Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹಾಗೇ ಸುಮ್ಮನೆ- ಒಂದು ವೇಳೆ ವೇಶ್ಯಾವಾಟಿಕೆ ಕಾನೂನು ಬದ್ಧವಾದರೇ?
ವೇಶ್ಯಾವಾಟಿಕೆ ಬಹಳ ಹಿಂದಿನ ಕಾಲದಿಂದಲೂ ನಡೆಯುತ್ತಾ ಬಂದಿರುವ ಪಿಡುಗು ಎಂದೇ ಹೇಳಬಹುದು. ಈ ವೃತ್ತಿಯಲ್ಲಿರುವವಲ್ಲಿ ಹೆಚ್ಚಾಗಿ ಬಲವಂತವಾಗಿ ನೂಕಲ್ಪಟ್ಟವರೇ ಹೆಚ್ಚು. ಯಾವುದೇ ವ್ಯಾಪಾರದಲ್ಲಿರುವಂತೆ ಎಲ್ಲಿಯವರೆಗೆ ಗಿರಾಕಿಗಳಿರುತ್ತಾರೋ ಅಲ್ಲಿಯವರೆಗೂ ಆ ವಸ್ತುವಿಗೆ ಬೇಡಿಕೆ ಇದ್ದೇ ಇರುತ್ತದೆ. ಇಲ್ಲೂ ಹಾಗೆಯೇ...
ಓರ್ವ ವೃತ್ತಿಪರಳು ಹೇಳಿದಂತೆ ಒಂದು ವೇಳೆ ಇದು ಇಲ್ಲವಾದರೆ ಭಾರತದಂತಹ ದೇಶದಲ್ಲಿ ಮಾನಭಂಗದ ಪ್ರಕರಣಗಳಿಗೆ ಕೊನೆಯೇ ಇರುತ್ತಿರಲಿಲ್ಲ. ಆದರೆ ಈಕೆಯ ಮಾತನ್ನು ಗಂಭೀರವಾಗಿ ಪರಿಗಣಿಸಿ ಹಾಂಕಾಂಗ್ ಬ್ಯಾಂಕಾಕ್‌ಗಳಲ್ಲಿರುವಂತೆ ಇಲ್ಲಿಯೂ ಕಾನೂನುಬದ್ಧವಾಗಿಸಿದರೆ? ಇದರಿಂದ ಬಲವಂತವಾಗಿ ವೃತ್ತಿಗೆ ನೂಕುವ ಪ್ರವೃತ್ತಿ ಕಡಿಮೆಯಾಗಬಹುದೇ? ಇದು ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ವೇಶ್ಯೆಯ ಕಣ್ಣೀರ ಕಥೆ
ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ. ಏಕೆಂದರೆ ಮದ್ಯಪಾನ ಸಹಾ ಇಂತಹದ್ದೇ ಒಂದು ಪಿಡುಗು ಪಾನನಿಷೇಧವಿರುವ ರಾಜ್ಯಗಳಲ್ಲಿ ಕಳ್ಳಭಟ್ಟಿಯ ಪ್ರಭಾವವೂ ಹೆಚ್ಚೇ. ಕಳ್ಳಭಟ್ಟಿ ಇದ್ದಲ್ಲಿ ವಿಷಕಾರಿ ಮದ್ಯ ಕುಡಿಸಿ ಸಾವುನೋವಿನ ಪ್ರಮಾದಗಳೂ ಬಹಳವಾಗುತ್ತವೆ. ಇದನ್ನು ತಡೆಯಲೆಂದೇ ಸರ್ಕಾರಗಳು ಲೈಸನ್ಸ್ ದಾರರಿಗೆ ಮಾತ್ರ ಮದ್ಯ ಮಾರುವ ಪರವಾನಿಗೆ ನೀಡಿ ಇದನ್ನೂ ಒಂದು ಆದಾಯದ ಮೂಲವಾಗಿಸಿದೆ. ಒಂದು ವೇಳೆ ವೇಶ್ಯಾವಾಟಿಕೆಯನ್ನೂ ಇದೇ ರೀತಿ ಕಾನೂನುಬದ್ಧವಾಗಿಸಿದರೆ? ಭಾರತದ ರೆಡ್ ಲೈಟ್ ಏರಿಯಾದ ಹಿಂದಿರುವ ಸತ್ಯಾಸತ್ಯತೆ
ಸೂಚನೆ
ಈ ಲೇಖನದಲ್ಲಿ ಇಂತಹ ವಿಷಯದ ಬಗ್ಗೆ ಕೇವಲ ಸಾಧಕ ಬಾಧಕಗಳನ್ನು ಚರ್ಚಿಸಲಾಗಿದೆಯೇ ಹೊರತು ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳುವುದಾಗಲೀ ತೀರ್ಮಾನ ನೀಡುವುದಾಗಲೀ ನಮ್ಮ ಉದ್ದೇಶವಲ್ಲ. ಉತ್ತಮ ಸಮಾಜಕ್ಕಾಗಿ ಏನಾಗಬೇಕು, ಈ ಪರಿ ಕಾನೂನುಬದ್ಧವಾಗಬೇಕೇ, ಬಾರದೇ, ಆದರೆ ದುಷ್ಟರಿಣಾಮಗಳೇನು, ಆಗದಿದ್ದರೆ ಏನಾಗುತ್ತದೆ ಎಂಬ ಚರ್ಚೆ ಮಾತ್ರ....

ಈ ವೃತ್ತಿಯಲ್ಲಿರುವವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ
ಕಾನೂನುಬದ್ದವಾಗಿಸುವ ಮೂಲಕ ಲೈಂಗಿಕ ಸಂಬಂಧ ಹೊಂದುವವರು ಕಡ್ಡಾಯವಾಗಿ ರಕ್ಷಣಾ ಕ್ರಮಗಳನ್ನು ಹೊಂದುವಂತೆ ಕಾನೂನು ರೂಪಿಸಬಹುದು. (ಬ್ಯಾಂಕಾಕ್ ಹಾಂಕಾಂಗ್‌ಗಳಲ್ಲಿ ಇದು ಕಡ್ಡಾಯ ಕಾನೂನಾಗಿದೆ). ಈ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದಾದ ಕಾಯಿಲೆಗಳನ್ನು ತಪ್ಪಿಸಬಹುದು.

ಈ ವೃತ್ತಿಯಲ್ಲಿರುವವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ
ಕಾನೂನು ತಜ್ಞರ ಪ್ರಕಾರ ಕನಿಷ್ಠ 33-46 ಶೇಖಡಾದಷ್ಟು ಪ್ರಮಾಣ ಪ್ರಾರಂಭದಲ್ಲಿಯೇ ಕಂಡುಬರಲಿದೆ. ಈ ಬಗ್ಗೆ ನಡೆಸಿದ ಸಂಶೋಧನೆಗಳು ಈ ವಿಷಯಗಳನ್ನು ಖಚಿತಪಡಿಸಿವೆ.

ಇದರಿಂದ ಅಪರಾಧದ ಸಂಖ್ಯೆಯಲ್ಲಿ ಕಡಿತವಾಗಲಿದೆ
ಭಾರತದಲ್ಲಿ ಜರುಗುವ ಅಪರಾಧಗಳ ಬಗ್ಗೆ ಆಳವಾಗಿ ನಡೆದ ಅಧ್ಯಯನದ ಬಳಿಕ ಕಂಡುಕೊಂಡ ಅಂಶವೆಂದರೆ ಅಪರಾಧಗಳಲ್ಲಿ ಬಹುತೇಕವು ಅಕ್ರಮ ಸಂಬಂಧ ಅಥವಾ ಬಲವಂತದ ಸಂಬಂಧದ ಕಾರಣವಾಗಿಯೇ ಆಗುತ್ತವೆ. ಲೈಂಗಿಕ ಇಚ್ಛೆಯನ್ನು ಬಲವಂತವಾಗಿ ಪಡೆದುಕೊಳ್ಳುವ ಇಚ್ಛೆ ಸುಮಾರು ಅರ್ಧಕ್ಕರ್ಧದಷ್ಟು ಅಪರಾಧಗಳಿಗೆ ಕಾರಣವಾಗಿದೆ.

ಇದರಿಂದ ಅಪರಾಧದ ಸಂಖ್ಯೆಯಲ್ಲಿ ಕಡಿತವಾಗಲಿದೆ
ಒಂದು ವೇಳೆ ಈ ವೃತ್ತಿ ಕಾನೂನುಬದ್ಧವಾದರೆ ಬಲವಂತವಾಗಿ ಪಡೆಯುವ ಅಗತ್ಯವೇ ಇಲ್ಲವಾಗಿ ಈ ಅಪರಾಧಗಳಿಗೆ ಕಡಿವಾಣ ಬೀಳಲಿದೆ.

ಅಪ್ರಾಪ್ತರ ರಕ್ಷಣೆಯಾಗಲಿದೆ
ಈ ವೃತ್ತಿಯಲ್ಲಿ ಇಳಿಸಲು ಹೆಚ್ಚಾಗಿ ಅಪ್ರಾಪ್ತರನ್ನು ಸುಳ್ಳು ಹೇಳಿ ಪುಸಲಾಯಿಸಿ ಕದ್ದು ಮಾರಲಾಗುತ್ತದೆ. ಬಳಿಕ ಬಲವಂತವಾಗಿ, ಹಿಂಸೆಯ ಅಸ್ತ್ರ ಬಳಸಿ ಚಿಕ್ಕ ಮಕ್ಕಳನ್ನೂ ಬಿಡದೇ ಹಣ ಕೊಟ್ಟು ಖರೀದಿಸಿರುವವರನ್ನೆಲ್ಲಾ ವೃತ್ತಿಗೆ ಇಳಿಸಲಾಗುತ್ತದೆ.

ಅಪ್ರಾಪ್ತರ ರಕ್ಷಣೆಯಾಗಲಿದೆ
ಒಂದು ವೇಳೆ ಈ ವೃತ್ತಿ ಕಾನೂನುಬದ್ಧವಾದರೆ ಅಕ್ರಮವಾಗಿ ಈ ವೃತ್ತಿಗೆ ಇಳಿಸುವುದನ್ನು ತಡೆಯಬಹುದು. ಅಪ್ರಾಪ್ತರ ಬಳಕೆ ನಿಷೇಧಿಸುವ ಮೂಲಕ ಈ ಪ್ರಕ್ರಿಯೆಗೆ ಕಡಿವಾಣ ಹಾಕಬಹುದಾಗಿದೆ.

ಈ ವೃತ್ತಿಯಲ್ಲಿರುವವರಿಗೆ ಕಾನೂನಿನ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಲಿದೆ
ಇದುವರೆಗೆ ಹೇಳಿಕೊಳ್ಳಲೂ ನಾಚಿಕೊಳ್ಳುತ್ತಿದ್ದ ಈ ವೃತ್ತಿಪರರು ತಮ್ಮ ಹಕ್ಕುಗಳನ್ನು ಇತರರಂತೆಯೇ ಪಡೆಯಬಹುದಾಗಿದೆ. ಇದರ ಮೂಲಕ ಸಮಾಜದಲ್ಲಿ ಗೌರವಯುತ ಬಾಳ್ವೆ ನಡೆಸಬಹುದು. ಕನಿಷ್ಠ ವೇತನ, ಆರೋಗ್ಯದ ಹಕ್ಕು, ರಜೆ ಭತ್ಯೆ, ಒಂದು ವೇಳೆ ತಾರತಮ್ಯ ಎದುರಾದರೆ ಕಾನೂನಿನ ನೆರವು ಪಡೆಯಲು ಇವರೂ ಅರ್ಹರಾಗುತ್ತಾರೆ. ಒಟ್ಟಾರೆ ಇವರೂ ಇತರರಂತೆ ಸುಖಜೀವನ ನಡೆಸಲು ಅರ್ಹತೆ ಪಡೆಯುತ್ತಾರೆ.

ಸರ್ಕಾರಕ್ಕೆ ಆದಯದ ಮೂಲವೂ ಆಗಬಹುದು!
ಮದ್ಯಪಾನದಂತೆಯೇ ಈ ವೃತ್ತಿಯನ್ನು ಕಾನೂನುಬದ್ಧಗೊಳಿಸುವ ಮೂಲಕ ಸರ್ಕಾರ ಲೈಸನ್ಸ್ ಮತ್ತು ಇತರ ವೆಚ್ಚಗಳಿಗಾಗಿ ಸುಂಕ ವಿಧಿಸಬಹುದು. ಇದು ಸರ್ಕಾರಕ್ಕೆ ಆದಾಯವನ್ನೂ ತರಲಿದೆ.



Click it and Unblock the Notifications











