Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Sohari Leaf: ಮೋದಿ ಊಟ ಮಾಡಿದ ಹೆಲ್ದಿ 'ಸೊಹರಿ ಎಲೆ'ಯ ರಹಸ್ಯ! ಈ ಎಲೆಯ ವಿಶೇಷತೆ ಗೊತ್ತಾ?
ಪ್ರಧಾನಿ ಮೋದಿ ಅವರು ಐದು ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಘಾನಾ ಬಳಿಕ ಎರಡು ದಿನಗಳ ಕಾಲ ಟ್ರಿನಿಡಾಡ್ ಮತ್ತು ಟೊಬಾಗೋ (Trinidad and Tobago) ದೇಶಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ (Sohari Leaf) ಭೋಜನ ಸವಿದು ಆನಂದಿಸಿದ್ದಾರೆ. ಈ ಭೋಜನದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ (PM Modi) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ವೈರಲ್ ಆಗಿದೆ. ಪ್ರಧಾನಿ ಮೋದಿ ಆಹಾರ ಸವಿದ ಸೊಹಾರಿ ಎಲೆಯ ವಿಶೇಷತೆ ಏನು? ಇಲ್ಲಿದೆ ಮಾಹಿತಿ.
ಇದು ಸರಳ ಎಲೆಯೊಂದು ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿ ಮಾರ್ಪಟ್ಟ ಘಟನೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. #PMModi #SohariLeaf #TrinidadVisit ಹ್ಯಾಶ್‌ಟ್ಯಾಗ್‌ಗಳು ಜಾಗತಿಕವಾಗಿ ಟ್ರೆಂಡಿಂಗ್ ಆಗಿವೆ. ಹೌದು, ಟ್ರಿನಿಡಾಡ್ ಮತ್ತು ಟೊಬೆಗೋದ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸಾರ್ ಆಯೋಜಿಸಿದ್ದ ಈ ಭೋಜನವು ಕೇವಲ ರಾಜತಾಂತ್ರಿಕ ಸೌಜನ್ಯವಾಗಿರಲಿಲ್ಲ. ಇದು ಸಾಗರಗಳಾಚೆಗಿನ ಭಾರತೀಯ ಪರಂಪರೆಯ ಆಚರಣೆಯಾಗಿತ್ತು. ಕೆರಿಬಿಯನ್ ರಾಷ್ಟ್ರದಲ್ಲಿನ ಭಾರತೀಯ ವಲಸಿಗರು ಈ ಸೋಹರಿ ಎಲೆಯನ್ನು ಸಾಂಪ್ರದಾಯಿಕವಾಗಿ ಬಳಸುತ್ತಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, 'ಭಾರತೀಯರು ಎಲ್ಲೆಲ್ಲಿ ಇರುತ್ತಾರೋ, ಅಲ್ಲೆಲ್ಲಾ ಭಾರತ ಜೀವಿಸುತ್ತದೆ' ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಸೊಹಾರಿ ಎಲೆಯ ವಿಶೇಷತೆ ಏನು?
ಪ್ರಧಾನಿ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸೊಹಾರಿ ಎಲೆಯಲ್ಲಿ ಆಹಾರವನ್ನು ಬಡಿಸಲಾಯಿತು. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಔತಣಕೂಟದ ಸಮಯದಲ್ಲಿ ಸೊಹಾರಿ ಎಲೆಯಲ್ಲಿ ಬಡಿಸುವ ಆಹಾರವು ಟ್ರಿನಿಡಾಡ್ ಮತ್ತು ಟೊಬಾಗೋದ ಜನರಿಗೆ ಹೆಚ್ಚಿನ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, 'ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಸೊಹಾರಿ ಎಲೆಯಲ್ಲಿ ಆಹಾರ ಬಡಿಸಲಾಗಿತ್ತು. ಇದು ಟ್ರಿನಿಡಾಡ್ ಮತ್ತು ಟೊಬಾಗೋದ ಜನರಿಗೆ, ವಿಶೇಷವಾಗಿ ಭಾರತೀಯ ಮೂಲವನ್ನು ಹೊಂದಿರುವವರಿಗೆ ಹೆಚ್ಚಿನ ಸಾಂಸ್ಕೃತಿಕ ಮಹತ್ವದ್ದಾಗಿದೆ. ಇಲ್ಲಿ, ಹಬ್ಬಗಳು ಮತ್ತು ಇತರೆ ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ ಸೊಹಾರಿ ಎಲೆಯಲ್ಲಿ ಆಹಾರವನ್ನು ಹೆಚ್ಚಾಗಿ ಬಡಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.
ಸೊಹಾರಿ ಎಲೆ ಎಂದರೇನು?
ಸೊಹಾರಿ ಎಲೆಯು ಶುಂಠಿಗೆ ಸಂಬಂಧಿಸಿದ ಉಷ್ಣವಲಯದ ಜಾತಿಯಾದ ಕ್ಯಾಲಥಿಯಾ ಲೂಟಿಯಾ ಸಸ್ಯದಿಂದ ಬಂದಿದೆ. ಇದನ್ನು ಸಾಮಾನ್ಯವಾಗಿ ಬಿಜಾವೊ ಅಥವಾ ಸಿಗಾರ್ ಸಸ್ಯ ಎಂದು ಕರೆಯಲಾಗುತ್ತದೆ. ಇದು ಕೆರಿಬಿಯನ್, ಮಧ್ಯ ಮತ್ತು ದಕ್ಷಿಣ ಅಮೆರಿಕಾದಾದ್ಯಂತ ವ್ಯಾಪಕವಾಗಿ ಬೆಳೆಯುತ್ತದೆ. ಈ ಸಸ್ಯವು 10 ಅಡಿ (3 ಮೀಟರ್) ಎತ್ತರ ಬೆಳೆಯುತ್ತದೆ. ಅದರ ಅಗಲವಾದ, ಮೇಣದಂತಹ ಎಲೆಗಳು, ಸಾಮಾನ್ಯವಾಗಿ ಒಂದು ಮೀಟರ್‌ಗಿಂತ ಹೆಚ್ಚು ಉದ್ದವಿರುತ್ತವೆ. ನೈಸರ್ಗಿಕವಾಗಿ ಆಹಾರ ಹೊದಿಕೆ ಅಥವಾ ತಟ್ಟೆಗಳಾಗಿ ಬಳಸಲು ಸೂಕ್ತ.
ಸೋಹರಿ ಎಲೆಯಲ್ಲಿ ಬಡಿಸುವುದು ಸಂಪ್ರದಾಯ
ಈ ಸಂಪ್ರದಾಯದ ಬೇರುಗಳು ಸುಮಾರು ಎರಡು ಶತಮಾನಗಳಷ್ಟು ಹಿಂದಿನವು. 19ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತು ಆಳ್ವಿಕೆಯಡಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಟ್ರಿನಿಡಾಡ್ ಮತ್ತು ಟೊಬೆಗೋಗೆ ಗುತ್ತಿಗೆ ಕಾರ್ಮಿಕರಾಗಿ ಬಂದರು. ಕಾಲ ಕ್ರಮೇಣ, ದೂರ ಮತ್ತು ತಲೆಮಾರುಗಳನ್ನು ಲೆಕ್ಕಿಸದೆ, ಅವರು ತಮ್ಮ ಆಚರಣೆಗಳನ್ನು ಉಳಿಸಿಕೊಂಡರು. ಹಬ್ಬಗಳಿಂದ ಹಿಡಿದು ಆಹಾರ, ಭಾಷೆಯಿಂದ ಧರ್ಮದವರೆಗೆ ಎಲ್ಲವನ್ನೂ ಕಾಪಾಡಿಕೊಂಡು ಬಂದರು. ಮದುವೆಗಳು, ಧಾರ್ಮಿಕ ಸಮಾರಂಭಗಳು ಮತ್ತು ಹಬ್ಬಗಳಲ್ಲಿ ಸೋಹರಿ ಎಲೆಗಳಲ್ಲಿ ಊಟ ಬಡಿಸುವುದು ಒಂದು ಸಂಪ್ರದಾಯವಾಗಿದೆ. ಇದು ಪೂರ್ವಜರನ್ನು ಗೌರವಿಸುವ ಮತ್ತು ಭಾರತದೊಂದಿಗೆ ಸಂಪರ್ಕವನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಸೋಹರಿ ಎಲೆಯು ಬಾಳೆ ಎಲೆಯಂತೆ ದೊಡ್ಡದಾದ ಮತ್ತು ಚಪ್ಪಟೆಯಾದ ಎಲೆಯಾಗಿದೆ. ಇದು ನೈಸರ್ಗಿಕವಾಗಿ ಮಣ್ಣಿನಲ್ಲಿ ಕರಗುವಂತಹದ್ದಾಗಿದೆ. ರಾಸಾಯನಿಕ ಮುಕ್ತ ಮತ್ತು ಆಹಾರಕ್ಕೆ ಸೂಕ್ಷ್ಮವಾದ ಪರಿಮಳವನ್ನು ನೀಡುತ್ತದೆ. ಬಿಸಿ ಆಹಾರವನ್ನು ಅದರ ಮೇಲೆ ಬಡಿಸಿದಾಗ, ಎಲೆಯಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಊಟದಲ್ಲಿ ಬೆರೆಯುತ್ತವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ಈ ಸಂಪ್ರದಾಯವು ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕುವುದಲ್ಲ. ಇದು ಪರಿಸರ ಜ್ಞಾನ ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಸೊಹಾರಿ ಎಂದರೆ 'ದೇವರುಗಳಿಗೆ ಆಹಾರ'
ಸೊಹಾರಿ ಎಂಬ ಪದವು ಭೋಜ್‌ಪುರಿ ಭಾಷೆಯಲ್ಲಿ 'ದೇವರುಗಳಿಗೆ ಆಹಾರ' ಎಂದರ್ಥ. ಮೂಲತಃ, ಈ ಪದವು ಧಾರ್ಮಿಕ ಆಚರಣೆಗಳ ಸಮಯದಲ್ಲಿ ಹಿಂದೂ ಪುರೋಹಿತರಿಗೆ ಸಾಂಪ್ರದಾಯಿಕವಾಗಿ ನೀಡಲಾಗುತ್ತಿದ್ದ ತುಪ್ಪದಿಂದ ಬೇಯಿಸಿದ ಚಪ್ಪಟೆ ಬ್ರೆಡ್ (ರೊಟ್ಟಿ) ಅನ್ನು ಉಲ್ಲೇಖಿಸುತ್ತದೆ. ಕಾಲ ಕ್ರಮೇಣ, ಈ ಆಹಾರವನ್ನು ಬಡಿಸಲು ಬಳಸಲಾಗುವ ದೊಡ್ಡ ಎಲೆಯನ್ನು ಸೊಹಾರಿ ಎಲೆ ಎಂದೂ ಕರೆಯಲಾಯಿತು. ಪ್ರಸ್ತುತ, ಇದನ್ನು ಸಾಮಾನ್ಯವಾಗಿ ಧಾರ್ಮಿಕ ಸಭೆಗಳು, ಮದುವೆಗಳು, ಸಮುದಾಯ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ.
ಸೊಹಾರಿ ಎಲೆ ಮುಖ್ಯ ಏಕೆ?
ಸೊಹಾರಿ ಎಲೆಯನ್ನು ತಿನ್ನುವುದು ಕೇವಲ ಪ್ರಾಯೋಗಿಕ ಆಯ್ಕೆಗಿಂತ ಹೆಚ್ಚಿನದು. ಇಂಡೋ-ಟ್ರಿನಿಡಾಡಿಯನ್ನರಿಗೆ, ಇದು ಭಾರತದಿಂದ ಬಂದ ಅವರ ಪೂರ್ವಜರ ಸಂಪ್ರದಾಯಗಳ ಜ್ಞಾಪನೆ ಸಂಕೇತ. ಪ್ರಧಾನಿ ಮೋದಿ ಗಮನಿಸಿದಂತೆ, ಈ ಎಲೆಯ ಮೇಲೆ ಆಹಾರವನ್ನು ಬಡಿಸುವ ಕ್ರಿಯೆಯು ಭಾರತೀಯ ಮೂಲ ಹೊಂದಿರುವವರಿಗೆ ವಿಶೇಷವಾಗಿ ಅರ್ಥಪೂರ್ಣವಾಗಿದೆ. ಸೊಹಾರಿ ಎಲೆ ಎರಡು ಸಂಸ್ಕೃತಿಗಳ ನಡುವಿನ ಸೇತುವೆಯಾಗುತ್ತದೆ. ಇದು ಸಾಂಪ್ರದಾಯಿಕ ಭಾರತೀಯ ಊಟದ ಪದ್ಧತಿಗಳನ್ನು ಗೌರವಿಸುತ್ತದೆ.
ಸೋಹರಿ ಅಥವಾ ಬಾಳೆ ಎಲೆಯಂತಹ ಎಲೆಗಳಲ್ಲಿ ಊಟ ಮಾಡುವುದು ಹಳೆಯ ಭಾರತೀಯ ಸಂಪ್ರದಾಯ. ಇದು ಕೇವಲ ಸೌಂದರ್ಯ ಅಥವಾ ಆಚರಣೆಗಾಗಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಇವು ಆರೋಗ್ಯಕರ, ಫೈಟೊನ್ಯೂಟ್ರಿಯೆಂಟ್ಸ್ ಸಮೃದ್ಧವಾಗಿವೆ. ಊಟದ ದೈಹಿಕ ಮತ್ತು ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸುತ್ತವೆ. ಒಟ್ಟಾರೆಯಾಗಿ, ಪ್ರಧಾನಿ ಮೋದಿಯವರ ಟ್ರಿನಿಡಾಡ್ ಮತ್ತು ಟೊಬಾಗೋ ಭೇಟಿಯಲ್ಲಿ ಸೊಹಾರಿ ಎಲೆಯ ಬಳಕೆಯು ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುವ ಒಂದು ಪ್ರಮುಖ ಅಂಶವಾಗಿದೆ.



Click it and Unblock the Notifications
