Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐಎಎಸ್ ಮಗಳು ಬಂದಾಗ ಹೂಗುಚ್ಛ ನೀಡಿ ಸಲ್ಯೂಟ್ ಹೊಡೆದ ಅಪ್ಪ: ಹೆಮ್ಮೆಯ ಕ್ಷಣದ ವೀಡಿಯೋ ವೈರಲ್
ಮಗಳಿಗೆ ಸೆಲ್ಯೂಟ್ ಮಾಡುತ್ತಿರುವ ಪೊಲೀಸ್ ಅಧಿಕಾರಿ ಮತ್ಯಾರು ಅಲ್ಲ ಆ ಐಎಎಸ್ ಅಧಿಕಾರಿಯ ತಂದೆ, ಆ ತಂದೆಗೆ ಎಂಥ ಹೆಮ್ಮೆಯ ಕ್ಷಣ, ಅವರ ಖುಷಿ ಆ ಮುಖ ನೋಡಿದರೆ ಗೊತ್ತಾಗುತ್ತದೆ, ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು ತೆಲಂಗಾಣ ಪೊಲೀಸ್ ಅಕಾಡೆಮಿ.

ತೆಲಣಗಾಣದ ರಾಜ್‌ಬಹದ್ದೂರ್ ವೆಂಕಟ ರಂಗಾರೆಡ್ಡಿ ಪೊಲೀಸ್ ಅಕಾಡೆಮಿಗೆ ಬಂದ ಐಎಎಸ್ ಮಗಳಿಗೆ ತಂದೆ ಹೂ ಗುಚ್ಛ ನೀಡಿ ಸಲ್ಯೂಟ್ ಹೊಡೆದರು. ಐಎಎಸ್ ಅಧಿಕಾರಿಯಾಗಿರುವ ಉಮಾಹರತಿ ಅವರು ತೆಲಂಗಾಣ ಪೊಲೀಸ್ ಅಕಾಡೆಮಿಗೆ ಪರೀಕ್ಷೆಯ ಭಾಗವಾಗಿ ಭಾಗವಹಿಸಿದ್ದರು, ಅಲ್ಲಿಯೇ ಅವರ ತಂದೆ ಎನ್ ವೆಂಕಟೇಶ್ವರಲು ಕೂಡ ಕಾರ್ಯ ನಿರ್ವಹಿಸುತ್ತಿದ್ದರು, ಮಗಳು ಒಬ್ಬ ಅಧಿಕಾರಿ ಬಂದಾಗ ಆ ತಂದೆಯ ಖುಷಿ ಅಷ್ಟಿಷ್ಟಲ್ಲ. ಈ ಐಎಎಸ್ ಅಧಿಕಾರಿಣಿ ಟ್ರೈನಿ ಕಲೆಕ್ಟರ್ ಆಗಿ ನಿರ್ವಹಿಸುತ್ತಿದ್ದಾರೆ. ಅವರ ತಂದೆ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಅಪ್ಪಂದಿರ ದಿನವೇ ಈ ವೀಡಿಯೋ ಬಂದಿರುವುದು ಇನ್ನು ವಿಶೇಷ
ಇಂದು ಅಪ್ಪಂದಿರ ದಿನ, ನೆನ್ನೆಯಿಂದ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಈ ದಿನಕ್ಕೆ ತುಂಬಾನೇ ಸೂಕ್ತವಾಗಿದೆ.
ಮಕ್ಕಳು ತುಂಬಾ ಎತ್ತರಕ್ಕೆ ಬೆಳೆಯಬೇಕೆಂದು ಪೋಷಕರು ಬಯಸುತ್ತಾರೆ
ಮಗಳು ಅಥವಾ ಮಗ ನನಗಿಂತ ದೊಡ್ಡ ಅಧಿಕಾರಿ ಅಥವಾ ಹುದ್ದೆಯನ್ನು ಗಳಿಸಿದಾಗ ಹೆತ್ತವರಿಗೆ ಆಗುವ ಸಂತೋಷವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ, ಅಷ್ಟೊಂದು ಖುಷಿಯಾಗುವುದು ಅವರಿಗೆ. ಇಲ್ಲಿಯೂ ಅಪ್ಪ ಒಬ್ಬ ಪೊಲೀಸ್ ಆಫೀಸರ್ ಆದರೆ ಮಗಳು ತನಗಿಂತ ತುಂಬಾನೇ ದೊಡ್ಡ ಆಫೀಸರ್ ಆದ ಖುಷಿ ಆ ಅಪ್ಪನಿಗೆ.
ಉಮಾಹರತಿ ತೆಲಂಗಾಣದ ಸೂರ್ಯಪೇಟೆಯ ಹಜೂರ್ ನಗರ ಸೀತಾರಾಮನಗರದವರು, 28 ವರ್ಷದ ಇವರು ಐಐಟಿ ಹೈದರಾಬಾದ್‌ನಲ್ಲಿ ಇಂಜಿನಿಯರ್ ಮಾಡಿದ್ದಾರೆ. ಇವರು ಯುಪಿಎಸ್‌ಸಿ 2022ರಲ್ಲಿ ಆಲ್ ಇಂಡಿಯಾ ರ‍್ಯಾಂಕ್ 3ನೇ ಸ್ಥಾನ ಗಳಿಸಿದರು.
Ms Umaharthi IAS being saluted by her proud father. What a touching moment. pic.twitter.com/rRfnhE9r2w
— Ratna Prabha (@Ratnaprabha_IAS) June 15, 2024
ಉಮಾ ಅವರಿಗೆ ಅವರ ಪೋಷಕರು ತುಂಬಾನೇ ಸಪೋರ್ಟ್ ಮಾಡುತ್ತಿದ್ದರು, ತಾಯಿ ಗೃಹಿಣಿ, ತಂದೆ ಪೊಲೀಸ್ ಆಫೀಸರ್, ಇಬ್ಬರು ಸಹೋದರಿಯರು ಇದ್ದಾರೆ. ತಂದೆಗೆ ಮಗಳನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡುವ ಕನಸಿತ್ತು, ಇದನ್ನು ಮಗಳಿಗೆ ಹೇಳಿದಾಗ ತಂದೆಯ ಆಸೆ ನನಸು ಮಾಡಲು ಮಗಳು ತುಂಬಾನೇ ಕಷ್ಟಪಟ್ಟು ದುಡಿಯುತ್ತಾರೆ.
ಉಮಾಹರತಿ ನಾಲ್ಕು ಸಲ ಪ್ರಯತ್ನಿಸದರೂ ಪ್ರಿಲಿಮ್ಸ್ ಪಾಸ್ ಆಗಿರಲಿಲ್ಲ, ಹೀಗಾಗಿ ತುಂಬಾನೇ ಬೇಸರಪಟ್ಟರು ಆದರೆ ಅವರ ತಂದೆ ಮಗಳಿಗೆ ಪ್ರೋತ್ಸಾಹ ನೀಡಿದರು, ಇವರು ಕೂಡ ಓದಿನ ಕಡೆ ತುಂಬಾನೇ ಗಮನಹರಿಸಿದರು. ಈಗ ದೊಡ್ಡ ಆಫೀಸರ್ ಆಗಿದ್ದಾರೆ.



Click it and Unblock the Notifications