ಇದು ಅಂಗೈ ನೋಡಿ ಹೇಳುವ ಶಾಸ್ತ್ರ! ನಿಮ್ಮದೂ ತಿಳಿದುಕೊಳ್ಳಿ...

By: manu
Subscribe to Boldsky

ನಮ್ಮ ಅಂಗೈ ಬಹಳ ಚಿಕ್ಕದಾಗಿದ್ದರೂ ಇದರಲ್ಲಿ ತಿಳಿದು ಕೊಳ್ಳಲು ಅನೇಕ ವಿಚಾರಗಳಿರುತ್ತವೆ. ಹಸ್ತ ಮುದ್ರಿಕಾ ತಜ್ಞರು ಹೇಳುವ ಪ್ರಕಾರ ನಮ್ಮ ಅಂಗೈ ಒಂದು ಕನ್ನಡಿ ಇದ್ದಂತೆ. ಇದು ನಮ್ಮ ಜೀವನದ ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ವಿಶೇಷ ವಿಚಾರಗಳನ್ನು ತೆರೆದಿಡುತ್ತದೆ. ಕೆಲವು ಹಸ್ತ ಮುದ್ರಿಕೆಗಳು ನಮ್ಮ ವ್ಯಕ್ತಿತ್ವದ ಬಗ್ಗೆಯೂ ಮಾಹಿತಿ ನೀಡುತ್ತದೆ. ಇಂದು ನಾವು ಅಂಗೈಯಲ್ಲಿರುವ ಹೃದಯ ರೇಖೆಯ ಬಗ್ಗೆ ಅರಿಯೋಣ....

ನಿಮ್ಮ ಹಸ್ತಗಳನ್ನು ನೋಡಿ, ಆಮೇಲೆ ಈ ಲೇಖನವನ್ನು ತಪ್ಪದೇ ಓದಿ

ಈ ರೇಖೆಯು ಬೆರಳಿನ ಅಡಿ ಭಾಗದಿಂದ, ಅಂಗೈನ ಅಂಚಿನಿಂದ ಆರಂಭವಾಗುತ್ತದೆ. ಅಂಗೈಯ ಮೇಲ್ಭಾಗದ ರೇಖೆಯಾಗಿದ್ದು, ಇದು ಅರ್ಧ ಚಂದ್ರಾಕೃತಿಯಲ್ಲಿ ಇರುತ್ತದೆ. ಇದು ಎರಡು ಅಂಗೈಗಳಲ್ಲೂ ಇರುವುದನ್ನು ಕಾಣಬಹುದು. ಎರಡು ಕೈಗಳನ್ನು ಜೋಡಿಸಿದಾಗ ಹೃದಯ ರೇಖೆಗಳು ಸೇರಿ ಅರ್ಧ ಚಂದ್ರಾಕೃತಿಯಾಗುತ್ತದೆ. ಈ ಆಕೃತಿಗಳು ಒಬ್ಬೊಬ್ಬರ ಅಂಗೈಯಲ್ಲಿ ಒಂದೊಂದು ರೀತಿಯಲ್ಲಿರುತ್ತದೆ. ಹಾಗಾದರೆ ಬನ್ನಿ ಇದರ ಸೇರ್ಪಡೆ ಹಾಗೂ ವಿನ್ಯಾಸದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ...

ಹೃದಯ ರೇಖೆ ಸೇರಿಕೊಂಡರೆ

ಹೃದಯ ರೇಖೆ ಸೇರಿಕೊಂಡರೆ

ಎರಡು ಅಂಗೈನಿಂದ ಹೃದಯ ರೇಖೆಯು ಸೇರಿಕೊಂಡರೆ ಅರ್ಧ ಚಂದ್ರಾಕೃತಿ ಕಾಣುವುದು. ಹೀಗಿದ್ದವರು ಬಹಳ ಶಾಂತ ಮತ್ತು ಶುದ್ಧ ಮನಸ್ಸಿನ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಇವರ ಕುಟುಂಬದವರು ಇವರ ಸಂಗಾತಿಯನ್ನು ಇಷ್ಟಪಡುತ್ತಾರೆ.

ಹೃದಯ ರೇಖೆ ಸೇರಿಕೊಂಡರೆ

ಹೃದಯ ರೇಖೆ ಸೇರಿಕೊಂಡರೆ

ನೀವೊಬ್ಬ ಉತ್ತಮ ಪ್ರಿಯತಮೆ/ಪ್ರಿಯತಮ ರಾಗಿರುತ್ತೀರಿ. ನಿಮ್ಮ ಪ್ರೀತಿ ಪಾತ್ರರ ಆಯ್ಕೆ ಮಾಡುವಾಗ ಮತ್ತು ನಿಮ್ಮ ಪ್ರೀತಿಗೆ ಸಮಾಜ ಅಡ್ಡಿಯನ್ನುಂಟುಮಾಡಿದರೆ, ಸಮಾಜದ ಬಗ್ಗೆ ತಲೆಕೆಡಿಸಿಕೊಳ್ಳದ ಸ್ವಭಾದವರು ನೀವಾಗಿರುತ್ತೀರಿ.

ಎಡಗೈ ರೇಖೆ ಮೇಲಿದ್ದರೆ

ಎಡಗೈ ರೇಖೆ ಮೇಲಿದ್ದರೆ

ಇವರಿಗೆ ಎದುರಾಗುವ ಸವಾಲುಗಳನ್ನು ಖುಷಿಯಿಂದ ಸ್ವೀಕರಿಸುತ್ತಾರೆ. ಇವರು ಸಂಗಾತಿಯು ಸವಾಲುಗಳಲ್ಲಿ ಪಾಲುದಾರಳು/ರ ಆಗಿರಬೇಕೆಂದು ಬಯಸುವುದಿಲ್ಲ. ಇವರು ತನ್ನ ವಯಸ್ಸಿಗಿಂತ ಅತೀ ಕಿರಿಯವರನ್ನು ಮದುವೆಯಾಗುತ್ತಾರೆ. ಇಲ್ಲವೇ ವಿದೇಶದವರಾಗಿರುತ್ತಾರೆ.

ಹೃದಯ ರೇಖೆ ಉದ್ದವಾಗಿ ಬಾಗಿದ್ದರೆ

ಹೃದಯ ರೇಖೆ ಉದ್ದವಾಗಿ ಬಾಗಿದ್ದರೆ

ಇವರು ಅತ್ಯಂತ ನೇರ ಸ್ವಭಾವದವರಾಗಿರುತ್ತಾರೆ. ಕೆಲವು ವಿಚಾರಗಳು ಆಗಬಾರದೆಂದು ಕಂಡರೆ ಅದಕ್ಕೆ ಅನುಗುಣವಾಗಿ ನಡೆಯಲು ಇಷ್ಟಪಡುವುದಿಲ್ಲ, ಬದಲಿಗೆ ಆ ವಿಚಾರವನ್ನು ಅಲ್ಲಿಗೆ ನಿಲ್ಲಿಸುತ್ತಾರೆ.

ಹೃದಯ ರೇಖೆ ಗುರುಗ್ರಹದ ಪರ್ವದಲ್ಲಿ ಮುಕ್ತಾಯಗೊಂಡರೆ

ಹೃದಯ ರೇಖೆ ಗುರುಗ್ರಹದ ಪರ್ವದಲ್ಲಿ ಮುಕ್ತಾಯಗೊಂಡರೆ

ಇವರು ಪ್ರೀತಿ, ಕನಸು ಮತ್ತು ನಿರೀಕ್ಷೆಗಳನ್ನು ಅತಿಯಾಗಿ ಹೊಂದಿರುತ್ತಾರೆ.

ನೇರವಾದ ಹೃದಯ ರೇಖೆ

ನೇರವಾದ ಹೃದಯ ರೇಖೆ

ಇವರು ಸ್ಥಿರ ಹಾಗೂ ಸಾಂಪ್ರದಾಯಿಕ ವ್ಯಕ್ತಿತ್ವದವರು. ಪ್ರೀತಿ-ಪ್ರೇಮದಲ್ಲಿ ನಾಚಿಕೆ ಸ್ವಭಾವದವರಾಗಿ, ನಿಷ್ಕ್ರಿಯ ಪಾತ್ರದಾರರಾಗಿ ವರ್ತಿಸುತ್ತೀರಿ.

ಹೃದಯ ರೇಖೆಯ ತುದಿಯು ಬಾಗಿದಂತೆ ಇದ್ದರೆ

ಹೃದಯ ರೇಖೆಯ ತುದಿಯು ಬಾಗಿದಂತೆ ಇದ್ದರೆ

ಹೃದಯ ರೇಖೆಯು ಬಾಗಿದಂತೆ ಕೆಳಮುಖವಾಗಿದ್ದರೆ ಇವರು ಪ್ರೀತಿ ಹಾಗೂ ಪ್ರೀತಿಪಾತ್ರರಿಗಾಗಿ ಎಲ್ಲಾ ಬಗೆಯ ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ.

ಮೇಲ್ಮುಖವಾಗಿ ಕವಲುಗಳನ್ನು ಹೊಂದಿದ್ದರೆ

ಮೇಲ್ಮುಖವಾಗಿ ಕವಲುಗಳನ್ನು ಹೊಂದಿದ್ದರೆ

ಈ ರೀತಿಯಿದ್ದರೆ ವೈವಾಹಿಕ/ಪ್ರೀತಿಯ ವಿಚಾರದಲ್ಲಿ ಒಳ್ಳೆಯದನ್ನು ಸೂಚಿಸುತ್ತದೆ. ಅದೇ ಇನ್ನೊಂದು ಅಂಗೈಯಲ್ಲಿ ಈ ರೇಖೆಗೆ ಕೆಳಮುಖದ ಕವಲುಗಳಿದ್ದರೆ ಅದು ವಿಚ್ಛೇದಿತ ಜೀವನ ಅಥವಾ ಅಸಂತೋಷದ ವೈವಾಹಿಕ ಜೀವನವನ್ನು ಸೂಚಿಸುತ್ತದೆ.

ರೇಖೆಯ ತುದಿಯಲ್ಲಿ ತ್ರಿಶೂಲದಂತೆ ಕವಲಿದ್ದರೆ

ರೇಖೆಯ ತುದಿಯಲ್ಲಿ ತ್ರಿಶೂಲದಂತೆ ಕವಲಿದ್ದರೆ

ಈ ರೀತಿಯ ರೇಖೆಯಿದ್ದರೆ ಅದು ಜೀವನದಲ್ಲಿ ಅದೃಷ್ಟವಂತರು ಅಥವಾ ಜೀವನದಲ್ಲಿ ಒಳ್ಳೆಯ ಯೋಗವಿದೆ ಎನ್ನುವುದನ್ನು ಸೂಚಿಸುತ್ತದೆ. ಅಲ್ಲದೆ ಇವರು ತಮ್ಮವರಿಂದ ಅತಿಯಾದ ಪ್ರೀತಿಯನ್ನು ಪಡೆದು ಪ್ರೀತಿಯನ್ನು ನೀಡುತ್ತಾರೆ.

English summary

Half-Moon Shape Of The Heart Line Can Be Special

To a palmistry expert, your hands are like mirrors. They can reveal a lot of hidden things about your past and future. Your personality can also be guessed by reading the lines of your palm. Before we begin this article, let's tell you something about the heart line. It starts from the edge of the palm under the little finger and runs across the upper half of the palm.
Subscribe Newsletter