For Quick Alerts
ALLOW NOTIFICATIONS  
For Daily Alerts

ಇದು ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ವೇಶ್ಯೆಯ ಕಣ್ಣೀರ ಕಥೆ

By Arshad
|

ವೇಶ್ಯಾವೃತ್ತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಒಂದು ವೃತ್ತಿಯಾಗಿದ್ದು ಈ ವೃತ್ತಿಗೆ ಸಮಾಜದಲ್ಲಿ ಯಾವುದೇ ಮನ್ನಣೆ ಇಲ್ಲ. ಆದರೆ ವಾಸ್ತವವಾಗಿ ಯಾವುದೇ ವೃತ್ತಿಗೆ ಗ್ರಾಹಕರಿದ್ದರೆ ಮಾತ್ರ ಆ ವೃತ್ತಿ ಮುಂದುವರೆಯಲು ಸಾಧ್ಯ.

ಅಂತೆಯೇ ವೇಶ್ಯೆಯರ ಬಳಿ ಕದ್ದು ಮುಚ್ಚಿ ಧಾವಿಸುವವರು ಇರುವುದರಿಂದಲೇ ಈ ವೃತ್ತಿ ಇಂದಿಗೂ ರಾಜಾರೋಶವಾಗಿ ಮುಂದುವರೆಯುತ್ತಲಿದೆ. ಎಷ್ಟೋ ರಾಷ್ಟ್ರಗಳಲ್ಲಿ ಇದು ಕಾನೂನುಬದ್ಧವೂ ಆಗಿದ್ದು ದೇಶಕ್ಕೆ ಅಗತ್ಯವಾದ ಆದಾಯವನ್ನೂ ತರುತ್ತದೆ. ಭಾರತದ ರೆಡ್ ಲೈಟ್ ಏರಿಯಾದ ಹಿಂದಿರುವ ಸತ್ಯಾಸತ್ಯತೆ

ಆದರೆ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಇಚ್ಛೆಯಿಂದಂತೂ ಈ ವೃತ್ತಿಯನ್ನು ಆಯ್ದುಕೊಂಡಿಲ್ಲ. ಹಾಗಾದರೆ ಇಷ್ಟೊಂದು ಸಂಖ್ಯೆಯಲ್ಲಿ ಪ್ರತಿ ಊರಿನಲ್ಲಿಯೂ ಈ ವೃತ್ತಿಯಲ್ಲಿ ಹೇಗಿದ್ದಾರೆ? ವಾಸ್ತವ ನಮ್ಮ ಅರಿವಿಗಿಂತಲೂ ಭೀಕರವಾಗಿದೆ. ಭಾರತದಲ್ಲಂತೂ ಹಿಂದಿನ ಶತಮಾನದಲ್ಲಿ ಈ ವೃತ್ತಿಗೆ ದೇವರ ಹೆಸರನ್ನು ಬಳಸಿ ದೇವದಾಸಿಯ ರೂಪದಲ್ಲಿ ಮಹಿಳೆಯರನ್ನು ದೂಡಲಾಗುತ್ತಿತ್ತು.

ಈ ಬಗ್ಗೆ ಬೆಳಕು ಚೆಲ್ಲಿದವರಲ್ಲಿ ಖ್ಯಾತ ಲೇಖಕ ಪ್ರೇಮಚಂದ್ ಪ್ರಾಯಶಃ ಮೊದಲನೆಯವರು. ಕನ್ನಡದಲ್ಲಿಯೂ ಆಬಿದ್ ಸುರ್ತಿ ಎಂಬ ಲೇಖಕರು ಕಾದಂಬರಿಯೊಂದನ್ನು ಬರೆದಿದ್ದಾರೆ. ವೇಶ್ಯಾವೃತ್ತಿಯನ್ನು ಪ್ರಾರಂಭಿಸಲು ಏನು ಕಾರಣ ಎಂಬುದನ್ನು ಓರ್ವ ವೇಶ್ಯೆ ತಿಳಿಸಿದ್ದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ.....

ಬಡಕುಟುಂಬದಲ್ಲಿ ಜನಿಸಿದ ಕಾರಣ

ಬಡಕುಟುಂಬದಲ್ಲಿ ಜನಿಸಿದ ಕಾರಣ

ಬಡತನಕ್ಕಿಂತ ದೊಡ್ಡ ಶಾಪ ಇನ್ನೊಂದಿಲ್ಲ. ಹೊಟ್ಟೆಗೆ ತುತ್ತು ಅನ್ನ ಇಲ್ಲದಿದ್ದರೆ ಏನು ಬೇಕಾದರೂ ಮಾಡಲು ಮನಸ್ಸು ಹಿಂಜರಿಯುವುದಿಲ್ಲ. ಕುಡಿತದ ಚಾಳಿಯೂ ಪರೋಕ್ಷ ಕಾರಣವಾಗಿದೆ.

ಬಡಕುಟುಂಬದಲ್ಲಿ ಜನಿಸಿದ ಕಾರಣ

ಬಡಕುಟುಂಬದಲ್ಲಿ ಜನಿಸಿದ ಕಾರಣ

ಕುಡಿದು ಮನೆಗೆ ಬಂದ ತಂದೆ ತಾಯಿ ದುಡಿದದ್ದನ್ನೂ ಕಿತ್ತು ಹೊಡೆದು ರಂಪ ಮಾಡಿ ಎಲ್ಲರನ್ನೂ ಉಪವಾಸ ಕೆಡವಿದಾಗ ಹತಾಶೆಗೆ ಒಳಗಾದ ಮನಸ್ಸು ಮೈ ಮಾರಿಕೊಳ್ಳಲು ಪ್ರೇರೇಪಿಸುತ್ತದೆ. ವೃತ್ತಿಪರರಲ್ಲಿ ಹೆಚ್ಚಿನವರ ಅನುಭವ ಇದೇ ಆಗಿದೆ. ಈಕೆಯ ಕಥೆಯೂ ಹೀಗೇ ಪ್ರಾರಂಭವಾಗುತ್ತದೆ.

ಬಾಲ್ಯವಿವಾಹ

ಬಾಲ್ಯವಿವಾಹ

ಭಾರತದಲ್ಲಿ ಇಂದು ನಿಷೇಧಗೊಂಡಿದ್ದರೂ ಅಲ್ಲಲ್ಲಿ ಕದ್ದುಮುಚ್ಚಿ ಬಾಲ್ಯವಿವಾಹಗಳು ನಡೆಯುತ್ತಿವೆ. ತನಗೆ ಏನಾಗುತ್ತಿದೆ ಎಂದು ಗೊತ್ತಿಲ್ಲದ ವಯಸ್ಸಿನಲ್ಲಿಯೇ ಪಂಥದಲ್ಲಿ ಸೋತ ತಂದೆ ಮುದುಕನೊಬ್ಬನಿಗೆ ಈಕೆಯನ್ನು ಮದುವೆ ಮಾಡಿ ಕೊಟ್ಟಿರುತ್ತಾನೆ. ಮುದುಕನ ಕಾಟ ತಾಳಲಾರದೇ ಹೊರಬಂದ ಈಕೆ ಮನೆಯಿಂದ ಓಡುತ್ತಾಳೆ

ಸಂಜೆಯಾದೊಡನೆ ಕಾಡುವ ಭಯ

ಸಂಜೆಯಾದೊಡನೆ ಕಾಡುವ ಭಯ

ಈಕೆ ಕೇವಲ ಹನ್ನೆರಡು ವರ್ಷದವಳಿದ್ದಾಗಲೇ ಕತ್ತಲೆಂದರೆ ಹೆದರುತ್ತಿದ್ದು ಕತ್ತಲಾದ ಬಳಿಕ ಭೂತವೊಂದು ಕಾಡುತ್ತದೆ ಎಂದು ನಂಬಿದ್ದಳು.

ಓಡಿ ಹೋಗಲು ಒಗ್ಗೂಡಿಸಿದ ಧೈರ್ಯ

ಓಡಿ ಹೋಗಲು ಒಗ್ಗೂಡಿಸಿದ ಧೈರ್ಯ

ಮನೆಯ ಕಷ್ಟಗಳನ್ನು ತಾಳಲಾರದೇ ಒಂದು ದಿನ ಇದ್ದ ಬದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ಮುದುಕ ಮಲಗಿದ್ದ ಸಮಯ ಸಾಧಿಸಿ ಈಕೆ ಮನೆಯಿಂದ ಓಡುತ್ತಾಳೆ. ತನ್ನಿಂದ ಸಾಧ್ಯವಾದಷ್ಟು ವೇಗವಾಗಿ ಹಿಂದಿರುಗಿ ನೋಡದೇ ಈಕೆ ಓಡುತ್ತಾಳೆ

ಓಡುತ್ತಾ ಸೇರಿದ್ದು ಮಾತ್ರ ತಪ್ಪು ದಾರಿಗೆ

ಓಡುತ್ತಾ ಸೇರಿದ್ದು ಮಾತ್ರ ತಪ್ಪು ದಾರಿಗೆ

ಓಡುತ್ತಾ ಓಡುತ್ತಾ ಎಲ್ಲಿ ಓಡುತ್ತಿದ್ದೇನೆಂಬ ಪರಿವೆಯೇ ಇಲ್ಲದೇ ಈಕೆ ಓಡಿ ಸುಸ್ತಾಗಿ ಒಂದು ಕಡೆ ಕತ್ತಲಲ್ಲಿ ಅಡಗುತ್ತಾಳೆ. ವಾಸ್ತವವಾಗಿ ಇದು ವೇಶ್ಯೆಯರ ಕೇರಿಯಾಗಿರುತ್ತದೆ. ಮರುದಿನ ಪುರುಷನೊಬ್ಬ ಆಕೆಯನ್ನು ಅಲ್ಲಾಡಿಸಿ ಎಬ್ಬಿಸಿದಾಗಲೇ ಈಕೆಗೆ ಎಚ್ಚರಾಗುತ್ತದೆ.

ಈಕೆ ತನ್ನ ಕಥೆಯನ್ನು ಹೇಳುತ್ತಳೆ

ಈಕೆ ತನ್ನ ಕಥೆಯನ್ನು ಹೇಳುತ್ತಳೆ

ಈ ಪುರುಷ ನಂಬಿಕಸ್ತನಾಗಿ ಕಂಡುಬಂದ ಕಾರಣ ಈಕೆ ತನ್ನ ದಾರುಣ ಕಥೆಯನ್ನು ತಿಳಿಸುತ್ತಾಳೆ. ತನ್ನಿಂದಾದ ಸಹಾಯ ಮಾಡುತ್ತೇನೆ ಎಂದು ನಂಬಿಸಿದ ಈ ಪುರುಷ ಆಕೆಯನ್ನು ಒಂದು ದೊಡ್ಡ ಮನೆಯ ಒಡತಿಯ ಬಳಿ ಕರೆದೊಯ್ಯುತ್ತಾನೆ.

ಈಕೆ ತನ್ನ ಕಥೆಯನ್ನು ಹೇಳುತ್ತಳೆ

ಈಕೆ ತನ್ನ ಕಥೆಯನ್ನು ಹೇಳುತ್ತಳೆ

ವಾಸ್ತವವಾಗಿ ಈ ಒಡತಿ ವೇಶ್ಯಾಗೃಹವೊಂದರ ಮಾಲಕಿಯಾಗಿದ್ದು ಈಕೆಗೆ ಅರಿವೇ ಇಲ್ಲದಂತೆ ಈಕೆಯನ್ನು ಮನೆಯೊಡತಿಗೆ ಮಾರಿರುತ್ತಾನೆ.

ಎದುರಾದ ವಾಸ್ತವ

ಎದುರಾದ ವಾಸ್ತವ

ಈ ಮನೆಯಲ್ಲಿ ಈಕೆಯನ್ನು ಸುಂದರವಾಗಿ ಸಿಂಗರಿಸಿ ಒಳ್ಳೆಯ ಬಟ್ಟೆಗಳನ್ನು ತೊಡಿಸಿ ಬಾಗಿಲ ಬಳಿ ನಿಲ್ಲಲು ತಿಳಿಸಲಾಗುತ್ತದೆ. ಇದನ್ನು ವಿರೋಧಿಸಿದ ಬಾಲಕಿಯನ್ನು ದನ ಬಡಿದ ಹಾಗೆ ಬಡಿದು ಬಲವಂತವಾಗಿ ಕೋಣೆಯೊಳಗೆ ಕೂಡಲಾಗುತ್ತದೆ.

ಎದುರಾದ ವಾಸ್ತವ

ಎದುರಾದ ವಾಸ್ತವ

ನಂತರ ಈಕೆಗೆ ನೆನಪಿರುವುದು ಎಂದರೆ ಧಡೂತಿ ದೇಹದ ಕುಡುಕನೊಬ್ಬನ ಶರೀರದ ಭಾರದ ಅಡಿಯಲ್ಲಿ ಈಕೆಯ ಕೋಮಲ ಶರೀರ ನುಜ್ಜುಗುಜ್ಜಾಗುತ್ತಿರುವುದು. ಈ ಭಾರ ಆಕೆಯ ಶರೀರಕ್ಕಿಂತಲೂ ಆತ್ಮವನ್ನೇ ಹೆಚ್ಚು ಘಾಸಿಗೊಳಿಸುತ್ತದೆ. ಇದಕ್ಕೆ ಪ್ರತಿರೋಧ ಎದುರಿಸಲೂ ಸಾಧ್ಯವಿಲ್ಲದೇ ದಿಗ್ಬ್ರಾಂತಿಗೆ ಒಳಗಾಗುತ್ತಾಳೆ.

ಇಲ್ಲಿಂದ ಓಡಿಹೋಗುವ ಪ್ರಯತ್ನ

ಇಲ್ಲಿಂದ ಓಡಿಹೋಗುವ ಪ್ರಯತ್ನ

ವಾಸ್ತವದ ಅರಿವಾಗುತ್ತಿದ್ದಂತೆಯೇ ಈ ನರಕದಿಂದ ಓಡಿಹೋಗಲು ಮನಸ್ಸಾಗುತ್ತದೆ. ಸತತ ಆಕ್ರಮಣದಿಂದ ದೇಹ ಅತೀವ ನುಜ್ಜುಗುಜ್ಜಾಗಿರುತ್ತದೆ. ಕೊಂಚ ತ್ರಾಣ ಬರುತ್ತಿದ್ದಂತೆಯೇ ಓಡಿ ಹೋಗಲು ಮಾಡುವ ಯತ್ನಗಳೆಲ್ಲಾ ಅಲ್ಲಿನ ಕಾವಲುಗಾರರ ಮೂಲಕ ವಿಫಲವಾದವು. ಅಷ್ಟೇ ಅಲ್ಲ, ಪ್ರತಿ ಬಾರಿ ಓಡಿಹೋಗಲು ಯತ್ನಿಸಿದಾಗಲೂ ಇನ್ನಷ್ಟು ಹೆಚ್ಚಿನ ಪುರುಷರು ಸತತವಾಗಿ ಬಲಾತ್ಕರಿಸಿದ್ದರು.

ಕಡೆಗೊಮ್ಮೆ ಒಪ್ಪಿಕೊಂಡ ಸೋಲು

ಕಡೆಗೊಮ್ಮೆ ಒಪ್ಪಿಕೊಂಡ ಸೋಲು

ಕಡೆಗೊಂದು ದಿನ ಇಲ್ಲಿ ಇರುವ ಇತರರು ಹೇಗೆ ಬಾಳುವೆ ನಡೆಸುತ್ತಿದ್ದಾರೆಂದು ಕಂಡುಕೊಂಡ ಈಕೆಯೂ ಅನಿವಾರ್ಯವಾಗಿ ಇದೇ ಜೀವನಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತಾಳೆ. ಆ ಪ್ರಕಾರ ತನ್ನ ಗಿರಾಕಿಗಳೊಂದಿಗೆ ಉತ್ತಮವಾಗಿ ವ್ಯವಹರಿಸಿದ ಬಳಿಕ ಕೊಂಚ ಆದಾಯವನ್ನೂ ನೀಡಲಾಗುತ್ತದೆ.

ಬಡತನವೇ ಎಲ್ಲಾ ಕಷ್ಟಕ್ಕೂ ಕಾರಣ

ಬಡತನವೇ ಎಲ್ಲಾ ಕಷ್ಟಕ್ಕೂ ಕಾರಣ

ಒಂದು ವೇಳೆ ತಾನು ಬಡಕುಟುಂಬದಲ್ಲಿ ಜನಿಸದೇ ಇದ್ದರೆ ತನಗೆ ಈ ಗತಿ ಬರುತ್ತಿರಲಿಲ್ಲ ಎಂಬುದು ಈಕೆಯ ದೃಢವಾದ ಭಾವನೆಯಾಗಿದ್ದು ತನ್ನ ತಂದೆಯನ್ನು ಈಕೆ ಎಂದಿಗೂ ಗೌರವಿಸಿರಲಿಲ್ಲ. ಇದು ಈಕೆಯ ಕಥೆ.

ಬಡತನವೇ ಎಲ್ಲಾ ಕಷ್ಟಕ್ಕೂ ಕಾರಣ

ಬಡತನವೇ ಎಲ್ಲಾ ಕಷ್ಟಕ್ಕೂ ಕಾರಣ

ಜೀವನದಲ್ಲಿ ಅನಿವಾರ್ಯವಾಗಿ ಇಂತಹ ವೃತ್ತಿಗಳನ್ನು ನಡೆಸುತ್ತಿರುವವರು ನಮ್ಮ ಇಷ್ಟಕ್ಕೆ ವಿರುದ್ಧವಾಗಿ ಇದರಲ್ಲಿ ಬಿದ್ದಿರಬಹುದು. ಆದ್ದರಿಂದ ಒಂದೇ ನೋಟದಲ್ಲಿ ಯಾರ ಬಗ್ಗೆಯೂ ಅಭಿಪ್ರಾಯ ತಳೆಯುವುದು ಸರ್ವಥಾ ಸಾಧುವಲ್ಲ.

English summary

This Is How A Prostitute Is Born

Every time you would see a prostitute you would look at them with a dirty stare and would swear a word or two when you would come across them and also question yourself as to why women choose to become prostitutes. Here, in this article, we are about to share the actual story of a woman who became a prostitute out of no where. This is how a prostitute is born!
X
Desktop Bottom Promotion