ವಕೀಲೆಗೆ ನೆರೆಮನೆಯವರಿಂದ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್

By: manu
Subscribe to Boldsky

ಭ್ರಷ್ಟಾಚಾರ, ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರ ಭಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಇದೆ. ಆದರೆ ಸರಕಾರಿ ಜಾಗವನ್ನು ಅಕ್ರಮಿಸಿಕೊಂಡು ತಮ್ಮ ಹೆಸರಿಗೆ ಮಾಡಿಕೊಂಡಿರುವವರ ಬಗ್ಗೆ ಸರಕಾರ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ ಅತಿಕ್ರಮಣವೆನ್ನುವುದು ಸಾಮಾನ್ಯವಾಗಿದೆ. ಹಳ್ಳಿಯಿಂದ ಹಿಡಿದು ನಗರ ಪ್ರದೇಶಗಳ ತನಕ ಅತಿಕ್ರಮಣ ನಡೆಯುತ್ತಲೇ ಇದೆ. ಬೆಂಗಳೂರಿನಲ್ಲಂತೂ ಕೆರೆಗಳನ್ನೇ ನುಂಗಿ ನೀರು ಕುಡಿದಿದ್ದಾರೆ.

ಇಂತಹ ಅಕ್ರಮಣದ ಬಗ್ಗೆ ಮಾತನಾಡಲು ಹೋದರೆ ಅವರಿಗೆ ಉಳಿಗಾಲವಿಲ್ಲ. ಯಾಕೆಂದರೆ ಅಕ್ರಮಣವೆನ್ನುವುದು ಭಾರೀ ದೊಡ್ಡ ದಂಧೆ. ಇಂತಹ ಅತಿಕ್ರಮಣದ ವಿರುದ್ಧ ಮಾತನಾಡಲು ಹೋದ ದೆಹಲಿಯ ಮಹಿಳೆ ವಕೀಲೆಯೊಬ್ಬರನ್ನು ನೆರೆಮನೆಯವರು ಸರಿಯಾಗಿ ಥಳಿಸಿದ ಘಟನೆ ನಡೆದಿದೆ. ದೆಹಲಿಯ ಅಂಜು ದೇವಿ ಎಂಬವರು ತನ್ನ ಪ್ರದೇಶದಲ್ಲಿದ್ದ ಸರಕಾರಿ ಜಾಗವನ್ನು ಕಬಳಿಸಿಕೊಂಡಿರುವ ವಿರುದ್ಧ ಕೇಸು ದಾಖಲಿಸಿದ್ದರು. ವಕೀಲೆಯಾಗಿರುವ ಅಂಜು ದೇವಿಗೆ ಅತಿಕ್ರಮಣ ಮಾಡಿಕೊಂಡಿರುವವರ ಏನು ಮಾಡಿದರು ಎಂದು ತಿಳಿಯಲು ಮುಂದೆ ಓದಿ.....

ಕೇಸು ದಾಖಲಿಸಿದ ಅಂಜು ದೇವಿ....

ಕೇಸು ದಾಖಲಿಸಿದ ಅಂಜು ದೇವಿ....

ತನ್ನ ನೆರೆಯಲ್ಲಿರುವ ಸರಕಾರಿ ಜಾಗದ ಅತಿಕ್ರಮಣ ಮಾಡಿರುವ ವಿರುದ್ಧ ಅಂಜು ದೇವಿ ಇತ್ತೀಚೆಗೆ ಕೇಸು ದಾಖಲಿಸಿದ್ದರು. ಅತಿಕ್ರಮಣ ಮಾಡಿರುವ ಸ್ಥಳವನ್ನು ತೆರವುಗೊಳಿಸಬೇಕೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು.

ನೆರೆಮನೆಯವರ ಮೆಟ್ಟಿಲು ಧ್ವಂಸ ಮಾಡಲಾಯಿತು

ನೆರೆಮನೆಯವರ ಮೆಟ್ಟಿಲು ಧ್ವಂಸ ಮಾಡಲಾಯಿತು

ಅತಿಕ್ರಮಣ ಮಾಡಿರುವಂತಹ ಜಾಗದಲ್ಲಿ ಕಟ್ಟಿರುವುದನ್ನು ಧ್ವಂಸ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಇದು ನೆರೆಮನೆಯವರನ್ನು ತುಂಬಾ ಕೆರಳಿಸಿತ್ತು ಮತ್ತು ವಕೀಲೆ ವಿರುದ್ಧ ಜಗಳಕ್ಕೆ ಬಿದ್ದರು. ನೆರೆಮನೆಯ ಮಹಿಳೆಗೆ ಆಕೆಯ ಮಗಳು ಕೂಡ ಬೆಂಬಲ ನೀಡಿದಳು.

ತಾಯಿ-ಮಗಳು ವಕೀಲೆಗೆ ಹಲ್ಲೆ ನಡೆಸಿದರು

ತಾಯಿ-ಮಗಳು ವಕೀಲೆಗೆ ಹಲ್ಲೆ ನಡೆಸಿದರು

ಈ ವಿಡಿಯೋದಲ್ಲಿ ನೆರೆಮನೆಯ ಮಹಿಳೆಯು ವಕೀಲೆಗೆ ಯಾವ ರೀತಿಯಿಂದ ಹಲ್ಲೆ ಮಾಡುತ್ತಿದ್ದಾರೆಂದು ತಿಳಿಯುತ್ತದೆ. ವಕೀಲೆಯ ಉಸಿರುಗಟ್ಟಿಸಿ ಆಕೆ ಪ್ರಜ್ಞೆ ಕಳೆದುಕೊಳ್ಳುವ ತನಕ ಹೊಡೆಯುತ್ತಾರೆ.

?rel=0&wmode=transparent" frameborder="0">

ವಿಡಿಯೋ ನೋಡಿ...

ವಿಡಿಯೋದಲ್ಲಿ ಇದು ಹೇಗೆ ಆರಂಭವಾಯಿತೆಂದು ತಿಳಿಯುತ್ತದೆ. ವಕೀಲೆಯು ಇದರ ಬಗ್ಗೆ ವಿವರ ನೀಡುತ್ತಿರಬೇಕಾದರೆ ನೆರೆಮನೆಯ ಮಹಿಳೆಯು ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾಳೆ. ವಕೀಲೆಯ ಮೇಲೆ ಹಿಂದಿನಿಂದ ದಾಳಿ ಮಾಡಿದ ಮಹಿಳೆ ಆಕೆಗೆ ಚೆನ್ನಾಗಿ ಥಳಿಸುತ್ತಾಳೆ.

?rel=0&wmode=transparent" frameborder="0">

ಇನ್ನೊಂದು ವಿಡಿಯೋ ಹೀಗಿದೆ ನೋಡಿ..

ತಾಯಿ ಮಗಳು ವಕೀಲೆಗೆ ಹಿಗ್ಗಾಮುಗ್ಗಾ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ವಕೀಲೆಯ ಸೀರೆ ಜಾರಿದರೂ ಇದರ ಬಗ್ಗೆ ಚಿಂತೆ ಮಾಡಲು ತಾಯಿ ಮಗಳು ಚೆನ್ನಾಗಿ ಹೊಡೆಯುತ್ತಾರೆ. ಹೊಡೆತ ತಿಂದು ಬಲಹೀನಳಾದ ವಕೀಲೆ ಅಲ್ಲೇ ಕುಸಿಯುತ್ತಾಳೆ. ಅಕ್ರಮ ದಂಧೆಕೋರರು ಕಾನೂನನ್ನು ಕೈಗೆತ್ತಿಕೊಂಡು ಯಾವ ರೀತಿ ವರ್ತಿಸಬಲ್ಲರು ಎನ್ನುವುದು ಈ ವೀಡಿಯೋ ಸಾಕ್ಷಿಯಾಗಿದೆ.

?rel=0&wmode=transparent" frameborder="0">

ನ್ಯಾಯ ಸಿಗಲು ಸಾಧ್ಯವೇ?

ವಕೀಲೆಯ ಮಗನು ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ. ಆತ ತನ್ನ ತಾಯಿಯನ್ನು ರಕ್ಷಿಸಲು ಹೋಗಿದ್ದರೆ ಮಹಿಳೆಯರು ಆತನ ಮೇಲೆಯೂ ದಾಳಿ ಮಾಡುವ ಸಾಧ್ಯತೆಯಿತ್ತು. ಅನ್ಯಾಯದ ವಿರುದ್ಧ ಮಾತನಾಡಲು ಹೋದವರಿಗೆ ಈ ಸ್ಥಿತಿ ಬರುವುದನ್ನು ನಾವು ಯಾವಾಗಲೂ ನೋಡುತ್ತೇವೆ. ಫೇಸ್ ಬುಕ್ ನಲ್ಲಿ ಈ ಘಟನೆಯ ವಿಚಾರವು ಕಾಡ್ಗಿಚ್ಚಿನಂತೆ ಹಬ್ಬುತ್ತಾ ಇದೆ. ಇದನ್ನು ನೀವು ನೋಡಬಹುದು.

 
English summary

Lawyer Was Beaten And Called A Slut By Her Neighbour

This is a case about what happens in India when you fight for justice! A Delhi advocate was beaten up by her neighbourhood lady and her daughter to such an extent that she fell unconscious. Encroachment is something that is very common in India. Every other lane, we would see hawkers and landlords acquiring the property of government and it is taken for granted, as the government fails to react at that very moment.
Subscribe Newsletter