For Quick Alerts
ALLOW NOTIFICATIONS  
For Daily Alerts

ಹೂಸು ನಿಲ್ಲಿಸುವುದು ಹೇಗೆ?

By Hemanth P
|

ತುಂಬಾ ಜನರು ಇರುವಾಗ ನೀವು ಹೂಸು ಬಿಟ್ಟರೆ ನಿಮಗೆ ಆಗುವ ಮುಜುಗರ ಅಷ್ಟಿಷ್ಟಲ್ಲ. ಈ ಪರಿಸ್ಥಿತಿ ಯಾರಿಗೂ ಹಾಗೂ ಯಾವುದೇ ಸಂದರ್ಭದಲ್ಲಿ ಉಂಟಾಗಬಹುದು. ಅತೀ ಪ್ರಾಮುಖ್ಯವಾದ ಕಚೇರಿಯ ಮೀಟಿಂಗ್ ಅಥವಾ ಗರ್ಲ್ ಫ್ರೆಂಡ್ ಜತೆಗೆ ಡೇಟಿಂಗ್ ನಲ್ಲಿ ಇರುವಾಗ ಆಗಬಹುದು. ಸಾರ್ವಜನಿಕ ಸ್ಥಳದಲ್ಲಿ ಹೂಸು ಬಿಡುವುದು ತುಂಬಾ ಮುಜುಗರವನ್ನುಂಟು ಮಾಡುತ್ತದೆ. ಜನರ ಮುಖ ಸಣ್ಣದಾದಾಗ ಮತ್ತು ನೀವು ಹೂಸು ಬಿಟ್ಟ ವಾಸನೆಯಿಂದ ತಿಳಿಯಾಗಲು ಹೊಸ ಗಾಳಿ ಬಯಸಿದಾಗ ತುಂಬಾ ಕೆಟ್ಟ ಭಾವನೆಯಾಗುತ್ತದೆ.

ಸರಿಯಾಗಿ ಅಜೀರ್ಣವಾಗದ ಆಹಾರ, ಅನಾರೋಗ್ಯಕರವಾಗಿ ತಿನ್ನುವುದು ಮತ್ತು ಸರಿಯಾದ ಸಮಯದಲ್ಲಿ ತಿನ್ನದೇ ಇರುವುದು ಹೂಸಿಗೆ ಪ್ರಮುಖ ಕಾರಣವಾಗಬಹುದು. ಹೂಸು ಬಿಡುವುದು ತುಂಬಾ ಕೆಟ್ಟದಾದರೂ ಇದನ್ನು ಉದ್ದೇಶಪೂರ್ವಕವಾಗಿ ಯಾರೂ ಮಾಡುವುದಿಲ್ಲ. ಇದು ನೈಸರ್ಗಿಕ ಪ್ರಕ್ರಿಯೆಯಾಗಿರುವ ಕಾರಣ ಇದನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಸಾಧ್ಯವಾದಷ್ಟು ಮಟ್ಟಿಗೆ ಹೂಸನ್ನು ನಿಯಂತ್ರಿಸಲು ಹಲವಾರು ವಿಧಾನಗಳಿವೆ. ಅದರಲ್ಲಿ ಕೆಲವೊಂದನ್ನು ಇಲ್ಲಿ ಪಟ್ಟಿಮಾಡಲಾಗಿದೆ.

How to stop farting?

1. ಸಕ್ಕರೆಯುಕ್ತ ಆಹಾರಗಳು
ಕೆಲವೊಂದು ಅನಿರೀಕ್ಷಿತ ಸಂದರ್ಭಗಳಲ್ಲಿ ಹೊರಬರುವಂತಹ ಹೂಸಿಗೆ ಸಕ್ಕರೆಯುಕ್ತ ಆಹಾರಗಳು ಕಾರಣವಾಗುತ್ತದೆ. ಜೋರಾಗಿ ಹೂಸು ಬಿಡುವುದನ್ನು ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ನಿಯಂತ್ರಿಸಲು ಸಕ್ಕರೆ ಕಡಿಮೆ ತಿನ್ನಿ. ಸಕ್ಕತೆಯನ್ನು ಬ್ಯಾಕ್ಟೀರಿಯಾ ಸುಲಭವಾಗಿ ವಿಭಜಿಸುತ್ತದೆ ಮತ್ತು ಅದರಿಂದ ಕೆಟ್ಟ ವಾಸನೆಯ ಅನಿಲ ಬಿಡುಗಡೆಯಾಗುತ್ತದೆ. ಸಕ್ಕರೆಯುಳ್ಳ ಆಹಾರವನ್ನು ಕಡಿಮೆ ಮಾಡುವುದು ಹೂಸು ತಡೆಯಲು ಒಳ್ಳೆಯ ವಿಧಾನ. ಸಕ್ಕರೆ ಹೆಚ್ಚಿನ ಆಹಾರಗಳಲ್ಲಿ ಇರುತ್ತದೆ ಮತ್ತು ಯಾವುದನ್ನು ತಿನ್ನಬೇಕು ಎನ್ನುವ ಬಗ್ಗೆ ಎಚ್ಚರ ವಹಿಸಿ. ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೊದಲು ಸಕ್ಕರೆ ಸೇವನೆ ಮಾಡಬೇಡಿ.

2. ಕಾರ್ಬ್ರೋಹೈಡ್ರೆಟ್ಸ್
ಕಾರ್ಬ್ರೋಹೈಡ್ರೆಟ್ಸ್ ನ್ನು ಬ್ಯಾಕ್ಟೀರಿಯಾ ಜೀರ್ಣಿಸಿಕೊಂಡಾಗ ಕಾರ್ಬನ್ ಡೈಯಾಕ್ಸೈಡ್ ಬಿಡುಗಡೆಯಾಗುತ್ತದೆ. ಇದು ತುಂಬಾ ಕೆಟ್ಟ ವಾಸನೆಯ ಅನಿಲ ಮತ್ತು ಹೊರಗೆ ಬರುವಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು. ಇದನ್ನು ತಪ್ಪಿಸಲು ನೀವು ಕಾರ್ಬ್ರೋಹೈಡ್ರೆಟ್ಸ್ ಗಳ ಸೇವನೆ ಕಡಿಮೆ ಮಾಡಿ. ಕೆಟ್ಟ ಹೂಸಿಗೆ ಕಾರಣವಾಗುವ ಮುಖ್ಯ ಕಾರ್ಬ್ರೋಹೈಡ್ರೆಟ್ಸ್ ಎಂದರೆ ಅದು ಸೋಡಾ. ಸೋಡಾ ಮತ್ತು ಕಾರ್ಬ್ರೋಹೈಡ್ರೆಟ್ಸ್ ಇರುವ ಪಾನೀಯಗಳನ್ನು ಕಡೆಗಣಿಸಿ.

3. ಪಿಷ್ಟ
ಪಿಷ್ಟ ತುಂಬಿರುವ ಆಹಾರಗಳಾದ ಬಟಾಟೆ, ಧಾನ್ಯಗಳು ಮತ್ತಿತ್ತರ ಆಹಾರಗಳು ಉತ್ತಮ ಮಟ್ಟದ ಗ್ಯಾಸ್ ನ್ನು ಉಂಟು ಮಾಡಿ ಹಲವಾರು ಸಲ ಹೂಸು ಬಿಡಬೇಕಾಗಿ ಬರಬೇಕಾಗುತ್ತದೆ. ಯಾವುದೇ ಸಮಾರಂಭದಲ್ಲಿ ಭಾಗವಹಿಸುವ ಮೊದಲು ಇಂತಹ ಆಹಾರಗಳನ್ನು ತಿನ್ನುವುದನ್ನು ಕಡೆಗಣಿಸಿದರೆ ಸಾರ್ವಜನಿಕವಾಗಿ ಹೂಸು ಹೋಗಿ ನಿಮಗೆ ಮುಜುಗರವಾಗುವುದು ತಪ್ಪುತ್ತದೆ. ಅನ್ನವು ನಿಮ್ಮ ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ ಉತ್ಪತ್ತಿ ಮಾಡುವಂತಹ ಗುಣ ಹೊಂದಿದೆ. ನಿಮಗೆ ಗ್ಯಾಸ್ ಸಮಸ್ಯೆಯಿದ್ದರೆ ಆಗ ಅನ್ನ ತಿನ್ನಬೇಡಿ.

4. ಧೂಮಪಾನ

ಹೂಸಿಗೆ ಪ್ರಮುಖ ಕಾರಣವಾಗಿರುವ ಕಾರಣವೆಂದರೆ ಧೂಮಪಾನ. ಹೂಸಿನ ಸಮಸ್ಯೆಯನ್ನು ಹೊರತುಪಡಿಸಿ ಧೂಮಪಾನದಿಂದ ಆರೋಗ್ಯಕ್ಕೆ ಹಲವಾರು ರೀತಿಯ ಕೆಟ್ಟ ಪರಿಣಾಮಗಳಿವೆ. ಧೂಮಪಾನ ಸಂಪೂರ್ಣವಾಗಿ ತ್ಯಜಿಸುವುದು ಒಂದು ಆರೋಗ್ಯಕರ ನಿರ್ಧಾರ. ಧೂಮಪಾನವು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಹೆಚ್ಚಿನ ಗ್ಯಾಸ್ ಉಂಟುಮಾಡಿ ಅದನ್ನು ಕೆಟ್ಟ ಹೂಸಾಗಿ ಪರಿವರ್ತಿಸಬಹುದು. ಇದರಿಂದ ಆದಷ್ಟು ಮಟ್ಟಿಗೆ ಧೂಮಪಾನ ಮಾಡುವುದನ್ನು ಕಡೆಗಣಿಸಿ.

5. ಹೊಟ್ಟೆ ಉಬ್ಬರ ತಡೆಯುವ ಔಷಧಿ

ಇಂದಿನ ದಿನಗಳಲ್ಲಿ ಹಲವಾರು ರೀತಿಯ ಸಿರಫ್, ಮಾತ್ರೆ ಮತ್ತು ಪೌಡರ್ ಗಳು ಲಭ್ಯವಿದೆ. ಇದು ಹೊಟ್ಟೆಯಲ್ಲಿ ಉಂಟುಮಾಡುವ ಎಲ್ಲಾ ರೀತಿಯ ಗ್ಯಾಸ್ ನ್ನು ತೆಗೆದುಹಾಕಿ ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತದೆ. ಈ ಔಷಧಿಗಳು ತುಂಬಾ ಪರಿಣಾಮಕಾರಿ ಮತ್ತು ನಿಮಗೆ ಗ್ಯಾಸ್ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆಯಿದ್ದರೆ ಇಂತಹ ಔಷಧಿಯನ್ನು ಜತೆಯಲ್ಲಿಟ್ಟುಕೊಳ್ಳಬೇಕು. ಕಾರ್ಬನ್ ಇರುವ ಕೆಲವೊಂದು ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದು ಹೂಸು ನಿಯಂತ್ರಿಸಲು ನೆರವಾಗುತ್ತದೆ. ಈ ಮೇಲಿನ ಯಾವುದಾದರೂ ವಿಧಾನ ಅಥವಾ ಎಲ್ಲಾ ವಿಧಾನಗಳನ್ನು ಬಳಸಿ ಸಾರ್ವಜನಿಕವಾಗಿ ಹೂಸು ಬಿಡುವುದನ್ನು ನಿಯಂತ್ರಿಸಿ. ಸಾರ್ವಜನಿಕವಾಗಿ ಹೂಸು ಬಿಡುವುದು ಅತೀ ಮುಜುಗರದ ವಿಷಯ.

Read more about: health ಆರೋಗ್ಯ
English summary

How to stop farting?

It is one embarrassing moment if you fart aloud at a place filled with many people. This is one situation that can happen to anybody and anywhere. This can happen in a important business meeting as well as a romantic date.
X
Desktop Bottom Promotion