Latest Updates
-
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ಬೆಂಗಳೂರಿನ ರಸ್ತೆ ಬದಿಯ ಫುಡ್‌ನ ವೈಶಿಷ್ಟ್ಯ ಗೊತ್ತಿದೆಯೇ?
ನಿಮಗೆ ರಸ್ತೆ ಬದಿಯ ಆಹಾರಗಳು ಇಷ್ಟವೆಂದಲ್ಲಿ ನೀವು ಬೆಂಗಳೂರಿಗೆ ಭೇಟಿ ಕೊಡಲೇಬೇಕು. ಭಾರತದ ಒಂದು ಪ್ರಖ್ಯಾತ ರಸ್ತೆ ಬದಿಯ ತಿಂಡಿ ತಿನಿಸನ್ನು ಮಾರುವ ಸ್ಥಳ ಇದಾಗಿದ್ದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವ ತಿನಿಸನ್ನು ಇಲ್ಲಿ ಮಾರಲಾಗುತ್ತದೆ.
ಕಾಲೇಜು ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಎಂದೆನ್ನದೆ ಈ ತಿಂಡಿಗಳನ್ನು ತಿಂದು ತಮ್ಮ ಮನದ ಬಯಕೆಯನ್ನು ತೀರಿಸಿಕೊಳ್ಳುತ್ತಾರೆ. ಇಂದಿನ ಲೇಖನದಲ್ಲಿ ನಾವೂ ಕೂಡ ಹತ್ತು ಹಲವು ವೈವಿಧ್ಯಮಯ ತಿಂಡಿಗಳನ್ನು ನೀಡಿದ್ದು ನೀವೂ ಇದನ್ನು ಬೆಂಗಳೂರಿನ ರಸ್ತೆ ಬದಿಯ ಗಾಡಿಗಳಲ್ಲಿ ಮಾರುವ ಫುಡ್ ಅನ್ನು ಟ್ರೈ ಮಾಡಿ.
ಈ 21 ಭಾರತೀಯ ಆಹಾರಗಳ ವೈಶಿಷ್ಟ್ಯ ಗೊತ್ತಿದೆಯೇ?

ಗೋಬಿ ಮಂಚೂರಿಯನ್:
ಬಾಯಿಯಲ್ಲಿ ನೀರೂರಿಸುವ ಗೋಬಿ ಮಂಚೂರಿಯನ್ ಅನ್ನು ಹೋಟೆಲ್ನಲ್ಲಿ ತಿನ್ನಿವುದಕ್ಕಿಂತ ರಸ್ತೆ ಬದಿಯಲ್ಲಿ ತಿನ್ನುವ ಸಂಖ್ಯೆಯೇ ಜಾಸ್ತಿ. ಗೋಬಿ ಬೆಂಗಳೂರಿನ ರಸ್ತೆ ಬದಿಯಲ್ಲಿ ಪ್ರಖ್ಯಾತವಾಗಿರುವ ತಿಂಡಿ ತಿನಿಸಾಗಿದೆ. ಇದು ಆರೋಗ್ಯಭರಿತ ಮಾತ್ರವಲ್ಲದೆ ನಾಲಗೆಗೆ ಸೂಪರ್ ರುಚಿಯನ್ನು ನೀಡುತ್ತದೆ.

ಪಾನಿ ಪುರಿ:
ಗೋಲ್‌ಗಪ್ಪಾ ಎಂದು ಕರೆಯಲಾದ ಈ ರಸ್ತೆ ಬದಿಯ ಆಹಾರ ನಿಮ್ಮ ನಾಲಗೆಗೆ ಖಂಡಿತ ಮುದವನ್ನು ನೀಡುತ್ತದೆ.

ಇಡ್ಲಿ:
ನೀವು ಮನೆಯಲ್ಲಿ ಬ್ರೇಕ್‌ಫಾಸ್ಟ್ ತಪ್ಪಿಸಿದ್ದರೆ ನಿಮಗೆ ಮೃದುವಾದ ಇಡ್ಲಿ ಹಾಗೂ ಕಡಲೆ ಚಟ್ನಿಯನ್ನು ರಸ್ತೆ ಬದಿಯಲ್ಲಿ ಸವಿಯಬಹುದು.

ಮಸಾಲಾ ಪುರಿ:
ಮಸಾಲಾ ಪುರಿ ಕೂಡ ಒಂದು ಉತ್ತಮ ರಸ್ತೆ ಬದಿಯ ಆಹಾರವಾಗಿದ್ದು ದೊಡ್ಡವರು ಮಕ್ಕಳೆನ್ನದೆ ಪ್ರತಿಯೊಬ್ಬರೂ ಸವಿಯುತ್ತಾರೆ.

ಬೇಲ್ ಪುರಿ:
ಮಸಾಲಾ ಪುರಿಯಂತೆ ಬೇಲ್ ಪುರಿ ಕೂಡ ಚಾಟ್ ಐಟಂ ಆಗಿದ್ದು ಸಂಜೆಯ ಸೊಗಸನ್ನು ಹೆಚ್ಚಿಸುತ್ತದೆ.

ಸಮೋಸಾ:
ತಂಪು ಮಳೆಗೆ ಬಿಸಿ ಬಿಸಿ ಸಮೋಸಾ ಹಾಗೂ ಟೀ ಕಾಂಬಿನೇಶನ್ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಮಾಡುತ್ತದೆ. ಈ ಭಾರತೀಯ ಜನಪ್ರಿಯ ಸ್ನ್ಯಾಕ್ಸ್ ಐಟಂ ನಿಮ್ಮ ತನುಮನದ ಬಯಕೆಯನ್ನು ಈಡೇರಿಸುತ್ತದೆ.

ಜೋಳ:
ಕೆಂಡದಲ್ಲಿ ಬಿಸಿ ಮಾಡಿ ಉಪ್ಪು ಮೆಣಸಿನ ಹುಡಿ ಸವರಿದ ಮೆಕ್ಕೆ ಜೋಳದ ಘಮಲು ಬೆಂಗಳೂರಿನ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಾಣಬಹುದು. ಬಾಯಲ್ಲಿ ನೀರೂರುವಂತೆ ಮಾಡುವ ಈ ತಿಂಡಿ ನಿಜಕ್ಕೂ ವರ್ಣಿಸಲು ಅಸಾಧ್ಯವಾದುದು.

ಕಡಲೆಕಾಳು:
ಕಡಲೆಕಾಳು ಕೂಡ ಬೆಂಗಳೂರಿನ ಜನರು ಇಷ್ಟಪಡುವ ರಸ್ತೆಬದಿಯ ಆಹಾರವಾಗಿದೆ. ರಸ್ತೆ ಬದಿಯಲ್ಲಿ ಬೇಯಿಸಲಾಗುತ್ತಿರುವ ಕಡಲೆಕಾಳು ಮಕ್ಕಳು, ದೊಡ್ಡವರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ.

ಶುಗರ್ ಕ್ಯಾಂಡಿ:
ರಸ್ತೆಬದಿಯ ಆಹಾರದಲ್ಲಿ ಶುಗರ್ ಕ್ಯಾಂಡಿ ಕೂಡ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಬೇರೆ ಬೇರೆ ಆಕಾರ ಮತ್ತು ಬಣ್ಣದಲ್ಲಿ ಲಭ್ಯವಾಗುವ ಇದು ನಿಮ್ಮ ನಾಲಗೆಯ ರುಚಿಯನ್ನು ತಣಿಸುತ್ತದೆ.

ಮೊಮೋಸ್:
ಬೆಂಗಳೂರಿನ ಜನರು ಇಷ್ಟಪಡುವ ಒಂದು ಟೇಸ್ಟೀ ಫುಡ್ ಇದಾಗಿದೆ. ಸ್ಟೀಮ್ ಹಾಗೂ ಫ್ರೈ ಎರಡೂ ರೀತಿಯಲ್ಲಿ ದೊರೆಯುವ ಮೊಮೋಸ್ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಇದು ಕೂಡ ನಿಮ್ಮ ನಾಲಗೆಯ ರುಚಿಯನ್ನು ತಣಿಸುವಂತೆ ಮಾಡುತ್ತದೆ.



Click it and Unblock the Notifications
