Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
109 ಬೀಜ ತಳಿಗಳನ್ನು ಬಿಡುಗಡೆ ಮಾಡಿದ ಮೋದಿ: ಇದರ ಹಿಂದಿದೆ ಇಷ್ಟೆಲ್ಲಾ ಅದ್ಭುತ ಲೆಕ್ಕಾಚಾರ
ಈ ವರ್ಷ ಅತಿವೃಷ್ಟಿ, ಅನಾವೃಷ್ಟಿಯೆಂದು ರೈತ ಕಂಗಲಾಗಿದ್ದಾನೆ, ಇನ್ನು ಕೆಲವು ಕಡೆ ಬೆಳೆದರು ಗುಣಮಟ್ಟದ ಬೀಜ ದೊರಕದೆ ಇಳುವರಿ ಕಡಿಮೆಯಾಗಿದೆ, ಈ ವರ್ಷ ರೈತ ಎದುರಿಸಿದ, ಎದುರಿಸುತ್ತಿರುವ ಕಷ್ಟವನ್ನು ನೋಡಿ ಕೇಂದ್ರ ಸರ್ಕಾರ ಇದೀಗ ರೈತರಿಗೆ ನೆರವಿಗೆ ಬಂದಿದೆ. ವ್ಯತಿರಿಕ್ತ ಹವಾಮಾನದಲ್ಲೂ ಕೈಹಿಡಿಯಬಲ್ಲ 109 ಬೀಜ ತಳಿಗಳನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ, ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಬೆಂಬಲವಾಗಿ ನಿ ನಿಂತುಕೊಂಡಿದೆ.

ಒಳ್ಳೆಯ ಬೀಜ ತಳಿಗಳ ಅವಶ್ಯಕತೆ ರೈತರಿಗೆ ತುಂಬಾನೇ ಇದೆ
ಹಲವಾರು ಬೀಜ ತಂದು ಉಳುಮೆ ಮಾಡಿ ಬೀಜ ಬಿತ್ತಿ ಫಸಲಿಗೆ ಕಾಯುವಾಗ ಅವರು ನಿರೀಕ್ಷೆ ಮಾಡಿದ ಬೆಳೆ ಸಿಗದೇ ಹೋದರೆ ಅವರಿಗೆ ತುಂಬಾನೇ ಕಷ್ಟ, ಅದರ ಜೊತೆಗೆ ಬೆಳೆದ ಬೆಳೆಗಳಿಗೆ ಕಾಡುವ ರೋಗಗಳು, ವ್ಯತಿರಿಕ್ತ ಹವಾಮಾನ ಎಲ್ಲವೂ ರೈತನಿಗೆ ಕೃಷಿ ಕಡೆ ಬೇಸರ ಮೂಡುವಂತೆ ಮಾಡುವುದು. ರೈತ ಬೆಳೆ ಬೆಳೆಯುವುದು ನಿಲ್ಲಿಸಿದ ಎಂದರೆ ಆಹಾರದ ಅಭಾವ ಉಂಟಾಗುವುದು, ಎಷ್ಟು ದುಡ್ಡಿದ್ದರೂ ರೈತ ಬೆಳೆ ಬೆಳೆಯದಿದ್ದರೆ ತಿನ್ನುವ ಆಹಾರಕ್ಕೆ ಪರಿದಾಡಬೇಕು, ಆಮದು ಮಾಡಿಕೊಂಡರು ಬೆಲೆಗಳು ಇನ್ನೂ ದುಬಾರಿಯಾಗುವುದು, ಮಧ್ಯಮವರ್ಗ, ಬಡ ಜನರ ಬದುಕು ದುಸ್ಥರವಾಗುವುದು ಹಾಗಾಗಿಯೇ ರೈತನನ್ನು ದೇಶದ ಬೆನ್ನುಲುಬು ಎಂದು ಕರೆಯಲಾಗುವುದು, ಬೆನ್ನಲುಬು ಮುರಿದರೆ ನೆಟ್ಟಿಗೆ ನಿಲ್ಲಲು ಸಾಧ್ಯನಾ?
ಇದನ್ನು ಮನಗಂಡ ಕೇಂದ್ರ ಸರ್ಕಾರ 109 ಬೀಜ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಅತ್ಯಧಿಕ ಇಳುವರಿ ಹಾಗೂ ಹವಾಮಾನ ನಿರೋಧಕ ಶಕ್ತಿ ಹೊಂದಿರುವ ಬೀಗಳಾಗಿದ್ದು ಈ ಬೀಜ ಬಿತ್ತಿದರೆ ಉತ್ಪಾದನೆ ಹೆಚ್ಚಾಗಲಿದೆ, ರೈತನಿಗೆ ಲಾಭವಾಗಲಿದೆ.
34 ಕ್ಷೇತ್ರ ಬೆಳೆ, 27 ತೋಟಗಾರಿಕಾ ಬೆಳೆ , ಇತರ 61 ಬೆಳೆಗಳನ್ನೊಳಗೊಂಡ 109 ಬೀಜ ತಳಿಯನ್ನು ಬಿಡುಗಡೆ ಮಾಡಿದೆ, ಈ ವಿಷಯ ಖಂಡಿತ ರೈತರಿಗೆ ಖುಷಿ ನೀಡಿದೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಕೇಂದ್ರ ಈ ಬೀಜಗಳನ್ನು ಅಭಿವೃದ್ಧಿ ಮಾಡಿದೆ. ಇದನ್ನು ವಿಜ್ಞಾನಿಗಳು ಹಲವು ಸಂಶೋಧನೆ ಮಾಡಿ ತಯಾರಿಸಿದ ಬೀಜಗಳಾಗಿದ್ದು ಅತ್ಮವಿಶ್ವಾಸದಿಂದ ಬೆಳೆ ಬೆಳೆಯಬಹುದಾಗಿದೆ, ಇದನ್ನು ಬಳಸಿದರೆ ರೈತರಿಗೆ ಆರ್ಥಿಕ ತೊಂದರೆಯಾಗಲ್ಲ, ಅವನ ಆರ್ಥಿಕ ಸ್ಥಿತಿಗತಿ ಉತ್ತಮವಾಗುತ್ತದೆ.
ಕೃಷಿ ಕ್ಷೇತ್ರದಲ್ಲಿನ ಅಭಿವೃದ್ಧಿ ಯುವಕರನ್ನು ಆಕರ್ಷಿಸುತ್ತದೆ
ತುಂಬಾ ಜನ ಕೆಲಸ ಸಿಗುತ್ತಿಲ್ಲ ಎಂದು ಬೇಸರ ಪಡುತ್ತಿದ್ದಾರೆ, ಸ್ವಲ್ಪ ತೋಟ, ಜಮೀನು ಅಂತ ಇದ್ದರೂ ಅದರಲ್ಲಿ ಕೆಲಸ ಮಾಡಿದರೆ ಏನು ತಾನೆ ಸಿಗಲು ಸಾಧ್ಯ, ಮದುವೆ ಹೆಣ್ಣು ಸಿಗಲ್ಲ, ಮಕ್ಕಳ ವಿದ್ಯಾಭ್ಯಾಸ ಹಣ ಸಾಕಾಗುವುದಿಲ್ಲ ಎಂದು ಯೋಚಿಸಿ ನಗರದತ್ತ ವಲಸೆ ಹೋಗುತ್ತಿದ್ದಾರೆ, ಯುವಕರು ಕೂಡ ನಗರದಲ್ಲಿ ಒಂದು ಕೆಲಸ ಸಿಕ್ಕರೆ ಸಾಕು ಎಂದು ಅಂದುಕೊಂಡಿದ್ದಾರೆ, ಆದರೆ ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಆದಾಯ ಗಳಿಸಲು ಸಾಧ್ಯವಾದರೆ ಯುವಕರು ಕೃಷಿಯತ್ತ ಆಕರ್ಷಿತರಾಗುತ್ತಾರೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ಇರಲ್ಲ, ದೇಶದ ಆರ್ಥಿಕತೆ ಸಬಲವಾಗಿದೆ.
ಮೋದಿ ಈಗ ಅತ್ಯುತ್ತಮ ತಳಿಯ ಬೀಜಗಗಳನ್ನು ರೈತರಿಗೆ ದೊರೆಯುವಂತೆ ಮಾಡಿರುವುದು ರೈತರಿಗೆ ಮಾತ್ರ ಅನುಕೂಲಕವರಲ್ಲ, ಎಲ್ಲರಿಗೂ ಆರ್ಥಿಕವಾಗಿ ಸಹಾಯವಾಗಿದೆ, ನಮ್ಮಲ್ಲಿಯೇ ಬೆಳೆಗಳನ್ನು ಬೆಳೆದರೆ ರೇಟ್ ದುಬಾರಿಯಾಗಲ್ಲ... ಈ ಎಲ್ಲಾ ನಿಟ್ಟಿನಿಂದ ನೋಡುವುದಾದರೆ ಇದೊಂದು ಅತ್ಯುತ್ತಮವಾದ ಯೋಜನೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?



Click it and Unblock the Notifications