Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಜವಾದ ಗಂಡಸಿನ 8 ಅತ್ಯುತ್ತಮ ಗುಣಗಳು
ನೀವು ಒಳ್ಳೆಯ ಕಟ್ಟು ಮಸ್ತಾದ ದೇಹ ಮತ್ತು ಸುಂದರವಾಗಿ ಕಾಣುವಂತಹ ನಿಲುವನ್ನು ಹೊಂದಿರುವ ವ್ಯಕ್ತಿಯನ್ನು ನಿಜವಾದ ಗಂಡಸು ಎಂದು ಕರೆಯುತ್ತೀರಾ!!. ಖಂಡಿತ ಇಲ್ಲ. ಒಬ್ಬ ನಿಜವಾದ ಗಂಡಸು ತನ್ನ ಜೀವನದುದ್ದಕ್ಕು ಕೆಲವೊಂದು ನಿರ್ದಿಷ್ಟ ಗುಣಗಳನ್ನು ತೋರ್ಪಡಿಸುವ ಮೂಲಕ ತನ್ನ ನೈಜ ವ್ಯಕ್ತಿತ್ವವನ್ನು ಸಾಭೀತು ಮಾಡುತ್ತಾನೆ.
ಆತ ಕೇವಲ ಬಾಹ್ಯವಾಗಿ ಮಾತ್ರವಲ್ಲದೆ, ಆಂತರಿಕವಾಗಿ ಸಹ ತನ್ನತನವನ್ನು ತೋರುತ್ತಿರುತ್ತಾನೆ. ಹಾಗಾದರೆ ನಿಜವಾದ ಗಂಡಸು ಯಾರು? ಈ ಕೆಳಗೆ ನೀಡಿರುವ ಗುಣಗಳಿಂದ ತಾಳೆ ಮಾಡಿ ನೋಡಿ.
ಗಂಡಸರು ಮಾಡುವ 10 ಅಸಮಾಧಾನಕರ ಕಾರ್ಯಗಳು!

ಯಾವಾಗಲು ಸದೃಢತೆಯನ್ನು ಕಾಪಾಡಿಕೊಂಡಿರುತ್ತಾನೆ:
ನಿಜವಾದ ಗಂಡಸು ಪರಿಸ್ಥಿತಿಯು ತನಗೆ ವಿರುದ್ಧವಾಗಿ ಸಾಗಿದಾಗ ಅದರ ಕುರಿತಾಗಿ ಚಿಂತೆ ಮಾಡಲು ಹೋಗುವುದಿಲ್ಲ. ಅದರ ಸುಳಿವು ಸಹ ಆತನ ಮುಖದಲ್ಲಿ ಕಾಣುವುದಿಲ್ಲ. ಆತ ಎಂದಿಗು ಕೆಟ್ಟ ಪರಿಸ್ಥಿತಿಯ ಸಂದರ್ಭದಲ್ಲಿ ಕಣ್ಣಿನಲ್ಲಿ ನೀರು ಹಾಕಿಕೊಳ್ಳುವುದಿಲ್ಲ.
ಬದಲಿಗೆ ಅಂತಹ ಪರಿಸ್ಥಿತಿಗಳ ವಿರುದ್ಧವಾಗಿ ಹೋರಾಡುತ್ತ ಅವುಗಳಿಂದಲೆ ಆತ ತುಂಬಾ ವಿಚಾರಗಳನ್ನು ಕಲಿಯುತ್ತಾನೆ. ಆತ ಎಂದಿಗು ಪರಿಸ್ಥಿತಿಗಳ ಕುರಿತಾಗಿ ದೂರುವುದಿಲ್ಲ. ಬದಲಿಗೆ ಅವುಗಳನ್ನು ಆತನೆ ಸರಿಪಡಿಸಲು ಪ್ರಯತ್ನಿಸುತ್ತಾನೆ. ಒಂದು ಸಾಮಾನ್ಯವಾದ ಕೆಮ್ಮಿಗೆ ಆತನೆಂದಿಗು ವೈಧ್ಯರ ಬಳಿಗೆ ಓಡುವುದಿಲ್ಲ. ಆತ ತಾನಾಡುವ ಮಾತುಗಳ ಕುರಿತಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾನೆ. ಆತ ಯಾವ ರೀತಿ ತಯಾರಾಗಿರುತ್ತಾನೆಯೆಂದರೆ ಇಡೀ ಜಗತ್ತನ್ನೆ ಆಳಲು ಸಿದ್ಧನಾಗಿರುವ ರೀತಿಯಲ್ಲಿ ಕಾಣುತ್ತಿರುತ್ತಾನೆ.
ಬೆಂಗಳೂರಿನ ರಸ್ತೆ ಬದಿಯ ಫುಡ್‌ನ ವೈಶಿಷ್ಟ್ಯ ಗೊತ್ತಿದೆಯೇ?
ಆತ ಗಮನಿಸುವುದು:
ಒಬ್ಬ ನಿಜವಾದ ಗಂಡಸು ಉಪಯುಕ್ತ ಮತ್ತು ಅನುಪಯುಕ್ತವಾದ ವಿಚಾರಗಳ ನಡುವಿನ ವ್ಯತ್ಯಾಸವನ್ನು ಮನಗಂಡಿರುತ್ತಾನೆ. ಲಾಭವಿರದ ಮತ್ತು ಕೆಲಸಕ್ಕೆ ಬಾರದ ಕ್ರಿಯೆಗಳಲ್ಲಿ ಆತನೆಂದಿಗು ತನ್ನನ್ನು ತಾನು ತೊಡಗಿಸಿಕೊಳ್ಳುವುದಿಲ್ಲ. ಇನ್ನೂ ಆತನ ಹವ್ಯಾಸಗಳ ವಿಚಾರಕ್ಕೆ ಬರುವುದಾದರೆ, ಆತ ಹವ್ಯಾಸಗಳ ಗಣಿಯೇ ಆಗಿರುತ್ತಾನೆ.
ಈ ಹವ್ಯಾಸಗಳು ಆತನಿಗೆ ತನ್ನ ಗುರಿಯನ್ನು ತಲುಪಲು ಸಹಾಯ ಮಾಡುವುದರ ಜೊತೆಗೆ, ಮನಸ್ಸಿನ ಸ್ಥಿರತೆಯನ್ನು ಸಹ ಕಾಪಾಡಿಕೊಳ್ಳಲು ನೆರವಾಗುತ್ತವೆ. ಆತನು ಎಂದಿಗು ತನ್ನ ಗಮನವನ್ನು ಅಧಿಕಾರ, ಕುಟುಂಬ ಮತ್ತು ಹಣಕಾಸು ವಿಚಾರಗಳ ಮೇಲೆ ಕೇಂದ್ರೀಕರಿಸಿರುತ್ತಾನೆ. ಆದರೆ ಎಂದಿಗು ಆತ ತನ್ನ ಗಮನವನ್ನು ಲೈಂಗಿಕ ವಿಚಾರದ ಮೇಲೆ ಕೇಂದ್ರೀಕರಿಸಿರುವುದಿಲ್ಲ.
ಆತನಿಗೆ ಕುಟುಂಬದ ಪ್ರಾಮುಖ್ಯತೆಯ ಪರಿಚಯವಿರುತ್ತದೆ:
ಒಬ್ಬ ನಿಜವಾದ ಗಂಡಸಿಗೆ ಕುಟುಂಬದ ಕಡೆಗೆ ಒಲವು ಅಧಿಕವಾಗಿರುತ್ತದೆ. ಆತ ಎಂದಿಗು ತನ್ನ ಕುಟುಂಬದ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತ್ತಾನೆ. ಆತ ತನ್ನ ಕುಟುಂಬವನ್ನು ಸದೃಢಗೊಳಿಸುವುದರ ಜೊತೆಗೆ, ತನ್ನ ಪೂರ್ವಿಕರ ಸಂಪ್ರದಾಯ ಮತ್ತು ಜವಾಬ್ದಾರಿಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಹೋಗುತ್ತಿರುತ್ತಾನೆ. ಆತ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ, ಮತ್ತು ಅದೇ ಸಮಯಕ್ಕೆ ಅವರಲ್ಲಿ ಸಹ ಶಿಸ್ತನ್ನು ಅಪೇಕ್ಷಿಸುತ್ತಾನೆ. ಆತ ಸದಾ ಕಾರ್ಯೋನ್ಮುಖನಾಗಿರುತ್ತಾನೆ. ಅದು ಮನೆಯ ಕೆಲಸವಾಗಲಿ ಅಥವಾ ಇನ್ಯಾವುದೇ ಸಂಸ್ಥೆಯ ಕೆಲಸವಾಗಲಿ ಒಟ್ಟಿನಲ್ಲಿ ಆತ ಸದಾ ಚಟುವಟಿಕೆಯಿಂದ ಇರುವ ಜೀವನವನ್ನು ನಡೆಸುತ್ತಿರುತ್ತಾನೆ.
ಆತ ಒಬ್ಬ ಆದರ್ಶ ಪುರುಷನಂತೆ ಶ್ರಮಿಸುತ್ತಿರುತ್ತಾನೆ:
ಒಬ್ಬ ನಿಜವಾದ ಗಂಡಸು ತನ್ನನ್ನು ತಾನು ಗೌರವಿಸಿಕೊಳ್ಳುವುದರ ಜೊತೆಗೆ ಇತರರನ್ನು ಸಹ ಗೌರವಿಸುತ್ತಾನೆ. ಆತ ತನ್ನ ಸುತ್ತಲೂ ಶಿಸ್ತು ಎನ್ನುವ ಗಡಿರೇಖೆಯನ್ನು ನಿರ್ಮಿಸಿಕೊಂಡಿರುತ್ತಾನೆ. ಆತ ತನ್ನ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಅತ್ಯುತ್ತಮ ಪ್ರತಿಫಲಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ಒಬ್ಬ ನಿಜವಾದ ಗಂಡಸು ಯಾವ ರೀತಿ ಇತರ ವ್ಯಕ್ತಿಗಳಲ್ಲಿ ಸ್ಫೂರ್ತಿ ತುಂಬುತ್ತಾನೆಯೆಂದರೆ, ಆತ ಯಾವಾಗಲು ಸವಾಲುಗಳನ್ನು ಸ್ವೀಕರಿಸುತ್ತಾನೆ ಮತ್ತು ಅವುಗಳನ್ನು ಯಾವುದೇ ರಾಜಿಗೆ ಒಳಗಾಗದೆ ಗೆಲ್ಲುವ ಮೂಲಕ ಇತರರಿಗೆ ಉತ್ತಮ ಸಂದೇಶವನ್ನು ರವಾನಿಸುತ್ತಾನೆ.
ಆತ ಎಂದಿಗು ಗಾಳಿ ಮಾತುಗಳನ್ನು ಆಡುವುದಿಲ್ಲ:
"ಮಾತೇ ಮಾಣಿಕ್ಯ" ಎಂಬ ನಾಣ್ಣುಡಿಯ ಅರ್ಥವನ್ನು ನಿಜವಾದ ಗಂಡಸು ಅರ್ಥ ಮಾಡಿಕೊಂಡಷ್ಟು ಇನ್ನಿತರರು ಅರ್ಥ ಮಾಡಿಕೊಂಡಿರುವುದಿಲ್ಲ. ಆತ ಎಂದಿಗು ತನಗೆ ತಿಳಿದಿರದ ವಿಷಯಗಳ ಕುರಿತಾಗಿ ಅಥವಾ ವ್ಯಕ್ತಿಗಳ ಕುರಿತಾಗಿ ಮಾತನಾಡಲು ಹೋಗುವುದಿಲ್ಲ. ಹೆಂಗಸರಂತೆ ಆತ ಸುಖಾ ಸುಮ್ಮನೆ ಇತರರ ಕುರಿತಾಗಿ ಮಾತನಾಡುವುದಿಲ್ಲ. ಆತ ಮಾತುಗಳು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಇರುತ್ತವೆ.
ಆತನ ಮಾತು ಪ್ರತಿಙ್ಞೆಯಂತೆ:
ನಿಜವಾದ ಗಂಡಸು ತಾನಾಡುವ ಮಾತುಗಳನ್ನು ಅಕ್ಷರಶಃ ನಡೆಸಿಕೊಡುತ್ತಾನೆ. ಆತ ಆಡಿದ ಮಾತನ್ನು ಎಂದಿಗು ಮುರಿಯುವುದಿಲ್ಲ. ತನ್ನ ಪ್ರಮಾಣಗಳನ್ನು ಆತ ಎಂದಿಗು ಸುಳ್ಳಾಗಿಸುವುದಿಲ್ಲ. ಆತ ಎಂದಿಗು ಸುಖಾ ಸುಮ್ಮನೆ ಆಶ್ವಾಸನೆಗಳನ್ನು ಕೊಡುವುದಿಲ್ಲ. "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು" ಎಂಬ ಗಾದೆ ಮಾತಿನಂತೆ ಆತ ತನ್ನ ಮಾತಿಗೆ ಬದ್ಧತೆಯನ್ನು ತೋರಿಸುತ್ತಾನೆ.
ಒಬ್ಬ ನಿಜವಾದ ಗಂಡಸು ತನ್ನ ಭವಿಷ್ಯವನ್ನು ತಾನೇ ನಿರ್ಮಿಸಿಕೊಳ್ಳುತ್ತಾನೆ:
ಒಬ್ಬ ನಿಜವಾದ ಗಂಡಸು ತನ್ನ ಭವಿಷ್ಯವನ್ನು ತಾನೇ ನಿರ್ಮಿಸಿಕೊಳ್ಳುತ್ತಾನೆ. ಆತ ಅದೃಷ್ಟ ಬಂದು ಬಾಗಿಲು ಬಡಿಯುವ ತನಕ ಕಾಯದೆ ತಾನೇ, ತನ್ನ ಅದೃಷ್ಟವನ್ನು ನಿರ್ಮಿಸಿಕೊಳ್ಳುವತ್ತ ಆಲೋಚಿಸುತ್ತಾನೆ. ಆತ ತನ್ನ ಕೆಲಸಗಳನ್ನು ಯೋಜಿಸಿಕೊಂಡು, ವಿಶ್ಲೇಷಣೆ ಮಾಡಿ, ಗುರಿಯತ್ತ ಮುನ್ನಡೆಯುತ್ತಾನೆ. ತನ್ನ ಅದೃಷ್ಟವನ್ನು ಪರೀಕ್ಷೆ ಮಾಡುವ ಧೈರ್ಯವನ್ನು ತೋರುವ ಈತನು ತನ್ನ ಯಶಸ್ಸನ್ನು ತಾನೇ ನಿರ್ಮಿಸಿಕೊಳ್ಳುತ್ತಾನೆ.
ಆತ ಹೆಂಗಸಿನಂತೆ ಕಾಣಿಸುವುದಿಲ್ಲ:
ಒಬ್ಬ ನಿಜವಾದ ಗಂಡಸು ಹೆಂಗಸಿನಂತೆ ಕಾಣಿಸಿಕೊಳ್ಳುವುದಿಲ್ಲ. ಅವರಂತೆ ಜಡೆಗಳು, ಅಲಂಕಾರಗಳನ್ನು ಈತ ಮಾಡುವುದಿಲ್ಲ. ಆತ ತಲೆಯನ್ನು ಮತ್ತು ಎದೆಯ ಭಾಗವನ್ನು ಎಂದಿಗು ಬೋಳಿಸಿಕೊಳ್ಳುವುದಿಲ್ಲ. ಏಕೆಂದರೆ ಅದು ಅವನಿಗೆ ಶೋಭಿಸುವುದಿಲ್ಲ ಮತ್ತು ಜನರು ಸಹ ಅದನ್ನು ಹೊಂದಿರುವವರನ್ನು ತಿರಸ್ಕರಿಸುವುದಿಲ್ಲ. ಆತ ತನ್ನ ಆರೋಗ್ಯದ ಕುರಿತಾಗಿ ಕಾಳಜಿ ವಹಿಸಲು ಒಬ್ಬ ಹೆಂಗಸನ್ನು ಅಪೇಕ್ಷಿಸುತ್ತಾನೆ.



Click it and Unblock the Notifications


