ಈಗ ಇಡೀ ವಿಶ್ವವೇ ಈ ಮಹಿಳೆಯರ ಕಡೆ ತಿರುಗಿ ನೋಡುತ್ತಿದೆ! ಯಾಕೆ ಗೊತ್ತೇ?

Posted By: Arshad
Subscribe to Boldsky

ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಉತ್ತಮ ಸಾಧನೆ ತೋರುತ್ತಿದ್ದು ನಾಡಿನ ಘನತೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಲವೆಡೆ ಇದು ಕೊಂಚ ಹೆಚ್ಚೇ ಆಯಿತು ಅನಿಸುವಷ್ಟಿದೆ. ಆದರೆ ಭಾರತದ ಕೆಲವು ಮಹಿಳೆಯರು ತಮ್ಮ ಮೂಲಭೂತ ಹಕ್ಕನ್ನು ಪ್ರತಿಪಾದಿಸಲು ಅಥವಾ ಸಹಕರಿಸಲು ತೋರಿದ ದಿಟ್ಟತನದ ಕ್ರಮ ಮಾತ್ರ ಮಡಿವಂತಿಕೆಯ ಸೆರಗನ್ನು ತೊಡೆದು ಹೊರಬಂದಿರುವ ಕಾರಣ ಎಲ್ಲರ ಹುಬ್ಬೇರಿಸಿದೆ. ಇಂತಹ ಕೆಲವು ದಿಟ್ಟ ಮಹಿಳೆಯರ ಬಗ್ಗೆ ಇಂದು ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿದ್ದು ಸಮಾಜದಲ್ಲಿ ಇದುವರೆಗೆ ಪಡೆಯದಿದ್ದ ಮಾನ್ಯತೆ ಹಾಗೂ ಸೂಕ್ತ ಸ್ಥಾನಮಾನವನ್ನು ಇಂದು ಎಲ್ಲಾ ಮಹಿಳೆಯರು ಪಡೆಯುವಂತಾಗಿದೆ.

ತಮ್ಮ ದಿಟ್ಟತನದಿಂದ ಮಹಿಳಾವಾದವನ್ನು ಸಮಾಜಕ್ಕೆ ತಿಳಿಸುವ ಮೂಲಕ ಭಿನ್ನವಾದ ಧೋರಣೆಯನ್ನು ಈ ಮಹಿಳೆಯರು ತೋರಿದ್ದು ಈ ಬದಲಾವಣೆ ಕ್ರಾಂತಿಕಾರಿಯಾಗಿದೆ. ಇಂತಹ ದಿಟ್ಟತನ ತೋರಿದ ಕೆಲವು ಮಹಿಳೆಯರ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಮಹತ್ತರ ಹಾಗೂ ದೇಶದ ಲಕ್ಷಾಂತರ ಇತರ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ. ಬನ್ನಿ, ಈ ಮಹಿಳೆಯರು ಯಾರು, ಇವರು ಯಾವ ದಿಟ್ಟತನ ತೋರಿದರು ಎಂಬುದನ್ನು ನೋಡೋಣ:

’ನೋ ಬ್ಲೌಸ್’ - ರವಿಕೆಯೇ ಬೇಡ ಎನ್ನುವ ದಿಟ್ಟತನ ತೋರಿದಾಗ!

’ನೋ ಬ್ಲೌಸ್’ - ರವಿಕೆಯೇ ಬೇಡ ಎನ್ನುವ ದಿಟ್ಟತನ ತೋರಿದಾಗ!

ಇಂದು ಸಾಮಾಜಿಕ ತಾಣ ಕೇವಲ ಮಾಹಿತಿ ಹಂಚಿಕೊಳ್ಳಲು ಮಾತ್ರ ಮೀಸಲಾಗಿಲ್ಲ, ಬದಲಿಗೆ ಕ್ರಾಂತಿಕಾರಕ ಅಭಿಯಾನಕ್ಕೂ ಅಡಿಪಾಯವಾಗಬಹುದು. ಇಂತಹ ಒಂದು ಫೋಟೋ ಆಧಾರಿತ ಇನ್ಸ್ಟಾಗ್ರಾಂ ಎಂಬ ಸಾಮಾಜಿಕ ತಾಣದಲ್ಲಿ ರವಿಕೆಯಿಲ್ಲದೇ ಸೀರೆ ತೊಟ್ಟು ಹೊರಗೆ ತಿರುಗಾಡುವ ಸ್ವಾತಂತ್ರ್ಯವನ್ನು ಸಮರ್ಥಿಸಿ ಅಭಿಯಾನವೊಂದು ಪ್ರಾರಂಭವಾಯಿತು. ಇದಕ್ಕೆ ಭಾರೀ ಬೆಂಬಲ ನೀಡಿದ ಸಾವಿರಕ್ಕೂ ಹೆಚ್ಚು ಮಹಿಳೆಯರು ರವಿಕೆಯಿಲ್ಲದೇ ಕೇವಲ ಸೀರೆತೊಟ್ಟು ಸಮಾಜದಲ್ಲಿ ತಿರುಗಾಡಿದ ಚಿತ್ರಗಳನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದು ಮಾತ್ರವಲ್ಲದೇ ಈ ಚಿತ್ರಗಳಿಗೆ 'saree.man' ಅಥವಾ ಕ್ಷಮಿಸಿ-ಸಾರಿ ಎನ್ನುವುದನ್ನು ಸೀರೆಯ ಹೆಸರಿನಲ್ಲಿ ಬರೆದು ವ್ಯಂಗ್ಯವನ್ನೂ ಪ್ರಕಟಿಸಿದ್ದಾರೆ.

ಲಿಪ್ಸ್ಟಿಕ್ ರೆಬೆಲಿಯನ್

ಲಿಪ್ಸ್ಟಿಕ್ ರೆಬೆಲಿಯನ್

'Lipstick Under My Burkha' ಎಂಬ ಚಿತ್ರ ಸಾಕಷ್ಟು ವಿಮರ್ಶೆ, ವಿವಾದಗಳಿಗೆ ಗ್ರಾಸವಾಗಿತ್ತು. ಬಹಳಷ್ಟು ಟೀಕೆ, ಟಿಪ್ಪಣಿ, ಅಡ್ಡಿಗಳ ಬಳಿಕ ಕೊನೆಗೂ ಈ ಚಿತ್ರ ಬಿಡುಗಡೆಗೊಂಡಿತ್ತು. ಚಿತ್ರ ಬಿಡುಗಡೆಗೊಳಿಸುವ ಸಮಯದಲ್ಲಿ ಇದರ ಪ್ರಚಾರಕ್ಕೆ 'ಮಹಿಳೆ ಆಧಾರಿತ ಚಿತ್ರ' ಎಂದೂ ವಿವರಿಸಲಾಗಿತ್ತು. ಈ ಚಿತ್ರದಲ್ಲಿ ಪುರುಷಪ್ರಧಾನವಾಗಿರುವ ಈ ಸಮಾಜದಲ್ಲಿ ಯಾವುದೇ ಮಹಿಳೆ ತನ್ನ ಕಥೆಯನ್ನು ದಿಟ್ಟತನದಿಂದ ಹೇಳುವ ಮೂಲಕ ಉಳಿದ ದಮನಿತರೂ ತಮ್ಮ ಕಥೆಯನ್ನು ಹೇಳಲು ಪ್ರೇರಣೆ ನೀಡಲಾಗಿತ್ತು. ಅಷ್ಟೇ ಅಲ್ಲ, ಇವರೆಲ್ಲರೂ ಒಂದಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಈ ಚಿತ್ರ ಪ್ರೇರಣೆ ನೀಡಿತ್ತು. ಜಾಲತಾಣದಲ್ಲಿ ವಿಷಯವನ್ನು ಕ್ಷಿಪ್ರವಾಗಿ ಹುಡುಕಲು ಬಳಸಲಾಗುವ ಹ್ಯಾಶ್ ಟ್ಯಾಗ್ ಬಳಕೆಯನ್ನೂ ಈ ಅಭಿಯಾನಕ್ಕೆ #LipstickRebellion ಎಂಬ ಹೆಸರನ್ನು ಬಳಸಲಾಗಿತ್ತು. ಈ ಅಭಿಯಾನದಲ್ಲಿ ತಮ್ಮ ಚಿತ್ರಗಳನ್ನು ಪ್ರಕಟಿಸಿ ತಮ್ಮ ಹಕ್ಕುಗಳನ್ನು ಪಡೆಯುವ ಪ್ರಯತ್ನದ ಮೂಲಕ ಇವರು ಪಿತೃಪ್ರಭುತ್ವ ವಿಧಾನಕ್ಕೇ ಸವಾಲೆಸೆದಿದ್ದಾರೆ.

ಮೀ ಟೂ

ಮೀ ಟೂ

ಲೈಂಗಿಕ ದೌರ್ಜನ್ಯದ ವಿರುದ್ದ ಸಮರ ಸಾರುವ ಈ ಅಭಿಯಾನದಲ್ಲಿ ವಿಶ್ವದಾದ್ಯಂತ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ತಮ್ಮ ಸಾಮಾಜಿಕ ತಾಣದ ಪುಟಗಳಲ್ಲಿ ಪ್ರಕಟಿಸುವ ಮೂಲಕ ದೌರ್ಜನ್ಯವನ್ನು ಎದುರಿಸುವ ದಿಟ್ಟತನವನ್ನು ತೋರಲು ಪ್ರೇರಣೆ ನೀಡಲಾಗಿದೆ. ಈ ಅಭಿಯಾನ ಎಷ್ಟೊಂದು ಜನಪ್ರಿಯವಾಯ್ತೆಂದರೆ ಕೇವಲ ಮಹಿಳೆಯರು ಮಾತ್ರವಲ್ಲ, ದೌರ್ಜನ್ಯಕ್ಕೆ ಒಳಗಾದ ಪುರುಷರೂ ತಮ್ಮ ಚಿತ್ರಗಳನ್ನು ಹಂಚಿಕೊಂಡು ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ದಮನಿತರೇ ದೌರ್ಜನ್ಯ ಎಸಗಿದವರಿಗೆ ತಮ್ಮ ಕೃತ್ಯದ ಬಗ್ಗೆ ತಪ್ಪಿತಸ್ಥ ಭಾವನೆ ಮೂಡುವಂತೆ ಮಾಡುವುದಾಗಿದೆ. ಅಲ್ಲದೇ ದಮನಿತರು ಈ ಬಗ್ಗೆ ಕೀಳರಿಮೆಯ ಭಾವನೆಯನ್ನು ತೊಡೆದು ಮತ್ತೆ ಜೀವನವನ್ನು ಎದುರಿಸಲು ಎದ್ದು ನಿಲ್ಲಲು ನೆರವಾಗುತ್ತಿದೆ.

ಫ್ರೀ ದ ನಿಪ್ಪಲ್

ಫ್ರೀ ದ ನಿಪ್ಪಲ್

ಈ ಅಭಿಯಾನವನ್ನು 2014ರಲ್ಲಿ ಪ್ರಾರಂಭಿಸಲಾಯಿತು. ಈ ಅಭಿಯಾನದ ಪ್ರಮುಖ ಉದ್ದೇಶವೆಂದರೆ ಈ ದೇಶದ ಸಂವಿಧಾನ ನೀಡಿರುವ ಹಕ್ಕುಗಳನ್ನು ಪುರುಷರಷ್ಟೇ ಮಹಿಳೆಯರೂ ಪಡೆಯಲು ನೆರವಾಗುವುದು. ಸ್ವಾತಂತ್ರ್ಯ, ರಕ್ಷಣೆ ಹಾಗೂ ಲಿಂಗಭೇದ ಮೊದಲಾದ ವಿಷಯಗಳಲ್ಲಿ ಈ ಅಭಿಯಾನದ ಮೂಲಕ ಮಹಿಳೆಯರನ್ನು ಪ್ರಚಾರದ ವಸ್ತುವನ್ನಾಗಿಸಲು ಬಳಸುವ ವಿರುದ್ದ ಆಂದೋಲನ ನಡೆಸಲಾಯಿತು. ಈ ಅಭಿಯಾನದಲ್ಲಿ ಚಲನಚಿತ್ರ ನಟಿ ಸಲೋನಿ ಚೋಪ್ರಾರವರು ಪ್ರಥಮ ಭಾರತೀಯ ಮಹಿಳೆಯಾಗಿ ಭಾಗಿಯಾದ ಬಳಿಕ ಈ ಅಭಿಯಾನ ಭಾರತದಲ್ಲಿಯೂ ಹೆಚ್ಚಿನ ಪ್ರಚಾರ ಪಡೆದಿದೆ.

#StudentsAgainstABVP (ಅಖಿಲ ಭಾರತೀಯ ವಿದ್ಯಾ ಪರಿಷತ್ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು)

ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಮಂದೀಪ್ ಸಿಂಗ್ ರವರ ಪುತ್ರಿ ಗುರ್ಮೆಹೆರ್ ಕೌರ್ ರವರು ತಮ್ಮ ಫೇಸ್ ಬುಕ್ ಡಿಪಿ ಅಥವಾ ಮುಖಪುಟದ ಚಿತ್ರವನ್ನು ಬದಲಿಸಿ ಚಿತ್ರವೊಂದನ್ನು ಅಳವಡಿಸಿದರು ಅದರಲ್ಲಿ ಹೀಗೆ ಬರೆಯಲಾಗಿತ್ತು. "ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ, ನನಗೆ ಎಬಿವಿಪಿ ಯ ಹೆದರಿಕೆಯಿಲ್ಲ. ನಾನು ಒಂಟಿಯಾಗಿಲ್ಲ, ಭಾರತದ ಪ್ರತಿ ವಿದ್ಯಾರ್ಥಿಯೂ ನನ್ನೊಂದಿಗಿದ್ದಾರೆ" ಈ ವಿಷಯ ಕಾಳ್ಗಿಚ್ಚಿನಂತೆ ಭಾರತದಾದ್ಯಂತ ಹರಡಿತು ಹಾಗೂ ಭಾರತದಾದ್ಯಂತ ವಿವಿಧ ಕಡೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಇದೇ ರೀತಿಯ ವಿವರಣೆ ನೀಡುವ ಚಿತ್ರಗಳನ್ನು ಪ್ರಕಟಿಸಿ ಎಬಿವಿಪಿ ವಿರುದ್ಧದ ಈ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

#ProudToBleed (ನೈರ್ಮಲ್ಯ ಅಭಿಯಾನ)

#ProudToBleed (ನೈರ್ಮಲ್ಯ ಅಭಿಯಾನ)

ಒಂದು ಸಂಶೋಧನೆಯ ಪ್ರಕಾರ ಭಾರತದಲ್ಲಿ 35.5 ಕೋಟಿ ಮಹಿಳೆಯರಿದ್ದು ಇವರಲ್ಲಿ ಕೇವಲ 12% ರಷ್ಟು ಮಹಿಳೆಯರು ಮಾತ್ರವೇ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸುತ್ತಾರೆ. ಈ ಕೊರತೆಯನ್ನು ನೀಗಿಸಲು ದಿಯಾ ಇಂಡಿಯಾ ಫೌಂಡೇಶನ್ ಹಾಗೂ ನಟಿ ಸಲೋನಿ ಚೋಪ್ರಾ ರವರು ಈ ಅಭಿಯಾನವನ್ನು ಪ್ರಾರಂಭಿಸಿದ್ದು ಮಹಿಳೆಯರು ತಮ್ಮ ದೇಹದ ನೈರ್ಮಲ್ಯ ಕಾಪಾಡಲು ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸಲು ಪ್ರೇರಣೆ ನೀಡುತ್ತಾ ಬಂದಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಗೌಪ್ಯತೆಯನ್ನು ಪ್ರಕಟಿಸಿದ ಕಂಗನಾ ರನೌತ್

ಸಂದರ್ಶನವೊಂದರಲ್ಲಿ ತಮ್ಮ ಗೌಪ್ಯತೆಯನ್ನು ಪ್ರಕಟಿಸಿದ ಕಂಗನಾ ರನೌತ್

ಕಳೆದ ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ನಡೆಸಿದ ರಾಷ್ಟ್ರೀಯ ಟೀವಿಯ ಸಂದರ್ಶನವೊಂದರಲ್ಲಿ ನಟಿ ಕಂಗನಾ ರನೌತ್ ರವರು ತಮ್ಮ ಜೀವನದಲ್ಲಿ ನಡೆದ ಹಲವಾರು ಘಟನೆಗಳ ಬಗ್ಗೆ ವಿವರ ನೀಡಿದ್ದಾರೆ. ಇವರಲ್ಲಿ ಕೆಲವು ಮಾಹಿತಿಗಳು ಬೆಚ್ಚಿ ಬೀಳಿಸುವಂತಹದ್ದಾಗಿದ್ದು ಆಕೆ ಎದುರಿಸಿದ ವಿವಾದಗಳ ಬಗ್ಗೆ ಆಕೆ ವಿವರ ನೀಡಿದ್ದಾರೆ. ಈ ಸ್ಥಾನ ಪಡೆಯಲು ಅವರನ್ನು ಹಲವು ಗಣ್ಯವ್ಯಕ್ತಿಗಳು ಹೇಗೆ ಬಳಸಿಕೊಂಡರು ಎಂಬುದನ್ನೂ ಎಳೆ ಎಳೆಯಾಗಿ ವಿವರಿಸಿದ ಅವರು ಎಲ್ಲರೂ ಬಾಯಿ ತೆರೆದು ನೋಡುವಂತಾಗಿದೆ.

ಈ ದಿಟ್ಟತನ ಮೆರೆದ ಮಹಿಳೆಯರ ಬಗ್ಗೆ ಬೋಲ್ಡ್ ಸ್ಕೈ ತಂಡ ತನ್ನ ಸಮರ್ಥನೆಯನ್ನು ಪ್ರಕಟಿಸುತ್ತಿದ್ದು ಇವರ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ.

English summary

Indian Women Who Stunned The World With Their Bold Avatars

Women empowerment is all over the place. There are times when it is over-done too. But there are those cases of some of the bold women who have made a mark of themselves in the society by supporting and fighting for the right cause. We've listed out details of a few brave Indian women who have gone up a notch in acquiring a righteous place for us women. These women have taken feminism to a total different level with their boldness and unique approach towards society and other things. So, here is a list of women who have stunned the society with their revolutionary changes and moves and made a change in the Indian society. So, check out more to know about the bold avatars of these pretty Indian women.
Story first published: Monday, November 13, 2017, 16:15 [IST]