For Quick Alerts
ALLOW NOTIFICATIONS  
For Daily Alerts

ನಕಲಿ 10 ರೂ.ನಾಣ್ಯಗಳನ್ನು ಪತ್ತೆಹಚ್ಚಲು ಸಿಂಪಲ್ ಟಿಪ್ಸ್

ಮಾರುಕಟ್ಟೆಯ ಹಲವಾರು ಅಂಗಡಿಗಳಲ್ಲಿ ಹತ್ತು ರೂ ನಕಲಿ ನಾಣ್ಯಗಳು ಕಂಡುಬಂದಿರುವ ಸುದ್ದಿ, ಈಗ ಬಹಳ ಚರ್ಚೆ ಗ್ರಾಸವಾಗಿದೆ... ಹಾಗಾದರೆ ನಕಲಿ ನಾಣ್ಯವನ್ನು ಪತ್ತೆ ಹಚ್ಚುವುದು ಹೇಗೆ ಅಂತೀರಾ? ಮುಂದೆ ಓದಿ...

By Manu
|

ಇತ್ತೀಚೆಗೆ ಭಾರತದಾದ್ಯಂತ ನಕಲಿ ಹತ್ತು ರೂ ನಾಣ್ಯಗಳು ಚಲಾವಣೆಗೆ ಬಂದಿವೆ ಎಂಬ ಸುದ್ದಿಯನ್ನು ಆರ್ ಬಿ ಐ ಸುಳ್ಳು ಎಂದು ಹೇಳಿತ್ತು. ಆದರೆ ವಾಸ್ತವದಲ್ಲಿ ಮಾರುಕಟ್ಟೆಯ ಹಲವಾರು ಅಂಗಡಿಗಳಲ್ಲಿ ನಿಜವಾಗಿಯೂ ಹತ್ತು ರೂ ನಕಲಿ ನಾಣ್ಯಗಳು ಕಂಡುಬಂದಿವೆ. ಈ ಸುದ್ದಿ ಹರಡುತ್ತಿದ್ದಂತೆಯೇ ಜನರು ಈ ನಾಣ್ಯಗಳನ್ನು ಸ್ವೀಕರಿಸುವುದನ್ನೇ ಬಿಟ್ಟು ಬಿಟ್ಟಿದ್ದು ವಿಲೇವಾರಿಯಲ್ಲಿ ಕೊಂಚ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಭಾರತದ ನಾಣ್ಯ-ನೋಟುಗಳ ಇತಿಹಾಸ ಕೆದಕಿದಾಗ...!

ದೆಹಲಿ ಪೋಲೀಸರಿಂದ ಅಂತರರಾಜ್ಯ ಕಳ್ಳರ ಗುಂಪೊಂದನ್ನು ಹಿಡಿಯಲಾಗಿದ್ದು ಇವರಿಂದ ಆಗಾಧ ಪ್ರಮಾಣದ ಕಳ್ಳನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವರು ನೀಡಿದ ಮಾಹಿತಿಯ ಮೇರೆಗೆ ದೆಹಲಿ, ರಾಜಸ್ಥಾನ ಮತ್ತು ಹರ್ಯಾಣಾ ರಾಜ್ಯಗಳಲ್ಲಿ ಹಲವೆಡೆ ಧಾಳಿ ನಡೆಸಿ ನಕಲಿ ನೋಟು ಮತ್ತು ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಣ-ಕರೆನ್ಸಿ ನೋಟುಗಳ, ಕಥೆ ಕೇಳಿದರೆ ಅವಾಕ್ಕಾಗಿ ಬಿಡುವಿರಿ!

ಆದರೆ ಈ ಧಾಳಿಗೂ ಮುನ್ನ ಹತ್ತು ರೂ ನಾಣ್ಯಗಳನ್ನು ಮಾರುಕಟ್ಟೆಗೆ ಬಿಟ್ಟು ಆಗಿದೆ ಎಂದು ತಿಳಿದುಬಂದಿದೆ. ಈ ನಾಣ್ಯಗಳು ಮೇಲ್ನೋಟಕ್ಕೆ ಸಾಚಾ ಎಂದು ಕಂಡುಬಂದರೂ ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ವ್ಯತ್ಯಾಸಗಳನ್ನು ಕಾಣಬಹುದು. ಈ ವ್ಯತ್ಯಾಸಗಳು ಯಾವುವು ಎಂಬುದನ್ನು ಈಗ ನೋಡೋಣ.....

ಮಾಹಿತಿ #1

ಮಾಹಿತಿ #1

ನಕಲಿ ನಾಣ್ಯದ ಮೇಲ್ಭಾಗದಲ್ಲಿ ಹದಿನೈದು ಅಡ್ಡಪಟ್ಟಿಗಳಿವೆ

ಮಾಹಿತಿ-#2

ಮಾಹಿತಿ-#2

ಇದೇ ಪಟ್ಟಿಗಳು ನಿಜವಾದ ನಾಣ್ಯಗಳಲ್ಲಿ ಒಟ್ಟು ಹತ್ತು ಮಾತ್ರ ಇವೆ.

ಮಾಹಿತಿ #3

ಮಾಹಿತಿ #3

ನಕಲಿ ನಾಣ್ಯದಲ್ಲಿ ಹತ್ತು ಸಂಖ್ಯೆಯನ್ನು ಬೆಳ್ಳಿಯ ಲೇಪನವಿದ್ದೆಡೆ ದೊಡ್ಡದಾಗಿ ಬರೆಯಲಾಗಿದೆ.

ಮಾಹಿತಿ #4

ಮಾಹಿತಿ #4

ಇದೇ ಸಂಖ್ಯೆಯನ್ನು (10) ನಿಜವಾದ ನಾಣ್ಯಗಳಲ್ಲಿ ಕೆಳಭಾಗ ಬೆಳ್ಳಿಯ ಲೇಪನವಿದ್ದೆಡೆ ಮತು ಅರ್ಧ ಭಾಗ ಚಿನ್ನದ ಲೇಪನವಿದ್ದೆಡೆ ಇರುತ್ತದೆ.

ಮಾಹಿತಿ #5

ಮಾಹಿತಿ #5

ನಕಲಿ ನಾಣ್ಯದಲ್ಲಿ ರುಪಾಯಿ ಚಿಹ್ನೆಯೇ ಇಲ್ಲ.

ಮಾಹಿತಿ #6

ಮಾಹಿತಿ #6

ನಿಜವಾದ ನಾಣ್ಯದಲ್ಲಿ ರುಪಾಯಿ ಚಿಹ್ನೆ ಸ್ಪಷ್ಟವಾಗಿದ್ದು ಬೆಳ್ಳಿಯ ಲೇಪನವಿರುವ ಬದಿಯಲ್ಲಿ ಮುದ್ರಿತವಾಗಿದೆ.

ಮಾಹಿತಿ-#7

ಮಾಹಿತಿ-#7

ನಕಲಿ ನಾಣ್ಯದಲ್ಲಿ ಇಂಡಿಯಾ ಮತ್ತು ಭಾರತ್ ಎಂಬ ಪದಗಳನ್ನು ಹಿಂದಿಯಲ್ಲಿ ನಾಣ್ಯದ ಒಂದೇ ಭಾಗದಲ್ಲಿ ಮೇಲ್ಭಾಗದಲ್ಲಿ ಬರೆಯಲಾಗಿದೆ.

ಮಾಹಿತಿ - #8

ಮಾಹಿತಿ - #8

ಇದೇ ಪದಗಳನ್ನು (ಇಂಡಿಯಾ ಮತ್ತು ಭಾರತ್) ನಿಜವಾದ ನಾಣ್ಯದ ಎರಡೂ ಬದಿಗಳಲ್ಲಿ ಪ್ರತ್ಯೇಕವಾಗಿ ಮುದ್ರಿಸಲಾಗಿದೆ.

ಮಾಹಿತಿ - #9

ಮಾಹಿತಿ - #9

ನಕಲಿ ನಾಣ್ಯದಲ್ಲಿ ಅಶೋಕ ಚಿಹ್ನೆ ಇರುವ ಸ್ಥಳದಲ್ಲಿ ಎರಡು ಅಡ್ಡಗೆರೆಗಳಿವೆ.

ಮಾಹಿತಿ #10

ಮಾಹಿತಿ #10

ನಿಜವಾದ ನಾಣ್ಯದಲ್ಲಿ ಅಶೋಕ ಚಿಹ್ನೆಯ ಬಳಿ ಯಾವುದೇ ಅಡ್ಡಗೆರೆ ಇಲ್ಲ.


English summary

How to identify 10 rupees fake coins?

A rumour that Rs 10 coins had been declared invalid by the RBI spread like wildfire in several parts of the country, including in Delhi, Agra ...So how to find fake 10 rupees coin have a look...
X
Desktop Bottom Promotion