For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು

By Manu
|

ಪ್ರಪಂಚವು ಎಷ್ಟು ವೇಗವಾಗಿ ಸಾಗುತ್ತಿದೆಯಲ್ಲವೇ, ಅರೆ ಸ್ವಲ್ಪ ತಾಳಿ ವೇಗವಾಗಿ ಸಾಗುತ್ತಿರುವುದು ಪ್ರಪಂಚವಲ್ಲ, ಅದು ಮಾನವನ ಮನಸ್ಸು. ಆತನ ಬುದ್ಧಿ ಮತ್ತು ಯೋಚನೆಯು ವೇಗವಾಗಿ ಸಾಗುತ್ತಿದೆ. ಅದಕ್ಕಾಗಿ ಇಡೀ ವಿಶ್ವವೇ ಆತನಿಗೆ ವೇಗವಾಗಿ ಸಾಗುತ್ತಿರುವಂತೆ ಕಾಣುತ್ತಿದೆ. ಅದರಲ್ಲಿ ವಿಶೇಷವೇನಿಲ್ಲ ಬಿಡಿ, ವೇಗವನ್ನು ಇಷ್ಟಪಡುವುದು ಮಾನವನ ಸ್ವಭಾವ. ಹೆದ್ದಾರಿಯಲ್ಲಿ ವೇಗವಾಗಿ ಗಾಡಿ ಚಲಾಯಿಸಿಕೊಂಡು ಸಾಗುವ

ರೋಮಾಂಚನವನ್ನು ಯಾರು ತಾನೆ ಇಷ್ಟಪಡುವುದಿಲ್ಲ. ಟಿವಿಯಲ್ಲಿ ಸರ್ಪಿಂಗ್ ಮಾಡಿಕೊಂಡು ನೀರಿನ ಮೇಲೆ ಹೋಗುವವರು, ಜೇಮ್ಸ್ ಬಾಂಡ್ ಚಿತ್ರಗಳ ಆ ರೋಮಾಂಚಕಾರಿ ಚೇಸಿಂಗ್‌ಗಳು, ಫಾರ್ಮುಲಾ ಒನ್‌ ರೇಸ್, ಬೋಲ್ಟ್‌ನ 100 ಮೀಟರ್ ರೇಸ್. 4G ಇಂಟರ್‌ನೆಟ್, ಜೆಟ್ ವಿಮಾನ ಇತ್ಯಾದಿ ಇತ್ಯಾದಿಗಳೆಲ್ಲವು ವೇಗಕ್ಕೆ ಒತ್ತು ನೀಡಿರುವುದರಿಂದಾಗಿ ನಮಗೆ ಇವೆಲ್ಲವೂ ಇಷ್ಟವಾಗುತ್ತವೆ. ಚಿಕ್ಕ ಮಕ್ಕಳು ಸಹ ಜಿಯಂಟ್‌ ವೀಲ್, ರೋಲರ್ ಕೋಸ್ಟರ್‌ನಂತಹ ವೇಗದ ಆಟಗಳನ್ನು ಇಷ್ಟಪಡುತ್ತಾರೆ ಎಂದರೆ ಮಾನವನ ವೇಗದ ಹುಚ್ಚು ಹೇಗಿರುತ್ತದೆ ಎಂದು ನೀವೇ ಊಹಿಸಿ. ಬುದ್ಧಿಶಕ್ತಿಯಲ್ಲಿ ಮನುಷ್ಯರಿಗೇ ಸವಾಲೆಸೆಯುವ ಪ್ರಾಣಿ, ಪಕ್ಷಿಗಳು

ವೇಗದ ವಿಚಾರಕ್ಕೆ ಬಂದರೆ ನಾವು ವೇಗವಾಗಿ ಓಡುವ ಪ್ರಾಣಿಗಳನ್ನು ಸಹ ಇಷ್ಟಪಡುತ್ತೇವೆ. ಪ್ರಾಣಿಗಳು ತಮ್ಮ ಬೇಟೆಯನ್ನು ಕಬಳಿಸಲು ವೇಗದ ನೆರವನ್ನು ಪಡೆಯುತ್ತವೆ. ಇನ್ನೂ ಕೆಲವೊಂದು ಪ್ರಾಣಿಗಳು ತಮ್ಮನ್ನು ಬೇಟೆಯಾಡುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡುವ ಕಲೆಯನ್ನು ರೂಢಿಸಿಕೊಂಡಿರುತ್ತವೆ.

ಇಂದು ಈ ಅಂಕಣದಲ್ಲಿ ನಾವು ನಮ್ಮ ಭೂಮಿಯ ಮೇಲಿರುವ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳ ಕುರಿತು ತಿಳಿಸಿಕೊಡುತ್ತೇವೆ. ಪ್ರಾಣಿ ಮತ್ತು ಪಕ್ಷಿ ಪ್ರಪಂಚ ಎರಡರಲ್ಲೂ ಅತ್ಯಂತ ವೇಗವಾಗಿ ಸಾಗುವ ಜೀವಿ ಪೆರ್ಗೆಗ್‌ರೈನ್ ಫಾಲ್ಕನ್ ಎಂಬ ಪಕ್ಷಿ. ಆದರೆ ನಾವು ಇಂದು ಮ್ಯಾಮ್ಮಲಿಯಾ ಎಂದು ಕರೆಯಲ್ಪಡುವ ಪ್ರಾಣಿ ಪ್ರಪಂಚದ ಕುರಿತು ತಿಳಿಸಿಕೊಡುತ್ತಿದ್ದೇವೆ. ಇದರಲ್ಲಿ 70-75 ಮೈಲಿ ವೇಗದಲ್ಲಿ ಓಡಿ ಅಗ್ರಸ್ಥಾನವನ್ನು ಉಳಿಸಿಕೊಂಡಿರುವ ಪ್ರಾಣಿ "ಚೀತಾ" ಬನ್ನಿ ಇತರೆ ಪ್ರಾಣಿಗಳು ಎಷ್ಟು ವೇಗದಲ್ಲಿ ಓಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ:

ಕುದುರೆ

ಕುದುರೆ

ಗಿನ್ನಿಸ್ ವಿಶ್ವದಾಖಲೆಗಳ ಪ್ರಕಾರ ಅತಿ ವೇಗವಾಗಿ ಓಡಿರುವ ರೇಸ್ ಕುದುರೆಯ ವೇಗ 70.76 ಕಿ.ಮಿ/ಗಂಟೆಗೆ, 2008 ರಲ್ಲಿ "ವಿನ್ನಿಂಗ್ ಬ್ರ್ಯೂ" ಎಂಬ ಕುದುರೆ ಗ್ರ್ಯಾಂಟ್‌ ವಿಲ್ಲೆಯಲ್ಲಿ ನಡೆದ ರೇಸಿನಲ್ಲಿ ಈ ವೇಗದಲ್ಲಿ ಓಡಿ ದಾಖಲೆ ನಿರ್ಮಿಸಿತ್ತು. ನಿಮಗೆ ಅಚ್ಚರಿಯಾಗಬಹುದು, ವೇಗದ ಪ್ರಾಣಿಗಳ ಪಟ್ಟಿಯಲ್ಲಿ ಈ ಕುದುರೆ 9 ನೇ ಸ್ಥಾನವನ್ನು ಪಡೆದಿದೆ. ಅಚ್ಚರಿಯಾಗುವಂತಹದೇನಿದೆ, ಈ ಪಟ್ಟಿಯಲ್ಲಿ ಇದಕ್ಕಿಂತ ವೇಗವಾಗಿ ಓಡುವ ಹಲವಾರು ಪ್ರಾಣಿಗಳು ಇವೆ.

ಕಾಂಗರೂ

ಕಾಂಗರೂ

ನೆಗೆಯುತ್ತ ಓಡುವ ಏಕೈಕ ದೊಡ್ಡ ಪ್ರಾಣಿ ಕಾಂಗರೂ. ಇದರ ಚಲನೆಯನ್ನು ಲೊಕೊಮೋಷನ್ ಎಂದು ಸಹ ಕರೆಯುತ್ತಾರೆ. ಕೆಂಪು ಕಾಂಗರೂವು ತನ್ನ ಅತ್ಯಂತ ವೇಗದ ಸ್ಥಿತಿಯಲ್ಲಿ 71 ಕಿ.ಮೀ/ಗಂಟೆಗೆ ಓಡುತ್ತದೆಯಂತೆ. ಕಾಂಗರೂ ಸಹ ಇಷ್ಟು ವೇಗವಾಗಿ ಓಡುತ್ತದೆಯೆಂದು ನಿಮಗೆ ಅಚ್ಚರಿಯಾಗುತ್ತಿದೆಯೇ? ಹೌದು, ಕಾಂಗರೂಗಳು ಸಹ ವೇಗವಾಗಿ ಓಡುತ್ತವೆ ಎಂಬುದು ನಮ್ಮ ಉತ್ತರ.

ಆಫ್ರಿಕಾದ ಕಾಡು ನಾಯಿ

ಆಫ್ರಿಕಾದ ಕಾಡು ನಾಯಿ

ಆಫ್ರಿಕಾದ ಕಾಡು ನಾಯಿಗಳು ಆಫ್ರಿಕಾದಲ್ಲಿ ಕಾಣುವ ಒಂದು ಬಗೆಯ ಮಾಂಸಾಹಾರಿ ಪ್ರಾಣಿಗಳಾಗಿವೆ. ವಿಶೇಷವಾಗಿ ಸವನ್ನಾ ಹುಲ್ಲುಗಾವಲುಗಳಲ್ಲಿ ಮತ್ತು ಇನ್ನಿತರ ಕುರುಚಲು ಕಾಡುಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. ಇದನ್ನು ಪೇಂಟೆಡ್ ಹಂಟಿಂಗ್ ಡಾಗ್, ಆಫ್ರಿಕನ್ ಹಂಟಿಂಗ್ ಡಾಗ್, ದಿ ಕೇಪ್ ಹಂಟಿಂಗ್ ಡಾಗ್, ಸ್ಪಾಟ್ಟೆಡ್ ಡಾಗ್ ಎಂದು ಸಹ ಕರೆಯುತ್ತಾರೆ. ಈ ನಾಯಿಗಳು 71 ಕಿ.ಮೀ/ಗಂಟೆಗೆ ಓಡುತ್ತವೆಯಂತೆ.

ಕಂದು ಬಣ್ಣದ ಮೊಲ

ಕಂದು ಬಣ್ಣದ ಮೊಲ

ಆಮೆ ಮೊಲದ ಕತೆಯನ್ನು ನೆನಪಿಸಿಕೊಂಡು ಮೊಲಗಳನ್ನು ತಾತ್ಸಾರ ಮಾಡಬೇಡಿ. ಇವುಗಳು ಸಹ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು. ಒಬ್ಬ ಒಲಂಪಿಕ್ ವೇಗದ ಓಟಗಾರ ಎಷ್ಟು ಓಡುತ್ತಾನೆಯೋ, ಅದರ ದುಪ್ಪಟ್ಟು ವೇಗದಲ್ಲಿ ಈ ಮೊಲಗಳು ಓಡುತ್ತವೆ. ಅದರಲ್ಲಿಯೂ ಯೂರೋಪಿಯನ್ ಕಂದು ಮೊಲವು ಗಂಟೆಗೆ 72 ಕಿ.ಮೀ/ಗಂಟೆಗೆ ವೇಗದಲ್ಲಿ ಓಡುತ್ತವೆ.

ಚೀತಾ

ಚೀತಾ

ಇದು ವಿಶ್ವದ ಅತ್ಯಂತ ವೇಗದ ಪ್ರಾಣಿ. ಆ ಸ್ಥಾನವನ್ನು ಯಾವುದೇ ಪ್ರಾಣಿಗಳಿಗೆ ಬಿಟ್ಟುಕೊಡದೆ ತನ್ನ ಬಳಿಯೇ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಚೀತಾ ಅಥವಾ ಅಸಿನೊನಿಕ್ ಜುಬಾಟುಸ್ ಎಂದು ಕರೆಯಲ್ಪಡುವ ಈ ಪ್ರಾಣಿಯು ಇದೀಗ ಭಾರತದಲ್ಲಿ ಕಂಡು ಬರುತ್ತಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಚಿತ್ರದುರ್ಗದಲ್ಲಿ ಇವು ಅಡ್ಡಾಡಿಕೊಂಡಿದ್ದವು ಎಂದರೆ ನಂಬಲೇ ಬೇಕು. ಇವುಗಳ ವೇಗ 115 ಕಿ.ಮೀ/ಗಂಟೆಗೆ, ಈ ವೇಗದ ಪ್ರಾಣಿ ಇದನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೊಂದಿಲ್ಲ.

ಸ್ಪ್ರಿಂಗ್‌ಬಾಕ್

ಸ್ಪ್ರಿಂಗ್‌ಬಾಕ್

ನೈಋತ್ಯ ಆಫ್ರಿಕಾದಲ್ಲಿ ಕಂಡು ಬರುವ ಸ್ಪ್ರಿಂಗ್‍ಬಾಕ್ ಎಂಬ ಕಡವೆ ಜಾತಿಗೆ ಸೇರಿದ ಪ್ರಾಣಿಯು ಸಹ ವೇಗದ ಪ್ರಾಣಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಸುಂದರ ಪ್ರಾಣಿಯು ತನ್ನ ಕೊಂಬುಗಳಿಂದಾಗಿ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಸ್ಪ್ರಿಂಗ್‌ಬಾಕ್

ಸ್ಪ್ರಿಂಗ್‌ಬಾಕ್

ಅಷ್ಟೇ ಏಕು, ಇದು ಎಷ್ಟು ವೇಗದಲ್ಲಿ ಸಾಗುತ್ತದೆಯೆಂದರೆ ಗಂಟೆಗೆ 100 ಕಿ.ಮೀ ವೇಗದಲ್ಲಿ ಇದರ ಓಟವಿರುತ್ತದೆ. ಅಲ್ಲದೆ ಗಾಳಿಯಲ್ಲಿ ಎತ್ತರ 4 ಮೀಟರ್ ಮತ್ತು ಮುಂದಕ್ಕೆ ಸುಮಾರು 15 ಮೀಟರ್ ಉದ್ದ ನೆಗೆಯುವ ಸಾಮರ್ಥ್ಯ ಈ ಪ್ರಾಣಿಗೆ ಇದೆ. ವಾರೆವ್ಹಾ ಸ್ಪ್ರಿಂಗ್‌ಬಾಕ್ ನಿನಗೆ ಈ ಹೆಸರು ಇಟ್ಟಿದ್ದಕ್ಕೂ ಸಾರ್ಥಕವಾಯಿತು.


English summary

Fastest running animals in the world

It’s human nature to like the fastest things. We love fast cars, fast computers and fastest internet. Same as other things, we love fastest animals. You may have wondered from time to time just what great speed means in the animal world? Mostly, it aids the process of hunting for prey, but that does not always have to be the case. When God created these animals.
X
Desktop Bottom Promotion