Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಂಡಸರನ್ನು ಅಳುವಂತೆ ಮಾಡಲು ಕೆಲವೊಂದು ತಮಾಷೆಯ ದಾರಿಗಳು!
ನೀವು ಯಾವಾಗಲಾದರು ಗಂಡಸೊಬ್ಬ ಅತ್ತದ್ದನ್ನು ನೋಡಿದ್ದೀರಾ? ಅಥವಾ ನೀವು ಎಂದಾದರು ಗಂಡಸೊಬ್ಬನನ್ನು ಅಳುವಂತೆ ಮಾಡಿದ್ದೀರಾ? ಗಂಡಸೊಬ್ಬ ಅಳುತ್ತಿರುವುದನ್ನು ನೋಡುವುದು ತುಂಬಾ ಅಪರೂಪ ಮತ್ತು ಆತನ ಕಣ್ಣಲ್ಲಿ ನೀರು ಬರಬೇಕು ಎಂದಾದಲ್ಲಿ ಅದಕ್ಕೆ ತನ್ನದೇ ಆದ ಕಾರಣಗಳು ಇರಬೇಕು. ಆದರೆ ಒಬ್ಬ ಹೆಂಗಸು ತಾನು ಇಚ್ಛಿಸಿದಲ್ಲಿ ಗಂಡಸಿನ ಕಣ್ಣಲ್ಲಿ ನೀರು ತರಿಸಬಲ್ಲಳು. ಹಲವಾರು ಸಂಬಂಧಗಳಲ್ಲಿ ಗಂಡಸು ಹೆಂಗಸಿನ ಕಣ್ಣಲ್ಲಿ ನೀರು ತರಿಸುತ್ತಾನೆ.
ಆದರೆ ಈ ಕತೆಯಲ್ಲಿ ಒಂದು ತಿರುವನ್ನು ನಾವು ನೋಡಬೇಕು ಎಂದಾದಲ್ಲಿ ಹೆಣ್ಣು ಗಂಡಸನ್ನು ಅಳಿಸಬೇಕು!. ಒಂದು ಹೆಣ್ಣು ಮತ್ತು ಗಂಡು ಇಬ್ಬರೂ ಒಂದು ಸಂಬಂಧದಲ್ಲಿ ಇದ್ದಾರೆ ಎಂದರೆ, ಗಂಡಸನ್ನು ಅಳುವಂತೆ ಮಾಡುವುದು ಸುಲಭ. ಆದರೆ ಇಲ್ಲಿ ನನ್ನ ಆಲೋಚನೆಯೇ ಬೇರೆಯಾಗಿದೆ. ಅವರು ಒಂದು ಸಂಬಂಧದಲ್ಲಿ ಇಲ್ಲದಿದ್ದಲ್ಲಿ ಮತ್ತು ಸ್ನೇಹಿತರಾಗಿದ್ದಲ್ಲಿ, ಹಳೆಯ ಸ್ನೇಹಿತರಾಗಿದ್ದಲ್ಲಿ, ಎಕ್ಸ್-ಲವರ್, ರೂಮ್ ಮೇಟ್ ಅಥವಾ ಜೊತೆಯಾಗಿದ್ದವರು ಯಾರೇ ಆಗಿರಲಿ. ದೈಹಿಕ ಹಿಂಸೆಯೇ ಬೇಡ, ಇದು ಸಾಧ್ಯವೇ? ಎಂಬ ಪ್ರಶ್ನೆಗೆ ನಮ್ಮ ಉತ್ತರ ಇದು ಸಾಧ್ಯ!. ಆತನನ್ನು ಅಳುವಂತೆ ಮಾಡಬೇಕು ಎಂದರೆ ಇಷ್ಟೇ ನಿಮ್ಮ ಕಾಲನ್ನು ಮೇಲಕ್ಕೆತ್ತಿ, ಆತನ ಮರ್ಮಾಂಗಕ್ಕೆ ಒದೆಯಿರಿ.
ಗಂಡಸರನ್ನು ಅಳುವಂತೆ ಮಾಡಬೇಕು ಎನ್ನುವ ಹೆಂಗಸರಿಗೆ ನಾವು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಒಂದು ವೇಳೆ ನೀವು ಹೆಂಗಸಿಗೆ ನೋವುಂಟು ಮಾಡಿರುವ ಗಂಡಾಗಿದ್ದಲ್ಲಿ ಖಂಡಿತವಾಗಿ ನೀವು ಈ ಅಳಲೇಬೇಕು ಬಿಡಿ! ಗಂಡಸರನ್ನು ಅಳುವಂತೆ ಮಾಡಲು ಇಲ್ಲಿ ಕೆಲವೊಂದು ತಮಾಷೆಯ ಸಂಗತಿಗಳು ಇವೆ ಓದಿಕೊಳ್ಳಿ, ಪ್ರಯತ್ನಿಸಿ ನೋಡಿ ಆತ ನಿಮ್ಮ ಮುಂದೆ ಅಲ್ಲದಿದ್ದರು ಪಕ್ಕದಲ್ಲಿಯಾದರು ಗೊಳೋ ಎಂದು ಅಳುತ್ತಾನೆ.

ಸೆಕ್ಸ್‌ಗೆ ನೋ ಎನ್ನಿ!
ನೀವಿಬ್ಬರೂ ಒಂದು ಸಂಬಂಧದಲ್ಲಿದ್ದರೆ ನಿಮಗೆ ಗೊತ್ತೇ ಇರುತ್ತದೆ. ಲೈಂಗಿಕ ಹಂಬಲಗಳನ್ನು ಗಂಡಸು ಹತೋಟಿಯಲ್ಲಿಡಲು ಅಸಾಧ್ಯವೆಂದು!. ಅವನು ನಿಮ್ಮ ಬಳಿ ತನ್ನ ಆಸೆಯನ್ನು ವ್ಯಕ್ತಪಡಿಸುವಾಗ, ತನ್ನದೇ ಆದ ಕಲ್ಪನೆ ಮತ್ತು ಕನಸಿನೊಂದಿಗೆ ನಿಮ್ಮ ಮುಂದೆ ಬಂದಿರುತ್ತಾನೆ. ಆಗ ಅವನ ಕೋರಿಕೆಯನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿ ಸಾಕು, ಗಂಡಸಿನ ಮನಸ್ಸು ವಿಲ ವಿಲ ಎಂದು ಹೊಡೆದುಕೊಳ್ಳುತ್ತದೆ. ಅವನು ಆ ಸಂಕಟವನ್ನು ತಡೆದುಕೊಳ್ಳಲು ಆಗುವುದಿಲ್ಲ, ಆಗ ಮತ್ತೇನು ತಾನೇ ಮಾಡುತ್ತಾನೆ, ಅಳುತ್ತಾನೆ.

ಅವನಲ್ಲಿ ಅಸೂಯೆಯನ್ನು ತರಲು ಫ್ಲರ್ಟ್ ಮಾಡಿ
ಆತನ ಕಣ್ಣಲ್ಲಿ ನೀರನ್ನು ತರುವ ಬಯಕೆ ನಿಮಗಿದೆಯೇ, ಆಗಾದರೆ ಅವನ ಭಾವನೆಗಳ ಜೊತೆಗೆ ಆಟವಾಡಿ! ಬಹುಶಃ ಒಬ್ಬ ಗಂಡಸಿನ ಜೊತೆಗೆ ನಡೆದುಕೊಳ್ಳಬಹುದಾದ ಅತಿ ಕೆಟ್ಟ ಮತ್ತು ಕಠೋರ ಮಾರ್ಗ ಇದು. ಆದರೆ ನಿಸ್ಸಂಶಯವಾಗಿ ಇದರಿಂದ ನೀವು ಕೋರಿದ ಫಲಿತಾಂಶ ಬರುತ್ತದೆ. ಆತನ ಆಪ್ತ ಮಿತ್ರನೊಂದಿಗೆ ಅಥವಾ ನಿಮ್ಮ ಎಕ್ಸ್ ಲವರ್ ಜೊತೆಗೆ ಫ್ಲರ್ಟ್ ಮಾಡಿ ಸಾಕು, ಅವನ ಕಣ್ಣಲ್ಲಿಯೂ ನೀರು ಬಂದೇ ಬರುತ್ತದೆ.

ಆತನು ಹಾಸಿಗೆಯಲ್ಲಿ ಅಷ್ಟೇನು ಉತ್ತಮವಲ್ಲ ಎಂದು ಹೇಳಿ
ಇದಂತು ನಿಜಕ್ಕೂ ತಮಾಷೆಯ ಮಾರ್ಗವೇ ಸರಿ, ಯಾವುದೇ ಗಂಡಸು ತನ್ನ ಗಂಡಸುತನದ ಮೇಲೆ ಒಂದು ಬಗೆಯ ಅಹಂ ಹೊಂದಿರುತ್ತಾನೆ. ಆದರೆ ಅವನು ಹಾಸಿಗೆಯಲ್ಲಿ ಅಷ್ಟೇನು ಉತ್ತಮವಲ್ಲ ಎಂದು ಹೇಳಿ ಸಾಕು. ಆತ ಅಳಲು ಶುರು ಮಾಡಿಬಿಡುತ್ತಾನೆ. ಇದು ಅವನ ಅಹಂಗೆ ಕೊಡಲಿ ಪೆಟ್ಟು ನೀಡುತ್ತದೆ. ಒಂದು ವೇಳೆ ನಿಮ್ಮ ಸಂಗಾತಿ ಧನಾತ್ಮಕ ಆಲೋಚನೆಯುಳ್ಳ ವ್ಯಕ್ತಿಯಾಗಿದ್ದಲ್ಲಿ, ಖಂಡಿತ ಆತ ತನ್ನಲ್ಲಿ ಬದಲಾವಣೆಗಳನ್ನು ತಂದುಕೊಳ್ಳುತ್ತಾನೆ.

ಅವನಿಗೆ ಇಷ್ಟವಾದದ್ದನ್ನು ಬಚ್ಚಿಡಿ ಅಥವಾ ಇತರರಿಗೆ ಕೊಟ್ಟು ಬಿಡಿ
ಇದು ಸಹ ತಮಾಷೆಯಾದ ವಿಧಾನವೇ. ಆತ ತುಂಬಾ ಇಷ್ಟಪಡುವುದನ್ನು ಬಚ್ಚಿಡಿ ಅಥವಾ ಉದ್ದೇಶ ರಹಿತವಾಗಿ ಯಾರಿಗಾದರು ಕೊಟ್ಟು ಬಿಡಿ. ಗಂಡಸರು ತಮ್ಮ ಪ್ರಿಯವಾದ ವಸ್ತುವನ್ನು ಕಳೆದುಕೊಂಡರೆ ತುಂಬಾ ವ್ಯಥೆಪಡುತ್ತಾರೆ. ಹೀಗೆ ಮಾಡಿ ನಿಮ್ಮ ಸೇಡನ್ನು ಆತನ ಮೇಲೆ ತೀರಿಸಿಕೊಳ್ಳಬಹುದು. ಹುಡುಕಿ ಆತನ ಪಂಚ ಪ್ರಾಣ ಯಾವುದರಲ್ಲಿದೆ ಎಂದು!

ಆತನ ಗಾತ್ರದ ಬಗ್ಗೆ ಮಾತನಾಡಿ
ಆತನ ಗಾತ್ರದ ಬಗ್ಗೆ ನಿಮಗೆ ತೃಪ್ತಿಯಿಲ್ಲ ಎಂದು ಆತನಲ್ಲಿ ಒಮ್ಮೆ ಹೇಳಿ ಸಾಕು, ಆತನ ಕಣ್ಣಿನಲ್ಲಿ ಹನಿಗೂಡುವುದನ್ನು ನೀವೇ ನೋಡುವಿರಿ. ಗಂಡಸರು ತಮ್ಮ ಗಾತ್ರದ ಪ್ರಶ್ನೆ ಬಂದಾಗ ಕುಗ್ಗಿ ಹೋಗುತ್ತಾರೆ ಎಂದು ತಿಳಿದುಕೊಳ್ಳಿ.

ಹಿಂದೆ ನಡೆದ ದುಃಖಕರವಾದ ಘಟನೆಯನ್ನು ನೆನಪಿಸಿ
ಆತನಲ್ಲಿರುವ ಅಳು ಮುಂಜಿಯನ್ನು ನೀವು ನೋಡಬೇಕೆ, ಹಾಗಾದರೆ ಹಿಂದೆ ನಡೆದ ಒಂದು ದುಃಖಕರವಾದ ಘಟನೆಯನ್ನು ಆತನಿಗೆ ನೆನಪಿಸಿ. ಇದರಿಂದ ಆತನ ದುಃಖದ ಕೋಡಿ ಉಕ್ಕಿ ಹರಿಯುವುದನ್ನು ನೀವು ಕಾಣಬಹುದು.

ಆತನನ್ನು ಉಪವಾಸ ಕೆಡವಿ
ಇದಕ್ಕಿಂತ ಸರಳವಾದ ಮಾರ್ಗ ಮತ್ತೊಂದಿಲ್ಲ. ಗಂಡಸರಲ್ಲಿ ಬಹುತೇಕ ಮಂದಿ ಬಕಾಸುರ ಮತ್ತು ಭೀಮನ ಸಹಪಾಠಿಗಳೇ, ಇದ್ದಕ್ಕಿದ್ದಂತೆ ಆತನನ್ನು ಅಳುವಂತೆ ಮಾಡಬೇಕೆ. ಉಪವಾಸ ಕೆಡವಿ, ಸಾಕು. ನಿಮ್ಮ ಸಂಗಾತಿ ಅಳಲು ಶುರು ಮಾಡಿ ಬಿಡುತ್ತಾನೆ. ಸಮಯ ನೋಡಿಕೊಳ್ಳಿ, ಆತನಿಗೆ ಬದಲಿ ತಿನ್ನಲು ಏನು ದೊರೆಯಬಾರದು. ಆಗ ನೋಡಿ, ಕಣ್ಣೀರ ಧಾರೆ ಇದೇಕೆ? ಇದೇಕೆ? ಎಂದು ಬರುತ್ತದೆ.

ರಿಮೋಟ್ ಮುಚ್ಚಿಡಿ.
ಆತನ ನೆಚ್ಚಿನ ಕ್ರಿಕೆಟ್ ಮತ್ತು ಫುಟ್‍ಬಾಲ್ ಬರುವ ಸಮಯದಲ್ಲಿ ಆತನಿಗೆ ತಿಳಿಯದಂತೆ ರಿಮೋಟನ್ನು ಮುಚ್ಚಿಡಿ. ಇದಿಲ್ಲದೆ ಆತ ಬದುಕುವುದಿಲ್ಲ.ಆಗ ಆತ ಏನು ಮಾಡುತ್ತಾನೆ ಎಂದು ನಿಮಗೆ ತಿಳಿದಿರುತ್ತದೆ. ರಿಮೋಟ್ ಮುಚ್ಚಿಡಲು ಸಾಧ್ಯವಿಲ್ಲದಿದ್ದರೆ, ಅದರ ಬ್ಯಾಟರಿ ತೆಗೆಯಿರಿ ಅಥವಾ ಹಾಳಾದ ಹಳೆಯ ಬ್ಯಾಟರಿ ಹಾಕಿ ರಿಮೋಟ್ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸದಂತೆ ಮಾಡಿ. ಇಷ್ಟು ಸಾಕು ಆತನು ಅಳಲು.

ಶಾಪಿಂಗ್‍ಗೆ ಕರೆದೊಯ್ಯಿ
ಯಾವ ಗಂಡಸು ಸಹ ಶಾಪಿಂಗ್ ಮಾಡುವುದನ್ನು ಇಷ್ಟಪಡುವುದಿಲ್ಲ. ಆತನ ಕಣ್ಣಿನಲ್ಲಿ ನೀರು ತರಿಸಬೇಕು ಎಂದರೆ ಮೊದಲು ಆತನನ್ನು ಶಾಪಿಂಗ್ ಕರೆದೊಯ್ಯಿ. ಕನಿಷ್ಟ ಪಕ್ಷ ಅರ್ಧ ದಿನದ ಮಟ್ಟಿಗಾದರು ಶಾಪಿಂಗ್ ಮಾಡಿ, ಸಾಕು ಆತನು ನಿಮ್ಮ ಮುಂದೆ ಅಳಲು ಶುರು ಮಾಡಿಬಿಡುತ್ತಾನೆ.

ಮಕ್ಕಳನ್ನು ನೋಡಿಕೊಳ್ಳಲು ಬಿಡಿ
ಗಂಡಸಿಗೆ ಮಕ್ಕಳೆಂದರೆ ಇಷ್ಟವಿರಬಹುದು. ಆದರೆ ಮಕ್ಕಳನ್ನೆ ನೋಡಿಕೊಂಡು ಇರುವ ಕೆಲಸ ಸುತರಾಂ ಇಷ್ಟವಿರುವುದಿಲ್ಲ. ಅದು ತನ್ನ ಮಕ್ಕಳಾಗಿರಲಿ ಅಥವಾ ಇತರರ ಮಕ್ಕಳಾಗಿರಲಿ. ಒಮ್ಮೆ ಮಕ್ಕಳನ್ನು ಅವರ ಕೈಗೆ ಕೊಟ್ಟು, ಕೆಲ ಗಂಟೆಗಳ ಕಾಲ ಹೊರಗೆ ಹೋಗಿ ಬಿಡಿ. ಸಾಕು ಆತನ ಕಣ್ಣಿನಲ್ಲಿ ನೀರು ಬಂದುಬಿಡುತ್ತದೆ.



Click it and Unblock the Notifications


