For Quick Alerts
ALLOW NOTIFICATIONS  
For Daily Alerts

ಇವರು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುವ ರಾಶಿಯವರು! ನಿಮ್ಮದೂ ಪರಿಶೀಲಿಸಿ...

By Deepu
|

ಕೆಲವರು ತಾವು ಮಾಡುವ ಕೆಲಸದ ಬಗ್ಗೆ ಹೆಚ್ಚು ಶ್ರದ್ಧೆಯನ್ನು ಹೊಂದಿರುತ್ತಾರೆ. ಇವರು ಮಾಡುವ ಕೆಲಸದ ಬಗ್ಗೆ ಪ್ರೀತಿ ವಿಶ್ವಾಸವನ್ನು ತೋರುತ್ತಾರೆ. ಕೈಗೆತ್ತಿಕೊಂಡ ಕೆಲಸವನ್ನು ಸುಸೂತ್ರಗೊಳಿಸುವ ತನಕವೂ ಶ್ರಮದಿಂದಲೇ ದುಡಿಯುತ್ತಾರೆ. ಇನ್ನೂ ಕೆಲವರು ಕೆಲಸವನ್ನು ಪ್ರಾರಂಭಿಸುವಾಗ ಉತ್ಸಾಹ ತೋರಬಹುದು ಅಥವಾ ಪ್ರಾರಂಭದಿಂದಲೂ ನಿಷ್ಕಾಳಜಿಯಿಂದ ಕೂಡಿರಬಹುದು. ಮಾಡುತ್ತಿರುವ ಕೆಲಸದ ಬಗ್ಗೆ ಯಾಗಲೀ ಅಥವಾ ಪೂರ್ಣ ಗೊಳಿಸಬೇಕೆನ್ನುವ ಆಸಕ್ತಿಯಾಗಲೀ ಇರುವುದಿಲ್ಲ. ಇವೆಲ್ಲದಕ್ಕೂ ಅವರ ರಾಶಿಫಲವೇ ಕಾರಣವಾಗಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವ್ಯಕ್ತಿ ಕೆಲಸವನ್ನು ಆರಿಸಿಕೊಳ್ಳುವಾಗ ಅವರ ರಾಶಿ ಚಕ್ರವು ಪ್ರೇರಣೆ ನೀಡುತ್ತದೆ. ಅದರಂತೆಯೇ ವ್ಯಕ್ತಿ ಹೆಚ್ಚು ಕ್ರಿಯಾಶೀಲನಾಗಿರುತ್ತಾನೆ. ಜೊತೆಗೆ ಕೈಗೆತ್ತಿಕೊಂಡ ಕೆಲಸವನ್ನು ಬಹಳ ಸುಲಭ ಹಾಗೂ ಶ್ರದ್ಧೆಯಿಂದ ಮಾಡಿ ಮುಗಿಸುತ್ತಾನೆ. ಶ್ರಮ ಪಟ್ಟು ಕೆಲಸ ಮಾಡುವ ರಾಶಿಚಕ್ರಗಳಲ್ಲೂ ವಿಶೇಷತೆಗಳಿವೆ. ಹಾಗಾದರೆ ಆ ರಾಶಿ ಚಕ್ರಗಳು ಯಾವವು? ಅದರ ವಿಶೇಷತೆ ಏನು ಎನ್ನುವುದನ್ನು ನೀವು ಅರಿಯಬೇಕೆಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ವಿವರಿಸಿ...

ಮಕರ

ಮಕರ

ಈ ರಾಶಿಯವರು ಹೆಚ್ಚು ಶ್ರಮ ಜೀವಿಗಳಾಗಿರುತ್ತಾರೆ. ಎಲ್ಲಾ ರಾಶಿಯವರಿಗಿಂತ ಇವರು ಹೆಚ್ಚು ಶ್ರಮ ಪಟ್ಟು ದುಡಿಯುತ್ತಾರೆ ಎಂದು ಹೇಳಬಹುದು. ಇವರಿಗೆ ಕೆಲಸ ಮಾಡಲು ಆಯ್ಕೆಯ ಅಗತ್ಯವಿರುವುದಿಲ್ಲ. ಎಲ್ಲಾ ಕೆಲಸವನ್ನು ಸುಸೂತ್ರವಾಗಿ ನೆರವೇರಿಸುತ್ತಾರೆ. ಅವರು ಮಾಡುವ ಕೆಲಸದಲ್ಲಿ ಶ್ರದ್ಧೆ ಇಟ್ಟು ಮಾಡುವುದರಿಂದ ಕೆಲಸದಲ್ಲಿ ಪರಿಪೂರ್ಣತೆ ಇರುವುದನ್ನು ಗಮನಿಸಬಹುದು. ಇನ್ನು ಈ ರಾಶಿಯವರು ಹಠ, ಜವಾಬ್ದಾರಿ ಹಾಗೂ ರಾಜತಾಂತ್ರಿಕತೆ ಸ್ವಭಾವ ಹೊಂದಿರುತ್ತಾರೆ. ಇವರು ತಂದೆಯ ಸ್ಥಾನದಲ್ಲಿ ನಿಂತು ಆರೈಕೆಯನ್ನು ಮಾಡುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಕೃಷಿ ಮತ್ತು ಅಡುಗೆ.

ಕುಂಬ

ಕುಂಬ

ನೀರಿನಿಂದ ಕೂಡಿರುವ ಚಿಹ್ನೆ ಇವರದ್ದು. ಶ್ರಮಪಟ್ಟು ಕೆಲಸ ಮಾಡುವುದರಲ್ಲಿ ಇವರದ್ದು ಎರಡನೇ ಸ್ಥಾನ ಎನ್ನಬಹುದು. ಇವರು ಅನೇಕ ಕನಸನ್ನು ಹೊಂದಿರುತ್ತಾರೆ ಅದನ್ನು ನೆರವೇರಿಸಿಕೊಳ್ಳಲು ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಕೈಗೆತ್ತಿಕೊಂಡ ಕನಸನ್ನು ಪೂರ್ಣಗೊಳಿಸುವಲ್ಲಿ ನಿಸ್ಸೀಮರು ಎನ್ನಬಹುದು. ಇವರು ಜೀವನದಲ್ಲಿ ಹಲವಾರು ಜನರನ್ನು ಭೇಟಿ ಮಾಡುತ್ತಾರೆ ಮತ್ತು ದೇಶ ಸುತ್ತಿ ಕಲಿಯುತ್ತಾರೆ. ಇವರ ಪ್ರವಾಸಗಳು ಇವರ ವೃತ್ತಿಗೆ ಸಹಾಯವನ್ನು ಮಾಡುತ್ತದೆ. ಜೊತೆಗೆ ಸೃಜನಶೀಲತೆಯನ್ನು ಸಹ ಹೆಚ್ಚಿಸುತ್ತದೆ ಹಾಗು ಯಶಸ್ಸನ್ನು ನೀಡುತ್ತದೆ. ಇವರು ಮೂಲತಃ ಸಂಶೋಧಕರು ಮತ್ತು ಅಸಂಪ್ರದಾಯಿಕ ಚಿಂತಕರಾಗಿರುತ್ತಾರೆ. ಇವರಿಗೆ ಹೊಸ ತಂತ್ರಜ್ಞಾನವು ಕೊಡುಗೆಯಾಗಿ ಬಂದಿರುತ್ತದೆ. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಖಗೋಲಶಾಸ್ತ್ರ, ಫೋಟೋಗ್ರಾಫಿ, ವಾಯುಯಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನ.

ಮೀನ

ಮೀನ

ಇವರು ತಮ್ಮದೇ ಆದ ಅದ್ಭುತ ಕನಸುಗಳನ್ನು ಹೊಂದಿರುತ್ತಾರೆ. ಕೆಲಸವನ್ನು ಸಾಧಿಸಲು ಮುಂದೆ ಹೆಜ್ಜೆ ಇಟ್ಟಾಗ ಎಂದಿಗೂ ಹಿಂತಿರುಗಿ ನೋಡುವುದಿಲ್ಲ. ತಾವು ಕಂಡ ಬಯಕೆ ಅಥವಾ ಕೆಲಸವನ್ನು ಕೈಗೊಂಡಾಗ ಅದನ್ನು ನೆರವೇರಿಸಿಕೊಳ್ಳದೆ ಬಿಡುವುದಿಲ್ಲ. ಒಬ್ಬ ಸ್ವಯಂಸೇವಕರಾಗಿ ಜನರಿಗೆ ಸಹಾಯ ಮಾಡುವುದರ ಮೂಲಕ ಇವರ ವ್ಯಕ್ತಿತ್ವ ಪ್ರಕಾಶಮಯವಾಗುತ್ತದೆ. ಹಾಗೆಂದು ಸ್ವಂತ ವಿಚಾರಗಳನ್ನು ಮರೆಯಬೇಡಿ ಎಂದು ನಾವು ಹೇಳುತ್ತಿಲ್ಲ. ಸ್ವಂತ ವಿಚಾರ ಮತ್ತು ಸಮಾಜ ಎರಡನ್ನೂ ಸಮತೋಲನದಿಂದ ನಿಭಾಯಿಸಿದರೆ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ರಾಶಿಯ ಹೆಚ್ಚಿನವರು ಹುತಾತ್ಮರಾಗುತ್ತಾರೆಂದು ಹೇಳಲಾಗುತ್ತದೆ. ಇವರು ತಮ್ಮ ಅಗತ್ಯತೆಯನ್ನು ಬದಿಗಿಟ್ಟು ಇತರರ ಅಗತ್ಯತೆಗಳನ್ನು ಮೊದಲು ಪೂರೈಸುವವರು. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.

ಮೇಷ

ಮೇಷ

ಬೆಂಕಿಯ ಅಂಶವನ್ನು ಇವರು ಪ್ರತಿನಿಧಿಸುತ್ತಾರೆ. ಇವರು ಹೆಚ್ಚು ಐಷಾರಾಮಿ ಜೀವನವನ್ನು ಪ್ರೀತಿಸುತ್ತಾರೆ. ತಮ್ಮ ಆಸೆಯನ್ನು ನೆರವೇರಿಸಿಕೊಳ್ಳಲು ಸಕಾರಾತ್ಮಕ ರೀತಿಯಲ್ಲಿ ಮುನ್ನುಗ್ಗುತ್ತಾರೆ. ಹೆಚ್ಚು ಛಲವನ್ನು ಹೊಂದಿರುವ ಇವರು ತಮ್ಮ ಸಾಮಾನ್ಯ ಜೀವನದಲ್ಲಿ ವ್ಯತ್ಯಾಸವನ್ನು ಕಾಣಲು ಬಯಸುತ್ತಾರೆ.

ವೃಷಭ

ವೃಷಭ

ಭೂಮಿಯ ಚಿಹ್ನೆಯನ್ನು ಹೊಂದಿರುವ ಇವರು ಸ್ಥಿರತೆ ಮತ್ತು ಆಧಾರವಾಗಿರುವ ದೃಷ್ಟಿಕೋನವನ್ನು ಹೊಂದಿರುತ್ತಾರೆ. ವರು ಜೀವನದಲ್ಲಿ ಅನನ್ಯವಾದ ಆಕರ್ಷಣೆಯನ್ನು ಹೊಂದಿರುತ್ತಾರೆ. ಇವರು ತಾವು ಕೈಗೊಂಡ ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿ ಶ್ರಮ ಜೀವಿಗಳಾಗಿ ಕೆಲಸ ನಿರ್ವಹಿಸುತ್ತಾರೆ.

ಮಿಥುನ

ಮಿಥುನ

ಇವರು ಸ್ವಭಾವತಹ ಸ್ಥಿರವಾದ ಮನಸ್ಸಿನವರು. ಹಾಗಿದ್ದರೂ ಹೆಚ್ಚು ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳು. ಇವರನ್ನು ಇಷ್ಟ ಪಟ್ಟವರಿಗಾಗಿ ಹಾಗೂ ತಾವು ಕಂಡ ಕನಸನ್ನು ನೆರವೇರಿಸಿಕೊಳ್ಳಲು ಎಷ್ಟೇ ಕಷ್ಟವಾದರೂ ಶ್ರಮದಿಂದ ಪೂರೈಸುತ್ತಾರೆ. ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ. ಈ ರಾಶಿಯವರಿಗೆ ಹೊಂದಿಕೊಳ್ಳುವ ವೃತ್ತಿಗಳೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಮಾರಾಟ, ಕಾನೂನು ಜಾರಿ ಮತ್ತು ಅಗ್ನಿಶಾಮಕದಲ್ಲಿ ಕೆಲಸಗಳು.

ಕರ್ಕ

ಕರ್ಕ

ಇವರು ಅತ್ಯಂತ ಶ್ರಮಜೀವಿಗಳು ಎಂದು ತೋರುವುದಿಲ್ಲ. ಆದರೂ ಕೆಲಸಗಳನ್ನು ಆಳವಾದ ಆಲೋಚನೆಗಳ ಮೂಲಕ ಪೂರ್ಣಗೊಳಿಸುತ್ತಾರೆ. ಕೈಗೊಂಡ ಕೆಲಸವನ್ನು ಪ್ರೀತಿಯಿಂದ ನೆರವೇರಿಸುತ್ತಾರೆ.

ಸಿಂಹ

ಸಿಂಹ

ಸಿಂಹದ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ಅಧಿಕಾರವನ್ನು ಪ್ರೀತಿಸುತ್ತಾರೆ. ತಮ್ಮ ಕೆಲಸವನ್ನು ಬಹಳ ಸುಲಭವಾಗಿ ಇತರರ ಸಹಾಯ ಪಡೆದುಕೊಂಡು ನೆರವೇರಿಸಿಕೊಳ್ಳುವರು. ಬುದ್ಧಿ ಶಕ್ತಿಯ ಜೊತೆಗೆ ದೈಹಿಕ ಶಕ್ತಿಯನ್ನು ಉಪಯೋಗಿಸಿ ಕೆಲಸವನ್ನು ಸಾಧಿಸಿಕೊಳ್ಳುತ್ತಾರೆ. ಜನರ ನಡುವೆ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಿಕೆ ಇವರಿಗೆ ಜನ್ಮಜಾತವಾಗಿ ಬಂದಿರುತ್ತದೆ. ಇದನ್ನು ಬಳಸಿಕೊಂಡರೆ ಸಾಕು ಇವರು ಯಶಸ್ಸು ಗಳಿಸಬಹುದು. ಅಲ್ಲದೆ ಅಧಿಕಾರ ಹಾಗೂ ನಾಯಕತ್ವದ ನಿಜವಾದ ಅಭಿಲಾಷೆ ಇವರಲ್ಲಿ ಇರುತ್ತದೆ. ಇವರು ತುಂಬಾ ಆತ್ಮವಿಶ್ವಾಸ, ಆಶಾವಾದಿ, ವರ್ಚಸ್ವಿ ಮತ್ತು ಹುಟ್ಟು ಮನೋರಂಜಕರಾಗಿರುತ್ತಾರೆ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

ಕನ್ಯಾ

ಕನ್ಯಾ

ಇವರು ಜೀವನದಲ್ಲಿ ಬಹಳ ಸಂಘಟಿತರಾಗಿರುತ್ತಾರೆ. ಇವರು ಜೀವನದಲ್ಲಿ ಹೆಚ್ಚು ಕಷ್ಟು ಪಟ್ಟು ದುಡಿಯಲು ಇಷ್ಟ ಪಡುವುದಿಲ್ಲ. ಬಹಳ ಸುಲಭವಾಗಿ ಬೇಸರಕ್ಕೆ ಒಳಗಾಗುತ್ತಾರೆ. ಇವರು ಬಯಸಿದ್ದನ್ನು ಪಡೆಯಲು ಇಚ್ಛಿಸುತ್ತಾರೆ. ಆದರೆ ಶ್ರಮವಹಿಸುವುದಿಲ್ಲ.

ತುಲಾ

ತುಲಾ

ಇವರು ಸಾಕಷ್ಟು ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ. ಎಲ್ಲಾ ಸಮಯದಲ್ಲೂ ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ. ಇವರ ಕೆಲಸದಲ್ಲಿ ನಿಧಾನಗತಿಯಿದ್ದರೂ ಗುರಿಯು ಪೂರ್ಣಗೊಳ್ಳುವುದು. ಇವರು ಕಠಿಣತೆಯನ್ನೇ ಮೈಗೂಡಿಸಿಕೊಂಡಿರುತ್ತಾರೆ. ಯಾವುದಕ್ಕೂ ರಾಜಿಯಾಗುವುದಿಲ್ಲ. ಎಲ್ಲದರ ಮೇಲೆ ನಿಯಂತ್ರಣ ಸಾಧಿಸುವುದನ್ನು ಇವರು ಬಿಡಬೇಕು. ಸ್ವಲ್ಪ ರಿಲ್ಯಾಕ್ಸ್ ಆಗಿದ್ದಲ್ಲಿ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಲ್ಲದೆ ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತರಾಗುವಂತಹ ವ್ಯಕ್ತಿಗಳಾಗಿರುತ್ತಾರೆ. ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸಗಳೆಂದರೆ ಸಮಾಜ ಸೇವೆ, ಮಾರಾಟ, ಸಂಕಲನ, ಬರಹ ಮತ್ತು ಅಡುಗೆಯಲ್ಲಿ ತೊಡಗಿಕೊಳ್ಳಬಹುದು.

ವೃಶ್ಚಿಕ

ವೃಶ್ಚಿಕ

ಚೇಳಿನ ಚಿಹ್ನೆಯನ್ನು ಹೊಂದಿರುವ ಇವರು ಸಾಕಷ್ಟು ಕೆಸವನ್ನು ಮಾಡುತ್ತಾರೆ. ಆದರೆ ಅದನ್ನು ಬಹಳ ಶ್ರಮ ಪಟ್ಟು ಮಾಡುವ ಗೋಜಿಗೆ ಹೋಗುವುದಿಲ್ಲ. ಆಸೆಯನ್ನು ಹೊಂದಿರುತ್ತಾರೆಯಾದರೂ ನಿಧಾನವಾಗಿ ಕೆಲಸ ನಿರ್ವಹಿಸುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸವೆಂದರೆ ಕಾನೂನು ಸೇವೆ, ಇಂಜಿನಿಯರಿಂಗ್, ವಿಜ್ಞಾನ, ಶಿಕ್ಷಣ ಮತ್ತು ಕಾಮಗಾರಿ.

ಧನು

ಧನು

ಇವರು ಆಲಸ್ಯ ಪ್ರವೃತ್ತಿಯವರು ಎನ್ನಬಹುದು. ಶ್ರಮಪಟ್ಟು ಕೆಲಸಮಾಡುವವರಲ್ಲಿ ಕೊನೆ ಸ್ಥಾನವನ್ನು ಪಡೆದುಕೊಳ್ಳುವರು. ಇವರಿಗೆ ಯಾವುದೇ ಸಂಘಟಿತ ಯೋಜನೆ, ಆಲೋಚನೆ ಇರುವುದಿಲ್ಲ. ಹಾಗೆಯೇ ಮಾಡಬೇಕೆಂದಿದ್ದ ಕೆಲಸವನ್ನು ಮಾಡಿ ಮುಗಿಸುತ್ತಾರೆ ಎನ್ನಬಹುದು. ಧನುರ್ ರಾಶಿ ಇವರು ಜೀವನದಲ್ಲಿ ತುಂಬಾ ಆಶಾವಾದಿಗಳಾಗಿರುತ್ತಾರೆ ಮತ್ತು ನಿಷ್ಕಪಟ ಮನಸ್ಸಿನವರಾಗಿರುತ್ತಾರೆ. ಇವರು ಜೀವನದಲ್ಲಿ ವಾಸ್ತವ ಗುರಿಗಳನ್ನು ಇರಿಸಿಕೊಂಡು ಅದರತ್ತ ಗಮನಹರಿಸುವುದು ಒಳ್ಳೆಯದು. ಇದರಿಂದ ಮುಂದೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದರಿಂದ ಇವರ ಧನಾತ್ಮಕ ಮನೋಭಾವ ಮತ್ತು ಶಕ್ತಿ ಸಹ ಉಳಿತಾಯವಾಗುತ್ತದೆ. ಇನ್ನು ಈ ವ್ಯಕ್ತಿಗಳು ಆಧ್ಯಾತ್ಮಿಕ, ಧನಾತ್ಮಕ ಮತ್ತು ನೈತಿಕತೆಯ ಸ್ವಭಾವ ಹೊಂದಿರುವವರಾಗಿರುತ್ತಾರೆ. ಇವರು ಪ್ರವಾಸ ಪ್ರಿಯರು ಮತ್ತು ಯಾವುದೇ ಹುದ್ದೆಗೆ ಬೇಕಾಗುವಂತಹ ಶಿಕ್ಷಣವನ್ನು ಸಂಪಾದಿಸುವವರು. ಇವರಿಗೆ ಹೊಂದಾಣಿಕೆಯಾಗುವ ಕೆಲಸವೆಂದರೆ ಸಂಕಲನ, ಬರಹ, ಮಾರ್ಕೆಟಿಂಗ್,ಮನೋರಂಜನೆ, ಸೇನೆ ಮತ್ತು ಸಾರ್ವಜನಿಕ ಸಂಪರ್ಕ.

English summary

most hardworking Zodiac Signs, are you one of them?

Hard work is not something you can work around, there is no shortcut to it and one must understand that hard work will always bear sweet fruits. You might fail but every time you will be motivated to move forward. There are three most hardworking signs as per the Zodiac chart. Keep scrolling to know about them and each zodiac sign.
X
Desktop Bottom Promotion