ಬುಧವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 13-12-2017 - Your Day Today - Oneindia Kannada

ಆಕಾಶಷ್ಟೇ ವಿಶಾಲವಾಗಿದ್ದರೂ ನಕ್ಷತ್ರಗಳಿಗಿರುವಷ್ಟು ಬೆಲೆ ಆಕಾಶಕ್ಕೆ ಇರುವುದಿಲ್ಲ. ಹಾಗೆಯೇ ಮನುಷ್ಯ ಎಷ್ಟೇ ಶ್ರೀಮಂತನಾಗಿದ್ದರೂ ಅವನ ಗುಣಕ್ಕಿರುವಷ್ಟು ಬೆಲೆ ಹಣಕ್ಕಿರುವುದಿಲ್ಲ. ಹಾಗಾಗಿ ಯಾರೋ ಏನೋ ಹೇಳುತ್ತಾರೆ ಎಂದು ನಾವು ಹಣದ ಹುಚ್ಚಿನಲ್ಲಿ ಅಹಂ ಅನ್ನು ಹೊಂದಿರಬಾರದು. ಸ್ನೇಹ ಸಹಕಾರ ಎನ್ನುವುವ ವಿಶಾಲವಾದ ಭಾವನೆ ಹಾಗೂ ಪ್ರೀತಿ-ವಾತ್ಸಲ್ಯವನ್ನು ತೋರುವಂತಹ ಗುಣವನ್ನು ಹೊಂದಿರಬೇಕು. ಆಗಲೇ ನಮಗೆ ಆ ದೇವರು ಹರಸುತ್ತಾನೆ. ಕಷ್ಟ ಎಂದಾಗ ಒಂದಲ್ಲಾ ಒಂದು ರೀತಿಯ ಸಹಾಯ ಯಾರಿಂದಲಾದರೂ ದೊರೆಯುತ್ತದೆ.

ಬುಧವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಉಂಟಾಗುವ ಬದಲಾವಣೆ ಹಾಗೂ ಎದುರಾಗುವ ಹೊಸ ಸನ್ನಿವೇಶಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ಮುಂದೆ ಬೋಲ್ಡ್ ಸ್ಕೈ ನೀಡಿರುವ ದಿನ ಭವಿಷ್ಯವನ್ನು ಅರಿಯಿರಿ...

ಮೇಷ

ಮೇಷ

ಇಂದು ನಿಮಗೆ ಸಮಾಧಾನಕರವಾದ ಭಾವನೆ ಉಂಟಾಗುವುದು. ನೀವು ತೊಡಗಿಸಿಕೊಂಡಿರುವ ಕೆಲಸ ಕಾರ್ಯಗಳಲ್ಲೆಲ್ಲಾ ಲಾಭ ಹಾಗೂ ಅನುಕೂಲವು ಉಂಟಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ. ವಿದ್ಯಾರ್ಥಿಗಳಿಗೂ ಶುಭ ದಿನ. ಉನ್ನತ ವ್ಯಾಸಂಗದ ಕನಸು ನನಸಾಗುವುದು. ವ್ಯಾಪಾರಿಗಳಿಗೆ ಉತ್ತಮವಾದ ಲಾಭ ಉಂಟಾಗುವುದು. ಎಲ್ಲಾ ರೀತಿಯ ಪ್ರಯತ್ನಗಳಿಗೂ ಶುಭವನ್ನು ಲಭಿಸಲು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಷಭ

ವೃಷಭ

ಆತ್ಮೀಯರಿಂದ ವಂಚನೆ ಉಂಟಾಗುವುದು. ಹಣಕಾಸಿನ ಸ್ಥಿತಿಯಲ್ಲೂ ಕುಸಿತ ಹಾಗೂ ಅಸಮಧಾನಕರ ಸ್ಥಿತಿಯನ್ನು ಎದುರಿಸಬೇಕಾಗುವುದು. ಬಂಧುಗಳು ಅಗಲಿದ ದುರ್ವಾತೆ ಕೇಳುವಿರಿ. ಸಹೋದರರ ನಡುವೆ ಕಲಹ ಉಂಟಾಗುವ ಸಾಧ್ಯತೆಗಳಿವೆ. ಹೊರಗಡೆ ಹೋಗುವ ಸಮಯಕ್ಕಿಂತ 5 ನಿಮಿಷ ಮುಂಚಿತವಾಗಿ ಹೊರಡಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಹುಂಬತನದಿಂದ ಒಂದಿಷ್ಟು ತೊಂದರೆಯನ್ನು ಅನುಭವಿಸಬೇಕಾಗುವುದು. ಸ್ತ್ರೀಯರ ಮಾನಸಿಕ ಸ್ಥಿತಿಯು ಡೋಲಾಯಮಾನವಾಗಿರುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ದುರ್ಗಾ ಪರಮೇಶ್ವರಿ ಹಾಗೂ ವಿಷ್ಣುವಿನ ಆರಾಧನೆ ಮಾಡಿ.

ಮಿಥುನ

ಮಿಥುನ

ನಿಮಗೆ ಸಮಾಧಾನ ಲಭ್ಯವಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸಿರುವುದು. ಬಂಧು ಮಿತ್ರರ ಆಗಮನದಿಂದ ಸಿಹಿ ಭೋಜನವನ್ನು ಸವಿಯಲಿದ್ದೀರಿ. ಅನಿರೀಕ್ಷಿತ ಸಮಸ್ಯೆಗಳು ದೂರವಾಗುವುದು. ಅನೇಕದಿನಗಳಿಂದ ನಿರ್ಧರಿತವಾದ ಕೆಲಸಕಾರ್ಯಗಳು ನೆರವೇರುವುದು. ವ್ಯಾಸಂಗದ ಕನಸು ನನಸಾಗುವುದು. ಉದ್ಯೋಗದಲ್ಲಿ ಲಾಭಾಂಶ ದೊರೆಯುವುದು. ಜೀವನದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಸಮಾಧಾನಕ್ಕಾಗಿ ರಾಮ ಮತ್ತು ಕೃಷ್ಣನ ಆರಾಧನೆ ಮಾಡಿ.

ಕರ್ಕ

ಕರ್ಕ

ನೀವು ಮಾಡುತ್ತಿರುವ ಉದ್ಯೋಗದಲ್ಲಿ ಲಾಭ ಹಾಗೂ ಅನುಕೂಲ ಉಂಟಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣದ ಸಾಧ್ಯತೆಗಳಿವೆ. ಸೌಂದರ್ಯ ವರ್ಧಕ ಉತ್ಪನ್ನಗಳ ವ್ಯಾಪಾರಿಗಳಿಗೆ ಅಧಿಕ ಲಾಭ ಉಂಟಾಗುವುದು. ಅನೇಕದಿನಗಳಿಂದ ಕಂಡ ಕನಸು ನನಸಾಗುವುದು. ಆಭರಣ ಖರೀದಿಸುವ ಅವಕಾಶಗಳಿವೆ. ಸ್ಥಿರಾಸ್ತಿಯಿಂದ ಲಾಭವನ್ನು ಗಳಿಸಲಿದ್ದೀರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧವಾದ ಜೀವನಕ್ಕಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಸಿಂಹ

ಸಿಂಹ

ನಿಮಗೆ ಒತ್ತಡ ವಿಪರೀತವಾಗಿ ಕಾಡುವುದು. ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಬೇಕಾಗುವ ಸಂದರ್ಭ ಒದಗಿ ಬರುವುದು. ವೈದ್ಯರಿಗೆ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಮೂರನೇ ವ್ಯಕ್ತಿಗಳ ಮಾತಿಗೆ ಕಿವಿಕೊಡದಿರಿ. ನಿರ್ಧರಿತ ನಿರ್ಧಾರಗಳನ್ನು ಕೈ ಬಿಡದಿರಿ. ಮಾಡುತ್ತಿರುವ ಉದ್ಯೋಗದಲ್ಲಿ ಕೆಲವರಿಗೆ ಲಾಭ ತಂದುಕೊಡಬಹುದು. ಇನ್ನೂಕೆಲವರಿಗೆ ಅಸಾಧ್ಯವಾಗಬಹುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧವಾದ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ನಿಮಗೆ ಇಂದು ಉತ್ತಮವಾದ ದಿನ. ಸಮಾಧಾನ ಲಭಿಸುವುದು. ಉದ್ಯೋಗದಲ್ಲಿ ಪ್ರಗತಿ ಉಂಟಾಗುವುದು. ದೂರದ ಬಂಧುಗಳು ಅಗಲಿದ ದುರ್ವಾತೆಗಳನ್ನು ಕೇಳುವ ಸಾಧ್ಯತೆಗಳಿವೆ. ಸಹೋದರರ ನಡುವೆ ಇರುವ ಭಿನ್ನಾಭಿಪ್ರಾಯಗಳು ಉಪಶಮನ ಕಾಣುವುದು. ಆರ್ಥಿಕ ವಲಯದಲ್ಲೂ ಉತ್ತಮ ಲಾಭ ಉಂಟಾಗುವುದು. ಇನ್ನಷ್ಟು ಉತ್ತಮ ಬದುಕು ಹಾಗೂ ಸಂತೋಷಕ್ಕಾಗಿ ವಿಷ್ಣುವಿನ ಆರಾಧನೆ ಮಾಡಿ.

ತುಲಾ

ತುಲಾ

ಮನೆಯಲ್ಲಿ ನೆಮ್ಮದಿಯ ವಾತಾವರಣ. ಸಮಾಧಾನಕರವಾದ ಬದುಕನ್ನು ಕಾಣುವಿರಿ. ಮಹಿಳೆಯರು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿ ಕಾಣುವರು. ಧಾರ್ಮಿಕ ಚಿಂತಕರಿಗೆ ಹಾಗೂ ಪತ್ರಕರ್ತರಿಗೆ ಅನುಕೂಲ ಉಂಟಾಗುವುದು. ವಿವಾಹ ಯೋಗ. ಎಲ್ಲಾ ಬಗೆಯ ಪ್ರಗತಿ ಹಾಗೂ ಯಶಸ್ಸಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಆರ್ಥಿಕ ವಲಯದಲ್ಲಿ ಏರು ಪೇರು ಉಂಟಾಗುವುದು. ಅನಿರೀಕ್ಷಿತವಾದ ಸೋಲು ನಿಮ್ಮ ಮನಸ್ಸಿಗೆ ನೋವನ್ನುಂಟುಮಾಡುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಿಂದಲೂ ಪೂರ್ಣ ಪ್ರಮಾಣದ ಸಮಾಧಾನ ದೊರೆಯದು. ಸಾಲಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ರೈತರಿಗೆ ಒಂದಿಷ್ಟು ಅಡೆತಡೆ ಉಂಟಾಗುವುದು. ಬ್ಯಾಂಕ್ ನೌಕರರು ವಂಚಕರ ಜಾಲಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಜಾಗ್ರತರಾಗಿರಿ. ಇನ್ನಷ್ಟು ಪ್ರಗತಿ ಪರ ಜೀವನಕ್ಕೆ ಗಣೇಶನ ಆರಾಧನೆ ಮಾಡಿ.

ಧನು

ಧನು

ಅಪಮಾನ ಉಂಟಾಗುವುದು. ಮಾನಸಿಕ ಕಿರಿಕಿರಿಯು ನಿಮ್ಮನ್ನು ಹಿಂಬಾಲಿಸುವುದು. ಸ್ತ್ರೀಯರಿಂದಲೂ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ರಾಜಕೀಯದವರಿಗೆ ಹಿನ್ನೆಡೆ ಉಂಟಾಗುವುದು. ವಿಪರೀತವಾದ ದೇಹದ ಆಯಾಸ ನಿಮ್ಮನ್ನು ಹೈರಾಣ ಗೊಳಿಸುವುದು. ಅತಿಯಾದ ಸುಳ್ಳಿನ ಸುಳಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಜೀವನದಲ್ಲಿ ಜಿಗುಪ್ಸೆ ಹೊಂದುವ ಸಾಧ್ಯತೆಗಳು ಹೆಚ್ಚಾಗಿವೆ. ಜಾಮೀನು ನೀಡುವುದು ಅಥವಾ ಸಾಲ ಕೊಡುವುದು ಮತ್ತು ಪಡೆಯುವ ಕೆಲಸಕ್ಕೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ಮಕರ

ಮಕರ

ನಿಮಗೆ ಶನಿ ಪ್ರಭಾವ ಇರುವುದನ್ನು ಮರೆಯದಿರಿ. ಅಹಂಕಾರ ಒಳ್ಳೆಯದಲ್ಲ. ಯಾರು ರೂಪದರ್ಶೀಗಳಾಗಿರುತ್ತಾರೋ ಅಂತಹವರಿಗೆ ಅವಕಾಶ ಲಭ್ಯವಾಗಲಿದೆ. ನಟ ನಟಿಯರಿಗೆ ಅನುಕೂಲಕರವಾದ ದಿನ. ಬಟ್ಟೆ ವ್ಯಾಪಾರಿಗಳು ಸಮೃದ್ಧಿಯನ್ನು ಪಡೆದುಕೊಳ್ಳುವರು. ಇನ್ನಷ್ಟು ಶುಭಕರವಾದ ಸಂದರ್ಭವನ್ನು ಪಡೆದುಕೊಳ್ಳಲು ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ಕುಂಬ

ಕುಂಬ

ಸ್ತ್ರೀಯರಿಗೆ ಸಮಾಧಾನದ ಬದುಕನ್ನು ತಂದುಕೊಡುವುದು. ತೈಲೋದ್ಯಮದಲ್ಲಿ ಪುರುಷರು ಲಾಭಾಂಶವನ್ನು ಪಡೆದುಕೊಳ್ಳುವರು. ಉನ್ನತ ವ್ಯಾಸಂಗದಲ್ಲಿ ತೊಡಗಿದವರಿಗೆ ಅನುಕೂಲ ಲಭಿಸುವುದು. ನ್ಯಾಯಾಂಗ ಕ್ಷೇತ್ರದಲ್ಲಿರುವವರಿಗೆ ಅಧಿಕ ಲಾಭಾಂಶ ದೊರೆಯುವ ಸಾಧ್ಯತೆಗಳಿವೆ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಿಂದಲೂ ಲಾಭಾಂಶ ದೊರೆಯುವುದು. ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವರು. ವ್ಯಾಪಾರಿಗಳಿಗೆ ಅನುಕೂಲ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಮೀನ

ಮೀನ

ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರದಲ್ಲಿ ಲಾಭವನ್ನು ಗಳಿಸಿಕೊಳ್ಳುವಿರಿ. ಮನೆಯಲ್ಲೂ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಸ್ತ್ರೀಯರ ಮಾತಿಗೆ ಬೆಲೆ ನೀಡಿ. ಅವರ ಮಾತನ್ನು ತಿರಸ್ಕರಿಸದಿರಿ. ನಿಮ್ಮ ನಿರ್ದಿಷ್ಟವಾದ ಗುರಿಯನ್ನು ತಲುಪಲು ವಿಷ್ಣುವಿನ ಆರಾಧನೆ ಹಾಗೂ ವೆಂಟಕೇಶ್ವರನ ಪ್ರಾರ್ಥನೆ ಮಾಡಿ.

English summary

rashi-bhavishya-December 13th

Know what astrology and the planets have in store for you today. Choose your zodiac sign and read the details...