ಅಚ್ಚರಿಯಾದರೂ ಸತ್ಯ, ಈ ರೀತಿಯೂ ಮದುವೆ ನಡೆಯುತ್ತೆ!

By Deepu

ವಿವಾಹ ಸಂಪ್ರದಾಯಗಳು ಪ್ರತಿ ಸಮುದಾಯ, ಧರ್ಮಗಳಲ್ಲಿ ಭಿನ್ನವಾಗಿವೆ. ಒಂದೇ ಧರ್ಮದಲ್ಲಿದ್ದರೂ ಖರ್ಚು ಮಾಡುವ ಸಾಮರ್ಥ್ಯವನ್ನು ಅನುಸರಿಸಿ ಸಂಪ್ರದಾಯಗಳಲ್ಲಿ ವೈಪರೀತ್ಯವನ್ನೂ ಕಾಣಬಹುದು. ಸಾಮಾನ್ಯವಾಗಿ ಎಲ್ಲಾ ವಿವಾಹದಲ್ಲಿ ಸಮಾನವಾಗಿರುವುದು ಎಂದರೆ ಜೀವನವಿಡೀ ಜೊತೆ ನೀಡಲು ದೇವರನ್ನು ಸಾಕ್ಷಿಯಾಗಿಸಿ ಮಾಡುವ ಆಣೆ, ಸಂಬಂಧದ ಸಂಕೇತವಾದ ಆಭರಣ, ಉಡುಗೊರೆಗಳ ವಿನಿಮಯ, ಊರಿನವರಿಗೆ ಊಟಕ್ಕೆ ಆಮಂತ್ರಣ.ಉಳಿದಂತೆ ಬೇರೆ ಪದ್ಧತಿಗಳಲ್ಲಿ ವೈವಿಧ್ಯತೆಗಳಿವೆ. ಇಂತಹ ಚಿತ್ರ-ವಿಚಿತ್ರ ಮದುವೆಯನ್ನು ಎಲ್ಲಿಯಾದರೂ ನೋಡಿದ್ದೀರಾ?

ಒಂದೇ ದೇಶದಲ್ಲಿ ಇಷ್ಟೊಂದು ವೈವಿಧ್ಯಗಳಿದ್ದರೆ ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಇನ್ನಷ್ಟು ವೈವಿಧ್ಯತೆ ಇರಬೇಡ. ಆದರೆ ಕೆಲವು ಸಂಪ್ರದಾಯಗಳು ವಿಚಿತ್ರವಾಗಿವೆ. ಬ್ರಿಟಿಷ್ ರಾಣಿ ವಿಕ್ಟೋರಿಯಾರವರ ಮದುವೆ ಉಡುಗೆ ಬಿಳಿಯಾಗಿದ್ದುದನ್ನು ಅನುಸರಿಸುವ ಪಾಶ್ಚಾತ್ಯ ಸಂಪ್ರದಾಯವನ್ನು ಅನುಸರಿಸುತ್ತಾ ಈ ಸಂಪ್ರದಾಯ ಭಾರತದಲ್ಲಿಯೂ ಕಾಣಿಸಿಕೊಂಡಿದೆ. ಬನ್ನಿ, ಈ ಬಗ್ಗೆ ಹಲವು ಮಾಹಿತಿಗಳನ್ನು ಇಲ್ಲಿ ನೀಡಿದ್ದೇವೆ ಮುಂದೆ ಓದಿ....

ಚೀನಾದ ತುಜಿಯಾ ಜನರ ಅಳುವ ಪರಂಪರೆ

ಚೀನಾದ ತುಜಿಯಾ ಜನರ ಅಳುವ ಪರಂಪರೆ

ಚೀನಾದ ಪ್ರಾಚೀನ ಬುಡಕಟ್ಟು ಜನಾಂಗವಾದ ತುಜಿಯಾ ಜನರ ಮದುವೆ ಶೋಕದಿಂದ ಪ್ರಾರಂಭವಾಗುತ್ತದೆ, ಅದೂ ಭರ್ತಿ ಮೂವತ್ತು ದಿನ. ಅಂದರೆ ಮದುವೆ ದಿನಾಂಕದ ನಿರ್ಧಾರವಾದ ಮೂವತ್ತು ದಿನದ ಮೊದಲಿನಿಂದ ವಧು ಪ್ರತಿದಿನ ಒಂದು ಗಂಟೆ ಕಡ್ಡಾಯವಾಗಿ ಅಳಬೇಕು. ಹತ್ತು ದಿನದ ಬಳಿಕ ಆಕೆಯ ತಾಯಿ ಇವಳೊಂದಿಗೆ ಸೇರಿ ಅಳಬೇಕು. ಹತ್ತು ದಿನದ ನಂತರ ಅಜ್ಜಿ ನಂತರ ಪ್ರತಿದಿನ ಕುಟುಂಬದ ಬೇರೆ ಸದಸ್ಯರೆಲ್ಲರೂ ಜೊತೆಗೂಡಿ ಅಳಬೇಕು. ಅಂದರೆ ಮದುವೆಯ ದಿನ ಹೆಚ್ಚೂ ಕಡಿಮೆ ಕುಟುಂಬದ ಎಲ್ಲಾ ಸದಸ್ಯರು ಜೊತೆಗೂಡಿ ಅಳಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚೀನಾದ ತುಜಿಯಾ ಜನರ ಅಳುವ ಪರಂಪರೆ

ಚೀನಾದ ತುಜಿಯಾ ಜನರ ಅಳುವ ಪರಂಪರೆ

ಮದುವೆಯ ಬಳಿಕ ಅಳು ಬಂದ್. ಈ ಜನರ ನಂಬಿಕೆಯ ಪ್ರಕಾರ ಈ ರೀತಿಯಾಗಿ ಅಳುವುದು ಶೋಕವಲ್ಲ, ಬದಲಿಗೆ ಸಂತೋಷ ಮತ್ತು ಆಳವಾದ ಪ್ರೇಮದ ಸಂಕೇತ. ಮದುವೆ ದಿನ ಹತ್ತಿರಾದಂತೆ ಹಲವು ಮಹಿಳೆಯರು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ರಾಗ ಕುಯ್ಯುವುದನ್ನು ಕೇಳಿದರೆ ಒಂದು ಅಧ್ವಾನವಾದ ಸಂಗೀತದಂತಿರುತ್ತದೆ ಎಂದು ಕೇಳಿಸಿಕೊಂಡವರು ಹೇಳುತ್ತಾರೆ.

ಸ್ವೀಡನ್ನಿನ ಚುಂಬದನ ಪರಂಪರೆ

ಸ್ವೀಡನ್ನಿನ ಚುಂಬದನ ಪರಂಪರೆ

ಚುಂಬನ ಎಂದರೆ ವಧೂವರರ ನಡುವೆ ಮಾತ್ರ ನಡೆಯಬೇಕು ಎಂಬ ಸಂಪ್ರದಾಯ ಸ್ವೀಡನ್ನಿನಲ್ಲಿ ಬದಲಾಗಿದೆ. ಇಲ್ಲಿ ಮದುವೆಗೆ ಆಗಮಿಸಿದ ಅತಿಥಿಗಳಿಗೆ ವಧು ಅಥವಾ ವರನನ್ನು ಚುಂಬಿಸುವ ಅವಕಾಶವಿದೆ. ವಿವಾಹ ಸಮಾರಂಭದಲ್ಲಿ ಯಾವುದೋ ಕಾರಣಕ್ಕೆ ವಧು ಅಥವಾ ವರ ಜನರ ನಡುವೆಯಿಂದ ಕಾಣೆಯಾದರೆ ಆ ಸಮಯದಲ್ಲಿ ಆತನ ವಧು ಅಥವಾ ವರನನ್ನು ಅವಿವಾಹಿತ ಯುವಕ ಅಥವಾ ಯುವತಿಯರು ಚುಂಬಿಸುವ ಅವಕಾಶವಿದೆ. ಇದು ವಿಶ್ವದಲ್ಲಿಯೇ ಒಂದು ವಿಭಿನ್ನ ಸಂಪ್ರದಾಯವಾಗಿದೆ.

ಕೀನ್ಯಾದಲ್ಲಿ ವಧುವಿನ ಮುಖಕ್ಕೇ ಉಗುಳುವುದು

ಕೀನ್ಯಾದಲ್ಲಿ ವಧುವಿನ ಮುಖಕ್ಕೇ ಉಗುಳುವುದು

ಕೀನ್ಯಾದ ಮಸ್ಸಾಯಿ (ಮಸಾಯ್) ಜನಾಂಗದ ಈ ಸಂಪ್ರದಾಯ ವಾಕರಿಕೆ ಬರಿಸುತ್ತದೆ. ಮದುವೆಯ ದಿನ ವಧುವಿನ ತಲೆಗೂದಲನ್ನು ಬೋಳಿಸಿ ಕುರಿಯ ಕೊಬ್ಬು ಮತ್ತು ಎಣ್ಣೆಯಿಂದ ತಲೆಯನ್ನು ಸವರಲಾಗುತ್ತದೆ. ಬಳಿಕ ವಧುವಿನ ತಂದೆ ಮಗಳ ತಲೆಯ ಮತ್ತು ಸ್ತನಗಳ ಮೇಲೆ ಉಗುಳುವ ಮೂಲಕ ಆಶೀರ್ವಾದ ಮಾಡುತ್ತಾನೆ.

ಕೀನ್ಯಾದಲ್ಲಿ ವಧುವಿನ ಮುಖಕ್ಕೇ ಉಗುಳುವುದು

ಕೀನ್ಯಾದಲ್ಲಿ ವಧುವಿನ ಮುಖಕ್ಕೇ ಉಗುಳುವುದು

ಸಾಮಾನ್ಯವಾಗಿ ಎಲ್ಲೆಡೆ ಉಗುಳುವುದನ್ನು ಅಪಶಕುನವಾಗಿ ಕಂಡರೆ ಈ ಜನಾಂಗದಲ್ಲಿ ಇದು ಶುಭ ಮತ್ತು ಸಮೃದ್ದಿಯ ಸಂಕೇತವಾಗಿದೆ. ತಂದೆಯಿಂದ ಉಗುಳ ಆಶೀರ್ವಾದ ಪಡೆದ ವಧು ತಾಯಿಯಮನೆಯಿಂದ ಗಂಡನ ಮನೆಗೆ ಹೊರಟು ಒಮ್ಮೆಯೂ ಹಿಂದೆ ತಿರುಗದೇ ಮುಂದುವರೆಯುತ್ತಾಳೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೀನ್ಯಾದಲ್ಲಿ ವಧುವಿನ ಮುಖಕ್ಕೇ ಉಗುಳುವುದು

ಕೀನ್ಯಾದಲ್ಲಿ ವಧುವಿನ ಮುಖಕ್ಕೇ ಉಗುಳುವುದು

ಒಂದು ವೇಳೆ ತಿರುಗಿ ನೋಡಿದರೆ ಆಕೆ ಕಲ್ಲಾಗುವಳು ಎಂಬ ನಂಬಿಕೆ ಈ ಜನರಲ್ಲಿದೆ. ಮುಂದಿನ ಎರಡು ದಿನಗಳ ಕಾಲ ಆಕೆ ಗಂಡನ ಮನೆಯಲ್ಲಿ ಒಂಟಿಯಾಗಿರಬೇಕು, ಗಂಡ ಮನೆಗೆ ಬರುವಂತಿಲ್ಲ. ಈ ಎರಡು ದಿನಗಳಲ್ಲಿ ಚಿಕ್ಕದಾಗಿ ಚಿಗುರಿದ್ದ ತಲೆಗೂದಲನ್ನು ಆಕೆಯ ಅತ್ತೆ (ಗಂಡನ ತಾಯಿ) ಮತ್ತೊಮ್ಮೆ ಹೆರೆದು ಸೊಸೆಯನ್ನು ಮನೆ ತುಂಬಿಸಿಕೊಳ್ಳುತ್ತಾಳೆ. ನಂತರವೇ ಪತಿಗೆ ಪತ್ನಿಯ ಮುಖ ನೋಡುವ ಭಾಗ್ಯ ಸಿಗುತ್ತದೆ.

ಕುಂಭವಿವಾಹ (ಮಾಂಗಲಿಕ ದೋಷವಿರುವ ಭಾರತೀಯ ವಧುವಿನ ವಿವಾಹ ಸಂಪ್ರದಾಯ)

ಕುಂಭವಿವಾಹ (ಮಾಂಗಲಿಕ ದೋಷವಿರುವ ಭಾರತೀಯ ವಧುವಿನ ವಿವಾಹ ಸಂಪ್ರದಾಯ)

ಹಿಂದೂ ಸಂಪ್ರದಾಯದಲ್ಲಿ ಜಾತಕವನ್ನು ಅತಿ ಜಾಗರೂಕತೆಯಿಂದ ಪರಿಶೀಲಿಸಿ ವಧೂವರರ ಗುಣಗಳನ್ನು ತಾಳೆ ಹಾಕಿದ ಬಳಿಕವೇ ವಿವಾಹಕ್ಕೆ ಅನುಮತಿ ನೀಡಲಾಗುತ್ತದೆ. ಒಂದು ವೇಳೆ ವರ ಅಥವಾ ವಧುವಿನ ಜಾತಕದಲ್ಲಿ ಮಾಂಗಳಿಕ ದೋಶವಿದ್ದರೆ ಈ ದೋಶವನ್ನು ನಿವಾರಿಸದ ಹೊರತು ವಿವಾಹವಾದರೆ ಅವರ ಸಂಗಾತಿಯಾಗುವವರಿಗೆ ಗಂಡಾಂತರ ಎದುರಾಗಬಹುದು ಎಂದು ನಂಬಲಾಗಿದೆ. ಇದನ್ನು ಸರಿಪಡಿಸಲು ವಿವಾಹಕ್ಕೂ ಮೊದಲು ದೋಶವಿರುವ ವ್ಯಕ್ತಿಯನ್ನು ಅರಳಿ ಅಥವಾ ಬಾಳೆಮರಕ್ಕೆ ಮದುವೆ ಮಾಡಿಕೊಡಲಾಗುತ್ತದೆ.

ಕುಂಭವಿವಾಹ (ಮಾಂಗಲಿಕ ದೋಷವಿರುವ ಭಾರತೀಯ ವಧುವಿನ ವಿವಾಹ ಸಂಪ್ರದಾಯ)

ಕುಂಭವಿವಾಹ (ಮಾಂಗಲಿಕ ದೋಷವಿರುವ ಭಾರತೀಯ ವಧುವಿನ ವಿವಾಹ ಸಂಪ್ರದಾಯ)

ಕೆಲವೆಡೆ ಕಾಲ್ಪನಿಕ ಸೊಸೆ ಅಥವಾ ಅಳಿಯನನ್ನು ಒಂದು ನೀರು ತುಂಬಿದ ಜಾಡಿಯ ರೂಪದಲ್ಲಿಯೂ ಕಂಡು ಮದುವೆ ಮಾಡಿಕೊಡಲಾಗುತ್ತದೆ. ಇದಕ್ಕೆ ಕುಂಭ ವಿವಾಹ ಎಂದು ಹೇಳುತ್ತಾರೆ. ಕುಂಭ ವಿವಾಹದ ಕೊಂಚ ಹೊತ್ತಿನ ಬಳಿಕ ಇದನ್ನು ಊರ್ಜಿತಗೊಳಿಸಿ ಮತ್ತೊಮ್ಮೆ ಸಂಪ್ರದಾಯದ ಅನುಸಾರ ನಿಗದಿತ ವಧೂವರರಿಗೆ ಮದುವೆ ಮಾಡಲಾಗುತ್ತದೆ. ಖ್ಯಾತ ತಾರೆ ಐಶ್ವರ್ಯಾ ರೈ ಸಹಾ ಇದೇ ರೀತಿಯ ವಿವಾಹಕ್ಕೆ ಒಳಗಾದರು. ಅಭಿಶೇಕ್ ರನ್ನು ಮದುವೆಯಾಗುವ ಮೊದಲು ವಾರಣಾಸಿಗೆ ತೆರಳಿ ಅಲ್ಲಿನ ಅರಳಿ ಮರಕ್ಕೆ ಮದುವೆಯಾಗಿದ್ದರು.

ಪ್ರಾಣಿಗಳೊಂದಿಗೆ ಮದುವೆ

ಪ್ರಾಣಿಗಳೊಂದಿಗೆ ಮದುವೆ

ಈ ಸಂಪ್ರದಾಯ ಭಾರತ ಅಲ್ಲದೇ ಬೇರೆ ದೇಶದಲ್ಲಿರುವ ಸಾಧ್ಯತೆ ಕಡಿಮೆ. ಕೆಲವು ಹಳ್ಳಿಗಳಲ್ಲಿ ಕುರೂಪವನ್ನು ಹುಟ್ಟಿನಿಂದಲೇ ಪಡೆದ ಹೆಣ್ಣುಮಕ್ಕಳು ಭೂತದ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಭಾವಿಸಿ ಅವರನ್ನು ಪ್ರಾಣಿಯೊಂದಕ್ಕೆ ಮದುವೆ ಮಾಡುವ ಮೂಲಕ ಭೂತದಿಂದ ಬಿಡಿಸುವ ಸಂಪ್ರದಾಯವಿದೆ. ಹುಟ್ಟಿದಾಗಲೇ ಹಲ್ಲು ಇರುವ, ಕುರೂಪದ ಅಥವಾ ಮುಖದಲ್ಲಿ ಯಾವುದೋ ವೈಪರೀತ್ಯವಿರುವ (ಸೀಳುತುಟಿ ಇತ್ಯಾದಿ) ಮಕ್ಕಳನ್ನು ನಾಯಿ ಅಥವಾ ಕುರಿಗೆ ಮದುವೆ ಮಾಡುತ್ತಾರೆ.

ಪ್ರಾಣಿಗಳೊಂದಿಗೆ ಮದುವೆ

ಪ್ರಾಣಿಗಳೊಂದಿಗೆ ಮದುವೆ

ಈ ವಿವಾಹದಲ್ಲಿಯೂ ಬೇರೆ ವಿವಾಹದಲ್ಲಿರುವಷ್ಟೇ ಜನರು ಸೇರಿ ಮದ್ಯಪಾನ ಮಾಡಿ ನರ್ತಿಸಿ ಸಂಭ್ರಮಿಸುತ್ತಾರೆ. ಆದರೆ ಹುಡುಗಿ ಆ ಪ್ರಾಣಿಯೊಂದಿಗೆ ಸಂಸಾರ ಮಾಡಬೇಕಿಲ್ಲ, ದಿನಗಳೆದಂತೆ ನಾಯಿ ಅಥವಾ ಕುರಿಯನ್ನು ಒದ್ದೋಡಿಸುವ ಮೂಲಕ ಭೂತವನ್ನೂ ಅಟ್ಟಿದ್ದೇವೆ ಎಂದು ಜನರು ನಂಬುತ್ತಾರೆ. ಪ್ರಾಪ್ತ ವಯಸ್ಸಿಗೆ ಆಕೆಗೆ ಮನುಷ್ಯನೊಂದಿಗೇ ಮದುವೆಯಾಗುತ್ತದೆ.

X
Desktop Bottom Promotion