ವಾಸ್ತು ಪ್ರಕಾರ 'ಮಲಗುವ ಕೋಣೆಗೆ' ಯಾವ ಬಣ್ಣ ಒಳ್ಳೆಯದು?

By: Hemanth
Subscribe to Boldsky

ಬಣ್ಣ ಬಣ್ಣದ ಹೂಗಳು, ಚಿಟ್ಟೆಗಳನ್ನು ನೋಡುವಾಗ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಯಾಕೆಂದರೆ ಅವುಗಳ ಬಣ್ಣ ಪ್ರಕೃತಿದತ್ತವಾದದ್ದು. ಒಮ್ಮೆ ನೋಡಿದ ಹೂಗಳು ಹಾಗೂ ಚಿಟ್ಟೆಗಳನ್ನು ಮತ್ತೆ ಮತ್ತೆ ನೋಡಬೇಕು ಎಂದು ಅನಿಸುವುದು ಸಹಜ.

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಬಣ್ಣ ಇಷ್ಟವಾಗುತ್ತದೆ. ಕೆಲವರಿಗೆ ಕಡುಬಣ್ಣಗಳು, ಇನ್ನು ಕೆಲವರಿಗೆ ತಿಳಿಬಣ್ಣಗಳು ಇಷ್ಟ. ಮನೆಗೆ ಬಣ್ಣ ಬಳಿಯುವಾಗ ಕೂಡ ನಮಗೆ ಇಷ್ಟವಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಬೆಡ್‌ರೂಮ್‌ನಲ್ಲಿ ಇಂತಹ ವರ್ಣಚಿತ್ರಗಳನ್ನು ಮಾತ್ರ ಇಡಬೇಡಿ!

ಆದರೆ ಇದು ನಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುತ್ತದೆಯಾ ಎಂದು ಯಾವತ್ತಾದರೂ ಯೋಚಿಸಿದ್ದೇವೆಯಾ? ನಮಗೆ ಇಷ್ಟದ ಬಣ್ಣವನ್ನು ಗೋಡೆಗಳಿಗೆ ಬಳಿದರೆ ಕೆಲಸ ಮುಗಿದ ಹಾಗೆ ಎಂದು ಭಾವಿಸುತ್ತೇವೆ.  ಮಲಗುವ ಕೋಣೆಯನ್ನು ಚೊಕ್ಕವಾಗಿರಿಸಲು 5 ಸರಳ ವಿಧಾನಗಳು

ಆದರೆ ಮಲಗುವ ಕೋಣೆ(ಬೆಡ್ ರೂಮ್)ಗೆ ಯಾವ ರೀತಿಯ ಬಣ್ಣ ಬಳಿದರೆ ಒಳ್ಳೆಯದು ಮತ್ತು ಅದು ವ್ಯಕ್ತಿತ್ವದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ತಿಳಿಸಿಕೊಡಲಿದೆ. ವಾಸ್ತು ಹಾಗೂ ಫೆಂಗ್ ಶೂಯಿ ಪ್ರಕಾರ ಯಾವ ಬಣ್ಣ ನಿಮಗೆ ಹೊಂದಿಕೆಯಾಗುತ್ತದೆ ಎಂದು ತಿಳಿಯಿರಿ....

ಹಳದಿ ಬಣ್ಣ

ಹಳದಿ ಬಣ್ಣ

ಹಳದಿ ಬಣ್ಣ ಹೆಚ್ಚಿನವರಿಗೆ ಇಷ್ಟವಾಗಲ್ಲ. ಆದರೆ ಇದು ಶಕ್ತಿಯನ್ನು ಸೂಚಿಸುತ್ತದೆ. ಇದು ತುಂಬಾ ಶಕ್ತಿಶಾಲಿ ಹಾಗೂ ತುಂಬಾ ತೀಕ್ಷ್ಣವಾಗಿರುವಂತಹ ಬಣ್ಣ. ಇದು ತಾಳ್ಮೆ ಮತ್ತು ಜ್ಞಾನವನ್ನು ಪ್ರತಿಬಿಂಬಿಸುತ್ತದೆ. ಕಲಿಯುವ ಕೋಣೆ ಅಥವಾ ಮಕ್ಕಳ ಕೋಣೆಗೆ ಈ ಬಣ್ಣ ಸೂಕ್ತ. ಹಳದಿ ಬಣ್ಣವನ್ನು ಮಲಗುವ ಕೋಣೆಗೆ ಬಳಸುತ್ತಾ ಇದ್ದರೆ ಆಗ ಸ್ವಲ್ಪ ತಿಳಿ ಹಳದಿ ಬಣ್ಣವನ್ನು ಬಳಸಿ.ಯಾಕೆಂದರೆ ಇದು ಶಕ್ತಿಯನ್ನು ನಿಯಂತ್ರಿಸಿ ಪ್ರೀತಿ ಹಾಗೂ ಶಾಂತಿಯನ್ನು ಪ್ರಚೋದಿಸುತ್ತದೆ.

ನಸುಹಳದಿ ಕಂದುಬಣ್ಣ

ನಸುಹಳದಿ ಕಂದುಬಣ್ಣ

ಇದು ಪ್ರೀತಿ ಹಾಗೂ ಸಾಮರಸ್ಯದ ಸಂಕೇತವಾಗಿದೆ. ಇದು ಭೂಮಿಯನ್ನು ಪ್ರತಿಪಾದಿಸುತ್ತದೆ. ಈ ಬಣ್ಣವನ್ನು ಮಲಗುವ ಕೋಣೆಯಲ್ಲಿ ಬಳಸಿದರೆ ಜೀವನದಲ್ಲಿ ಅದ್ಭುತವನ್ನು ಕಾಣಬಹುದು. ನಸುಹಳದಿ ಕಂದುಬಣ್ಣ ನಿದ್ರೆಯ ಚಕ್ರಕ್ಕೆ ಧನಾತ್ಮಕವಾಗಿ ಪರಿಣಾಮ ಬೀರುವುದು ಮತ್ತು ನಿದ್ರೆಯ ವಿಧಾನವನ್ನು ಸುಧಾರಿಸುವುದು.

ನೀಲಿ ಬಣ್ಣ

ನೀಲಿ ಬಣ್ಣ

ಶಾಂತಿ, ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಈ ಬಣ್ಣವು ಪ್ರತಿಪಾದಿಸುತ್ತದೆ. ನೀಲಿ ಬಣ್ಣವು ವ್ಯಕ್ತಿಯ ಅಥವಾ ದಂಪತಿಯ ಜೀವನದಲ್ಲಿ ಧನಾತ್ಮಕವಾದ ಪರಿಣಾಮ ಬೀರಬಲ್ಲದು. ಕಡುನೀಲಿ ಬಣ್ಣವನ್ನು ಬಳಸುತ್ತಾ ಇದ್ದರೆ ಆಗ ನವಿರಾಗಿ ಇದನ್ನು ಬಳಸಿಕೊಂಡು ಒಳ್ಳೆಯ ರೀತಿಯಲ್ಲಿ ಸಮತೋಲದಲ್ಲಿಡಬಹುದು.

ಹಸಿರು ಬಣ್ಣ

ಹಸಿರು ಬಣ್ಣ

ಹಸಿರು ಬಣ್ಣವು ಒಳ್ಳೆಯ ಭರವಸೆಯ ಬಣ್ಣವಾಗಿದೆ. ಇದು ಫಲವತ್ತತೆ ಹಾಗೂ ಶಮನಕಾರಿಯನ್ನು ಪ್ರತಿನಿಧಿಸುತ್ತದೆ. ಇದು ವ್ಯಕ್ತಿಯ ಜೀವನದಲ್ಲಿ ಆಕರ್ಷಣೀಯ ಬದಲಾವಣೆ ತರಬಲ್ಲದು. ಈ ಬಣ್ಣವು ಭರವಸೆ, ಶಮನಕಾರಿ ಮತ್ತು ಮನಸ್ಸನ್ನು ಶಾಂತಗೊಳಿಸುವ ಗುಣವನ್ನು ಹೊಂದಿದೆ. ದಂಪತಿಗೆ ಮಕ್ಕಳು ಆಗದೆ ಇದ್ದ ಪಕ್ಷದಲ್ಲಿ ಮಲಗುವ ಕೋಣೆಗೆ ಈ ಬಣ್ಣವನ್ನು ಬಳಸಿ ಫಲ ಕಾಣಬಹುದು.

ಕಿತ್ತಳೆ ಬಣ್ಣ

ಕಿತ್ತಳೆ ಬಣ್ಣ

ಸೌಂದರ್ಯ ಹಾಗೂ ಅಧಿಕಾರದ ಸಂಕೇತ ಈ ಬಣ್ಣವಾಗಿದೆ. ಆರಾಮ, ಧೈರ್ಯ, ಆಧ್ಯಾತ್ಮಿಕತೆ ಹೆಚ್ಚಿಸುವ ಮತ್ತು ಅಧಿಕಾರದ ಸಂಕೇತ ಈ ಬಣ್ಣವಾಗಿದೆ. ಇದು ಪ್ರೀತಿ ಹಾಗೂ ಭಾವನೆ ಹಾಗೂ ಪ್ರೀತಿಯನ್ನು ಆಹ್ವಾನಿಸುತ್ತದೆ. ಇದು ಮಲಗುವ ಕೋಣೆಯಲ್ಲಿ ಬಳಸಬಹುದಾದ ಅತ್ಯುತ್ತಮ ಬಣ್ಣವಾಗಿದೆ.

ಗುಲಾಬಿ ಬಣ್ಣ

ಗುಲಾಬಿ ಬಣ್ಣ

ಇದು ಸಾಮರಸ್ಯ, ಸಂತೋಷವನ್ನು ಉಂಟು ಮಾಡುವಂತಹ ಬಣ್ಣವಾಗಿದೆ. ಗುಲಾಬಿ ಬಣ್ಣ ಪ್ರೀತಿ ಹಾಗೂ ಆನಂದದ ಬಣ್ಣ. ಗುಲಾಬಿ ಬಣ್ಣವನ್ನು ಮಲಗುವ ಕೋಣೆಗೆ ಬಳಿದರೆ ಆಗ ದಂಪತಿಯ ಭಾವನೆಗಳು ತನ್ನಷ್ಟಕ್ಕೆ ಕೆರಳುತ್ತದೆ.

ಕೆಂಪು ಬಣ್ಣ

ಕೆಂಪು ಬಣ್ಣ

ಈ ಬಣ್ಣವು ಉತ್ಸಾಹ ಹಾಗೂ ಶೌರ್ಯದ ಸಂಕೇತವಾಗಿದೆ. ಇದು ಸಂಪೂರ್ಣವಾಗಿ ಭಾವನೆಗಳನ್ನು ಅವಲಂಬಿಸಿರುತ್ತದೆ. ಕೆಂಪು ಬಣ್ಣವನ್ನು ಮಲಗುವ ಕೋಣೆಗೆ ಬಳಿಯಬಾರದು. ಮಲಗುವ ಕೋಣೆಗೆ ಕೆಂಪು ಬಣ್ಣವೇ ಬೇಕು ಎಂದಾದರೆ ಅದಕ್ಕೆ ಸ್ವಲ್ಪ ತಿಳಿ ನೀಲಿ ಬಣ್ಣವನ್ನು ಬಳಿದು ಸಮತೋಲನ ಕಾಪಾಡಿ. ಬಣ್ಣವು ಸಮತೋಲನದಲ್ಲಿದ್ದರೆ ಆಗ ಹೊಸ ದಂಪತಿಯಲ್ಲಿ ಸಂಬಂಧ ಬಲಗೊಳ್ಳಲು ನೆರವಾಗುವುದು.

ಬಿಳಿ ಬಣ್ಣ

ಬಿಳಿ ಬಣ್ಣ

ಬಿಳಿ ಬಣ್ಣವು ಶಾಂತಿ ಹಾಗೂ ಗಾಢತೆಯ ಪ್ರತೀಕ. ಇದು ಸ್ಪಷ್ಟತೆ ಹಾಗೂ ದೂರದೃಷ್ಟಿಯನ್ನು ತೋರಿಸುತ್ತದೆ. ಈ ಬಣ್ಣದೊಂದಿಗೆ ಬೇರೆ ಬಣ್ಣ ಬಳಿದು ಸಮತೋಲ ಕಾಪಾಡಬೇಕು. ರಾತ್ರಿ ವೇಳೆ ಒಳ್ಳೆಯ ನಿದ್ರೆಯನ್ನು ನೀಡುವಂತಹ ಬಣ್ಣ ಇದಾಗಿದೆ. ಕೋಣೆಗೆ ಬಿಳಿ ಬಣ್ಣ ಬಳಿಯಬೇಕೆಂದು ಬಯಸಿದರೆ ಆಗ ಕೆಲವೊಂದು ಬಣ್ಣದ ಕಲಾಕೃತಿಗಳನ್ನು ಗೋಡೆಗೆ ಹಾಕಿ. ಇದು ತೀವ್ರ ಲೋಹದ ಶಕ್ತಿಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

English summary

How Bedroom Colour Can Change Your Life

Find out about the various colours that would be best suited according to your personality! These are the colours that can change your fate according to Vastu and Feng Shui. Check them out...
Please Wait while comments are loading...
Subscribe Newsletter