ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

By Super

ಈ ಜಗತ್ತಿನಲ್ಲಿ ಒಬ್ಬರು ಇರುವಂತೆ ಇನ್ನೊಬ್ಬರು ಇರುವುದಿಲ್ಲ. ಪ್ರತಿಯೊಬ್ಬರಲ್ಲೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಈ ವಿಶೇಷತೆಯೇ ಅವರ ಸಾಮರ್ಥ್ಯವಾಗಿರುತ್ತದೆ. ಆದರೆ ಯಾವಾಗ ಈ ಸಾಮರ್ಥ್ಯ ತನ್ನದು ಎಂದು ಅರ್ಥವಾಯಿತೋ ಆಗ ಜೀವನ ಸುಂದರವಾಗುತ್ತದೆ ಹಾಗೂ ಜೀವನದಲ್ಲಿ ಬಹಳಷ್ಟನ್ನು ಸಾಧಿಸಲು ನೆರವಾಗುತ್ತದೆ. ಜಾತಕದ ಅನುಗುಣವಾಗಿರುವ ನಿಮ್ಮ ಹೆಸರು ಅದೃಷ್ಟಶಾಲಿಯೇ?

ಪ್ರತಿ ಯಶಸ್ಸಿನ ಹಿಂದೆ ಹಲವಾರು ತೊಡಕುಗಳಿರುತ್ತವೆ. ಆದರೆ ಸತತ ಶ್ರಮ ಮತ್ತು ಸಾಧನೆ ಈ ತೊಡಕುಗಳನ್ನು ಎದುರಿಸಿ ಮುಂದುವರೆಯಲು ಸಾಧ್ಯವಾಗಿಸುತ್ತದೆ. ಇದಕ್ಕೆ ಹಲವಾರು ಪರಿಸ್ಥಿತಿ, ವ್ಯಕ್ತಿಗಳು, ಪರಿಸರ, ಸಂದರ್ಭಗಳು ಪೂರಕವಾಗಿರಬೇಕು. ಇವನ್ನು ತಾಳೆಹಾಕಿ ಪ್ರತಿ ಗ್ರಹಗತಿಯ ವ್ಯಕ್ತಿಗಳಿಗೆ ಯಾವ ಗುಣಗಳು ಸೂಕ್ತ ಎಂಬ ವಿವರವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ: ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?

ಮೇಷ

ಮೇಷ

ಈ ರಾಶಿಯವರು ಜೀವನವನ್ನು ಸದಾ ಧನಾತ್ಮಕರೂಪದಲ್ಲಿ ಕಾಣುತ್ತಾರೆ ಹಾಗೂ ಸದಾ ಜೀವನದಲ್ಲಿ ಆಶಾವಾದಿಗಳಾಗಿರುತ್ತಾರೆ. ಇವರು ಹೆಚ್ಚಾಗಿ ಸ್ವಂತ ವ್ಯಕ್ತಿತ್ವವುಳ್ಳವರಾಗಿದ್ದು ಯಾವುದೇ ಹಂಗಿನಲ್ಲಿ ಇರಲು ಇಚ್ಛಿಸುವುದಿಲ್ಲ. ನಿಮಗೆ ಅದೃಷ್ಟ ತರುವ ಗುಣವೆಂದರೆ ಪ್ರಯಾಣ! ಪ್ರತಿಸಲವೂ ಯಾವುದಾದರೂ ಹೊಸ ಸ್ಥಳಕ್ಕೆ ಪ್ರಯಾಣಿಸಿದಾಗಲೂ ಅಲ್ಲಿಂದ ಏನಾದರೊಂದು ಹೊಸತನ್ನು ಕಲಿಯುವುದು ನಿಮ್ಮ ಜಾಯಾಮಾನವಾಗಿದೆ. ಸುತ್ತಮುತ್ತಲಿನವರಲ್ಲಿನ ಉತ್ತಮ ಗುಣಗಳನ್ನೇ ಕಾಣುವ ನೀವು ಎಲ್ಲರ ಮೆಚ್ಚುಗೆಯ ವ್ಯಕ್ತಿಯಾಗುತ್ತೀರಿ.

ವೃಷಭ

ವೃಷಭ

ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ. ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಪುಸ್ತಕ. ಪ್ರತಿಬಾರಿ ನೀವು ಒಂದು ಪುಸ್ತಕವನ್ನು ಓದಿದಾಗ ಅದರಿಂದ ನಿಮಗೆ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ.

ಮಿಥುನ

ಮಿಥುನ

ಈ ರಾಶಿಯ ಜನರು ಸದಾ ಚಟುವಟಿಕೆಯುಳ್ಳವರಾಗಿದ್ದು ಸ್ನೇಹಪರ ಮತ್ತು ತಮಾಷೆಯ ವ್ಯಕ್ತಿತ್ವದವರಾಗಿದ್ದಾರೆ. ಇವರ ಕಲ್ಪನೆ ವಿಪರೀತ ತೂಪ ಪಡೆದು ಇದಕ್ಕೆ ವಿಚಿತ್ರವಾದ ಉತ್ತರವನ್ನೂ ಪಡೆಯುವಲ್ಲಿ ಸಫಲಾರಾಗುತ್ತಾರೆ. ಈ ರಾಶಿಯ ಜನರಿಗೆ ಅದೃಷ್ಟ ತರುವ ಗುಣವೆಂದರೆ ಅವರ ಕುಟುಂಬ. ಪ್ರತಿ ಬಾರಿ ವಿಚಿತ್ರ ಕಲ್ಪನೆಯ ಕಾರಣ ಅಸಂಭವವನ್ನು ಸಾಧಿಸಲು ಹೋಗಿ ತೊಂದರೆಗೆ ಒಳಗಾದಾಗ ನಿಮ್ಮ ಕುಟುಂಬವೇ ನಿಮ್ಮನ್ನು ರಕ್ಷಿಸುತ್ತದೆ.

ಕಟಕ ಅಥವಾ ಕರ್ಕಾಟಕ

ಕಟಕ ಅಥವಾ ಕರ್ಕಾಟಕ

ಈ ರಾಶಿಯ ಜನರು ನಿಷ್ಠಾವಂತರು ಹಾಗೂ ನಂಬಿಕೆಗೆ ಅರ್ಹರಾದ ಜನರಾಗಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮನ್ನು ನಂಬಿದವರನ್ನು ಕೈಬಿಡದ ಗುಣ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ತಳೆಯಲು ಸಾಧ್ಯವಾಗುತ್ತದೆ. ಆದರೆ ನೀವು ಸೂಕ್ಷ್ಮಸ್ವಭಾವದವರೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸಾಕುಪ್ರಾಣಿ. ಇದು ನಿಮಗೆ ನಿಷ್ಠೆಯಿಂದಿದ್ದು ಸದಾ ನಿಮ್ಮ ಬೆಂಗಾವಲಿಗಿರುತ್ತದೆ. ಈ ಪ್ರಾಣಿಗಳ ಸಾಂಗತ್ಯದಲ್ಲಿ ನೀವು ಸುಖ, ನೆಮ್ಮದಿಯನ್ನು ಪಡೆಯುತ್ತೀರಿ.

ಸಿಂಹ

ಸಿಂಹ

ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ವಿಶೇಷವಾಗಿ ನಿಮ್ಮ ಜೀವನಸಂಗಾತಿ ಅಥವಾ ಪ್ರಾಣಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇವರ ಸಾಂಗತ್ಯದಲ್ಲಿ ನೀವು ಹೆಚ್ಚಿನ ಸಂತೋಷ ಮತ್ತು ನೆಮ್ಮದಿ ಪಡೆಯುತ್ತೀರಿ.

ಕನ್ಯಾ

ಕನ್ಯಾ

ಈ ರಾಶಿಯ ಜನರು ಇತರರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ನೀವು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಗುಣವೇ ಕಾರಣ. ನೀವು ಸಾಮಾನ್ಯವಾಗಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸುಳ್ಳವರಾಗಿದ್ದು ವ್ಯವಹಾರಿಕ ಅಥವಾ ಕಾರ್ಯರೂಪದ ಕೆಲಸಗಳನ್ನೇ ಹಮ್ಮಿಕೊಳ್ಳುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಒಂಟಿತನ. ಒಂಟಿಯಾಗಿದ್ದಾಗ ನೀವು ನಡೆಸುವ ಚಿಂತನೆ ಮತ್ತು ವಿಮರ್ಶೆಗಳ ಪರಿಣಾಮವಾಗಿ ನಿಮ್ಮಲ್ಲಿ ಬಹಳವಾದ ಸಂಗತಿಗಳು ಹೊಮ್ಮುತ್ತವೆ. ಯಾರೇ ಎಷ್ಟೇ ಸಲಹೆಗಳನ್ನು ನೀಡಿದರೂ ನೀವು ಒಂಟಿಯಾಗಿದ್ದಾಗ ತಳೆದ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ.

ತುಲಾ

ತುಲಾ

ಈ ರಾಶಿಯ ಜನರು ಶಾಂತಿಪ್ರಿಯರಾಗಿದ್ದು ಆದರ್ಶವಾದಿಗಳಾಗಿರುತ್ತಾರೆ. ನಿಮ್ಮ ಸುತ್ತಮುತ್ತ ಶಾಂತಿ ಮತ್ತು ಸೌಹಾರ್ದತೆ ಪಡೆಯಲು ಸದಾ ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ಹೂವುಗಳು. ನಿಮ್ಮ ಸುತಮುತ್ತ ಹೂವುಗಳಿರುವಂತೆ ಮತ್ತ ಸದಾ ನಗುನಗುತಾ ಇರುವಂತೆ ನೋಡಿಕೊಳ್ಳುತ್ತೀರಿ. ಅಂತೆಯೇ ಸದಾ ಹಸನ್ಮುಖಿಯಾಗಿರಲು ಹೂವುಗಳ ನಡುವೆಯೇ ಇರಲು ಇಚ್ಛಿಸುತ್ತೀರಿ.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ಜನರು ಕ್ರಿಯಾತ್ಮಕರಾಗಿದ್ದು ತಾವಂದುಕೊಂಡಿದ್ದನ್ನೇ ಸಾಧಿಸುವ ಛಲವುಳ್ಳವರಾಗಿರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ವಂತಿಕೆ. ನಿಮ್ಮ ಸ್ವಂತಿಕೆಯ ಮೇರೆಯಂತೆಯೇ ನಡೆಯುವ ನಿಮಗೆ ಬೇರೆಯವರಿಂದ ಎರವಲು ಪಡೆದ ಯಾವುದೇ ಕ್ರಮ ಇಷ್ಟವಾಗುವುದಿಲ್ಲ.

ಧನಸ್ಸು

ಧನಸ್ಸು

ಈ ರಾಶಿಯ ಜನರು ಸದಾ ಧನಾತ್ಮಕ ಚಿಂತನೆ ನಡೆಸುವವರಾಗಿದ್ದು ಜೀವನದ ಚಿಕ್ಕ ಪುಟ್ಟ ತೊಂದರೆಗಳಿಗೆ ಇವರು ಕಿಂಚಿತ್ತೂ ಚಿಂತಿಸುವುದಿಲ್ಲ. ಯಾವುದೇ ಪರಿಸ್ಥಿತಿಗೆ ಒಳಗಾದರೂ ಇದರಿಂದ ಹೊರಬರಲು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಬಾಲ್ಯದ ಗೆಳೆಯರು. ನಿಮ್ಮ ಬಾಲ್ಯದ ಗೆಳೆತನವನ್ನು ಇಡಿಯ ಜೀವಮಾನ ಕಾಪಾಡುವ ನಿಮಗೆ ಬಾಲ್ಯದ ನೆನಪುಗಳು ಅತಿಹೆಚ್ಚಿನ ಸಂತೋಷ ನೀಡುತ್ತದೆ.

ಮಕರ

ಮಕರ

ಈ ರಾಶಿಯ ಜನರು ವ್ಯವಹಾರ ಕುಶಲರಾಗಿದ್ದು ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕು ಎಂದು ಗೊತ್ತಿರುವ ಜನರಾಗಿದ್ದಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಿನೇಮಾ ವೀಕ್ಷಣೆ. ಸಿನೇಮಾ ಅಥವಾ ನೆಚ್ಚಿನ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಮುಳುಗುವ ನೀವು ಆ ಲೋಕದಲ್ಲಿಯೇ ಮುಳುಗಿಬಿಡುತ್ತೀರಿ. ಜೀವನದಲ್ಲಿ ಯಾವಾಗ ತೊಂದರೆ ಕಾಡಿತೋ ಆಗೆಲ್ಲಾ ಈ ಸಿನೆಮಾದಲ್ಲಿ ಎದುರಾದ ಸನ್ನಿವೇಶದಲ್ಲಿ ನಾಯಕ ಅನುಸರಿಸಿದ ನೀತಿಯನ್ನೇ ಅನುಸರಿಸಿ ಈ ತೊಂದರೆಯಿಂದ ಬಿಡುಗಡೆ ಪಡೆಯಲು ಯತ್ನಿಸುತ್ತೀರಿ.

ಕುಂಭ

ಕುಂಭ

ಈ ರಾಶಿಯ ವ್ಯಕ್ತಿಗಳು ಮಾನವತಾವಾದಿಗಳಾಗಿದ್ದು ಸುತ್ತಮುತ್ತಲ ಜನರಲ್ಲಿ ನೋವು ಕಾಣಲು ಇಷ್ಟಪಡುವುದಿಲ್ಲ. ಇವರ ಕಷ್ಟಗಳಿಗೆ ಸ್ಪಂದಿಸುವ ನೀವು ಸದಾ ನಿಮ್ಮ ಕೈಲಾದ ಸಹಾಯವನ್ನು ಮಾಡಲು ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನೀರು. ನಿಮ್ಮ ಸುತ್ತ ಮುತ್ತ ನೀರು ಇದ್ದಾಗ ನೀವು ಸದಾ ಶಾಂತರಾಗಿ ಉದ್ವೇಗರಹಿತರಾಗಿರುತ್ತೀರಿ.

ಮೀನ

ಮೀನ

ಈ ರಾಶಿಯ ಜನರು ಸಹಾನುಭೂತಿ ತೋರುವ ವ್ಯಕ್ತಿಗಳಾಗಿದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸಮಯ ವಿನಿಯೋಗಿಸುವುದರಲ್ಲಿಯೇ ಪರಿಪೂರ್ಣತೆಯನ್ನು ಅನುಭವಿಸುತ್ತಾರೆ. ಜನರನ್ನು ಅವರಿದ್ದ ಹಾಗೇ ಸ್ವೀಕರಿಸುವ ನಿಮ್ಮ ಪರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಂಗೀತ. ನಿಮ್ಮ ಮನೋಭಾವವನ್ನು ಉತ್ತಮಗೊಳಿಸಲು ಸಂಗೀತ ನಡೆಯುತ್ತಿದ್ದರೆ ಸಾಕಾಗುತ್ತದೆ. ಸಂಗೀತದ ಅಲೆ ಸುತ್ತ ತೇಲುತ್ತಿರುವಾಗ ನಿಮಗೆ ಹೊಸ ವಿಷಯಗಳು ಹೊಳೆಯುತ್ತವೆ ಹಾಗೂ ಹೆಚ್ಚು ಕ್ರಿಯಾತ್ಮಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

X
Desktop Bottom Promotion