For Quick Alerts
ALLOW NOTIFICATIONS  
For Daily Alerts

ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್‍ ಅನ್ನುತ್ತದೆ...

By Super Admin
|

ಕೊರಿಯಾ ಎಂದಾಕ್ಷಣ ನಮಗೆಲ್ಲಾ ನೆನಪಿಗೆ ಬರುವುದು ಸ್ಯಾಂಸಂಗ್ ಮೊಬೈಲ್ ಮತ್ತು ಹ್ಯುಂಡೈ ಕಾರು. ಆದರೆ ಇವು ದಕ್ಷಿಣ ಕೊರಿಯಾ ದೇಶಕ್ಕೆ ಸೇರಿದವಾಗಿವೆ. ಇದಕ್ಕೆ ತದ್ವಿರುದ್ಧವಾಗಿ ಉತ್ತರ ಕೊರಿಯಾದ ಕಾನೂನುಗಳು ಅತ್ಯಂತ ಕಠಿಣ, ವಿಚಿತ್ರ ಮತ್ತು ಅಸಂಬದ್ಧವಾಗಿಯೂ ಇವೆ. ಈ ಕಾನೂನುಗಳನ್ನು ತಿಳಿದುಕೊಳ್ಳುತ್ತಾ ಬಂದಂತೆ ಆ ದೇಶದ ಪ್ರಜೆಗಳಾಗಿ ಹುಟ್ಟಿಸದಿದ್ದುದಕ್ಕೆ ನಾವು ಅನಂತ ಪ್ರಣಾಮವನ್ನು ದೇವರಿಗೆ ಖಂಡಿತಾ ಸಲ್ಲಿಸುತ್ತೇವೆ.

ಇಲ್ಲಿನ ಕಾನೂನು ಎಷ್ಟು ಬಿಗಿ ಎಂದರೆ ಪ್ರಜೆಗಳು ಸ್ವತಂತ್ರರಾಗಿ ಯೋಚಿಸಲೂ ಸಾಧ್ಯವಿಲ್ಲದಷ್ಟು, ಅಂದರೆ ಏನನ್ನು ತೊಡಬೇಕು, ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಮೊದಲಾದ ದಿನನಿತ್ಯದ ಕ್ರಿಯೆಗಳಿಗೂ ಸರ್ಕಾರದ ಅಣತಿಯ ಪ್ರಕಾರವೇ ನಡೆಯಬೇಕು. ಅಷ್ಟೇ ಅಲ್ಲ, ಮನರಂಜನಾ ಮತ್ತು ಮಾಹಿತಿಯ ಮೂಲಗಳಾದ ಟೀವಿ, ರೇಡಿಯೋ, ಸಂಗೀತ ಮತ್ತಿತರ ಕಾರ್ಯಕ್ರಮಗಳನ್ನು ನೋಡಲು ಅಥವಾ ಆಲಿಸಲು ಸಹಾ ಸರ್ಕಾರ ಇದಕ್ಕೆ ಕಾನೂನುಬದ್ಧ ಎಂದು ಠಸ್ಸೆ ಹೊಡೆದ ಬಳಿಕ ಮಾತ್ರ ಸಾಧ್ಯ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

ಜನಸಾಮಾನ್ಯರ ಕಥೆ ಹೀಗಾದರೆ ಚಿಕ್ಕ ಪುಟ್ಟ ತಪ್ಪು ಮಾಡಿ ಜೈಲು ಸೇರಿದ ಕೈದಿಗಳ ಕಥೆಯಂತೂ ನರಕ್ಕಿಂತಲೂ ಕಡೆ. ಮಾನವ ಮಾತ್ರನಿಂದ ಸಾಧ್ಯವಿಲ್ಲದಷ್ಟು ದುಡಿತ, ಬೈಗುಳ, ಹೊಡೆತ, ಅಷ್ಟೇ ಏಕೆ, ಕೆಲವು ಗುರುತರ ಅಪರಾಧಗಳ ಅವಧಿ ಓರ್ವನ ಜೀವಮಾನಕ್ಕೂ ಹೆಚ್ಚಿದ್ದರೆ ಆತನ ಶಿಕ್ಷೆಯನ್ನು ಆತನ ಮಕ್ಕಳು ಅನುಭವಿಸಬೇಕು! ಒಂದು ವೇಳೆ ಉತ್ತರ ಕೊರಿಯಾ ದೇಶಕ್ಕೆ ಭೇಟಿ ನೀಡಲೇಬೇಕಾದರೆ, ನಿಮ್ಮ ಪ್ರತಿ ಚಲನವಲನದ ಮೇಲೂ ಹದ್ದಿನ ಕಣ್ಣಿಟ್ಟಿರಲಾಗಿರುತ್ತದೆ. ಪ್ರವಾಸಿಗರಿಗೂ ಈ ಕಟ್ಟೆಚ್ಚರಗಳು ಅನ್ವಯಿಸುತ್ತವೆ.

ಒಂದು ವೇಳೆ ಇಲ್ಲಿನ ವಾತಾವರಣ ಉಸಿರುಗಟ್ಟುತ್ತಿದೆ ಎಂದು ಪ್ರಜೆಗಳು ಇಲ್ಲಿಂದ ಹೊರಹೋಗ ಬಯಸಿದರೆ ಅದಕ್ಕೂ ಅವಕಾಶವಿಲ್ಲ! ಈ ಬಗ್ಗೆ ಅವರು ಮಾತನಾಡುವಂತೆಯೂ ಇಲ್ಲ. ಉತ್ತರ ಕೊರಿಯಾದ ಈ ಅಮಾನವೀಯ ವರ್ತನೆ ಮತ್ತು ಕ್ರಮಗಳಿಗೆ ಇಡಿಯ ಜಗತ್ತೇ ಥೂಥೂ ಎನ್ನುತ್ತಿದೆ. ಆದರೂ ಇದರ ಆಡಳಿತವರ್ಗಕ್ಕೆ ಯಾವುದೇ ಪರಿಣಾಮ ಬೀರಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ...

ಅಪರಾಧ ಎಸಗಿದವರ ಕುಟುಂಬಕ್ಕೇ ಶಿಕ್ಷೆ

ಅಪರಾಧ ಎಸಗಿದವರ ಕುಟುಂಬಕ್ಕೇ ಶಿಕ್ಷೆ

ಒಂದು ವೇಳೆ ಎಸಗಿದ ಅಪರಾಧ ಗುರುತರವಾಗಿದ್ದರೆ ಇದಕ್ಕೆ ಶಿಕ್ಷೆಯನ್ನು ಆತನ ಮುಂದಿನ ಎರಡು ಪೀಳಿಗೆಯವರೆಗೆ ವಿಸ್ತರಿಸಲು ಇಲ್ಲಿನ ಕಾನೂನಿನಲ್ಲಿ ಅವಕಾಶವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಪರಾಧ ಎಸಗಿದವರ ಕುಟುಂಬಕ್ಕೇ ಶಿಕ್ಷೆ

ಅಪರಾಧ ಎಸಗಿದವರ ಕುಟುಂಬಕ್ಕೇ ಶಿಕ್ಷೆ

ಅಂದರೆ ತಂದೆ ಮಗ ಮತ್ತು ಮೊಮ್ಮಕ್ಕಳು ಅಜ್ಜನ ಶಿಕ್ಷೆಯನ್ನು ಅನುಭವಿಸಬೇಕು. ಅದೂ ಅಲ್ಲದೇ ಶಿಕ್ಷೆ ಅಜ್ಜನಿಗೆ ಎಷ್ಟು ಕಷ್ಟಕರವಾಗಿತ್ತೋ ಮೊಮ್ಮಗನಿಗೂ ಅಷ್ಟೇ ಕಷ್ಟಕರವಾಗಿರುತ್ತದೆ.

ಸಾರ್ವಜನಿಕರಿಗೆ ಇಂಟರ್ನೆಟ್ ನಿಷೇಧ

ಸಾರ್ವಜನಿಕರಿಗೆ ಇಂಟರ್ನೆಟ್ ನಿಷೇಧ

ನಮ್ಮಲ್ಲಿ ಸುಮಾರು ನಲವತ್ತು ಕೋಟಿ ಜನರ ಬಳಿ ಈಗ ಇಂಟರ್ನೆಟ್ ಸೌಲಭ್ಯವಿದೆ. ಆದರೆ ಉತ್ತರ ಕೊರಿಯಾದ ಜನತೆಯ ಬಳಿ ಇಂಟರ್ನೆಟ್ ಇದ್ದರೂ ಬಳಸುವಂತಿಲ್ಲ. ಇದು ಏನಿದ್ದರೂ ಕೇವಲ ಸರ್ಕಾರ ಮತ್ತು ಉನ್ನತ ಅಧಿಕಾರಿಗಳಿಗೆ ಮಾತ್ರ ಮೀಸಲು.

ಸಾರ್ವಜನಿಕರಿಗೆ ಇಂಟರ್ನೆಟ್ ನಿಷೇಧ

ಸಾರ್ವಜನಿಕರಿಗೆ ಇಂಟರ್ನೆಟ್ ನಿಷೇಧ

ಜನತೆ ಏನಿದ್ದರೂ ದೇಶದೊಳಕ್ಕೇ ಬಳಸಲು ಮೀಸಲಾದ ಕ್ವಾಂಗ್ಮ್ಯಾಂಗ್ (Kwangmyong) ಎಂಬ ಇಂಟರ್ನೆಟ್ ಬಳಸಲು ಸಾಧ್ಯ. ಇದರ ಪರಿಮಿತಿ ದೇಶದ ಪರಿಧಿಗೆ ಸೀಮಿತವಾಗಿದ್ದು ಇದರ ಬಳಕೆದಾರರ ಎಲ್ಲಾ ಮಾಹಿತಿಗಳನ್ನು ಸರ್ಕಾರ ಪರಿಶೀಲಿಸುವ ಅಧಿಕಾರ ಹೊಂದಿರುತ್ತದೆ.

ತನ್ನ ಚಿಕ್ಕಪ್ಪನನ್ನು ನಾಯಿಗಳಿಗೆ ತಿನ್ನಿಸಿ ಕೊಂದ ಸರ್ವಾಧಿಕಾರಿ

ತನ್ನ ಚಿಕ್ಕಪ್ಪನನ್ನು ನಾಯಿಗಳಿಗೆ ತಿನ್ನಿಸಿ ಕೊಂದ ಸರ್ವಾಧಿಕಾರಿ

ಅಧಿಕಾರದ ಲಾಲಸೆ ಎಷ್ಟು ಮಟ್ಟಿಗೆ ಪ್ರಕೋಪಕ್ಕೆ ತಿರುಗಿದೆ ಎಂದರೆ ಅಧಿಕಾರಕ್ಕೆ ಬರಲು ಸರ್ವಾಧಿಕಾರಿ ಕಿಂ ಜೋಂಗ್ ಉನ್ ರವರು ತಮ್ಮ ಚಿಕ್ಕಪ್ಪ ಜಾಂಗ್ ಸೋಂಗ್ ಥೇಕ್ (Jang Song-Thaek) ನನ್ನೇ ದೇಶದ್ರೋಹಿ ಎಂಬ ಪಟ್ಟ ಕಟ್ಟಿ ಹಸಿದ ನಾಯಿಗಳು ತುಂಬಿದ್ದ ದೊಡ್ಡ ಪಂಜರದೊಳಕ್ಕೆ ಬಂಧಿಸಿ ಆ ನಾಯಿಗಳು ಹರಿದು ತಿನ್ನುವಂತೆ ಮಾಡಿದ್ದ. ಅಲ್ಲಿದ್ದ ನಾಯಿಗಳೋ, ಬರೋಬ್ಬರಿ ನೂರಿಪ್ಪತ್ತು ಸಂಖ್ಯೆಯಲ್ಲಿದ್ದ ಅಲ್ಸೇಶಿಯನ್ ನಾಯಿಗಳು.

ಇಲ್ಲಿನ ಗಡಿಗಳು ವಿಶ್ವದಲ್ಲಿಯೇ ಅತ್ಯಂತ ಕಟ್ಟುನಿಟ್ಟಿನವು

ಇಲ್ಲಿನ ಗಡಿಗಳು ವಿಶ್ವದಲ್ಲಿಯೇ ಅತ್ಯಂತ ಕಟ್ಟುನಿಟ್ಟಿನವು

ಭಾರತ ಪಾಕಿಸ್ತಾನದ ಗಡಿಯಲ್ಲಿರುವುದೇ ಅತಿ ಕಠಿಣ ಭದ್ರತೆ ಎಂದು ತಿಳಿದಿದ್ದವರಿಗೆ ಉತ್ತರ ಕೊರಿಯಾ ದಕ್ಷಿಣ ಕೊರಿಯಾ ನಡುವಣ ಗಡಿಯ ಭದ್ರತೆಯನ್ನು ನೋಡಿದರೆ ಇದು ಏನೂ ಇಲ್ಲ ಎನ್ನಿಸುತ್ತದೆ.

ಇಲ್ಲಿನ ಗಡಿಗಳು ವಿಶ್ವದಲ್ಲಿಯೇ ಅತ್ಯಂತ ಕಟ್ಟುನಿಟ್ಟಿನವು

ಇಲ್ಲಿನ ಗಡಿಗಳು ವಿಶ್ವದಲ್ಲಿಯೇ ಅತ್ಯಂತ ಕಟ್ಟುನಿಟ್ಟಿನವು

ಏಕೆಂದರೆ ಇದು ವಿಶ್ವದಲ್ಲಿಯೇ ಅತಿ ಹೆಚ್ಚಿನ ಭದ್ರತೆಯ, ಅದರಲ್ಲೂ ಮಿಲಿಟರಿಯ ಪಡೆಯನ್ನು ಬಳಸಿದ ಗಡಿಯಾಗಿದೆ.

ಭೂತನಗರವಾದ ಶಾಂತಿಗ್ರಾಮ

ಭೂತನಗರವಾದ ಶಾಂತಿಗ್ರಾಮ

ಉತ್ತರ ಕೊರಿಯಾ ಬರೆಯೆ ಕಟ್ಟುನಿಟ್ಟು ಮಾತ್ರವಲ್ಲ, ಕುತಂತ್ರಿಯೂ ಆಗಿದೆ. ಗಡಿಯಲ್ಲಿ ದಕ್ಷಿಣ ಕೊರಿಯನ್ನರಿಗೆ ಗಾಳ ಹಾಕಲು ಒಂದು ಸುಂದರ ಹಳ್ಳಿಯನ್ನು ನಿರ್ಮಿಸಲಾಯಿತು. ಗಡಿಯಿಂದ ಕಾಣುವ ಈ ಹಳ್ಳಿಗೆ ಅವರು Kijong-Dong (ಶಾಂತಿ ಗ್ರಾಮ) ಎಂಬ ಸುಂದರ ಹೆಸರನ್ನೂ ಇಟ್ಟರು. ಹೆಸರಿಗೆ ಮಾತ್ರ ಶಾಂತಿಗ್ರಾಮವಾಗಿದ್ದ ಇಲ್ಲಿ ದಿನಕ್ಕೆ ಇಪ್ಪತ್ತು ಗಂಟೆಯ ಕಾಲ ಭಾರೀ ದೊಡ್ಡ ದನಿಯಲ್ಲಿ ದೇಶಭಕ್ತಿಗೀತೆಗಳನ್ನು ಹಾಕಲಾಗುತ್ತಿತ್ತು.

ಭೂತನಗರವಾದ ಶಾಂತಿಗ್ರಾಮ

ಭೂತನಗರವಾದ ಶಾಂತಿಗ್ರಾಮ

ಅಲ್ಲದೆ ಧ್ವನಿಯನ್ನು ತಾಳಲಾರದೇ ಗ್ರಾಮ ಖಾಲಿ ಮಾಡಿದ ಬಳಿಕ 2004ರಲ್ಲಿ ಪರಸ್ಪರ ಒಪ್ಪಂದದಿಂದ ಈ ಧ್ವನಿ ಸ್ತಬ್ಧವಾಯಿತು. ಆದರೆ ಜನರು ಮರಳಲಿಲ್ಲ. ಇಂದಿಗೂ ಸುಮಾರು ನಾಲ್ಕು ಚದರ ಕಿಮೀ ವಿಸ್ತೀರ್ಣದ ಸುಂದರ ಗ್ರಾಮ ಭೂತನಗರವಾಗಿಯೇ ಉಳಿದಿದೆ.

ಜನಸಾಮಾನ್ಯರಿಗೆ ವಾಹನ ಭಾಗ್ಯವಿಲ್ಲ

ಜನಸಾಮಾನ್ಯರಿಗೆ ವಾಹನ ಭಾಗ್ಯವಿಲ್ಲ

ಉತ್ತರ ಕೊರಿಯದಲ್ಲಿ ಇರುವ ಅಷ್ಟೂ ವಾಹನಗಳು ಕೇವಲ ಸರ್ಕಾರದ ಅಧಿಕಾರಿಗಳಿಗೆ ಮೀಸಲಾಗಿದೆ. ಜನಸಾಮಾನ್ಯರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬೇಕಾದರೂ ಎಲ್ಲಿ, ಏಕೆ, ಹೇಗೆ, ಎಷ್ಟು ಜನ, ಯಾವಾಗ ಹಿಂದಿರುಗುತ್ತೇವೆ, ಯಾರನ್ನು ಭೇಟಿಯಾಗುತ್ತೇವೆ, ಏನನ್ನು ತಿನ್ನುತ್ತೇವೆ ಎಂದೆಲ್ಲಾ ವಿವರಗಳನ್ನು ನೀಡಿ ಪರವಾನಿಗೆ ಪಡೆದುಕೊಂಡ ಬಳಿಕವೇ ದೇಶದ ಇನ್ನೊಂದು ಪ್ರದೇಶಕ್ಕೆ ಹೋಗಲು ಸಾಧ್ಯ.

ಜನಸಾಮಾನ್ಯರ ಕೇಶಶೃಂಗಾರಕ್ಕೂ ಸರ್ಕಾರದ ಅಣತಿ

ಜನಸಾಮಾನ್ಯರ ಕೇಶಶೃಂಗಾರಕ್ಕೂ ಸರ್ಕಾರದ ಅಣತಿ

ಜನಸಾಮಾನ್ಯರು ತಮ್ಮ ಇಷ್ಟದ ಕೇಶಾಲಂಕಾರ ಮಾಡುವಂತಿಲ್ಲ. ಸರ್ಕಾರದಿಂದ ಒಟ್ಟು ಇಪ್ಪತ್ತೆಂಟು ಅಲಂಕಾರಗಳನ್ನು ಮಾತ್ರ ಅನುಮೋದಿಸಲಾಗಿದ್ದು ಅವನ್ನೇ ನಾಪಿತ ಅನುಸರಿಬೇಕು. ಅಪ್ಪಿ ತಪ್ಪಿ ಇದಕ್ಕೂ ಭಿನ್ನವಾದ ಕೇಶಾಲಂಕಾರ ಮಾಡಿದರೆ ನಾಪಿತ ಮತ್ತು ಶೃಂಗಾರ ಮಾಡಿಸಿಕೊಂಡವರಿಬ್ಬರಿಗೂ ಮೊಮ್ಮಕ್ಕಳು ಅನುಭವಿಸುವವರೆಗೆ ಶಿಕ್ಷೆ ವಿಧಿಸಬಹುದು.

ಜನಸಾಮಾನ್ಯರ ಕೇಶಶೃಂಗಾರಕ್ಕೂ ಸರ್ಕಾರದ ಅಣತಿ

ಜನಸಾಮಾನ್ಯರ ಕೇಶಶೃಂಗಾರಕ್ಕೂ ಸರ್ಕಾರದ ಅಣತಿ

ವಿವಾಹಿತ ಮಹಿಳೆಯರಿಗೆ ಕೂದಲು ಉದ್ದ ಬಿಟ್ಟುಕೊಳ್ಳುವ ಅವಕಾಶವಿಲ್ಲ. ಅವಿವಾಹಿತೆಯರು ಕೂದಲು ಕತ್ತರಿಸಿಕೊಳ್ಳುವಂತಿಲ್ಲ. ಆದರೆ ಜಡೆ ಕಟ್ಟಿ ತುರುಬು ಮಾಡಿಕೊಳ್ಳಬಹುದು. ಪುರುಷರು ತಮ್ಮ ಕೂದಲುಗಳನ್ನು ಐದು ಸೆ.ಮೀ ಮತ್ತು ಏಳು ಸೆ.ಮೀ ನಡುವೆಯೇ ಇರಿಸಬೇಕು. ಅಪ್ಪಿ ತಪ್ಪಿ ಎಂಟು ಸೆ೦.ಮೀ ಆಯಿತೋ ಉಗ್ರ ಶಿಕ್ಷೆಗೆ ಗುರಿಯಾಗಬೇಕು.

ವಿರಾಮ ಎಂಬುದೇ ಇಲ್ಲ

ವಿರಾಮ ಎಂಬುದೇ ಇಲ್ಲ

ನೆಹರೂರವರ ಆರಾಮ್ ಹರಾಮ್ ಹೈ ಎಂಬ ವಾಕ್ಯ ಇಲ್ಲಿ ಸಾಕ್ಷಾತ್ಕಾರವಾಗಿದೆ. ಜನಸಾಮಾನ್ಯರು ವಾರದಲ್ಲಿ ಏಳೂ ದಿನ ಕೆಲಸ ಮಾಡಬೇಕು. ಅದರಲ್ಲಿ ಆರು ದಿನ ಅವರ ಉದ್ಯೋಗಕ್ಕೆ ಸಂಬಂಧಪಟ್ಟ ಚಟುವಟಿಕೆಗಳಾದರೆ ಉಳಿದ ಒಂದು ದಿನ ಕಡ್ಡಾಯವಾದ, ಸರ್ಕಾರ ನೇಮಿಸಿದ ಕೆಲಸವನ್ನು ಮಾಡಲೇಬೇಕು.

ವಿರಾಮ ಎಂಬುದೇ ಇಲ್ಲ

ವಿರಾಮ ಎಂಬುದೇ ಇಲ್ಲ

ಅಂದರೆ ನಿದ್ದೆಯ ಸಮಯ ಬಿಟ್ಟು ಉಳಿದೆಲ್ಲಾ ಸಮಯ ದೇಶಕ್ಕೆ ಮೀಸಲು. ಹನ್ನೊಂದು ವರ್ಷದವರೆಗೆ ಶಿಕ್ಷಣ ಉಚಿತವಾಗಿದ್ದರೂ ಮಕ್ಕಳಿಗೂ ಈ ಕಾನೂನುಗಳಿಂದ ಕ್ಷಮೆ ಇಲ್ಲ. ಆರು ದಿನ ಶಾಲೆ ಹಾಗೂ ಒಂದು ದಿನ ಕಡ್ಡಾಯವಾಗಿ ಆಟದಲ್ಲಿ ತೊಡಗಲೇ ಬೇಕು.

ಜೀನ್ಸ್ ತೊಡುವುದು ಇಲ್ಲಿ ಅಪರಾಧ

ಜೀನ್ಸ್ ತೊಡುವುದು ಇಲ್ಲಿ ಅಪರಾಧ

ಅಮೇರಿಕಾವನ್ನು ಅನುಸರಿಸುವುದು ಇಲ್ಲಿ ಅಪರಾಧವಾಗಿದೆ. ಇದರಲ್ಲಿ ಜೀನ್ಸ್ ತೊಡುವುದು ಸಹಾ ಒಂದು. ಜನರು ಸರ್ಕಾರ ಅನುಮೋದಿಸಿದ ಬಟ್ಟೆ ಹಾಗೂ ವಿನ್ಯಾಸಗಳನ್ನೇ ತೊಡಬೇಕು. ಇದೊಂದು ತರಹದ ಆಧುನಿಕ ಗುಲಾಮಗಿರಿಯಲ್ಲದೇ ಮತ್ತೇನು?

ಅಣು ಶಸ್ತ್ರಗಳ ನಿರ್ಮಾಣ-ವಿಶ್ವಸಂಸ್ಥೆಗೂ ಬಗ್ಗದ ಸರ್ವಾಧಿಕಾರಿ

ಅಣು ಶಸ್ತ್ರಗಳ ನಿರ್ಮಾಣ-ವಿಶ್ವಸಂಸ್ಥೆಗೂ ಬಗ್ಗದ ಸರ್ವಾಧಿಕಾರಿ

ವಿಶ್ವದ ಎಲ್ಲಾ ರಾಷ್ಟ್ರಗಳು ಅಣುಶಸ್ತ್ರಗಳ ಬಳಕೆ ಮತ್ತು ನಿರ್ಮಾಣಕ್ಕೆ ಕಡಿವಾಣ ಹಾಕಿದ್ದರೂ ಉತ್ತರ ಕೊರಿಯಾ ಮಾತ್ರ ಎಗ್ಗಿಲ್ಲದೇ ಮುಂದುವರೆಸಿಕೊಂಡು ಹೋಗುತ್ತಿದೆ.

ವಂಶದ ಪ್ರಕಾರ ಸಾಮಾಜಿಕ ಸ್ಥಾನ

ವಂಶದ ಪ್ರಕಾರ ಸಾಮಾಜಿಕ ಸ್ಥಾನ

ಉತ್ತರ ಕೊರಿಯಾದ ಜನತೆಯನ್ನು ಅವರ ಅರ್ಹತೆಯ ಮೇಲಲ್ಲ, ಅವರ ವಂಶದ ಪ್ರಕಾರ ವರ್ಗವಾಗಿಸಲಾಗುತ್ತದೆ. Songbun ಎಂದು ಕರೆಯಲ್ಪಡುವ ಈ ವಿಧಾನದಲ್ಲಿ ಒಂದು ವಂಶದ ಜನರ ನಡತೆ, ಸಾಮಾಜಿಕ ಸ್ಥಾನ, ಆರ್ಥಿಕ ಸ್ಥಾನಮಾನ ಮೊದಲಾದವುಗಳನ್ನು ಹಿಂದಿನ ಮೂರು ಪೀಳಿಗೆಯವರೆಗೆ ಅನುಸರಿಸಿ ವರ್ಗೀಕರಿಸಲಾಗುತ್ತದೆ. ಈ ವರ್ಗಾವಣೆಗೆ ತಕ್ಕಂತೆ ಅವರಿಗೆ ಉದ್ಯೋಗ, ಸಾಮಾಜಿಕ ಸ್ಥಾನ, ಅರ್ಹತೆ, ಅವಕಾಶ ಮತ್ತು ಆಹಾರವನ್ನೂ ನೀಡಲಾಗುತ್ತದೆ.


English summary

Shivering Facts About North Korea: Think Before You Visit North Korea

North Korea is a place where you must think twice to visit, as it is the country with very strict and weird laws. After reading this article, you will feel lucky that you are not a citizen of that country.North Korea has the worst human rights violations and is being globally condemned. Here are some shivering and bizarre facts about North Korea. Read to know more.
X
Desktop Bottom Promotion