Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಿಸಿಗಾಳಿ ತಾಳದೆ ನೆಲಕ್ಕೆ ಬಿದ್ದ ಕೋತಿ ರಕ್ಷಿಸಿದ ಮಂದಿ..!
ಉತ್ತರ ಭಾರತ ಬಿಸಿ ಗಾಳಿಯಲ್ಲಿ ಕುದಿಯುತ್ತಿದೆ. ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಉಂಟಾಗಿದೆ. ಬಿಸಿಲಿನ ತಾಪಕ್ಕೆ ಹಲವರು ಪ್ರಾಣ ಕಳೆದುಕೊಂಡಿದ್ದರೆ ನೂರಾರು ಮಂದಿ ಆಸ್ಪತ್ರೆ ಸೇರಿದ್ದಾರೆ. ಇಷ್ಟಾದರು ತಾಪಮಾನ ಇಳಿಕೆಯಾಗುವ ಲಕ್ಷಣ ಕಂಡುಬಂದಿಲ್ಲ.
ಇದರ ಜೊತೆ ಪ್ರಾಣಿ ಪಕ್ಷಿಗಳ ಪಾಡಂತು ಹೇಳತೀರದ್ದಾಗಿದೆ. ಏಕೆಂದರೆ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಈ ತಾಪದಲ್ಲಿ ಬದುಕುಳಿಯುವುದೇ ಕಷ್ಟಕರವಾಗಿದೆ. ಕಳೆದ ಎರಡು ದಿನದ ಹಿಂದೆ ಕಾಗೆಗಳು, ಬಾವಲಿಗಳು ಬಿಸಿಲಿನ ತಾಪಕ್ಕೆ ಪ್ರಾಣ ಕಳೆದುಕೊಂಡು ರಸ್ತೆ ಮೇಲೆ ಬಿದ್ದಿದ್ದ ಘಟನೆಗಳು ವರದಿಯಾಗಿದ್ದವು.

ಆದ್ರೆ ಇಲ್ಲೊಂದು ಕಡೆ ಬಿಸಿಲಿನ ತಾಪಕ್ಕೆ ಕೋತಿಯೊಂದು ಮರದಿಂದ ಕೆಳಗೆ ಬಿದ್ದಿದ್ದು, ಜನರು ಅದರ ಜೀವ ಉಳಿಸಿದ್ದಾರೆ. ವಿಡಿಯೋದಲ್ಲಿ, ಜನರು ಕೋತಿಗೆ ತಣ್ಣೀರಿನಿಂದ ಮೈ ತೊಳೆದು ಅದಕ್ಕೆ ಒಆರ್‌ಎಸ್ ಕುಡಿಸುತ್ತಿರುವುದು ನೋಡಬಹುದು. ತಾಪಮಾನ ತಾಳಲಾಗದೆ ಆ ಕೋತಿ ಮರದಿಂದ ಬಿದ್ದು ಸಾವು ಬದುಕಿನ ನಡುವೆ ಹೋರಾಡುವಾಗ ಜನರು ಅದರ ಸಹಾಯಕ್ಕೆ ಬಂದಿದ್ಧಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹೆಚ್ಚಿನ ತಾಪಮಾನವು ಪ್ರಾಣಿಗಳು ಮತ್ತು ಪಕ್ಷಿಗಳ ಜೀವಕ್ಕೆ ಕುತ್ತು ತಂದಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ಕೋತಿಯನ್ನು ತಣ್ಣೀರು ಕುಡಿಸಿ ಜೀವ ಉಳಿಸಲು ಯತ್ನಿಸಿದ್ದಾರೆ. ಕೆಲವರು ORS ಕುಡಿಯುವಂತೆ ಮಾಡುತ್ತಾರೆ. ಇದು ಕೋತಿಗೆ ಮರುಜೀವ ನೀಡಿದಂತಾಗಿದೆ.
ಈ ರೀತಿ ನೀರು ಹಾಗೂ ಓಆರ್‌ಎಸ್‌ನಿಂದ ಕೋತಿಯ ಜೀವ ಉಳಿದಿದೆ. ಜನರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ಸಹ ಕೇಳಿಬಂದಿದೆ. ಇಂತಹ ಅಸಹಾಯಕ ಜೀವಿಗಳ ಪ್ರಾಣ ಉಳಿಸೋದು ಸಹ ಪುಣ್ಯದ ಕೆಲಸ. ಇಂತಹ ಕೆಲಸ ಮಾಡಿದ ಎಲ್ಲರಿಗೂ ದೇವರು ಒಳಿತು ಮಾಡುತ್ತಾನೆ ಎಂದು ನೆಟ್ಟಿಗರು ಹರಿಸಿದ್ದಾರೆ.
ಇದು ಜನರೇ ಮಾಡಿದ ಪಾಪ ಪ್ರತಿಫಲವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ನಾವು ಮರ ನೆಟ್ಟು ಅವುಗಳನ್ನು ಬೆಳೆಸುವುದು ನಮ್ಮ ಕರ್ತವ್ಯ ಆದರೆ ನಾವದನ್ನು ಮಾಡುತ್ತಿಲ್ಲ. ಈಗ ನಾವೇ ಅದನ್ನು ಅನುಭವಿಸಬೇಕಾಗಿದೆ. ಇದಕ್ಕೆಲ್ಲ ಪರಿಹಾ ಮರ ಬೆಳೆಸಿ, ನೀರು ಉಳಿಸುವುದು ಎಂದು ಬರೆದಿದ್ದಾರೆ.
'ನಾವು ಮನುಷ್ಯರು ಮತ್ತು ನಾವು ಸುಲಭವಾಗಿ ಫ್ಯಾನ್‌ಗಳು, ಕೂಲರ್‌ಗಳು ಮತ್ತುಎಸಿಗಳ ಅಡಿ ಬದುಕುತ್ತೇವೆ. ಈ ಬಡ ಪ್ರಾಣಿಗಳಿಗೆ ಏನು ಮಾಡಬೇಕೆಂದು ಅರ್ಥವಾಗುತ್ತಿಲ್ಲ. ಈ ದಿನಗಳಲ್ಲಿ ನಾವು ಜಾಗರೂಕರಾಗಿರಬೇಕು ಮತ್ತು ಅವರಿಗೆ ಸಹಾಯ ಮಾಡಲು ಸಿದ್ಧರಾಗಿರಬೇಕು ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಸಹ ಇಂತಹದ್ದೆ ಘಟನೆಯೊಂದು ನಡೆದಿತ್ತು. ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಛಾತಾರಿಯಲ್ಲಿ ಹೀಟ್ ಸ್ಟ್ರೋಕ್‌ನಿಂದ ಕೋತಿಯೊಂದು ನೆಲಕ್ಕೆ ಬಿದ್ದಿತ್ತು. ಈ ವೇಳೆ ಅಲ್ಲೇ ಇದ್ದ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿಕಾಸ್ ತೋಮರ್ ಮೂರ್ಛೆ ಹೋದ ಮರಿ ಕೋತಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದರು.
ಅವರು ಕೋತಿಯ ಎದೆಯನ್ನು ನಿರಂತರವಾಗಿ ಒತ್ತಿ ಅದು ಮತ್ತೆ ಉಸಿರಾಡುವಂತೆ ಮಾಡಿದ್ದರು. ಇದರಿಂದ ಮತ್ತೆ ಜೀವ ಪಡೆದುಕೊಂಡಿತು. ಈ ಕಾರ್ಯಕ್ಕೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪೊಲೀಸ್ ಜೀವ ರಕ್ಷಕನಾಗಿ ಕೋತಿಯ ಉಳಿಸಿದ್ದ. ಅವರ ಕಾರ್ಯ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಪ್ರಶಂಸೆ ಗಳಿಸಿತ್ತು.
ಕೋತಿಗೆ ಸಿಪಿಆರ್ ಮಾಡಿದ್ದಲ್ಲದೆ ಅದಕ್ಕೆ ನೀರು ಕುಡಿಸಿ ಅದರ ಜೀವ ಉಳಿಸಿದ ಪೊಲೀಸ್ ಕಾರ್ಯ ಮೆಚ್ಚುಗೆ ಗಳಿಸಿದ್ದಲ್ಲದೆ. ಈ ರೀತಿಯ ತಾಪಮಾನ ಏರಿಕೆಗೆ ನೇರವಾಗಿ ಕಾರಣರಾದ ಮಾನವರ ಕೃತ್ಯ ಖಂಡಿಸಲಾಗಿತ್ತು. ಪ್ರಾಣಿಗಳು ಎಂದಿಗೂ ಪರಿಸರ ಹಾನಿ ಮಾಡುವುದಿಲ್ಲ ಇದೆಲ್ಲಾ ಮಾನವನ ಅತಿ ಆಸೆಯ ಪ್ರತಿಫಲ ಎಂದು ಜನರು ಆಕ್ರೋಶ ಹೊರಹಾಕಿದ್ದರು.



Click it and Unblock the Notifications
