'ಉತ್ತರ ಕೊರಿಯಾದ' ಕರಾಳ ಮುಖ ತೆರೆದಿಟ್ಟ ಯುವತಿ!! ವಿಡಿಯೋ ವೈರಲ್....

By: manu
Subscribe to Boldsky

ಈ ಜಗತ್ತಿನ ನರಕದ ಕೂಪಗಳಾಗಿರುವ ಕೆಲವು ದೇಶಗಳಲ್ಲಿ ಉತ್ತರ ಕೊರಿಯಾ ಪ್ರಮುಖ ಸ್ಥಾನದಲ್ಲಿದೆ. ಇಲ್ಲಿನ ಏಕಾಧಿಪತ್ಯದ ಹುಚ್ಚಾಟದ ಪರಿಣಾಮವಾಗಿ ಈ ದೇಶ ಅವನತಿಯತ್ತ ಸರಿಯುತ್ತಿದೆ. ಈ ದೇಶದ ಯೆವೋನ್ಮಿ ಪಾರ್ಕ್ ಎಂಬ ಯುವತಿ ತನ್ನ ದೇಶದಲ್ಲಿ ಆಗುತ್ತಿರುವ ಅನಾಚಾರಗಳ ವೀಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರದರ್ಶಿಸುವ ಧೈರ್ಯ ಮಾಡಿದ್ದಾಳೆ. ಈ ದೇಶದ ನಿವಾಸಿಗಳು ಅನುಭವಿಸುತ್ತಿರುವ ನರಕಜೀವನವನ್ನು ಜಗತ್ತಿನೆದುರು ತೆರೆದಿಟ್ಟಿದ್ದಾಳೆ. ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್‍ ಅನ್ನುತ್ತದೆ... 

ಈ ವಿಡಿಯೋ ನೋಡಿದ ಬಳಿಕ ಕೊರಿಯಾ ದೇಶದ ಪ್ರಜೆಗಳ ಬಗ್ಗೆ ಮರುಗದವರೇ ಇರಲಾರರು. ಆಕೆ ಹುಟ್ಟಿದ ಈ ದೇಶದ ಅಂತರಾಳದಲ್ಲಿ ನಡೆಯುತ್ತಿರುವ ಈ ದೃಶ್ಯಗಳನ್ನು ನೋಡಿದ ಬಳಿಕ, ಈಕೆ ಹೇಗೆ ಧೈರ್ಯ ಮಾಡಿ ಜಗತ್ತಿಗೆ ತಿಳಿಸಿದ್ದಾಳೆ ಎಂದೂ ಅಚ್ಚರಿಯಾಗುತ್ತದೆ... 

ಈಕೆಯ ಹೆಸರು ಯೆವೋನ್ಮಿ ಪಾರ್ಕ್

ಈಕೆಯ ಹೆಸರು ಯೆವೋನ್ಮಿ ಪಾರ್ಕ್

ಒನ್ ಯಂಗ್ ಎಂಬ ವಿಶ್ವದ ಯುವಸಮ್ಮೇಳನದಲ್ಲಿ ತನಗೆ ಸಿಕ್ಕ ಅವಕಾಶವನ್ನು ಪೂರ್ಣವಾಗಿ ಬಳಸಿಕೊಂಡ ಈಕೆ ಈ ದುಷ್ಟರ ಕೈಗಳಿಂದ ತಾನು ಹೇಗೆ ತಪ್ಪಿಸಿಕೊಂಡು ಬಂದೆ ಎಂದು ತಿಳಿಸುತ್ತಾಳೆ.

ಈಕೆ ಓರ್ವ ಕಾರ್ಯಕರ್ತೆ

ಈಕೆ ಓರ್ವ ಕಾರ್ಯಕರ್ತೆ

ದೇಶವನ್ನು ಆಳುತ್ತಿರುವ ಸರ್ವಾಧಿಕಾರಿಯ ಬಾಹುಗಳಿಂದ ತನ್ನ ಜನರನ್ನು ಮುಕ್ತಿಗೊಳಿಸಲು ಶ್ರಮಿಸುತ್ತಿರುವ ಕಾರ್ಯಕರ್ತರಲ್ಲಿ ಈಕೆ ಒಬ್ಬಳಾಗಿದ್ದಾಳೆ. ಈಕೆ ಹುಟ್ಟಿದಾಗಿನಿಂದಲೂ ಆಡಳಿತಗಾರರ ದಬ್ಬಾಳಿಕೆಯನ್ನು ನೋಡುತ್ತಲೇ ಬಂದಿದ್ದಾಳೆ.

ತನ್ನ ದೇಶದಲ್ಲಿ ನಡೆಯುತ್ತಿರುವ ಕೊಲೆಗಳನ್ನು ಸ್ಪಷ್ಟಪಡಿಸಿದ್ದಾಳೆ

ತನ್ನ ದೇಶದಲ್ಲಿ ನಡೆಯುತ್ತಿರುವ ಕೊಲೆಗಳನ್ನು ಸ್ಪಷ್ಟಪಡಿಸಿದ್ದಾಳೆ

ತನ್ನ ಗದ್ಗದಿತ ಮಾತುಗಳಲ್ಲಿಯೇ ಸ್ಪಷ್ಟವಾಗಿ ತನ್ನ ದೇಶದ ಜನರನ್ನು ಹೇಗೆ ಹಿಂಸಿಸಲಾಗುತ್ತಿದೆ ಮತ್ತು ಕ್ರೂರ ಕಾನೂನುಗಳ ಅಡಿಯಲ್ಲಿ ಹಿಂಸಿಸಲಾಗುತ್ತಿದೆ ಮತ್ತು ಕೊಲ್ಲಲಾಗುತ್ತಿದೆ ಎಂಬುದನ್ನು ವಿವರಿಸುತ್ತಾಳೆ. ಈಕೆಯ ಸ್ನೇಹಿತೆಯ ತಾಯಿಯನ್ನು ಕೇವಲ ಹಾಲಿವುಡ್ ಸಿನೆಮಾ ನೋಡಿದ ಕ್ಷುಲ್ಲುಕ ಕಾರಣಕ್ಕೆ ಕೊಲ್ಲಲಾಗಿತ್ತು..ಆಗ ಈಕೆಯ ವಯಸ್ಸು ಕೇವಲ ಒಂಬತ್ತು ವರ್ಷ.

ಈಕೆಯ ಮನಸ್ಸನ್ನೂ ಸರ್ವಾಧಿಕಾರಿಗಳು ಓದಬಹುದೆಂಬ ಭಯವಿತ್ತು

ಈಕೆಯ ಮನಸ್ಸನ್ನೂ ಸರ್ವಾಧಿಕಾರಿಗಳು ಓದಬಹುದೆಂಬ ಭಯವಿತ್ತು

ಈಕೆಯ ತಾಯಿ ಪಿಸುಮಾತಿನಲ್ಲಿಯೂ ಏನೊಂದೂ ಮಾತನಾಡಂತೆ ಕಟ್ಟಪ್ಪಣೆ ವಹಿಸಿದ್ದಳು. ಈ ಅಪ್ಪಣೆಯನ್ನು ಆಕೆ ಎಷ್ಟು ಆಳವಾಗಿ ನಂಬಿದ್ದಳೆಂದರೆ ಉ.ಕೊರಿಯಾದ ಸರ್ವಾಧಿಕಾರಿ ಆಕೆ ಏನನ್ನು ಯೋಚಿಸುತ್ತಿದ್ದಾಳೆ ಎಂಬುದನ್ನು ಓದಬಲ್ಲವನಾಗಿದ್ದ ಎಂದು ಭಾವಿಸಿದ್ದಳು.

ಈಕೆ ಕಡೆಗೂ ಯಶಸ್ವಿಯಾಗಿ ನರಕದಿಂದ ಪಾರಾದಳು:

ಈಕೆ ಕಡೆಗೂ ಯಶಸ್ವಿಯಾಗಿ ನರಕದಿಂದ ಪಾರಾದಳು:

ಹಲವು ವರ್ಷಗಳ ಪ್ರಯತ್ನದಿಂದ ಈಕೆ ಆ ನರಕದಿಂದ ಪಾರಾಗಿ ಹೊರಜಗತ್ತಿಗೆ ಬಂದಿದ್ದು ತನ್ನ ಜನರನ್ನೂ ಈ ನರಕದಿಂದ ಪಾರು ಮಾಡಲು ಪಣ ತೊಟ್ಟಿದ್ದಾಳೆ. ಬನ್ನಿ, ಈಕೆಯ ಮಾತುಗಳನ್ನು ಕೆಳಗಿನ ವಿಡಿಯೋ ಮೂಲಕ ನೋಡೋಣ:

 

 

English summary

north-korea-ordeals-revealed-by-this-girl

North Korea is known to be the darkest place on earth. It is a place of horror, as it has the world's most regressive regimes. Yeonmi Park is a young brave woman who shared the baffling details of reality that linger in the shadows of torture that the residents of this country go through. Check out the heart-breaking video as she shares some of the most darkest and deepest details of the country she was born in.
Please Wait while comments are loading...
Subscribe Newsletter