For Quick Alerts
ALLOW NOTIFICATIONS  
For Daily Alerts

ನೀರಿನಾಳದ ಈ ಹೋಟೆಲ್‌ಗಳು, ವಿಶ್ವದ ನೂತನ ಅದ್ಭುತಗಳು

By Super
|

ನೀರಿನಾಳದಲ್ಲಿ ಏನಿದೆ, ಏನಿಲ್ಲ. ಹೆಚ್ಚಿನವರಿಗೆ ನೀರಿನೊಳಗೆ ಮೀನು ಮತ್ತು ಇತರ ಜಲಚರಗಳಿರುತ್ತವೆ ಎಂದಷ್ಟೇ ಗೊತ್ತು. ಆದರೆ ಒಮ್ಮೆ ಈ ಬಗ್ಗೆ ಗಮನಹರಿಸಿದರೆ ನದಿ, ಸಾಗರ, ಕೆರೆಗಳ ತಳದಲ್ಲಿ ನೀರಿನ ಜೀವಿಗಳ ಅದ್ಭುತ ಲೋಕವೇ ಇರುತ್ತದೆ. ಇವುಗಳು ಒಂದಕ್ಕೊಂದು ಅವಲಂಬಿಸಿರುವ ಬಗೆ, ಒಮ್ಮೆಗೇ ಲಕ್ಷಾಂತರ ಮೊಟ್ಟೆಗಳನ್ನಿಡುವ ಮೀನಿಗೆ ಆ ದೇವನು ನೀಡಿರುವ ಅದ್ಭುತ ಶಕ್ತಿ, ಕ್ಷುದ್ರ ಎನಿಸುವ ಚಿಕ್ಕ ಪುಟ್ಟ ಜೀವಿಗಳಿಗೂ ರಕ್ಷಣೆಗಾಗಿ ನಿಸರ್ಗ ನೀಡಿರುವ ಆಯುಧಗಳು ಮೊದಲಾದವು ಬೆರಗು ಮೂಡಿಸುತ್ತವೆ. ಈ ಬೆರಗನ್ನು ಮನೆಯಲ್ಲಿಯೂ ಪಡೆಯಲು ಕೆಲವರು ಚಿಕ್ಕ ಅಕ್ವೇರಿಯಂಗಳನ್ನು ಸ್ಥಾಪಿಸಿ ಮೀನುಗಳನ್ನು ಸಾಕುತ್ತಾರೆ. ಭಾರತದ ಮೊತ್ತ ಮೊದಲ ಫೈ ಸ್ಟಾರ್ ಕೆಫೆ

ಇನ್ನೂ ಹೆಚ್ಚಿನ ಕುತೂಹಲವಿರುವವರು ಆಗಾಗ ನದಿ, ಸಾಗರ, ಕೆರೆಗಳಿಗೆ ಭೇಟಿ ನೀಡಿ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸೌಂದರ್ಯವನ್ನು ಸವಿಯುತ್ತಾರೆ. ನಮಗೆ ನೀರಿನಡಿಯಲ್ಲಿ ಉಸಿರಾಡಲು ಸೂಕ್ತ ಸಲಕರಣೆ ಮತ್ತು ಇವುಗಳನ್ನು ಉಪಯೋಗಿಸುವ ವಿಧಾನ ಸುಲಭವಾಗಿ ಮತ್ತು ಅಗ್ಗವಾಗಿ ಲಭ್ಯವಾಗದೇ ಇರುವುದು ನೀರಿನಾಳದ ಜಗತ್ತನ್ನು ಹೆಚ್ಚಿನವರು ಕಾಣದಿರಲು ಮುಖ್ಯ ಕಾರಣವಾಗಿದೆ. ಆದರೆ ಜಗತ್ತಿನಲ್ಲಿ ನೀರಿನಾಳದ ಜಗತ್ತನ್ನು ಕಿಟಕಿ ಮೂಲಕ ತೋರಿಸಲೆಂದೇ ನೀರಿನಡಿಯಲ್ಲಿಯೇ ಹೋಟೆಲುಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಅದ್ಭುತ ಅನುಭವ ಮೂಡಿಸುವ ಹೋಟೆಲುಗಳಿವೆ. ಇವುಗಳಲ್ಲಿ ಕೆಲವು ನಿಗೂಢ ಸ್ಥಳಗಳಲ್ಲಿದ್ದು ಗ್ರಾಹಕರು ಸೂಕ್ತ (ದುಬಾರಿ) ಬೆಲೆ ತೆತ್ತ ಬಳಿಕವೇ ಹೋಟೆಲಿನ ದೋಣಿಯಲ್ಲಿಯೇ ಎಲ್ಲೋ ಕರೆದೊಯ್ಯಲಾಗುತ್ತದೆ. ಇಂತಹ ಚಿತ್ರ ವಿಚಿತ್ರ ಐಷಾರಾಮಿ ಹೋಟೆಲ್‌ಗೆ ಬೆರಗಾಗಲೇಬೇಕು!

ಕೆಲವು ಹೋಟೆಲುಗಳು ತಮ್ಮ ಸ್ಥಾನವನ್ನು ಸ್ಪಷ್ಟಪಡಿಸುತ್ತವೆ. ಅಷ್ಟೇ ಏಕೆ, ವಿಶ್ವದ ವಿಸ್ಮಯಗಳಲ್ಲೊಂದಾದ ದುಬೈಯ ಬುರ್ಜ್ ಅಲ್ ಅರಬ್ ಕಟ್ಟಡ ಸಮುದ್ರತೀರದ ಪುಟ್ಟ ದ್ವೀಪದ ಮೇಲೆ ಸ್ಥಾಪಿಸಿದಂತೆ ಕಂಡುಬಂದರೂ ಇದರ ಅತ್ಯಂತ ತಳದ ಅಂತಸ್ತಿನಲ್ಲಿರುವ ಅಲ್ ಮಹಾರಾ ರೆಸ್ಟೋರೆಂಟ್ ನೀರಿನ ಮಟ್ಟಕ್ಕಿಂತಲೂ ಕೆಳಗಿದ್ದು ಅದರ ಕಿಟಕಿಗಳಿರುವ ಸ್ಥಾನದಲ್ಲಿ ದಪ್ಪನೆಯ ಗಾಜು ಸಮುದ್ರತಳದ ನೋಟವನ್ನು ನೀಡುತ್ತದೆ. ಬನ್ನಿ, ಇಂತಹ ಇನ್ನೂ ವಿಸ್ಮಯಭರಿತ ಹೋಟೆಲುಗಳ ಬಗ್ಗೆ ತಿಳಿದುಕೊಳ್ಳೋಣ:

ನಿಗೂಢ ಸ್ಥಳದಲ್ಲಿರುವ ವೆಬ್ ಅರ್ಬನಿಸ್ಟ್ ಹೋಟೆಲ್

ನಿಗೂಢ ಸ್ಥಳದಲ್ಲಿರುವ ವೆಬ್ ಅರ್ಬನಿಸ್ಟ್ ಹೋಟೆಲ್

ಪೊಸಾಯ್ಡಾನ್ ರಿಸಾರ್ಟ್ಸ್ ಎಂಬ ಸಂಸ್ಥೆಗೆ ಸೇರಿದ ಈ ನೆಲದಾಳದ ಹೋಟೆಲು ಎಲ್ಲಿದೆ ಎಂಬ ಯಾವ ಮಾಹಿತಿಯನ್ನೂ ಬಿಟ್ಟುಕೊಡದೇ ಕೇವಲ ಭರಿಸಲು ಸಾಧ್ಯವಿರುವ ಬೆಲೆಯಲ್ಲಿ ನಿಮಗೆ ನೀರಿನಾಳದ ವಿಶ್ವದ ಅತ್ಯುತ್ತಮ ನೋಟವನ್ನು ನೀಡುತ್ತೇವೆ ಎಂದೇ ಪ್ರಚಾರ ಮಾಡುತ್ತಿರುವ ಈ ಹೋಟೆಲ್ ಒಂದು ನೀರಿನಾಳದ ವಿಸ್ಮಯವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy -goodshomedesign.com

ನಿಗೂಢ ಸ್ಥಳದಲ್ಲಿರುವ ವೆಬ್ ಅರ್ಬನಿಸ್ಟ್ ಹೋಟೆಲ್

ನಿಗೂಢ ಸ್ಥಳದಲ್ಲಿರುವ ವೆಬ್ ಅರ್ಬನಿಸ್ಟ್ ಹೋಟೆಲ್

ಈಗಾಗಲೇ ಐನೂರಕ್ಕೂ ಹೆಚ್ಚು ನೀರಿನಾಳದ ಹೋಟೆಲುಗಳನ್ನು ನಿರ್ಮಿಸಿರುವ ಬ್ರೂಸ್ ಜೋನ್ಸ್ ಎಂಬ ಖ್ಯಾತ ವಾಸ್ತುಶಿಲ್ಪಿಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಒಂದು ಹೊಸ ಲೋಕದಂತೆ ಭಾಸವಾಗುತ್ತದೆ.

Image courtesy - goodshomedesign.com

ನಿಗೂಢ ಸ್ಥಳದಲ್ಲಿರುವ ವೆಬ್ ಅರ್ಬನಿಸ್ಟ್ ಹೋಟೆಲ್

ನಿಗೂಢ ಸ್ಥಳದಲ್ಲಿರುವ ವೆಬ್ ಅರ್ಬನಿಸ್ಟ್ ಹೋಟೆಲ್

ನೀರಿನ ಮಟ್ಟದಿಂದ ನಲವತ್ತು ಅಡಿ ಆಳದಲ್ಲಿರುವ ಹೋಟೆಲಿನಲ್ಲಿ ಕುಟುಂಬಕ್ಕೂ, ಹನಿಮೂನಿಗೆಂದು ಬಂದಿರುವ ಜೋಡಿಗಳಿಗೇ ಪ್ರತ್ಯೇಕವಾದ ಕೋಣೆಗಳಿವೆ. ಸುತ್ತಲೂ, ತಲೆಯ ಮೇಲೂ ನೀರಿದ್ದು ಜಲಚರಗಳು ಓಡಾಡುತ್ತಿರುವ ಕೋಣೆಗಳಲ್ಲಿ ಮಧುಚಂದ್ರ ಮುಗಿಸಿದವರಿಗೆ ಜೀವಮಾನವಿಡೀ ನೆನಪಿರುವಂತಹ ಅನುಭವವಾಗುತ್ತದೆ.

ಜ್ಯೂಲ್ಸ್ ನೀರಿನಾಳದ ಲಾಡ್ಜ್

ಜ್ಯೂಲ್ಸ್ ನೀರಿನಾಳದ ಲಾಡ್ಜ್

ಅಮೇರಿಕಾದ ಫ್ಲೋರಿಡಾದಲ್ಲಿರುವ ಕೀ ಲಾರ್ಗೋ ಎಂಬಲ್ಲಿ ಸುಮಾರು ಇಪ್ಪತ್ತು ಅಡಿಯ ನೀರಿನಲ್ಲಿ ಸುಂದರವಾದ ಲಾಡ್ಜ್ ಒಂದನ್ನು 1970ರಲ್ಲಿಯೇ ನಿರ್ಮಿಸಲಾಗಿದೆ. ಸಾಗರತಲದ ಬಗ್ಗೆ ಹಲವಾರು ಖ್ಯಾತ ಕೃತಿಗಳನ್ನು ನಿರ್ಮಿಸಿರುವ ಜ್ಯೂಲ್ಸ್ ಎಂಬ ಲೇಖಕರಿಗೆ ಸಮರ್ಪಿಸಿರುವ ಈ ಲಾಡ್ಜಿಗೆ ಅವರದ್ದೇ ಹೆಸರಿಡಲಾಗಿದೆ.

Image courtesy-buzzholiday.com

ಜ್ಯೂಲ್ಸ್ ನೀರಿನಾಳದ ಲಾಡ್ಜ್

ಜ್ಯೂಲ್ಸ್ ನೀರಿನಾಳದ ಲಾಡ್ಜ್

ಇಲ್ಲಿ ಹಲವು ಖ್ಯಾತನಾಮರು ಬಂದು ಕೆಲದಿನ ಉಳಿದಿದ್ದಾರೆ. ಕೆನಡಾ ಅಧ್ಯಕ್ಷ ಪೀಯರ್ ಟ್ರೂಡ್ಯೂ, ರಾಕ್ ಸಂಗೀತಗಾರರಾದ ಸ್ಟೀವ್ ಟೇಲರ್, ಜಾನ್ ಫಿಶ್ಮನ್ ಮೊದಲದವರಿಗೆ ಇದು ನೆಚ್ಚಿನ ತಾಣವಾಗಿದೆ. ದಿನಕ್ಕೆ ಮುನ್ನೂರೈವತ್ತು ಡಾಲರುಗಳಷ್ಟು ಇರುವ ಇದರ ಬೆಲೆಯನ್ನು ಅಮೇರಿಕಾದ ಸಾಮಾನ್ಯ ಜನರು ಭರಿಸುವಂತಿದ್ದು ಸದಾ ಜನರಿಂದ ತುಂಬಿರುತ್ತದೆ.

Image courtesy- buzzholiday.com

ಜಾಂಜಿಬಾರ್ ನ ಪೆಂಬಾ ದ್ವೀಪದಲ್ಲಿರುವ ಮಾಂತಾ ರೆಸಾರ್ಟ್

ಜಾಂಜಿಬಾರ್ ನ ಪೆಂಬಾ ದ್ವೀಪದಲ್ಲಿರುವ ಮಾಂತಾ ರೆಸಾರ್ಟ್

ಚಿಕ್ಕದಾದರೂ ಚೊಕ್ಕದಾಗಿದ್ದು ಬರೆಯ ಹದಿಮೂರು ಅಡಿ ನೀರಿನಲ್ಲಿರುವ ಕೋಣೆಗಳ ಈ ಹೋಟೆಲು ಜಾಂಜಿಬಾರ್ ನ ಪೆಂಬಾ ದ್ವೀಪದಲ್ಲಿದೆ. ಆದರೆ ಬೆಲೆ ಮಾತ್ರ ಬಲು ದುಬಾರಿ, ಎಂದರೆ ಪ್ರತಿದಿನಕ್ಕೆ ಸುಮಾರು ಸಾವಿರ ಡಾಲರು ಕೊಡಬೇಕು. ವಿಶೇಷವೆಂದರೆ ಇದರ ಮುಖ್ಯ ಕಟ್ಟಡ ತೀರದಲ್ಲಿದ್ದರೂ ನೀರಿನಾಳದ ಕೋಣೆ ಬೇಕೆಂದರೆ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕು. ದ್ವೀಪಕ್ಕೆ ಅನತಿ ದೂರದಲ್ಲಿ ಪುಟ್ಟ ಚೌಕಾಕಾರದ ಕಟ್ಟಡದ ಒಂದು ಮಾಳಿಗೆ ನೀರಿನ ಮೇಲಿದ್ದು ಉಳಿದ ಭಾಗ ನೀರಿನಲ್ಲಿದೆ. ತಳಮಟ್ಟದ ಕೋಣೆಗೆ ಒಟ್ಟು ಎಂಟು ಕಿಟಕಿಗಳಿದ್ದು ಸುತ್ತಲೂ ಮೀನುಗಳು ಈಜಾಡುತ್ತಿರುವುದನ್ನು ನೋಡುತ್ತಾ ಮೈಮರೆಯಬಹುದು.

Image courtesy- fancyholidays.com

ಸ್ವೀಡನ್ನಿನ ಅಟ್ಟರ್ ಇನ್ನ್

ಸ್ವೀಡನ್ನಿನ ಅಟ್ಟರ್ ಇನ್ನ್

ನೀರಿನಾಳದ ಜೀವಿಗಳ ವೈವಿಧ್ಯತೆಯನ್ನು ಅತ್ಯಂತ ಹತ್ತಿರದಿಂದ ತೋರಿಸುವ ಏಕಮಾತ್ರ ಹೋಟೆಲಾಗಿದ್ದು ಅದ್ಭುತ ಲೋಕವನ್ನೇ ತೆರೆದಿಡುತ್ತದೆ. ವಿಶೇಷವೆಂದರೆ ಈ ಹೋಟೆಲಿನಲ್ಲಿರುವುದು ಒಂದೇ ಕೋಣೆ, ಎರಡೇ ಅಂತಸ್ತು. ಒಂದು ನೀರಿನ ಮೇಲೆ, ಇನ್ನೊಂದು ನೀರಿನ ಕೆಳಗೆ. ಆದರೆ ಇದು ಇರುವುದು ಸಾಗರದಲ್ಲಲ್ಲ, ವಸ್ತೆರಾಸ್ ಎಂಬ ಪಟ್ಟಣದಲ್ಲಿರುವ ಮಾಲಾರೆನ್ ಎಂಬ ಕೆರೆಯಲ್ಲಿ! ಸ್ವೀಡನ್ನಿನ ಮಿಖಾಯೆಲ್ ಗೆನ್ಬರ್ ಎಂಬವರಿಗೆ ಮೂಡಿದ ಕಲ್ಪನೆಯನ್ನೇ ಸಾಕಾರಗೊಳಿಸಿದ ಬಳಿಕ ಇದರಿಂದ ಹಣವನ್ನೇಕೆ ಮಾಡಿಕೊಳ್ಳಬಾರದು ಎಂಬ ಆಲೋಚನೆಯಿಂದ 2000ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು.

Image courtesy- excitementnnet.blogspot.in

ಫಿಜಿಯ ಪೊಸಾಯ್ಡಾನ್ ನೀರಿನಾಳದ ರಿಸಾರ್ಟ್

ಫಿಜಿಯ ಪೊಸಾಯ್ಡಾನ್ ನೀರಿನಾಳದ ರಿಸಾರ್ಟ್

ಪ್ರವಾಸೋದ್ಯಮವೇ ಮುಖ್ಯವಾಗಿರುವ ಫಿಜಿ ದ್ವೀಪಗಳಲ್ಲಿ ಹಲವಾರು ಪರ್ವತ, ಉದ್ಯಾನ ಮತ್ತಿತರ ಪ್ರವಾಸಿತಾಣಗಳಿವೆ. ಆದರೆ ಫಿಜಿಯ ಸೌಂದರ್ಯವನ್ನು ಪೂರ್ಣವಾಗಿ ಆಸ್ವಾದಿಸಬೇಕೆಂದರೆ ಸಾಗರದಾಳದ ಸೌಂದರ್ಯವನ್ನೂ ನೋಡಲೇ ಬೇಕು. ಈ ಕೊರತೆಯನ್ನು ಪೊಸಾಯ್ಡಾನ್ ಸಂಸ್ಥೆ ನೀಗಿಸಿದೆ. ಸುಮಾರು ಐದು ಸಾವಿರ ಎಕರೆ ಪುಟ್ಟ ದ್ವೀಪಗಳಿರುವ ಜಾಗವನ್ನು ಆಕ್ರಮಿಸಿಕೊಂಡಿರುವ ಈ ಹೋಟೆಲು ನೆಲದಾಳದಲ್ಲಿ ಒಂದು ಪ್ರತ್ಯೇಕವಾದ ಹೋಟೆಲನ್ನು ನಿರ್ಮಿಸಿದೆ. ಇಲ್ಲಿ ಬಾಡಿಗೆಗೆ ಕೋಣೆ ಪಡೆಯುವುದು ಬಲು ದುಬಾರಿ. ಈ ಕೋಣೆಗಳು ಎಲ್ಲಿವೆ ಎಂಬ ಮಾಹಿತಿಯನ್ನು ನಿಗೂಢವಾಗಿರಿಸುವ ಮೂಲಕ ಈ ಬಗ್ಗೆ ಪ್ರವಾಸಿಗರಲ್ಲಿ ಕುತೂಹಲ ಮೂಡಿಸುತ್ತದೆ. ಆದರೆ ಇಲ್ಲಿನ ವಾಸ್ತವ್ಯ ಮರೆಯಲಾರದ ಅನುಭವ ಎಂದು ಇಲ್ಲಿ ವಾಸ್ತವ್ಯ ಹೂಡಿದ್ದವರು ತಿಳಿಸುತ್ತಾರೆ.

Image courtesy-www.jebiga.com

ದುಬೈಯ ಏಪೀರಿಯಾನ್ ದ್ವೀಪ ಹೋಟೆಲ್

ದುಬೈಯ ಏಪೀರಿಯಾನ್ ದ್ವೀಪ ಹೋಟೆಲ್

ದುಬೈಯಲ್ಲಿ ಹಲವು ಹೋಟೆಲುಗಳಿದ್ದು ಅವುಗಳಲ್ಲಿ ಕೆಲವು ನೀರಿನಾಳದಲ್ಲಿವೆ. ಏಪೀರಿಯಾನ್ ಹೋಟೆಲ್ ಇದರಲ್ಲಿ ಪ್ರಮುಖವಾದುದು. ಅತಿಥಿಗಳಿಗೆ ಅಗತ್ಯವಿರುವ ಯಾವುದೇ ಸೌಲಭ್ಯವನ್ನು ಒದಗಿಸಬಲ್ಲ ಸಪ್ತತಾರಾ ಹೋಟೆಲ್ ಆಗಿರುವ ಈ ಹೋಟೆಲಿನಲ್ಲಿ ನಾನೂರು ಕೋಣೆಗಳಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದುಬೈಯ ಏಪೀರಿಯಾನ್ ದ್ವೀಪ ಹೋಟೆಲ್

ದುಬೈಯ ಏಪೀರಿಯಾನ್ ದ್ವೀಪ ಹೋಟೆಲ್

ದೂರದಿಂದ ನೋಡಿದರೆ ಲಾಲಿಕೆಯ ಒಂದು ಭಾಗ ಕತ್ತರಿಸಿ ನೆಲದಲ್ಲಿ ಸಿಕ್ಕಿಸಿದಂತೆ ತೋರುವ ಈ ಕಟ್ಟಡದ ರೆಸ್ಟೋರೆಂಟ್ ಮಾತ್ರ ನೆಲಮಟ್ಟಕ್ಕಿಂತಲೂ ಕೆಳಗಿದ್ದು ಕಿಟಕಿಗಳಿರುವಲ್ಲಿ ದಪ್ಪನೆಯ ಗಾಜಿನ ಮೂಲಕ ಸಮುದ್ರದ ಆಳದ ಲೋಕವನ್ನು ನೋಡಬಹುದು.

ದುಬೈಯ ಏಪೀರಿಯಾನ್ ದ್ವೀಪ ಹೋಟೆಲ್

ದುಬೈಯ ಏಪೀರಿಯಾನ್ ದ್ವೀಪ ಹೋಟೆಲ್

ಮೇಲ್ಮಟ್ಟದ ಅಂತಸ್ತುಗಳು ಮೇಲೇರಿದಂತೆ ಅಗಲವಾಗುತ್ತಾ ಹೋಗುತ್ತವೆ. ಎಲ್ಲೆಡೆ ಗಿಡಮರಗಳನ್ನು ಯಥೇಚ್ಛವಾಗಿ ಬೆಳೆಸಿದ್ದು ಕಾಡಿನಲ್ಲಿರುವ ಅನುಭವ ನೀಡುತ್ತದೆ.

ದುಬೈಯ ಕ್ರೆಸೆಂಟ್ ಹೈಡ್ರೋಪೋಲೀಸ್ ಹೋಟೆಲ್

ದುಬೈಯ ಕ್ರೆಸೆಂಟ್ ಹೈಡ್ರೋಪೋಲೀಸ್ ಹೋಟೆಲ್

ಸಾಮಾನ್ಯವಾಗಿ ಈ ಹೋಟೆಲಿನಲ್ಲಿ ರಾಜಮನೆತನದ ಸದಸ್ಯರು ಮತ್ತು ಅತಿ ಪ್ರಭಾವಶಾಲಿ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಇದರ ಕೋಣೆಗಳ ಗೋಡೆ, ಊಟ ಮಾಡುವ ಸ್ಥಳ, ಸಭಾಗೃಹ, ಸ್ವಾಗತ ಕೋಣೆ ಮತ್ತು ಒಳಾಂಗಣ ಕ್ರೀಡಾಂಗಣ ಎಲ್ಲವನ್ನೂ ಬಹುತೇಕ ಗಾಜಿನಿಂದಲೇ ನಿರ್ಮಿಸಲಾಗಿದೆ.

Image courtesy-vizts.com

ದುಬೈಯ ಕ್ರೆಸೆಂಟ್ ಹೈಡ್ರೋಪೋಲೀಸ್ ಹೋಟೆಲ್

ದುಬೈಯ ಕ್ರೆಸೆಂಟ್ ಹೈಡ್ರೋಪೋಲೀಸ್ ಹೋಟೆಲ್

ಅದರಲ್ಲೂ ಮಲಗುವ ಕೋಣೆಗಳ ತಳವನ್ನು ಗಾಜಿನ ಚಪ್ಪಡಿಗಳಿಂದ ಮಾಡಿದ್ದು ಕೆಳಗೆ ಮೀನುಗಳು ಓಡಾಡುವುದನ್ನು ನೋಡಬಹುದು. ಒಟ್ಟು ಇನ್ನೂರಾಮೂವತ್ತು ಅತಿ ಭವ್ಯ ಕೋಣೆಗಳಿರುವ ಈ ಹೋಟೆಲಿನ ತಳ ಅಂತಸ್ತು ಅರವತ್ತಾರು ಅಡಿ ನೀರಿನ ಕೆಳಗಿದ್ದು ಬೇರೆಯೇ ಲೋಕವನ್ನು ತೋರಿಸುತ್ತದೆ.

ದುಬೈಯ ವಾಟರ್ ಡಿಸ್ಕಸ್ ಹೋಟೆಲ್

ದುಬೈಯ ವಾಟರ್ ಡಿಸ್ಕಸ್ ಹೋಟೆಲ್

ದುಬೈಯಲ್ಲಿ ಹಲವಾರು ಐಶಾರಾಮಿ ಹೋಟೆಲುಗಳಿದ್ದರೂ ವಿಚಿತ್ರ ವಿನ್ಯಾಸದ ಕಟ್ಟಡಗಳಿಗೇನೂ ಕೊರತೆಯಿಲ್ಲ. ದೂರದಿಂದ ನೋಡಿದರೆ ಐದು ಹಾರುವ ತಟ್ಟೆಗಳು ಗಾಳಿಯಲ್ಲಿ ನಿಶ್ಚಲವಾಗಿ ನಿಂತಿರುವಂತೆ ಕಾಣುವ ಈ ಹೋಟೆಲ್ ಐದು ಕಂಭಗಳ ಮೇಲೆ ನಿಲ್ಲಿಸಿರುವಂತೆ ಕಾಣುತ್ತದೆ. ಆದರೆ ಮಧ್ಯದ ಕಂಭದ ತಳದಲ್ಲಿ ವೃತ್ತಾಕಾರದ ಕಟ್ಟಡವೊಂದಿದೆ. ಕೇವಲ ಇಪ್ಪತ್ತೊಂದು ಅತಿ ಐಶಾರಾಮಿ ಕೋಣೆಗಳಿವೆ. ಐಶಾರಾಮಿ ಲಾಬಿ, ಈಜುಕೊಳ ಮತ್ತು ವಿಶಾಲವಾದ ನಡುಕೋಣೆಯ ಸುತ್ತಲೂ ಸಮುದ್ರದ ಜೀವಿಗಳು ಈಜಾಡುತ್ತಿರುವ ನೋಟ ಅವಿಸ್ಮರಣೀಯವಾಗಿದೆ.

Image courtesy-mpora.com

ಚೀನಾದ ಶಿಮಾನೋ ವಂಡರ್ಲ್ಯಾಂಡ್

ಚೀನಾದ ಶಿಮಾನೋ ವಂಡರ್ಲ್ಯಾಂಡ್

ಜನಸಂಖ್ಯೆ ವಿಪರೀತವಾಗಿದ್ದರೂ ಐಶಾರಾಮಕ್ಕೆ ಚೀನಾ ಸಹಾ ಹಿಂದಿಲ್ಲ. ವಿಚಿತ್ರ ಎಂದರೆ ಈ ಹೋಟೆಲ್ ಇರುವುದು ಸಾಗರ ಅಥವಾ ಕೆರೆಯಲ್ಲಲ್ಲ, ಮುಚ್ಚಿ ಹೋದ ಗಣಿಯ ಒಂದು ಪಾರ್ಶ್ವದಲ್ಲಿಯೇ ಗೋಡೆಗೆ ಆನಿಸಿದಂತೆ ಬಹುಮಹಡಿ ಕಟ್ಟಡವನ್ನು ಕಟ್ಟಲಾಗಿದ್ದು ತಳಮಹಡಿ ನೀರಿನಾಳದಲ್ಲಿರುವಂತೆ ನಿರ್ಮಿಸಲಾಗಿದೆ.

ಚೀನಾದ ಶಿಮಾನೋ ವಂಡರ್ಲ್ಯಾಂಡ್

ಚೀನಾದ ಶಿಮಾನೋ ವಂಡರ್ಲ್ಯಾಂಡ್

ಪಂಚತಾರಾ ಹೋಟೆಲಿನ ವರ್ಗ ಪಡೆದಿರುವ ಇದರಲ್ಲಿ ಹಲವಾರು ಅತಿ ಐಶಾರಾಮಿ ಕೋಣೆಗಳು, ಅತಿ ವಿಶಾಲವಾದ ಸಭಾಗೃಹ, ಆಡುವ ಸ್ಥಳ, ಒಳಾಂಗಣ ಜಿಮ್, ಈಜುಕೊಳ ಮೊದಲಾದವು ಇವೆ. ತಳದ ಎರಡು ಅಂತಸ್ತುಗಳು ನೀರಿನಾಳದಲ್ಲಿದ್ದು ಇಡಿಯ ಮುಂಭಾಗದ ಗೋಡೆಯನ್ನೇ ದಪ್ಪ ಗಾಜಿನ ಮೂಲಕ ಆವರಿಸಲಾಗಿದ್ದು ಕೆರೆಯ ನೀರಿನಾಳದ ನೋಟವನ್ನು ನೀಡುತ್ತದೆ.

English summary

Spectacular Underwater Hotels in the World

An underwater hotel is one of the most amazing adventures of life. Those who love marine life and want to explore the spectacular water species either visit the artificial lakes or aquariums, or go to the nearby sea points and rivers. But what if you get the chance of exploring the beautiful underwater species very closely, isn’t it amazing? Yes definitely it will be. So here are the
X
Desktop Bottom Promotion