Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಚ್ಚರಿಯಾದರೂ ಇದು ಸತ್ಯ! ಈತನ ಶರೀರ ರಬ್ಬರ್‌ನಂತೆ ತಿರುಗುವುದು!
ಪ್ರತಿಯೊಬ್ಬ ವ್ಯಕ್ತಿಗೂ ಅವನದ್ದೇ ಆದ ವಿಶೇಷ ಪ್ರತಿಭೆ ಇರುತ್ತದೆ. ಹಾಗಾಗಿ ಯಾರನ್ನೂ ನಾವು ಶ್ರೇಷ್ಠ ಅಥವಾ ಕೀಳು ಎಂದು ಪರಿಗಣಿಸಬಾರದು. ಪ್ರತಿಯೊಬ್ಬರು ವಿಶೇಷ ವ್ಯಕ್ತಿಗಳೇ ಆಗಿರುತ್ತಾರೆ. ಹವ್ಯಾಸಗಳು ಮತ್ತು ಪ್ರತಿಭೆಗಳು ವಿಭಿನ್ನವಾಗಿರಬಹುದು ಅಷ್ಟೆ. ಇಂತಹ ವಿಭಿನ್ನ ಪ್ರತಿಭೆಯ ಹುಡುಗನೊಬ್ಬ ನಮ್ಮ ದೇಶದಲ್ಲಿದ್ದಾನೆ. ಅವನನ್ನು "ರಬ್ಬರ್ ಮ್ಯಾನ್" ಎಂದು ಕರೆಯುತ್ತಾರೆ.
ಹೌದು, ಆತನ ಹೆಸರು ಜಸ್‍ಪ್ರೀತ್ ಸಿಂಗ್ ಕಲ್ರಾ. ಈತ ತನ್ನ ದೇಹವನ್ನು ರಬ್ಬರ್ ನಂತೆ ತಿರುಗಿಸುತ್ತಾನೆ. ಅದನ್ನು ನೋಡಿದರೆ ಪ್ರತಿಯೊಬ್ಬರಿಗೂ ಹೀಗೆಲ್ಲಾ ಮಾಡಬಹುದಾ? ಸಾಧ್ಯನಾ? ಎನ್ನುವ ಆಶ್ಚರ್ಯ ಹುಟ್ಟಿಸಬಹುದು. ಈ ಕೌಶಲ್ಯದಿಂದಲೇ ಹುಡುಗ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ. ಈತನ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಚಾರಗಳು ನಿಮ್ಮ ಮುಂದಿದೆ ನೋಡಿ....

ಲುಧಿಯಾನಾದಿಂದ ಬಂದವನು
ಈ ಯುವಕ 15 ವರ್ಷದವನು. ಈತನ ಮೂಲ ಪಂಜಾಬಿನ ಲುಧಿಯಾನ. ವಿವಿಧ ಬಗೆಯ ಭಂಗಿಯಲ್ಲಿ ತನ್ನ ದೇಹವನ್ನು ತಿರುಗಿಸುವುದರಲ್ಲಿ ಪ್ರಸಿದ್ಧನಾಗಿದ್ದಾನೆ. ಹಾಗಾಗಿ ಇವನನ್ನು ಮೃದು ಶರೀರದ ವ್ಯಕ್ತ ಮತ್ತು "ರಬ್ಬರ್ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯುವರು.

ಲಿಮ್ಕಾ ಪುಸ್ತಕದಲ್ಲಿ ನೋಂದಾಯಿಸಿದ್ದಾರೆ
ಈತ ಲಿಮ್ಕಾ ಪುಸ್ತಕದಲ್ಲಿ ತನ್ನ ಹೆಸರನ್ನು "ಮೂಳೆಗಳಿಲ್ಲದ ವ್ಯಕ್ತಿ" ಎಂದು ನೋಂದಾಯಿಸಿದ್ದಾನೆ. ಈಗಾಗಲೇ ಯುನಿಕ್ಯೂ ವಲ್ಡ್ ರೆಕಾಡ್ ಬುಕ್‍ನಲ್ಲಿ "ವಲ್ಡ್ ಯಂಗೆಸ್ಟ್ ಫ್ಲೆಕ್ಸಿಬಲ್ ಬಾಯ್", ಮಿರಾಕಲ್ ವಲ್ಡ್ ರೆಕಾಡ್ ಬುಕ್‍ನಲ್ಲಿ "ರಬ್ಬರ್ ಮ್ಯಾನ್ ಆಫ್ ದಿ ವಲ್ಡ್" ಎಂದು ಕರೆಯಲಾಗಿದೆ.

ಇದು ಹೇಗೆ ಪ್ರಾರಂಭವಾಯಿತು?
ಜಜ್‍ಪ್ರೀತ್ ಹೇಳುವ ಪ್ರಕಾರ " ನನ್ನ ಯೋಗ ಶಿಕ್ಷಕರು ಯೋಗ ಸ್ಪರ್ಧೆಗಾಗಿ ನನ್ನನ್ನು ಆಯ್ಕೆ ಮಾಡಿದರು. ಅದರ ನಂತರ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಅಂತೆಯೇ ಬಹುಮಾನಗಳು ಬಂದವು. ನನ್ನ 11ನೇ ವರ್ಷದಲ್ಲಿರುವಾಗಲೇ ನನ್ನ ಪ್ರತಿಭೆಯ ಕುರಿತು ನನಗೆ ಅರಿವಾಯಿತು ಎಂದರು.

ಇದನ್ನೆಲ್ಲಾ ಮಾಡಬಲ್ಲನು
ಈತ ತನ್ನ ದೇಹವನ್ನು ವಿವಿಧ ಭಂಗಿಯಲ್ಲಿ ತಿರುಗಿಸುತ್ತಾನೆ. ತನ್ನ ಕೈಗಳನ್ನು 360 ಡಿಗ್ರಿಯಲ್ಲಿ ತಿರುಗಿಸುತ್ತಾನೆ. ತನ್ನ ಭುಜಗಳನ್ನು ಹಿಮ್ಮುಖವಾಗಿ ತಿರುಗಿಸಬಲ್ಲನು. ಒಟ್ಟಿನಲ್ಲಿ ದೇಹದ ಪ್ರತಿಯೊಂದು ಭಾಗವನ್ನು ಮೂಳೆರಹಿತವಾಗಿರುವಂತೆ ತಿರುಗಿಸುವನು.

ವೈದ್ಯರಿಗೆಯೇ ಅಚ್ಚರಿ...
ವಿಚಿತ್ರ ಶೈಲಿಯಲ್ಲಿ ದೇಹವನ್ನು ಬಗ್ಗಿಸುವುದನ್ನು ಕಂಡ ವೈದ್ಯರು ಅಚ್ಚರಿ ಪಟ್ಟಿದ್ದಾರೆ. ಅಂತೆಯೇ ಕೆಲವು ತಪಾಸಣೆಗಳನ್ನು ನಡೆಸಿದ್ದಾರೆ. ದೇಹದ ಎಲ್ಲಾ ಭಾಗವೂ ಆರೋಗ್ಯಕರವಾಗಿ ಮತ್ತು ಸೂಕ್ತ ರೀತಿಯಲ್ಲಿಯೇ ಇದೆ ಎಂದು ಹೇಳಿದ್ದಾರೆ. ವಿಭಿನ್ನ ಅಭ್ಯಾಸ ಬಲದಿಂದ ಹುಡುಗ ದೇಹದ ಭಾಗವನ್ನು ತಿರುಗಿಸುತ್ತಾನೆ ಎಂದು ಹೇಳಿದ್ದಾರೆ.



Click it and Unblock the Notifications
