುವಿರಿ. ಅನೇಕ ದಿನಗಳಿಂದ ಬರಬೇಕಿದ್ದ ಹಣವು ಇಂದು ನಿಮ್ಮ ಕೈಸೇರುವುದು. ಸ್ತ್ರೀಯರಿಂದ ಶುಭ ವಾರ್ತೆ ಲಭಿಸುವುದು. ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ವ್ಯಾಪಾರ ವಹಿವಾಟುಗಳಲ್ಲಿ ಸಾಮಾನ್ಯವಾದ ನೆಮ್ಮದಿಯನ್ನು ಕಾಣುವಿರಿ. ಜೀವನದಲ್ಲಿ ಇನ್ನಷ್ಟು ಪ್ರಗತಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ, ಆಂಜನೇಯನ ಪ್ರಾರ್ಥನೆ ಮಾಡಿ.

ಕರ್ಕ
ಸಮಾಧಾನಕರವಾದ ಜೀವನವನ್ನು ಕಾಣುವಿರಿ. ಸಂಪೂರ್ಣವಾದ ಲಾಭಾಂಶದ ನಿರೀಕ್ಷೆ ಮಾಡಬಹುದು. ಯಾವುದೇ ರೀತಿಯ ಹೊಸ ಬಂಡವಾಳ ಹೂಡಿಕೆಗೆ ಮುಂದಾಗದಿರಿ. ಅನೇಕ ದಿನಗಳ ಬಳಿಕ ನಿಮ್ಮ ಪ್ರಿಯ ಸ್ನೇಹಿತನ ದರ್ಶನ ಆಗುವುದು. ನಿಮ್ಮ ಕನಸುಗಳು ನನಸಾಗುವುದು. ಕಲಾವಿದರಿಗೆ ಅನುಕೂಲ ಉಂಟಾಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಸಿಂಹ
ನಿಮಗೆ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಮನೆಯಲ್ಲೂ ಅನಾನುಕೂಲದ ವಾತಾವರಣ. ಬಂಧುಮಿತ್ರರು ನಿಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೇ ಕೆಲವು ಅಡೆತಡೆಗಳನ್ನು ಉಂಟುಮಾಡಬಹುದು. ಹಿತಶತ್ರುಗಳಿಂದ ನೀವು ಬಾಧಿತರಾಗುವಿರಿ. ಆದಷ್ಟು ಕಾಳಜಿಯಿಂದ ಇರುವುದನ್ನು ಮರೆಯದಿರಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ರಕ್ತದೊತ್ತಡ, ಹೃದಯ ಸಮಸ್ಯೆಗಳಂತಹ ರೋಗವು ದ್ವಿಗುಣವಾಗುವ ಸಾಧ್ಯತೆಗಳಿವೆ. ಆದಷ್ಟು ರಾಹುಕಾಲದಲ್ಲಿ ಪ್ರಯಾಣ ಪ್ರಾರಂಭಿಸದಿರಿ. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಕನ್ಯಾ
ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಆದಷ್ಟು ನಿಧಾನದಿಂದ ಮುಂದೆ ಸಾಗಿ. ಆತುರದಿಂದ ಯಾವುದೇ ನಿರ್ಧಾರ ಅಥವಾ ಕೆಲಸಗಳನ್ನು ಕೈಗೊಳ್ಳದಿರಿ. ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ಅನಿರೀಕ್ಷಿತ ಸೋಲು ನಿಮ್ಮ ಮಾನಸಿಕ ಸ್ಥಿತಿಯನ್ನು ಅಲುಗಾಡಿಸಬಹುದು. ತಾಂತ್ರಿಕ ಕ್ಷೇತ್ರದಲ್ಲಿರುವವರು ಆದಷ್ಟು ಕಾಳಜಿಯಿಂದ ವರ್ತಿಸುವುದನ್ನು ಮರೆಯದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ತುಲಾ
ಇಂದು ನೀವು ಸಂತೋಷಕರವಾದ ಜೀವನವನ್ನು ಅನುಭವಿಸುವಿರಿ. ಎಲ್ಲಾ ವಿಚಾರದಲ್ಲಿ ಹಾಗೂ ವೃತ್ತಿ ಕ್ಷೇತ್ರದಲ್ಲೂ ಪ್ರಗತಿ ಹಾಗೂ ಲಾಭವನ್ನು ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿಯನ್ನು ಕಾಣುವಿರಿ. ಜೀವನದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಸಂತೋಷಕರವಾದ ಜೀವನಕ್ಕೆ ಆಂಜನೇಯನ ಆರಾಧನೆ ಮಾಡಿ.

ವೃಶ್ಚಿಕ
ನಿಮಗೆ ಶನಿಯ ಪ್ರಭಾವ ಇರುವುದರಿಂದ ಮಾನಸಿಕವಾಗಿ ಇರುವ ಕಿರಿಕಿರಿ ಮುಂದುವರಿಯುವುದು. ಕಾಲು ಮತ್ತು ಬೆನ್ನು ನೋವಿನಿಂದ ಬಳಲುವ ಸಾಧ್ಯತೆಗಳಿವೆ. ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳಬೇಕಾದಂತಹ ಪರಿಸ್ಥಿತಿ ಒದಗಬಹುದು. ವೈದ್ಯಾಧಿಕಾರಿಗಳಿಗೆ ಅವಮಾನ ಆಗುವ ಸಾಧ್ಯತೆಗಳಿವೆ. ಸಮ್ಯಸೆಗಳ ಪರಿಹಾರ ಹಾಗೂ ಸಂತೋಷಕರವಾದ ಜೀವನಕ್ಕೆ ಆಂಜನೇಯನ ಆರಾಧನೆ ಮಾಡಿ.

ಧನು
ವಿಪರೀತವಾದ ದೇಹದಾಯಾಸ ನಿಮ್ಮನ್ನು ಕಾಡುವುದು. ಇಲ್ಲ ಸಲ್ಲದ ಅಪವಾದ ಹಾಗೂ ಸಮಸ್ಯೆಗಳು ನಿಮ್ಮ ಬೆನ್ನೇರುವುದು. ಸ್ತ್ರೀಯರಿಂದ ಕಿರಿಕಿರಿ. ದಾಂಪತ್ಯ ಜೀವನದಲ್ಲಿ ಕಿತ್ತಾಟ ಹಾಗೂ ವೈಮನಸ್ಸು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಮಕರ
ಸಮಾಧಾನದ ಬದುಕನ್ನು ಕಾಣಲಿದ್ದೀರಿ. ಬಂಧು ಮಿತ್ರರು ಸಹ ಸಹಕಾರವನ್ನು ನೀಡುವರು. ಅನೇಕ ದಿನಗಳಿಂದ ತೀರ್ಮಾನಿಸಿರುವ ವಿಚಾರಗಳು ಅಲ್ಪ ಪ್ರಮಾಣದ ಲಾಭ ತಂದುಕೊಡುವುದು. ವಿದ್ಯಾರ್ಥಿಗಳ ಜೀವನದಲ್ಲಿ ಕೆಲವು ಏರುಪೇರು ಉಂಟಾಗಬಹುದು. ಸಮಸ್ಯೆಗಳ ನಿವಾರಣೆಗೆ ಆಂಜನೇಯನ ಉಪಾಸನೆ ಮಾಡಿ.

ಕುಂಬ
ಇಂದು ನಿಮಗೆ ಸಂತೋಷಕರವಾದ ದಿನ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಸ್ತ್ರೀಯರಿಗೆ ಜಯ ಲಭಿಸುವುದು. ಅನಿರೀಕ್ಷಿತ ಸಮಸ್ಯೆಗಳು ನಿವಾರಣೆಯನ್ನು ಹೊಂದುತ್ತದೆ. ಇನ್ನಷ್ಟು ಉತ್ತಮ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಮೀನ
ಇಂದು ನಿಮಗೆ ಶುಭ ದಿನ. ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ. ಸುಂದರವಾದ ಜೀವನಕ್ಕೆ ಸಾಕ್ಷಿಯಾಗುವಿರಿ. ಪತ್ರಕರ್ತರಿಗೆ ಅನುಕೂಲ, ರಾಜಕೀಯದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಮಾಂಸಹಾರವನ್ನು ಇಂದು ಸೇವಿಸದಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.



Click it and Unblock the Notifications











