ಪೊಲೀಸ್ ಕೆಲಸದಲ್ಲಿ ಮಹಿಳೆಯರಾಗಿ ಮಿಂಚಿದ ವೀರ ವನಿತೆಯರು

By: Divya pandith
Subscribe to Boldsky

ವಿವಿಧ ಭಾಷೆ, ಜಾತಿ-ಮತಗಳ ತವರಾದ ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ-ಮಾನವನ್ನು ನೀಡಲಾಗುತ್ತದೆ. ಅಂತೆಯೇ ಮಹಿಳೆಯರು ಸಹ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಜೀವನವನ್ನು ನಡೆಸುವುದರ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಮನೆಯ ನಿರ್ವಹಣೆಯಿಂದ ಹಿಡಿದು ದೇಶದ ಚುಕ್ಕಾಣಿ ಹಿಡಿದು ನಡೆಸುವಷ್ಟು ಸಾಮರ್ಥ್ಯ ನಮ್ಮ ಮಹಿಳೆಯರಿಗಿದೆ ಎನ್ನುವುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು.

ನಿಜ, ಮನೆ ಮಂದಿಯ ಆರೋಗ್ಯ-ಆರೈಕೆಯನ್ನು ಬಹಳ ಕಾಳಜಿ ಹಾಗೂ ನಾಜೂಕಿನಿಂದ ಮಾಡುವುದರ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳಾಗುವುದರ ಮೂಲಕ ದೇಶದ ರಕ್ಷಣೆಯನ್ನು ಮಾಡುತ್ತಿದ್ದಾರೆ. ಅಂತಹ ಧೈರ್ಯವಂತ ಮಹಿಳೆಯರ ಬಗ್ಗೆ ಅನೇಕರು ತಿಳಿದಿಲ್ಲ. ಅವರ ಕಿರು ಪರಿಚಯ ಮಾಡಿಕೊಡುವುದರ ಮೂಲಕ ಬೋಲ್ಡ್ ಸ್ಕೈ ಮಹಿಳೆಯರ ಸಾಧನೆಯನ್ನು ಬಿಚ್ಚಿಡುವುದರ ಮೂಲಕ ಮಹಿಳಾ ಸಾಮರ್ಥ್ಯವನ್ನು ತೋರಿಸಿಕೊಡುತ್ತಿದೆ. ಹಾಗಾದರೆ ಆ ಮಹಿಳೆಯರು ಯಾರು? ಯಾರು? ಎನ್ನುವುದನ್ನು ನಿಮಗೂ ತಿಳಿದುಕೊಳ್ಳಬೇಕೆನ್ನುವ ಆಸೆ ಹಾಗೂ ಕುತೂಹಲವಿದ್ದರೆ ಈ ಮುಂದಿನ ವಿವರಣೆಯನ್ನು ಪರಿಶೀಲಿಸಿ...

ಸೌಮ್ಯ ಸಂಬಾಸಿವನ್

ಸೌಮ್ಯ ಸಂಬಾಸಿವನ್

ಸೌಮ್ಯಾ ಸಾಂಬಸಿವನ್ 2009ರಲ್ಲಿ ಹಿಮಾಚಲ ಪ್ರದೇಶದ ಪೊಲೀಸ್ ಅಧೀಕ್ಷಕರಾಗಿ ಸೇವೆಸಲ್ಲಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಗೈಯುವುದರ ಮೂಲಕ ಹೆಸರಾಗಿದ್ದಾರೆ. ತನ್ನ ಕೆಲಸದಲ್ಲಷ್ಟೇ ಸಾಧನೆ ಮೀಸಲಾಗಿಟ್ಟಿರದೆ ವಿವಿಧ ಕ್ಷೇತ್ರದಲ್ಲೂ ಸಾಧನೆ ಗೈದಿದ್ದಾರೆ.

ಸೋನಿಯಾ ನರ್ಗಾವಿಯಾ

ಸೋನಿಯಾ ನರ್ಗಾವಿಯಾ

2006ರಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಎಮ್‍ಎಲ್‍ಎ ಯವರಿಗೆ ಕಪಾಳ ಮೋಕ್ಷ ಮಾಡುವುದರ ಮೂಲಕ ಅವರ ಮುಖವಾಡ ಕಳಚಿದ್ದಾರೆ. ಇದೀಗ ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಸಮಗ್ರತೆ ಮತ್ತು ಸರಳತೆಗೆ ಹೆಸರಾಗಿದ್ದಾರೆ.

ಮೆರಿನ್ ಜೋಸೆಫ್

ಮೆರಿನ್ ಜೋಸೆಫ್

ಮೆರಿನ್ ಜೋಸೆಫ್ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇವರು ತಮ್ಮದೇ ಆದ ಸಹಾಯಕ ಸ್ವಭಾವ ಹಾಗೂ ನಿಷ್ಠೆಯಿಂದ ಕೆಲಸ ಮಾಡುವುದರ ಮೂಲಕ ಹೆಸರಾಗಿದ್ದಾರೆ. ಪೊಲೀಸ್ ಅಧಿಕಾರಿಯಾದ ಇವರು ದಿನದ 24 ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಾರೆ.

ರುವೇದ ಸಲಾಮ್ವಿಯಾ

ರುವೇದ ಸಲಾಮ್ವಿಯಾ

ಕಾಶ್ಮೀರದಿಂದ ಬಂದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ಇವರ ತಂದೆ ಮಗಳು ಐಪಿಎಸ್ ಆಗಬೇಕೆಂಬ ಕನಸುಕಂಡಿದ್ದರು. ಅದನ್ನು ಮಗಳು ಪೂರೈಸಿದ್ದಾಳೆ. ಚೆನ್ನೈನಲ್ಲಿ ಪೊಲೀಸ್ ಸಹಾಯಕ ಕಮೀಷ್ನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮೀರಾ ಬೋರ್ವಾಂಕರ್

ಮೀರಾ ಬೋರ್ವಾಂಕರ್

ಕಿರಣ್ ಬೇಡಿಯವರ ಸುದ್ದಿಯನ್ನು ಓದುವುದರ ಮೂಲಕ ಈಕೆಗೆ ಐಪಿಎಸ್ ಅಧಿಕಾರಿಯಾಗಬೇಕೆಂಬ ಆಸೆ ಹುಟ್ಟಿತಂತೆ. ಕಾಲೇಜು ಜೀವನದಲ್ಲಿ ಆಕೆ ಹೆಚ್ಚು ಧೈರ್ಯಶಾಲಿಯಾಗಿ ಇದ್ದಿದ್ದರು. ಇದಕ್ಕೆ ಕಿರಣ್ ಬೇಡಿಯವರನ್ನು ಸ್ಫೂರ್ತಿಯಾಗಿಟ್ಟುಕೊಂಡಿರುವುದೇ ಕಾರಣ ಎನ್ನುತ್ತಾರೆ.

ಸಂಜುಕ್ತ ಪರಶಾವಿಯಾ

ಸಂಜುಕ್ತ ಪರಶಾವಿಯಾ

ಸಂಜುಕ್ತ 85 ಶ್ರೇಯಾಂಕ ಪಡೆಯುವುದರ ಮೂಲಕ ಐಎಎಸ್‍ಗೆ ಅರ್ಹತೆ ಪಡೆದುಕೊಂಡರು. ನಂತರ ಐಪಿಎಸ್ ಅಧಿಕಾರಿಯಾಗಬೇಕೆಂದು ಬಯಸಿದರು. ನಂತರದ ಕೆಲಸಕ್ಕೆ ಸೇರಿ 15 ತಿಂಗಳೊಳಗೆ 6 ಉಗ್ರಗಾಮಿಗಳನ್ನು ಕೊಂದು, 64 ಉಗ್ರಗಾಮಿಗಳನ್ನು ಹಿಡಿದ ವೀರ ವನಿತೆ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಕಿರಣ್ ಬೇಡಿ

ಕಿರಣ್ ಬೇಡಿ

ಪುರುಷರ ಕ್ಷೇತ್ರ ಎನಿಸಿಕೊಂಡ ಐಪಿಎಸ್ ಅಧಿಕಾರವನ್ನು ಮೊದಲ ಭಾರಿಗೆ ಒಬ್ಬ ಮಹಿಳೆಯಾಗಿ ಸೇರ್ಪಡೆಗೊಂವರು ಕಿರಣ್ ಬೇಡಿ. ತನ್ನ ಅಧಿಕಾರದ ಅವಧಿಯಲ್ಲಿ ನಿಷ್ಠಯಿಂದ ಕೆಲಸ ಮಾಡುವುದರ ಮೂಲಕ ಸಮಾಕ್ಕೆ ಪೂರಕವಾಗಿದ್ದರು. ಇದೀಗ ಪ್ರಭಾವಶಾಲಿ ಸಂಸದರು ಅಥವಾ ಶಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕಲ್ಪನಾ ಚಾವ್ಲಾ

ಕಲ್ಪನಾ ಚಾವ್ಲಾ

ಕಲ್ಪನಾ ಚಾವ್ಲಾ ಇವರು ಪೊಲೀಸ್ ಕ್ಷೇತ್ರದಲ್ಲಿ ಸೇವೆಸಲ್ಲಿಸದಿದ್ದರೂ ಇವರ ಸಾಧನೆಯನ್ನು ಮಾತ್ರ ಸ್ಮರಿಸಲೇಬೇಕು... ನಿಮಗೆ ನೆನಪಿರಬಹುದು, ಅಂದು, 2003, ಫೆ 1ರ ಶನಿವಾರ, ಟೀವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಬಿತ್ತರವಾಗಿದ್ದು ನಾಸಾದ ಸ್ಪೇಸ್ ಶಟಲ್ ಗಗನನೌಕೆಯೊಂದು ಹಿಂದಿರುತ್ತಿರುವಾಗ ಆಗಸದಲ್ಲಿಯೇ ಹೊತ್ತಿ ಉರಿದು ಅದರಲ್ಲಿದ್ದ ಒಟ್ಟು ಏಳು ಗಗನಯಾತ್ರಿಗಳು ವಿಧಿವಶರಾದ ವಿಷಯ. ಅವರಲ್ಲೊಬ್ಬರು ಭಾರತೀಯ ಮೂಲಕ ಕಲ್ಪನಾ ಚಾವ್ಲಾ ಎಂಬ ಸಂಗತಿ ಪ್ರಮುಖವಾಗಿತ್ತು. ಆ ಕ್ಷಣದವರೆಗೂ ಕಲ್ಪನಾ ಚಾವ್ಲಾ ಎಂಬ ವ್ಯಕ್ತಿಯ ಬಗ್ಗೆ ಇಡಿಯ ಭಾರತದಲ್ಲಿ ಬಲ್ಲವರ ಸಂಖ್ಯೆ ಹೆಚ್ಚೇನೂ ಇರಲಿಲ್ಲ. ಆದರೆ ಆ ಬಳಿಕ ಕಲ್ಪನಾ ರವರ ಬಗ್ಗೆ ವಿವರಗಳು ಹೊರಬೀಳುತ್ತಿದ್ದಂತೆಯೇ ಭಾರತ ಕಳೆದುಕೊಂಡಿದ್ದೇನು ಎಂದು ಸ್ಪಷ್ಟವಾಗುತ್ತಾ ಹೋಗಿತ್ತು. ಕಲ್ಪನಾ ಗಗನಯಾತ್ರಿಯಾಗಿರುವ ಎರಡನೆಯ ಭಾರತೀಯರು ಮತ್ತು ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ. ನಾಸಾದ ಉನ್ನತ ಹುದ್ದೆಯಲಂಕರಿಸಿ ಕೆಲವು ಗಗನಯಾತ್ರೆಗಳನ್ನು ಪೂರೈಸಿ ಅಮೇರಿಕಾ ಮತ್ತು ಭಾರತದ ಗೌರವವನ್ನು ಇನ್ನಷ್ಟು ಹೆಚ್ಚಿಸಿದ ಖ್ಯಾತಿ ಪಡೆದಿದ್ದಾರೆ. ತಮ್ಮ ಸ್ವದೇಶದ ಬಗ್ಗೆ ಅಪಾರ ಹೆಮ್ಮೆ ಮತ್ತು ಗೌರವವಿರಿಸಿಕೊಂಡಿದ್ದ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ಕಲ್ಪನಾ ಎಂಬ ಗಗನ ಕುಸುಮ ಕುರಿತ ಮೈನವಿರೇಳಿಸುವ ಸಂಗತಿಗಳು

English summary

Female Police Officers Who Deserve Great Respect

In this article, we are here to share the details of some of the most bravest women that India has. These women are the IPS officers who have made a benchmark for themselves. These leading women cops are shining bright across the nation, as they have successfully established a foothold in a profession that was once considered a bastion of their male counterparts. Check out to know more about them...
Subscribe Newsletter