For Quick Alerts
ALLOW NOTIFICATIONS  
For Daily Alerts

ಎಂತಹ ಧೈರ್ಯವಂತರನ್ನೂ ಬೆಚ್ಚಿ ಬೀಳಿಸುವ ಸ್ಮಶಾನಗಳು

By Super
|

ಸ್ಮಶಾನ ಎಂದರೇನೇ ಭಯಾನಕ ಸ್ಥಳವಾಗಿದೆ, ಅದರಲ್ಲಿ ಅತ್ಯಂತ ಭಯಾನಕ ಎಂದರೆ? ಸಾಮಾನ್ಯವಾಗಿ ಸ್ಮಶಾನದಲ್ಲಿ ರಾತ್ರಿಹೊತ್ತಿನಲ್ಲಿ ಭೇಟಿ ನೀಡುವುದು ನಿಷೇಧಿಸಲಾಗಿರುತ್ತದೆ ಆದರೆ ದಿನವಿಡೀ ಮೃತರ ಆತ್ಮಕ್ಕೆ ಶಾಂತಿ ಕೋರುವವರು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆಲ್ಲದೆ ಕೆಲವು ಸ್ಥಳಗಳಲ್ಲಿ ಹಗಲು ರಾತ್ರಿ ಎಂಬ ಭೇದವಿಲ್ಲದೇ ಹಲವರು ಇಲ್ಲಿ ಪಿಶಾಚಿ ಅಥವಾ ಆತ್ಮಗಳ ಚಲನೆ ಅಥವಾ ಇರುವಿಕೆಯನ್ನು ಗಮನಿಸಿದ್ದಾರೆ.

ಕೆಲವು ಸ್ಮಶಾನಗಳಂತೂ ಆತ್ಮಗಳ ಖಚಿತ ವಾಸ್ತವ್ಯದ ಮಾಹಿತಿಯಿಂದಾಗಿ ವಿಶ್ವಪ್ರಸಿದ್ಧವಾಗಿವೆ. ವಿಶ್ವದಾದ್ಯಂತ ಇಂತಹ ಸುಮಾರು ಮುನ್ನೂರು ಸ್ಥಳಗಳಿವೆ. ಇವುಗಳಲ್ಲಿ ಪ್ರಮುಖವಾದ ಹತ್ತು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಇವುಗಳಲ್ಲಿ ಹಲವು ಅತೃಪ್ತ ಆತ್ಮಗಳಾಗಿದ್ದು ಶಾಂತಿಗಾಗಿ ಸ್ಮಶಾನದ ಉದ್ದಗಲಕ್ಕೂ ಅಲೆಯುವುದು, ಸ್ಮಶಾನಕ್ಕೆ ಭೇಟಿ ನೀಡಿದವರಿಗೆ ಕಿರುಕುಳ ನೀಡುವುದು, ತಮ್ಮ ಶಾಪವನ್ನು ಬಂದವರಿಗೆ ದಾಟಿಸಲು ಯತ್ನಿಸುವುದು ಮೊದಲಾದ ಘಟನೆಗಳು ಈ ಸ್ಥಳಗಳನ್ನು ಅತ್ಯಂತ ಭಯಾನಕವಾಗಿಸಿವೆ. ಈ ಸ್ಥಳಗಳಿಗೆ ಭೇಟಿ ನೀಡಬೇಡಿ ಎಂದೇ ಸ್ಥಳೀಯರು ಎಚ್ಚರಿಕೆ ನೀಡುತ್ತಾರೆ. ಈ ಎಚ್ಚರಿಕೆಯನ್ನು ಕಡೆಗಣಿಸಿ ಹೊಸದಾದ ಅನುಭವವೇನಾದರೂ ನಿಮಗಾಗಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ...

ಬಾರ್ಬಡೋಸ್‌ನ ಚೇಸ್ ವಾಲ್ಟ್

ಬಾರ್ಬಡೋಸ್‌ನ ಚೇಸ್ ವಾಲ್ಟ್

ಬಾರ್ಬಡೋಸ್ ದೇಶದ ಕ್ರೈಸ್ಟ್ ಚರ್ಚ್ ನಗರದ ಆಯಿಸ್ಟಿನ್ಸ್ ಎಂಬ ಸ್ಥಳದಲ್ಲಿರುವ ಚೇಸ್ ವಾಲ್ಟ್ ಎಂಬ ಶವಾಗಾರದಲ್ಲಿ ಶವಪೆಟ್ಟಿಗೆಗಳು ಸ್ಥಾನ ಬದಲಾಯಿಸುವ ಘಟನೆಗೆ ಹೆಸರುವಾಸಿಯಾಗಿದೆ. ಅಲ್ಲಿನ ಸಂಪ್ರದಾಯದಂತೆ ಆಗಾಗ ಇಲ್ಲಿನ ಹೆಬ್ಬಾಗಿಲನ್ನು ತೆರೆದು ನೋಡಲಾಗುತ್ತಿರುತ್ತದೆ.ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Pic Courtesy

ಬಾರ್ಬಡೋಸ್‌ನ ಚೇಸ್ ವಾಲ್ಟ್

ಬಾರ್ಬಡೋಸ್‌ನ ಚೇಸ್ ವಾಲ್ಟ್

ಸುಮಾರು ಎಂಟು ಜನರು ಕಷ್ಟಪಟ್ಟರೆ ಮಾತ್ರ ತೆರೆಯಬಹುದಾದ ಈ ಭಾರೀ ಬಾಗಿಲನ್ನು ಪ್ರತಿ ಬಾರಿ ತೆರೆದಾಗಲೂ ಒಳಗಿದ್ದ ಶವಪೆಟ್ಟಿಗೆಗಳ ಸ್ಥಾನ ಪಲ್ಲಟವಾಗಿರುತ್ತದೆ. ಯಾವ ಹೆಜ್ಜೆ ಗುರುತೂ ಇಲ್ಲ, ನೀರು ಬಂದ ಚಿಹ್ನೆಯೂ ಇಲ್ಲ. ಭೂಕಂಪ ಮೊದಲಾದ ಯಾವುದೇ ಸಂಭವವಿಲ್ಲ. ಹೀಗಿದ್ದಾಗ ಶವಪೆಟ್ಟಿಗೆಗಳು ಸ್ಥಳ ಬದಲಾಯಿಸಿರುವುದಾದರೂ ಹೇಗೆ?

ಸೆಂಟ್ ಲೂಯಿಸ್ ಸ್ಮಶಾನ

ಸೆಂಟ್ ಲೂಯಿಸ್ ಸ್ಮಶಾನ

ಅಮೇರಿಕಾದ ಲೂಸಿಯಾನಾ ರಾಜ್ಯದ ನ್ಯೂ ಆರ್ಲೀನ್ಸ್ ನಗರದಲ್ಲಿರುವ ಈ ಸ್ಮಶಾನ ಕ್ರೈಸ್ತ ಪಾದ್ರಿಗಳ ಮತ್ತು ಖ್ಯಾತ ವ್ಯಕ್ತಿಗಳ ಸಮಾಧಿಯಾಗಿದೆ. ಆಫ್ರಿಕಾದಿಂದ ಬಂದು ಅಮೇರಿಕಾದಲ್ಲಿ ನೆಲೆನಿಂತ ಕಪ್ಪು ಜನರು ಪಾಲಿಸುವ ಕ್ರೈಸ್ತ ಧರ್ಮ ಕೊಂಚ ಭಿನ್ನವಾಗಿದ್ದು ಇವರ ಪಾದ್ರಿಗಳನ್ನು ವೂಡೂ ಪಾದ್ರಿ ಎಂದು ಕರೆಯಲಾಗುತ್ತದೆ. ಈ ಸ್ಮಶಾನದಲ್ಲಿ ಇಂತಹ ವೂಡೂ ಮಹಿಳಾ ಪಾದ್ರಿ (Voodoo Priestess) ಆಗಿದ್ದ Marie Laveau ಎಂಬುವರ ಮರಣದ ನಂತರ ಸಮಾಧಿ ಮಾಡಲಾಗಿತ್ತು. ಆದರೆ ಆ ಬಳಿಕ ಈ ಪಾದ್ರಿ ತನ್ನ ಮಗಳೊಂದಿಗೆ ಸ್ಮಶಾನದ ಉದ್ದಗಲಕ್ಕೂ ಸಂಚರಿಸುವುದನ್ನು ಕಣ್ಣಾರೆ ಕಂಡವರಿದ್ದಾರೆ. ಅದೂ ಇಡಿಯ ರಾತ್ರಿ. ಇದನ್ನು ವಿವಿಧ ಸಂದರ್ಭದಲ್ಲಿ ಬೇರೆ ಬೇರೆ ವ್ಯಕ್ತಿಗಳು ನೋಡಿರುವ ಕಾರಣ ಕಲ್ಪನೆಯೆಂದು ನಿರ್ಲಕ್ಷಿಸುವಂತಿಲ್ಲ.

Pic Courtesy

ಇಟಲಿಯ ಕ್ಯಾಟಾಕೋಂಬ್ ಡೀ ಕ್ಯಾಪುಸಿನಿ

ಇಟಲಿಯ ಕ್ಯಾಟಾಕೋಂಬ್ ಡೀ ಕ್ಯಾಪುಸಿನಿ

ಕ್ಯಾಟಾಕೋಂಬ್ ಡೀ ಕ್ಯಾಪುಸಿನಿ (Catacombe dei Cappuccini) ಎಂಬ ಪುಟ್ಟ ಸ್ಮಶಾನ ಇಟಲಿಯ ಸಿಸಿಲಿ ರಾಜ್ಯದ ಪಾಲೆರ್ಮೋ ಎಂಬ ನಗರದಲ್ಲಿದೆ. ಇದರ ನೆಲಮಾಳಿಗೆಯ ಗೋಡೆಗಳಲ್ಲೆಲ್ಲಾ ಕೊಳೆಯದಂತೆ ವಿವಿಧ ಲೇಪನಗಳನ್ನು ಹಚ್ಚಿ ಒಣಗಿಸಿದ ಶವಗಳು ನೇತಾಡಿಸಲಾಗಿದೆ. ಈ ನೆಲಮಾಳಿಗೆಗೆ ಭೇಟಿ ನೀಡಿದವರನ್ನು ಅಷ್ಟೂ ಶವಗಳು ಬಗ್ಗಿ ದಿಟ್ಟಿಸಿ ನೋಡುತ್ತಿರುವಂತೆ ಅನ್ನಿಸುವುದರಿಂದ ಎಂತಹ ಗಟ್ಟಿಎದೆಯುಳ್ಳವರೂ ಭಯಭೀತರಾಗುವುದು ಖಚಿತ.

Pic Courtesy

ಬ್ರಿಟನ್ನಿನ ಬ್ರೂಕ್ ವುಡ್ ಸ್ಮಶಾನ

ಬ್ರಿಟನ್ನಿನ ಬ್ರೂಕ್ ವುಡ್ ಸ್ಮಶಾನ

ಬ್ರಿಟನ್ನಿನ ಬ್ರೂಕ್ ವುಡ್ ಸ್ಮಶಾನ (Brookwood Cemetery) ವನ್ನು ಲಂಡನ್ ನೆಕ್ರೋಪೋಲಿಸ್ ಎಂದೂ ಕರೆಯಲಾಗುತ್ತದೆ. ಹಗಲಿನಲ್ಲಿ ಪ್ರಶಾಂತವಾಗಿರುವ ಈ ಸ್ಮಶಾನದಲ್ಲಿ ರಾತ್ರಿಯಾಗುತ್ತಿದ್ದಂತೆಯೇ ವಿವಿಧ ರೀತಿಯ ಸದ್ದುಗಳು ಪಿಸುಗುಟ್ಟುವುದರಿಂದ ಹಿಡಿದು ಕಿರಿಚುವಷ್ಟು ಜೋರಾಗಿ ಕೇಳಿಬರುತ್ತವೆ. ಇದುವರೆಗೆ ಇದರ ಮೂಲವನ್ನು ಹುಡುಕಲು ಯಾರೂ ಧೈರ್ಯ ಮಾಡಿಲ್ಲ.

Pic Courtesy

ಪ್ಯಾರಿಸ್ಸಿನ ಕ್ಯಾಟಾಕೋಂಬ್

ಪ್ಯಾರಿಸ್ಸಿನ ಕ್ಯಾಟಾಕೋಂಬ್

ಪ್ಯಾರಿಸ್ ನರಗದ ನೆಲಮಾಳಿಗೆಯ ಗೋಡೆಗಳಲ್ಲೆಲ್ಲಾ ಸಾವಿರಾರು ಮನುಷ್ಯರ ತಲೆಬುರುಡೆ ಮತ್ತು ಇತರ ಮೂಳೆಗಳನ್ನು ಜೋಡಿಸಿಡಲಾಗಿದೆ. ಒಂದು ಅಂದಾಜಿನ ಪ್ರಕಾರ ಈ ನೆಲಮಾಳಿಗೆಯಲ್ಲಿ ಸುಮಾರು ಅರವತ್ತು ಲಕ್ಷ ಅಸ್ಥಿಪಂಜರಗಳಿದ್ದು ಒಳಗೆ ಅಡಿಯಿಟ್ಟವರ ಎದೆಯನ್ನು ಝಲ್ಲೆನಿಸುವುದು ಮಾತ್ರ ನಿಜ.

Pic Courtesy

ಜೆಕ್ ರಿಪಬ್ಲಿಕ್ ನ ಓಸುವಾರಿ ಚರ್ಚ್

ಜೆಕ್ ರಿಪಬ್ಲಿಕ್ ನ ಓಸುವಾರಿ ಚರ್ಚ್

ಜೆಕ್ ರಿಪಬ್ಲಿಕ್ ನಲ್ಲಿನ ಓಸುವಾರಿ ಚರ್ಚ್ ನ ನೆಲಮಾಳಿಗೆಯನ್ನು ತೆರವುಗೊಳಿಸಲು ಅಲ್ಲಿದ್ದ ಸಾವಿರಾರು ಅಸ್ಥಿಪಂಜರಗಳನ್ನೇ ಉಪಯೋಗಿಸಿ ವಿವಿಧ ಕಲಾಕೃತಿಗಳನ್ನಾಗಿ ಇಡಿಯ ಚರ್ಚ್ ತುಂಬಾ ಅಲಂಕರಿಸಲಾಗಿದೆ. ಪವಿತ್ರವಾದ ಈ ಮೂಳೆಗಳನ್ನು ನಾಶಪಡಿಸಲು ಸಾಧ್ಯವಾಗದೇ ಸ್ಥಳಾವಕಾಶಕ್ಕಾಗಿ ಅನಿವಾರ್ಯವಾಗಿ ಈ ಕ್ರಮ ಕೈಗೊಳ್ಳಬೇಕಾಯಿತು. ಮನುಷ್ಯರ ಮೂಳೆಗಳೇ ಎಲ್ಲಿ ನೋಡಿದರಲ್ಲಿ ತೂಗಾಡುತ್ತಾ, ಅಕ್ಕಪಕ್ಕದಲ್ಲಿ ವಿವಿಧ ರೂಪಗಳಲ್ಲಿ ಕಂಡುಬಂದರೆ ಪ್ರಾರ್ಥನೆಯಲ್ಲಿ ಜನರು ಈ ಮೂಳೆಗಳಿಂದ ನಮ್ಮನ್ನು ಕಾಪಾಡು ಎಂದು ಮೊದಲು ದೇವರನ್ನು ಪಾರ್ಥಿಸುತ್ತಾರೆ ಎಂದೆನ್ನಿಸುತ್ತದೆ.

Pic Courtesy

ಬ್ಯೂನಸ್ ಐರಸ್ ನ ರೆಕೋಲೇಟಾ ಸ್ಮಶಾನ

ಬ್ಯೂನಸ್ ಐರಸ್ ನ ರೆಕೋಲೇಟಾ ಸ್ಮಶಾನ

ಅರ್ಜೆಂಟೀನಾ ದೇಶದ ರಾಜಧಾನಿ ಬ್ಯೂನಸ್ ಐರಸ್ ನ ಈ ಸ್ಮಶಾನ ಹೊರಗಿನಿಂದ ಕಂಡಾಗ ಸ್ಮಶಾನಕ್ಕಿಂತ ಹೆಚ್ಚಾಗಿ ಒಂದು ಪುಟ್ಟ, ಸುಂದರ ವಾಸ್ತುಶಿಲ್ಪದ ಉದ್ಯಾನದಂತೆ ಕಾಣಿಸುತ್ತದೆ. ಆದರೆ ಇದರ ಕಥೆ ಕೇಳಿದವರು ರಾತ್ರಿ ಇಲ್ಲಿ ಸುಳಿಯಲು ಅಂಜುತ್ತಾರೆ. ಈ ಸ್ಥಳದಲ್ಲಿ ರುಫಿನಾ ಕ್ಯಾಂಬಾಸೆರೆಸ್ (Rufina Cambaceres) ಎಂಬ ಯುವತಿಯನ್ನು ಜೀವಂತವಾಗಿ ಹುಗಿದ ಕಥೆ ಜನಜನಿತವಾಗಿದೆ. ತನ್ನ ಪ್ರೇಮಿ ತನ್ನನ್ನು ವಂಚಿಸಿ ತನ್ನ ತಾಯಿಯನ್ನೇ ಮೋಹಿಸಿದ ಪರಿಯನ್ನು ಅರಗಿಸಿಕೊಳ್ಳಲಾಗದೇ ಕುಸಿದು ಬಿದ್ದವಳನ್ನು ಮೃತಳಾಗಿದ್ದಾಳೆ ಎಂದು ಭಾವಿಸಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Pic Courtesy

ಬ್ಯೂನಸ್ ಐರಸ್ ನ ರೆಕೋಲೇಟಾ ಸ್ಮಶಾನ

ಬ್ಯೂನಸ್ ಐರಸ್ ನ ರೆಕೋಲೇಟಾ ಸ್ಮಶಾನ

ಆದರೆ ಆಕೆ ಧರಿಸಿದ್ದ ಒಡವೆಗಳ ಆಸೆಗಾಗಿ ಶವಪೆಟ್ಟಿಗೆ ತೆರೆದವರು ಒಳಭಾಗವನ್ನೆಲ್ಲಾ ಉಗುರಿನಿಂದ ಗೀಚಿದ್ದು, ಮುಖವನ್ನು ಪರಚಿಕೊಂಡದ್ದನ್ನು ಕಂಡರು. ಅಂದಿನಿಂದ ಆಕೆಯ ಭೂತ ಅಲ್ಲಿ ಓಡಾಡುತ್ತಿದೆ ಎಂದು ನಂಬಲಾಗಿದೆ. ಇನ್ನೊಂದು ವಿಚಿತ್ರವೆಂದರೆ ಈ ಸ್ಮಶಾನದ ಕಾವಲುಗಾರ ಡೇವಿಡ್ ಅಲೆನೋ (David Alleno) ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ. ದಾಖಲೆಯ ಪ್ರಕಾರ ಈ ಸ್ಮಶಾನ ಇಂದಿಗೂ ಆತನ ಒಡೆತನದಲ್ಲಿಯೇ ಇದೆ.

ಬೆಲೀಜ್ ದೇಶದ್ ಅಕ್ಟುನ್ ಟ್ಯುನಿಶಿಲ್ ಮುಕ್ನಾಲಿಸ್

ಬೆಲೀಜ್ ದೇಶದ್ ಅಕ್ಟುನ್ ಟ್ಯುನಿಶಿಲ್ ಮುಕ್ನಾಲಿಸ್

ಬೆಲೀಜ್ ದೇಶದಲ್ಲಿ ಒಂದು ಗುಹೆ ಇದೆ. Actun Tunichil Muknalis ಎಂಬ ಹೆಸರಿನ ಈ ಕಗ್ಗತ್ತಲ ಗುಹೆಯನ್ನು ಪ್ರವೇಶಸಲು ಅಳ್ಳೆದೆ ಸಾಲದು. ಈ ಗುಹೆಯೊಳಕ್ಕೆ ಸಾವಿರಾರು ಅಸ್ಥಿಪಂಜರಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು ಹೆಜ್ಜೆಹೆಜ್ಜೆಗೆ ತೊಡರುತ್ತವೆ. ಅದರಲ್ಲೂ ಹದಿಹರೆಯದ ಯುವತಿಯೊಬ್ಬಳನ್ನು ಇಲ್ಲಿ ಬಲಿಕೊಡಲಾಗಿದ್ದು ಅವಳ ಅಸ್ಥಿಪಂಜರದ ಮೂಳೆಗಳಿಗೆ ಕೃತಕವಾಗಿ ಕ್ಯಾಲ್ಸಿಯಂ ಲೇಪಿಸಿ 'ಸ್ಪಟಿಕದ ಕನ್ಯೆ' (the Crystal Maiden) ಎಂಬ ರೂಪ ನೀಡಲಾಗಿತ್ತು. ಈ ಗುಹೆಯಲ್ಲಿ ಆತ್ಮಗಳು ಮುಕ್ತವಾಗಿ ಸಂಚರಿಸುತ್ತವೆ ಎಂಬ ನಂಬಿಕೆಯಿದ್ದು ಸ್ಥಳೀಯರು ಒಳಗೆ ಹೋಗಲು ನಿರಾಕರಿಸುತ್ತಾರೆ. ಇವು ಪ್ರಾಚೀನ ಮಾಯಾ ಜನಾಂಗಕ್ಕೆ ಸೇರಿದವರಾಗಿರಬಹುದೆಂದು ನಂಬಲಾಗಿದೆ.

Pic Courtesy

ಭಾರತದ ನ್ಯೂ ಲಕ್ಕಿ ರೆಸ್ಟೋರೆಂಟ್

ಭಾರತದ ನ್ಯೂ ಲಕ್ಕಿ ರೆಸ್ಟೋರೆಂಟ್

ಗುಜರಾತಿನ ಅಹ್ಮದಾಬಾದಿನಲ್ಲಿ ನ್ಯೂ ಲಕ್ಕಿ ರೆಸ್ಟೋರೆಂಟ್ ಎಂಬ ಹೋಟೆಲಿದೆ. ಇಲ್ಲಿ ಸಿಗುವ ಊಟ ತಿಂಡಿಗಳೆಲ್ಲಾ ಮಾಮೂಲಿಯೇ ಆದರೆ ಈ ಹೋಟೆಲ್ ಇರುವ ಸ್ಥಳ ಮಾತ್ರ ಸ್ಮಶಾನವಾಗಿವೆ. ಇಲ್ಲಿ ಹಲವಾರು ಗೋರಿಗಳಿದ್ದು ಗೋರಿಗಳ ಅಕ್ಕಪಕ್ಕದಲ್ಲಿಯೇ ಊಟದ ಮೇಜುಗಳನ್ನು ಇರಿಸಲಾಗಿದೆ. ಹಸಿರು ಬಣ್ಣದ ಗೋರಿಗಳು ಹೋಟೆಲಿನ ಎಲ್ಲಾ ಕೋಣೆಗಳಲ್ಲಿದ್ದು ಇದರ ಮೇಲೆ ಕಾಲಿಡದೇ ನಡೆದಾಡಲು ಸಾಮಾನ್ಯರಿಗೆ ಕಷ್ಟವಾಗುತ್ತದೆ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Pic Courtesy

ಭಾರತದ ನ್ಯೂ ಲಕ್ಕಿ ರೆಸ್ಟೋರೆಂಟ್

ಭಾರತದ ನ್ಯೂ ಲಕ್ಕಿ ರೆಸ್ಟೋರೆಂಟ್

ಆದರೆ ಇಲ್ಲಿನ ಕೆಲಸಗಾರದು ಮಾತ್ರ ವರ್ಷಗಳಿಂದ ನಡೆದೂ ನಡೆದೂ ಗೋರಿಗಳ ಮೇಲೆ ಕಾಲಿಡದೇ ಲೀಲಾಜಾಲವಾಗಿ ದಾಟಿಬಿಡುತ್ತಾರೆ. ಊಟ ಮಾಡುತ್ತಿರುವಾಗ ಭೂತ ಎದ್ದು ಬಂದರೆ? ಎಂಬ ಭಯ ಹೆಚ್ಚಿನವರನ್ನು ಕಾಡುತ್ತದೆ. ಆದರೆ ಇದುವರೆಗೆ ಯಾವುದೇ ಭೂತದ ಕಾಟ ಗಿರಾಕಿಗಳನ್ನು ಪೀಡಿಸಿದ ವರದಿಯಿಲ್ಲ.

ಪ್ರೇಗ್ ದೇಶದ ಪುರಾತನ ಸ್ಮಶಾನ

ಪ್ರೇಗ್ ದೇಶದ ಪುರಾತನ ಸ್ಮಶಾನ

ಪ್ರೇಗ್ ದೇಶದಲ್ಲಿರುವ ಪುರಾತನ ಸ್ಮಶಾನ ಕನಿಷ್ಟ ಸಾವಿರ ವರ್ಷಗಳಷ್ಟು ಪುರಾತನವಾಗಿದೆ. ಹದಿನಾಲ್ಕನೆಯ ಶತಮಾನದಿಂದ ಸತತವಾಗಿ ಅಂತ್ಯಸಂಸ್ಕಾರ ನಡೆಸುತ್ತಾ ಬಂದಿರುವುದರಿಂದ, ಅದೂ ಅಲ್ಲದೇ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಒಂದ ಮೇಲೊಂದು ಪೇರಿಸುತ್ತಾ ಸಾಗಿ ಇನ್ನೊಂದೂ ಅಂತ್ಯಸಂಸ್ಕಾರ ಸಾಧ್ಯವಿಲ್ಲವೆನ್ನುವಷ್ಟು ಮಟ್ಟಿಗೆ ತುಂಬಿಸಿ ಈಗ ಹಾಗೇ ಬಿಡಲಾಗಿದೆ. ಇದರಲ್ಲಿ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಸಮಾಧಿಗಳಿವೆ! ಈ ತರಹ ಇಕ್ಕಟ್ಟಾಗಿದ್ದಾಗ ಆತ್ಮಗಳು ಶಾಂತಿಯಿಂದಿರುತ್ತವೆಯೇ? ಈ ಕಲ್ಪನೆ ಅಲ್ಲಿ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಎದೆ ಝಲ್ಲೆನಿಸುತ್ತದೆ.

Pic Courtesy

English summary

Creepiest Burial Grounds In The World

Who said burial grounds are safe to enter? Those were the days where it was safe to visit a cemetery and talk to the dead. Today, if you try doing this you will most probably end up being possessed. According to sources, in total there are more than 300 odd burial grounds in the world which are haunted and creepy.
X
Desktop Bottom Promotion