For Quick Alerts
ALLOW NOTIFICATIONS  
For Daily Alerts

ಈತನ ಯೋಗ ಗುರು, ವಯಸ್ಸು ತೊಂಬತ್ತೇಳು! ಇವನ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ!

By Arshad
|

ಯೋಗಾಭ್ಯಾಸವನ್ನು ನಿತ್ಯದ ಅಭ್ಯಾಸವಾಗಿಸುವವರ ಆಯಸ್ಸು ಹೆಚ್ಚಿರುತ್ತದೆ ಹಾಗೂ ಈ ವ್ಯಕ್ತಿಗಳು ಆರೋಗ್ಯವಂತರೂ ಆಗಿರುತ್ತಾರೆ. ಹಳೆಯ ಕಾಯಿಲೆಗಳಿಗೆ ಶೀಘ್ರ ಉಪಶಮನ ಪಡೆಯುವುದು, ನಿತ್ಯದ ಚಟುವಟಿಕೆಗಳು ಉತ್ತಮವಾಗಿರಲು, ರೋಗ ಆವರಿಸದ ದೃಢಕಾಯ ಶರೀರವನ್ನು ದೀರ್ಘಾಯಸ್ಸಿನವರೆಗೆ ಕಾಪಾಡಿಕೊಳ್ಳಲು ಕೇವಲ ಯೋಗಾಭ್ಯಾಸದಿಂದ ಮಾತ್ರವೇ ಸಾಧ್ಯ.

ಭಾರತದ ಈ ಪ್ರಾಚೀನ ಕಲೆಯ ಪ್ರಭಾವವನ್ನು ಕಂಡುಕೊಂಡ ಹಲವು ವಿದೇಶೀಯರು ಯೋಗವನ್ನು ತಮ್ಮ ನಿತ್ಯದ ಅಭ್ಯಾಸವನ್ನಾಗಿಸಿಕೊಂಡು ಉತ್ತಮ ಆರೋಗ್ಯ ಪಡೆದು ದೀರ್ಘಾಯಸ್ಸು ಹೊಂದಿದ್ದಾರೆ. ಇಂತಹ ಓರ್ವ ಯೋಗಗುರು ತುರ್ಕಿ ದೇಶದವರಾಗಿದ್ದಾರೆ. ಕಾಜಿಂ ಗುರ್ಬುಜ್ ಎಂಬ ಹೆಸರಿನ ಈ ವ್ಯಕ್ತಿ ಕಳೆದ ಐವತ್ತಾರು ವರ್ಷಗಳಿಂದ ನಿತ್ಯವೂ ಕಠಿಣ ಯೋಗಾಭ್ಯಾಸಗಳನ್ನು ಮಾಡುತ್ತಾ ಎಲ್ಲಾ ಪಟ್ಟುಗಳಲ್ಲಿ ಎಷ್ಟು ಚೆನ್ನಾಗಿ ಪಳಗಿಬಿಟ್ಟಿದ್ದಾರೆಂದರೆ ಭಾರತದ ಖ್ಯಾತ ಯೋಗಪಟು ಬಾಬಾ ರಾಮದೇವರಿಗೂ ಸವಾಲೊಡ್ಡಬಲ್ಲರು.

ಇವರು ತಮ್ಮ ನಲವತ್ತೊಂದನೆಯ ವಯಸ್ಸಿನಲ್ಲಿ ಯೋಗಾಭ್ಯಾಸ ಪ್ರಾರಂಬಿಸಿದ್ದು ಈಗ ಇವರಿಗೆ ಭರ್ತಿ ತೊಂಬತ್ತೇಳು ವರ್ಷ! ಆದರೆ ನೋಡಲು ಇಂದಿಗೂ ಇವರು ಸುಮಾರು ಐವತ್ತು ವರ್ಷದವರಂತೆಯೇ ಕಾಣುತ್ತಾರೆ. ಅಷ್ಟೇ ಅಲ್ಲ, ತಮ್ಮ ಧರ್ಮವನ್ನೂ ಪಾಲಿಸುತ್ತಿದ್ದಾರೆ. ಇನ್ನೂ ಅಚ್ಚರಿ ತರುವ ವಿಷಯವೆಂದರೆ ಇವರು ಇಂದಿಗೂ ಸಕ್ರಿಯರಾಗಿ ಕಾಮಚಟುವಟಿಕೆಯಲ್ಲಿ ಭಾಗವಹಿಸಿ ದಿನಕ್ಕೆ ಸುಮಾರು ಮೂರರಿಂದ ಐದುಬಾರಿ ಪರಾಕಾಷ್ಠೆಯನ್ನೂ ಪಡೆಯುತ್ತಾರಂತೆ! ಬನ್ನಿ, ಈ ಯೋಗಪಟುವಿನ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ನೋಡೋಣ...

ಇವರು ಯಾವಾಗಿನಿಂದ ಯೋಗ ಪ್ರಾರಂಭಿಸಿದರು?

ಇವರು ಯಾವಾಗಿನಿಂದ ಯೋಗ ಪ್ರಾರಂಭಿಸಿದರು?

ಇವರಿಗೆ ನಲವತ್ತೊಂದು ವರ್ಷ ವಯಸ್ಸಾಗಿದ್ದಾಗ ಲಘು ಅಪಘಾತವೊಂದರಲ್ಲಿ ಬೆನ್ನುಮೂಳೆಯನ್ನು ಮುರಿದುಕೊಂಡ ಪರಿಣಾಮವಾಗಿ ಸೊಂಟದ ಕೆಳಗಿನ ಭಾಗ ಲಕ್ವಕ್ಕೆ ಒಳಗಾಗಿತ್ತು. ವೈದ್ಯರ ಪ್ರಕಾರ ಇನ್ನುಮುಂದೆ ಇವರು ನಡೆಯಲು ಅಸಮರ್ಥರಾಗಿದ್ದರು. ಆದರೆ ಪ್ರಯತ್ನವನ್ನು ಮಾಡದೇ ಒಪ್ಪದ ಮನೋಬಲದ ಕಾರಣ ಇವರು ತಮ್ಮ ಸ್ನೇಹಿತರು ಸೂಚಿಸಿದ 'ಜರುಗಿದ ಮೂಳೆಗಳನ್ನು ಮತ್ತೆ ಸ್ವಸ್ಥಾನಕ್ಕೆ ಸೇರಿಸುವ' ಪ್ರಯತ್ನಕ್ಕೆ ತಮ್ಮನ್ನು ತಾವೇ ಒಡ್ಡಿಕೊಂಡರು.

ತಮ್ಮ ಶರೀರವನ್ನೇ ಪ್ರಯೋಗಕ್ಕೆ ಒಡ್ಡಿದರು

ತಮ್ಮ ಶರೀರವನ್ನೇ ಪ್ರಯೋಗಕ್ಕೆ ಒಡ್ಡಿದರು

ಈ ಪ್ರಯೋಗಕ್ಕಾಗಿ ಇವರು ತಮ್ಮ ಶರೀರವನ್ನೇ ಒಡ್ಡಿದರು. ಒಂದೆರಡು ಬಾರಿಯಲ್ಲ ಪೂರ್ಣ ಅರವತ್ತಮೂರು ಬಾರಿ! ಸುಮಾರು ಒಂಭತ್ತು ತಿಂಗಳ ಸತತ ಪರಿಶ್ರಮದ ಬಳಿಕ ಇವರು ತಮ್ಮ ಕಾಲ ಮೇಲೆ ನಡೆಯಲು ಪ್ರಾರಂಭಿಸಿದರು. ಇದೊಂದು ಪವಾಡಕ್ಕೇನೂ ಕಡಿಮೆ ಸಾಧನೆಯಲ್ಲ. ಈ ಬಗ್ಗೆ ಇವರು ಹೀಗೆ ಹೇಳುತ್ತಾರೆ: "ನನಗೆ ನಡೆಯಲು ಸಾಧ್ಯವಾಗಿದ್ದು ನನ್ನ ಮನೋಬಲದ ಕಾರಣ. ಒಂದು ವೇಳೆ ಯಾವುದೇ ಮನುಷ್ಯ ತನ್ನ ಮನೋಬಲವನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಮೆದುಳು ಈ ಸ್ನಾಯು ಮತ್ತು ನರಗಳನ್ನು ಮತ್ತೊಮ್ಮೆ ಚಿಗುರಿಸಲು ಸೂಚನೆ ನೀಡುತ್ತದೆ. ನನಗೆ ಆಗಿದ್ದೂ ಅದೇ"

ಈ ಸಾಮರ್ಥ್ಯವನ್ನು ನೀವು ನಂಬಬಲ್ಲಿರಾ?

ಈ ಸಾಮರ್ಥ್ಯವನ್ನು ನೀವು ನಂಬಬಲ್ಲಿರಾ?

ಯೋಗಾಭ್ಯಾಸದಲ್ಲಿ ಅತ್ಯಂತ ಕಠಿಣವಾದ ಭಂಗಿಯೊಂದಿದೆ. ಈ ಆಸನವನ್ನು ಸಾಮಾನ್ಯರು ಅನುಸರಿಸುವುದೇ ಕಷ್ಟ. ಅದರಲ್ಲೂ ಈ ಭಂಗಿಯನ್ನು ಕೆಲವು ನಿಮಿಷಗಳವರೆಗೆ ಅನುಸರಿಸಬಲ್ಲರು ಅಷ್ಟೇ. ಆದರೆ ಕಾಜಿಂ ರವರು ಈ ಭಂಗಿಯಲ್ಲಿ ಸತತ ನಲವತ್ತೆಂಟು ಗಂಟೆ ಇರಬಲ್ಲರು ಹಾಗೂ ತಮ್ಮ ಉಸಿರನ್ನು ಸುಮಾರು ನಾಲ್ಕರಿಂದ ಐದು ನಿಮಿಷಗಳವ್ರೆಗೆ ಹಿಡಿದಿಟ್ಟುಕೊಳ್ಳಬಲ್ಲರು! ತೊಂಬತ್ತೇಳು ವರ್ಷದ ಈ ಇಳಿಯವಯಸ್ಸಿನಲ್ಲಿ ಈ ಸಾಮರ್ಥ ಉಳಿಸಿಕೊಳ್ಳುವುದು ಅತ್ಯಂತ ಅಚ್ಚರಿಯ ಹಾಗೂ ಯೋಗದ ಸಾಮರ್ಥ್ಯದ ಜ್ವಲಂತ ನಿದರ್ಶನವಾಗಿದೆ.

ಇವರ ಜೀವನದ ಮಂತ್ರ

ಇವರ ಜೀವನದ ಮಂತ್ರ

ಒಂದು ವೇಳೆ ಸರಿಯಾದ ಆಹಾರಕ್ರಮ ಹಾಗೂ ದೈಹಿಕ ಶ್ರಮದ ಅಭ್ಯಾಸಗಳಲ್ಲಿ ಕೊಂಚ ಹೆಚ್ಚಿನ ಶ್ರಮವಹಿಸುವ ಮೂಲಕ ನೂರಾಮೂವತ್ತು ವರ್ಷಗಳವರೆಗೂ ಬದುಕಿರಬಹುದು ಎಂದು ಕಾಜಿಂ ತಿಳಿಸುತ್ತಾರೆ. ಇಷ್ಟು ವಯಸ್ಸಾಗಿದ್ದರೂ ಕಾಜಿಂರವರು ತಮಗೆ ವಯಸ್ಸೇ ಆಗಿಲ್ಲ ಎಂದು ಭಾವಿಸುತ್ತಾರೆ ಹಾಗೂ ಇದಕ್ಕಾಗಿ ಯೋಗಾಭ್ಯಾಸಕ್ಕೆ ಧನ್ಯವಾದ ಹೇಳುವ ಇವರು ಯೋಗಾಭ್ಯಾಸವನ್ನು ನಿತ್ಯವೂ ತಪ್ಪದೇ ಅನುಸರಿಸುತ್ತಾರೆ.

ಇವರು ಸುಳ್ಳು ಹೇಳುತ್ತಿರಬಹುದೇ?

ಇವರು ಸುಳ್ಳು ಹೇಳುತ್ತಿರಬಹುದೇ?

ಇವರು ತಮ್ಮ ಬಗ್ಗೆ ಹೇಳುತ್ತಿರುವುದು ಸುಳ್ಳಾಗಿರಬಹುದು ಎಂದು ಅನುಮಾನ ಕಾಡಬಹುದು. ಏಕೆಂದರೆ ಇವರು ನೋಡಲಿಕ್ಕೆ ತೊಂಭತ್ತೇಳು ವರ್ಷದವರಂತೆ ಕಾಣುವುದೇ ಇಲ್ಲ. ಆದರೆ ವಾಸ್ತವವಾಗಿ ಇವರು ಹೇಳುವುದು ಸತ್ಯವೇ ಆಗಿದ್ದು ಇವರ ಅಕ್ಕಪಕ್ಕದವರೇ ಇದಕ್ಕೆ ಸಾಕ್ಷಿಯಾಗಿದ್ದಾರೆ. ಇವರ ದೇಹದಾರ್ಢ್ಯತೆ ಹಾಗೂ ಮನೋಬಲವನ್ನು ಕಂಡವರು ಮಾತ್ರ ಇವರ ಸಾಧನೆಯನ್ನು ಕಂಡು ಮೂಗಿನ ಮೇಲೆ ಬೆರಳಿಡುತ್ತಾರೆ.

ಇವರ ಆಹಾರಕ್ರಮದ ಗುಟ್ಟು

ಇವರ ಆಹಾರಕ್ರಮದ ಗುಟ್ಟು

ಇವರ ದೇಹದಾರ್ಢ್ಯತೆಯ ಬಗ್ಗೆ ಕುತೂಹಲ ವ್ಯಕ್ತಪಡಿಸುವವರು ಮೊದಲಿಗೆ ಇವರ ಆಹಾರಕ್ರಮದ ಬಗ್ಗೆ ತಿಳಿದುಕೊಳ್ಳಬಯಸುತ್ತಾರೆ. ಇವರ ಪ್ರಶ್ನೆಗಳಿಗೆ ಉತ್ತರಿಸುವ ಕಾಜಿಂರವರು ತಮ್ಮ ಊಟದಲ್ಲಿ ಮಾಂಸಾಹಾರವಿಲ್ಲದ, ಕೇವಲ ತರಕಾರಿಗಳು, ಹಣ್ಣುಗಳು, ಆಲಿವ್, ಕೆಂಪು ಮೆಣಸು, ಗಿಡಮೂಲಿಕೆಗಳ ಟೀ, ಪಿಂಟೋ ಬೀನ್ಸ್ ಹಾಗೂ ಜೇನನ್ನು ಒಳಗೊಂಡ ಆಹಾರವನ್ನು ಸೇವಿಸುತ್ತಾರೆ. ಅಲ್ಲದೇ ಇವರು ದಿನದಲ್ಲಿ ಹಲವಾರು ಬಾರಿ ನೀರನ್ನು ಕುಡಿಯುತ್ತಾ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತಾರೆ.

ಇವರು ಬರೆಯ ಯೋಗಗುರು ಮಾತ್ರವಲ್ಲ

ಇವರು ಬರೆಯ ಯೋಗಗುರು ಮಾತ್ರವಲ್ಲ

ಯೋಗಗುರುವಾಗಿರುವ ಹೊರತಾಗಿ ಕಾಜಿಂ ಓರ್ವ ಉತ್ತಮ ಜೇನು ಸಂಗ್ರಹಕಾರರೂ ಆಗಿದ್ದಾರೆ. ಇವರು ದೇಶವಿಡೀ ಸುತ್ತುತ್ತಾ ಅತ್ಯುತ್ತಮ ಗುಣಮಟ್ಟದ ಜೇನನ್ನು ಸಂಗ್ರಹಿಸುತ್ತಾರೆ. ಅಪ್ಪಟ ಜೇನನ್ನು ಮಾತ್ರವೇ ಸಂಗ್ರಹಿಸುವ ಇವರು ಪ್ರತಿದಿನವೂ ಅರ್ಧ ಬಾಟಲಿಯಷ್ಟು ಜೇನನ್ನು ತಾವೇ ಖಾಲಿ ಮಾಡುತ್ತಾರೆ.

ಅಷ್ಟೇ ಅಲ್ಲ!

ಅಷ್ಟೇ ಅಲ್ಲ!

ಇವರು ತಮ್ಮ ಧರ್ಮಗ್ರಂಥವಾದ ಪವಿತ್ರ ಕುರಾನ್ ಅನ್ನು ಪರಿಪೂರ್ಣವಾಗಿ ನಂಬುತ್ತಾರೆ ಹಾಗೂ ತಮ್ಮ ಧರ್ಮದ ವಾಕ್ಯಗಳನ್ನು ಪರಿಪಾಲಿಸುತ್ತಾರೆ. ಅಷ್ಟೇ ಅಲ್ಲ, ಇವರು ಪ್ರತಿದಿನವೂ ಸುಮಾರು ಐದು ಬಾರಿ ಪಾರಾಕಾಷ್ಠೆ ಪಡೆಯುವ ಸಾಮರ್ಥವನ್ನೂ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

English summary

Being 97 Years Old, This Yoga Guru Orgasms 5 Times In A Day!

Yoga makes us realise how healthy and long a person can live. From getting cured of many diseases to finding on how it can help in improving your personal life, yoga is quite helpful. A Turkish yoga guru named Kazim Gurbuz is a person who can give complex to even the famous Yoga legend - Baba Ramdev! He is a 97-year-old yogi who has been practicing yoga for years now and has claimed that he has orgasms almost 3-5 times every single day!
X
Desktop Bottom Promotion