ಅದೃಷ್ಟ ತರುವ ವಸ್ತುಗಳಿವು, ಸದಾ ನಿಮ್ಮ ಬಳಿಯೇ ಇಟ್ಟುಕೊಳ್ಳಿ

By: Divya
Subscribe to Boldsky

ಕೆಲವೊಮ್ಮೆ ನಮ್ಮ ಜೀವನದಲ್ಲಿ ಪದೇ-ಪದೇ ಬರುವ ಕಷ್ಟಗಳು ಬೇಸರ ಹಾಗೂ ದುಃಖವನ್ನು ಉಂಟುಮಾಡುತ್ತದೆ. ಇನ್ನು ಕೆಲವೊಮ್ಮೆ ಸಂತೋಷದ ಕ್ಷಣಗಳು ಸಾಲಲ್ಲಿ ನಿಂತು ನಮ್ಮನ್ನು ಸ್ವಾಗತಿಸುವಾಗ ಸಂತೋಷವಾಗುತ್ತದೆ. ಈ ರೀತಿಯ ಪರಿಸ್ಥಿತಿಗಳು ಎದುರಾದಾಗ ನಮ್ಮ ಮನಸ್ಸಲ್ಲಿ ಮೂಡುವ ಪ್ರಶ್ನೆ ಇದಕ್ಕೆ ಕಾರಣವೇನು? ಹೊಣೆಯಾರು? ಎನ್ನುವುದು. ಉತ್ತರ ಸಿಗದಿದ್ದಾಗ ಸುಮ್ಮಾಗುವುದು. ಜೊತೆಗೆ ಮನಸ್ಸಿನಲ್ಲೇ ದೇವರಿಗೊಂದು ಧನ್ಯವಾದಹೇಳುವುದು.  ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

ನಮಗೆ ಉಂಟಾಗುವ ಒಳಿತು ಹಾಗೂ ಕೆಟ್ಟದ್ದಕ್ಕೆ ನಮ್ಮ ಸುತ್ತಲಿರುವ ಕೆಲವು ವಸ್ತುಗಳೇ ಕಾರಣ ಎನ್ನಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಕೆಲವು ಮೂಲಗಳು ನಿಲ್ಲುವುದು ಆಶ್ಚರ್ಯ. ಇದಕ್ಕೆ ಕೆಲವು ತರ್ಕಗಳು ಇರಬಹುದು. ಆದರೆ ಇದು ನಿಜ ಎನ್ನಲಾಗುತ್ತದೆ. ಹೌದು, ನಮ್ಮ ಸುತ್ತಲು ಅಥವಾ ನಮ್ಮ ಮನೆಯ ಹತ್ತಿರ ಕೆಲವು ಧನಾತ್ಮಕ ಶಕ್ತಿಯನ್ನು ನೀಡುವ ವಸ್ತುಗಳಿದ್ದರೆ ನಮ್ಮ ಅದೃಷ್ಟವೇ ಬದಲಾಗುತ್ತದೆ. ಅದೃಷ್ಟ ತರುವ ಗಿಡಗಳಿವು! ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ

ಧನಾತ್ಮಕ ಶಕ್ತಿಯನ್ನು ನೀಡಬಲ್ಲ ಈ ವಸ್ತುಗಳು ನಿಮ್ಮ ಹತ್ತಿರ ಇದೆಯೇ ಎಂಬುದನ್ನು ನೋಡಿ. ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಿ. ಹಾಗಾದರೆ ಅದ್ಯಾವ ವಸ್ತು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಈ ಮುಂದೆ ಇರುವ ವಿವರವನ್ನು ನೋಡಿ... 

ದುಷ್ಟ ಶಕ್ತಿಯ ಕಣ್ಣು

ದುಷ್ಟ ಶಕ್ತಿಯ ಕಣ್ಣು

ಒಂದು ಪುರಾತನ ನಂಬಿಕೆಯ ಪ್ರಕಾರ ಯಾವಾಗಲು ದುಷ್ಟ ಶಕ್ತಿಯ ಕಣ್ಣು ಸದಾ ನಮ್ಮ ಸುತ್ತಲು ಇರುತ್ತದೆ. ಇದರಿಂದ ನಮ್ಮಲ್ಲಿರುವ ದುಡ್ಡು, ಹಾಗೂ ಕೈಚೀಲವನ್ನು ಕಳೆದುಕೊಳ್ಳಬಹುದು. ಒಮ್ಮೆ ದುಷ್ಟ ಕಣ್ಣಿನ ಚಿತ್ರವನ್ನು ನಮ್ಮ ಬಳಿ ಇಟ್ಟುಕೊಂಡರೆ ಬೇರೆ ದುಷ್ಟ ಶಕ್ತಿ ನಮ್ಮ ಬಳಿ ಸುಳಿಯದು ಎಂದೂ ಸಹ ಹೇಳಲಾಗುತ್ತದೆ.

ತ್ರಿಕೋನದ ಶಕ್ತಿ

ತ್ರಿಕೋನದ ಶಕ್ತಿ

ಮೂರು ಭುಜಗಳನ್ನು ಹೊಂದಿರುವ ಈ ತ್ರಿಕೋನವು ಅತೀಂದ್ರೀಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ದೇವರು ಮತ್ತು ಮನುಷ್ಯರ ನಡುವಿನ ಸಾಮರಸ್ಯವನ್ನು ಬಿಂಬಿಸುತ್ತದೆ. ಈ ಸಂಕೇತ ಜೀವನದ ಚಕ್ರವನ್ನು ಪ್ರತಿನಿಧಿಸುತ್ತದೆ ಎನ್ನಲಾಗುತ್ತದೆ.

ಅಶ್ವತ್ಥ ಎಲೆ ಅದೃಷ್ಟ

ಅಶ್ವತ್ಥ ಎಲೆ ಅದೃಷ್ಟ

ಕೆಲವು ಪುರಾತನ ನಂಬಿಕೆಯ ಪ್ರಕಾರ ಅಶ್ವತ್ಥ ಎಲೆಯು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ. ಪರ್ಸ್‍ಗಳಲ್ಲಿ, ಕೈಚೀಲದಲ್ಲಿ ಈ ಎಲೆಯನ್ನು ಇಟ್ಟುಕೊಂಡರೆ ಸಕಾರಾತ್ಮ ಶಕ್ತಿ ದೊರೆಯತ್ತದೆ. ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುವಾಗ ಅಥವಾ ಶುಭ ಕೆಲಸಗಳಿಗೆ ತೆರಳುವಾಗ ಈ ಎಲೆ ನಿಮ್ಮ ಬಳಿ ಇದ್ದರೆ ಕೆಲಸ ಸುಗಮವಾಗುತ್ತದೆ. ಇದನ್ನು ಸ್ವಚ್ಛವಾಗಿ, ಜೋಪಾನದಲ್ಲಿ ಇಟ್ಟುಕೊಂಡಿರಬೇಕು.

ಹಾಥ್ ಜೋಡಿ

ಹಾಥ್ ಜೋಡಿ

ಹೆಸರು ಸ್ವಲ್ಪ ವಿಚಿತ್ರ ಎನಿಸಿದರೂ ಇದು ನಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ. ಇದೊಂದು ಜಾತಿಯ ಸಸ್ಯದ ಬೇರು. ಇದು ಮನುಷ್ಯನ ಎರಡು ಕೈ ಬೆರಳಿನ ಆಕೃತಿಯಲ್ಲಿ ಇರುತ್ತದೆ.ಇದನ್ನು ನಮ್ಮ ಬಳಿ ಇಟ್ಟುಕೊಂಡರೆ ಅದೃಷ್ಟವು ಸದಾ ನಮ್ಮ ಪಾಲಾಗಿರುತ್ತದೆ. ಜೊತೆಗೆ ಹೆಚ್ಚಿನ ಜನರು ನಮ್ಮೆಡೆಗೆ ಆಕರ್ಷಿತರಾಗಿರುತ್ತಾರೆ.

ನವಿಲು ಗರಿ

ನವಿಲು ಗರಿ

ಒಂದು ನವಿಲು ಗರಿಯನ್ನು ಹಳದಿ ಅಥವಾ ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಕೊಂಡೊಯ್ದರೆ ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ನಿನಗದಿತ ದಿನಾಂಕದಲ್ಲಿ ನಮ್ಮ ಪರ್ಸ್‍ನಲ್ಲಿ ಇಟ್ಟುಕೊಂಡರೆ ಅದೃಷ್ಟವು ಕೆಲವೇ ದಿನದಲ್ಲಿ ಸಾಬೀತಗುತ್ತದೆ.

ಬಿಳಿಕಲ್ಲು

ಬಿಳಿಕಲ್ಲು

ಕೆಲವು ಸನ್ನಿವೇಗಳಿಗೆ ಅಥವಾ ಪರಿಸ್ಥಿತಿಗೆ ಒಳಗಾಗಿ ಆತಂಕ ಹಾಗೂ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ನಮ್ಮ ಕೈಚೀಲ ಅಥವಾ ಪರ್ಸ್‍ನಲ್ಲಿ ಸಣ್ಣ ಬಿಳಿಕಲ್ಲನ್ನು ಇಟ್ಟುಕೊಂಡಿದ್ದರೆ ನಕಾರಾತ್ಮಕ ಶಕ್ತಿ ದೂರವಾಗಿ ಸಂತೋಷ ಹಾಗೂ ಸಕಾರಾತ್ಮಕ ಗುಣಗಳು ನಮಗೆ ಸಹಾಯಮಾಡುತ್ತದೆ.

ಕೆಲವು ಪ್ರಮುಖ ನಾಣ್ಯ

ಕೆಲವು ಪ್ರಮುಖ ನಾಣ್ಯ

ಕೆಲವರು ತಮ್ಮ ಪರ್ಸ್‍ಗಳಲ್ಲಿ ಹಳೆಯ ನಾಣ್ಯಗಳು ಅಥವಾ ಅಪರೂಪದ ನಾಣ್ಯಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವು ಪ್ರಮುಖ ನಾಣ್ಯಗಳನ್ನು ಪರ್ಸ್ ಹಾಗೂ ಲಾಕರ್‍ಗಳಲ್ಲಿ ಇಡುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.

ಕುದುರೆ ಲಾಳ

ಕುದುರೆ ಲಾಳ

ಕುದುರೆಯನ್ನು ಕರೆಲಾಳವನ್ನು ಕೊಂಡೊಯ್ಯುವುದು ಒಂದು ಲಾಭದ ಸಂಕೇತ ಎನ್ನುವುದು ಕೆಲವರಿಗೆ ತಿಳಿದಿಲ್ಲ. ಮನೆ ಬಾಗಿಲಿಗೆ ಕುದುರೆ ಲಾಳವನ್ನು ಇಡುವುದು ಕುದುರೆ ಮುಖವನ್ನು ಜೋಡಿಸುವುದು, ಕೀ ಚೈನಲ್ಲಿ ಕುದುರೆ ಚಿತ್ರವನ್ನು ಕೊಂಡೊಯ್ಯುವುದು ಶುಭವನ್ನು ತರುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

4-ಕ್ಲೈವ್ಡ್ ಲೀಫ್

4-ಕ್ಲೈವ್ಡ್ ಲೀಫ್

ನಾಲ್ಕು ಎಲೆಯನ್ನು ಹೊಂದಿರುವ ಈ ಗಿಡವನ್ನು ಮನೆಯ ಹತ್ತಿರ ಬೆಳೆಸುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಇದನ್ನು ನಮ್ಮ ಬಳಿಯಲ್ಲಿ ಇಟ್ಟುಕೊಂಡರೆ ಅದೃಷ್ಟ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ.

ಸುಗಂಧದ ಬಳಕೆ

ಸುಗಂಧದ ಬಳಕೆ

ನಾವು ಬಳಸುವ ಸುಗಂಧವನ್ನು ಸರಿಯಾದ ಕ್ರಮದಲ್ಲಿ ದೇಹದ ಭಾಗಕ್ಕೆ ಹಚ್ಚಿಕೊಳ್ಳಬೇಕು. ಹೊಕ್ಕುಳಲ್ಲಿ ಸುಗಂಧವನ್ನು ಹಚ್ಚಿಕೊಂಡರೆ ನಕಾರಾತ್ಮ ಶಕ್ತಿಯನ್ನು ಓಡಿಸಬಹುದು ಎಂದು ಹೇಳಲಾಗುತ್ತದೆ.

English summary

Lucky Charms That Are A Must Have

Check out on these things that increase a person's luck and their good fortune. These good-luck symbols, or lucky charms, are available in various shapes and sizes; and they are often associated with legends and mythological stories, proving their worth.
Subscribe Newsletter