ಸ್ಪೇನ್‌ನಲ್ಲಿದೆ 'ನಗ್ನ ಹೋಟೆಲ್'! ಇಲ್ಲಿ ಚೆನ್ನಾಗಿ ಉಂಡವನೇ ಜಾಣ!!

By: Arshad
Subscribe to Boldsky

ವ್ಯಾಪಾರದಲ್ಲಿ ಲಾಭವೇ ಮುಖ್ಯವಾಗಿರುವಾಗ ಗಿರಾಕಿಗಳನ್ನು ಸೆಳೆಯಲು ವಿವಿಧ ಆಕರ್ಷಣೆಗಳ ಮೂಲಕ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಅತ್ಯುತ್ತಮ ಗುಣಮಟ್ಟ, ಗ್ರಾಹಕರ ತೃಪ್ತಿ, ಇತರರು ನೀಡದ ಹೊಸತನವನ್ನು ನೀಡುವ ಉದ್ದಿಮೆದಾರರು ಎಂದಿಗೂ ಜಯಗಳಿಸುತ್ತಾರೆ. ಗ್ರಾಹಕರು ಊಹಿಸಿರದ ಹೊಸತನವನ್ನು ನೀಡುವ ಹಾಗೂ ತಮ್ಮ ವೈಶಿಷ್ಟ್ಯವನ್ನು ಕಾಪಾಡುವ ಸಂಸ್ಥೆಗಳು ಎಂದಿಗೂ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನದಲ್ಲಿಯೇ ಇರುತ್ತವೆ. ಇಂತಹ ಚಿತ್ರ ವಿಚಿತ್ರ ಐಷಾರಾಮಿ ಹೋಟೆಲ್‌ಗೆ ಬೆರಗಾಗಲೇಬೇಕು!

ಕೆಲವು ಕಡೆ ಕೊಂಚ ಭಿನ್ನವಾದ, ಜನಸಾಮಾನ್ಯರಿಗೆ ಅರಗಿಸಿಕೊಳ್ಳಲಾಗದ ಹೊಸತನವನ್ನು ನೀಡುವ ಮೂಲಕ ಕೆಲವು ಸಂಸ್ಥೆಗಳು ಸುದ್ದಿ ಮಾಡುತ್ತವೆ. ಉದಾಹರಣೆಗೆ ಬೆಂಗಳೂರಿನ ಚಿನ್ನದ ಮಸಾಲೆ ದೋಸೆ. ಅಂತೆಯೇ ಸ್ಪೇನ್‌ನಲ್ಲಿ ಒಂದು ವಿಚಿತ್ರ ರೂಪದ ಕೆಫೆ ಅಥವಾ ಹೋಟೆಲೊಂದು ಪ್ರಾರಂಭವಾಗಿದೆ.   ನೀರಿನಾಳದ ಈ ಹೋಟೆಲ್‌ಗಳು, ವಿಶ್ವದ ನೂತನ ಅದ್ಭುತಗಳು

ಇದಕ್ಕೆ ನೇಕೆಡ್ ಕೆಫೆ ಅಥವಾ ನಗ್ನ ಕೆಫೆ ಎಂಬ ಹೆಸರನ್ನಿಡಲಾಗಿದ್ದು ಈ ಹೆಸರಿನ ಆಕರ್ಷಣೆಯಿಂದ ಹೆಚ್ಚು ಜನರು ಈ ಹೋಟೆಲಿನತ್ತ ಧಾವಿಸುತ್ತಿದ್ದಾರೆ. ಸ್ಪ್ಯಾನಿಷ್ ಭಾಷೆಯಲ್ಲಿ Innato Tenerife ಎಂಬ ಹೆಸರಿನ ಈ ಹೋಟೆಲು ಈಗ ಯಶಸ್ಸಿನ ಉತ್ತುಂಗದತ್ತ ಭಾರೀ ವೇಗದಲ್ಲಿ ಧಾವಿಸುತ್ತಿದ್ದು ಈ ಕೆಫೆ ಮಾಡುತ್ತಿರುವ ಲಾಭ ಇತರ ಹೋಟೆಲುಗಳೂ ಈ ರೂಪವನ್ನು ಧರಿಸಿಕೊಳ್ಳಲು ಪ್ರೇರಣೆ ನೀಡುತ್ತಿದೆ. ಬನ್ನಿ, ಏನಿದು, ಈ ವಿಚಿತ್ರ ಎಂಬ ನಿಮ್ಮ ಕುತೂಹಲವನ್ನು ಕೆಳಗಿನ ಮಾಹಿತಿ ತಣಿಸಬಲ್ಲುದು...    

ಈ ಹೋಟೆಲಿಗೆ ಆಗಮಿಸುವವರನ್ನು ವಿಶಿಷ್ಟವಾಗಿ ಸ್ವಾಗತಿಸಲಾಗುತ್ತದೆ

ಈ ಹೋಟೆಲಿಗೆ ಆಗಮಿಸುವವರನ್ನು ವಿಶಿಷ್ಟವಾಗಿ ಸ್ವಾಗತಿಸಲಾಗುತ್ತದೆ

ಗಿರಾಕಿಗಳನ್ನು ನಗುಮೊಗದಿಂದ ಸ್ವಾಗತಿಸಿ ಇವರು ತೊಟ್ಟ ಉಡುಗೆಗಳನ್ನು ಬದಲಿಸಿ ಕೇವಲ ಒಂದು ದೊಡ್ಡ ಟವೆಲ್ (ಅಥವಾ ಬಾಥ್ರೋಬ್) ಧರಿಸುವಂತೆ ತಿಳಿಸಲಾಗುತ್ತದೆ. ಬಳಿಕ ಅತಿಥಿಗಳನ್ನು ಮನರಂಜನೆಯ ಸ್ಥಳವೊಂದಕ್ಕೆ ಕರೆದೊಯ್ಯಲಾಗುತ್ತದೆ. ಈ ಕಾರ್ಯಕ್ರಮ ಮುಗಿದ ಬಳಿಕ ಖಾಸಗಿ ಸ್ಥಳವೊಂದಕ್ಕೆ ಕರೆದೊಯ್ದು ಇಲ್ಲಿ ಅವರು ತೊಟ್ಟಿರುವ ಏಕಮಾತ್ರ ಟವೆಲ್ಲನ್ನೂ ನಿವಾರಿಸುವಂತೆ ಕೇಳಿಕೊಳ್ಳಲಾಗುತ್ತದೆ. ಬಳಿಕ ಅತಿಥಿಗಳು ಆರಾಮವಾಗಿ ಮಲಗುವಂತಹ ಪೀಠೋಪಕರಣಗಳಲ್ಲಿ ಕುಳಿತುಕೊಳ್ಳಲು ಹೇಳಲಾಗುತ್ತದೆ.

ಇವರಲ್ಲಿವೆ ಕಾಮೋತ್ತೇಜಕ ಆಹಾರದ ಮೆನು

ಇವರಲ್ಲಿವೆ ಕಾಮೋತ್ತೇಜಕ ಆಹಾರದ ಮೆನು

ಅತಿಥಿಗಳು ನಗ್ನರಾಗಿದ್ದಂತೆಯೇ ತಮಗಿಷ್ಟ ಬಂದ ಆಹಾರವನ್ನು ಆರ್ಡರ್ ಮಾಡಬಹುದು. ಅಷ್ಟೇ ಅಲ್ಲ, ಅತಿಥಿಗಳು ತಮಗೆ ಇಷ್ಟವಾದ ಪರಿಚಾರಕ ಅಥವಾ ಪರಿಚಾರಿಕೆಯನ್ನೂ ಆಯ್ದುಕೊಳ್ಳಬಹುದು. ಆಹಾರ ಬಂದ ಬಳಿಕ ಆಯ್ದ ಪರಿಚಾರಕ ಅಥವಾ ಪರಿಚಾರಕ ನಗ್ನರಾಗಿ ಮೇಜಿನ ಮೇಲೆ ಮಲಗಿದ್ದು ಆರ್ಡರ್ ಮಾಡಿದ ಆಹಾರ ಅವರ ಅಂಗಾಂಗಗಳ ಮೇಲೆ ಕಲಾತ್ಮಕವಾಗಿ ಜೋಡಿಸಿರಲಾಗಿರುತ್ತದೆ. ಅತಿಥಿಗಳು ಇವರ ಮೈಮೇಲಿನಿಂದ ಆಹಾರವನ್ನು ಎತ್ತಿ ತಿನ್ನಬಹುದು.

ಆಹಾರದ ಕಡೆಯ ಭಾಗದಲ್ಲಿದೆ ಅತ್ಯಂತ ರೋಚಕ ಭಾಗ

ಆಹಾರದ ಕಡೆಯ ಭಾಗದಲ್ಲಿದೆ ಅತ್ಯಂತ ರೋಚಕ ಭಾಗ

ಊಟದ ಕಡೆಯ ಹಂತದಲ್ಲಿ ಅತಿಥಿಗಳು ತಮ್ಮ ಆಯ್ಕೆಯ ಚಾಕಲೇಟನ್ನು ನೆಕ್ಕಿ ಆಸ್ವಾದಿಸುವ ಅವಕಾಶವನ್ನು ಒದಗಿಸಲಾಗುತ್ತದೆ. ಅಂದರೆ ಈ ಚಾಕಲೇಟು ದ್ರವವನ್ನು ಸಹಾ ಅವರ ಆಯ್ಕೆಯ ಪರಿಚಾರಕ ಅಥವಾ ಪರಿಚಾರಿಕೆಯ ದೇಹದ ಮೇಲೆ ಸುರಿದಿರಲಾಗಿರುತ್ತದೆ.

ಈ ಹೋಟೆಲಿನಲ್ಲಿ ಫೋನ್, ಕ್ಯಾಮೆರಾ ಬಳಸುವಂತಿಲ್ಲ

ಈ ಹೋಟೆಲಿನಲ್ಲಿ ಫೋನ್, ಕ್ಯಾಮೆರಾ ಬಳಸುವಂತಿಲ್ಲ

ಪ್ರಾರಂಭದ ಹಂತದಲ್ಲಿ ಅತಿಥಿಗಳು ತಮ್ಮ ಉಡುಗೆಯನ್ನು ಕಳಚಿದ ಸಮಯದಲ್ಲಿಯೇ ತಮ್ಮ ಮೊಬೈಲು, ಕ್ಯಾಮೆರಾ ಮೊದಲಾದವುಗಳನ್ನೂ ಬಿಟ್ಟುಬರುವಂತೆ ಸೂಚಿಸಲಾಗುತ್ತದೆ. ಅಂದರೆ ಇವರಿಗೆ ಊಟದ ಸಮಯದಲ್ಲಿ ಯಾರೂ ತೊಂದರೆ ಕೊಡಬಾರದು, ತಮ್ಮ ಚಿತ್ರವನ್ನು ಯಾರು ತೆಗೆಯಲು ಸಾಧ್ಯವಾಗಬಾರದು ಅಥವಾ ಇವರೂ ಬೇರೆ ಯಾರದ್ದೂ ಫೋಟೋ ತೆಗೆಯಬಾರದಂತೆ ಎಚ್ಚರಿಕೆ ವಹಿಸಲಾಗಿದೆ.

ಹಾಗಾದರೆ ಈ ಚಿತ್ರಗಳು ಬಂದದ್ದೆಲ್ಲಿಂದ?

ಹಾಗಾದರೆ ಈ ಚಿತ್ರಗಳು ಬಂದದ್ದೆಲ್ಲಿಂದ?

ಇಲ್ಲಿ ಒದಗಿಸಲಾಗಿರುವ ಚಿತ್ರಗಳು ಈ ಕೆಫೆಯೇ ಒದಗಿಸಿದ್ದು ಇದು ಕೇವಲ ಪ್ರಚಾರಕಾರ್ಯಕ್ಕಾಗಿ ಮಾತ್ರ ಎಂದು ಸ್ಪಷ್ಟಪಡಿಸಿದೆ. ಇದರ ಹೊರತಾಗಿ ಬೇರೆ ಯಾರಿಗೂ ಇದರ ಒಳಗೆ ಚಿತ್ರ ತೆಗೆಯುವ ಅವಕಾಶವೇ ಇಲ್ಲದಂತೆ ಕಟ್ಟುನಿಟ್ಟಿನ ಕ್ರಮಗಳನ್ನೂ ನಿಯಮಗಳನ್ನೂ ಅಳವಡಿಸಿದೆ. ಹೇಗೆಲ್ಲಾ ಹೇಳಿದ ಬಳಿಕ ಕುತೂಹಲ ಕೆರಳದೇ ಇರುತ್ತದೆಯೇ?

ಹೆಬ್ಬಾಗಿಲನ್ನು ಕಾಯುವ ದ್ವಾರಪಾಲಕರು

ಹೆಬ್ಬಾಗಿಲನ್ನು ಕಾಯುವ ದ್ವಾರಪಾಲಕರು

ಈ ಹೋಟೆಲಿಗೆ ಬರುವ ಪ್ರತಿಯೊಬ್ಬರೂ ಇಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ಇಲ್ಲಿ ದೃಢಕಾಯರಾದ ದ್ವಾರಪಾಲಕರಿದ್ದಾರೆ. ಗೌಪ್ಯತೆಯನ್ನು ಕಾಪಾಡುವುದು ಈ ಹೋಟೆಲಿನ ಪ್ರಮುಖ ನಿಯಮವಾಗಿದ್ದು ಗಿರಾಕಿಗಳ ವಿವರಗಳನ್ನು ಎಲ್ಲಿಯೂ ಸೋರದಂತೆ ಕ್ರಮ ಕೈಗೊಳ್ಳಲಾಗಿದೆ. ಸ್ಪೇನ್‌ಗೆ ಹೋಗುವವರಿದ್ದರೆ ಈ ಹೋಟೆಲಿಗೇನಾದರೂ ಭೇಟಿ ನೀಡುವ ಇರಾದೆ ಇದೆಯೇ?

 
English summary

Here's All That You Need To Know About The Naked Café In Spain

This is a Naked Café in Spain and it is gaining popularity due to its quirky and bizarre concept! Check out on what happens in this naked café named Innato Tenerife; and seeing the soaring success rate of this restaurant, many other restaurants are also willing to follow the same. Find out more...
Please Wait while comments are loading...
Subscribe Newsletter