Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನೀರಿನಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಬದುಕಿಸುವ ಯತ್ನ! ಉಪ್ಪಿನ ರಾಶಿಯಲ್ಲಿಟ್ಟರೆ ಬದುಕುತ್ತಾರಾ?
21ನೇ ಶತಮಾದಲ್ಲಿ ಜನ ಮೂಢನಂಬಿಕೆಗಳ ಇನ್ನೂ ಪಾಲಿಸುತ್ತಾರೆ ಎಂದರೆ ಅಂದ್ರೆ ಎಂತಹ ವಿಚಿತ್ರ. ಮೂಢ ನಂಬಿಕೆಗಳಿಂದ ಹೊರಬಂದು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಿ ಎಂದು ಸಾರಿದರೂ ಜನ ಮಾತ್ರ ಇಂತಹ ನಂಬಿಕೆಗಳ ಬಿಟ್ಟು ಹೊರಬರುತ್ತಿಲ್ಲ.
ಆದರೆ ಕೆಲವು ನಂಬಿಕೆಗಳು ಊಹಿಸಲು ಸಾಧ್ಯವಿಲ್ಲ. ಅದ್ರಲ್ಲೂ ಸತ್ತವರು ಮತ್ತೆ ಬದುಕಿ ಬರುತ್ತಾರೆ ಎಂದು ನಂಬಿಕೊಳ್ಳುವುದು ಎಷ್ಟು ವಿಚಿತ್ರ ಎನಿಸುತ್ತದೆಯೋ ಅಷ್ಟೇ ಮೌಢ್ಯದಿಂದ ಕೂಡಿದೆ. ಒಮ್ಮೆ ಉಸಿರು ನಿಂತ ಮೇಲೆ ಮತ್ತೆ ಬದುಕಿ ಬಂದರೆ ಅದು ವಿಜ್ಞಾನಕ್ಕೆ ಅಚ್ಚರಿ. ಆದ್ರೆ ಜನ ಇದನ್ನೆಲ್ಲಾ ಬದಿಗೊತ್ತಿ ಮೂಢನಂಬಿಕೆಗೆ ದಾಸರಾಗುವುದು ವಿಪರ್ಯಾಸವೇ ಸರಿ. ಇದೇ ರೀತಿ ಹಾವೇರಿಯಲ್ಲೊಂದು ಘಟನೆ ಇಂತಹ ಮೌಢ್ಯಕ್ಕೆ ಸಾಕ್ಷಿಯಾಗಿದೆ. ಏನಿದು ಘಟನೆ ನೋಡಿ..
ಹಾವೇರಿಯ ಕಾಗಿನೆಲೆ ಸಮೀಪದ ಗ್ರಾಮವೊಂದರಲ್ಲಿ ನೀರಿನಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟಿದ್ದರು. ಡಿಸೆಂಬರ್ 24ರಂದು ಈ ಘಟನೆ ನಡೆದಿತ್ತು. ಆದರೆ ಮಕ್ಕಳು ಬದುಕಿ ಬರುತ್ತಾರೆ ಎಂದು ಪೋಷಕರು ಇಬ್ಬರು ಮಕ್ಕಳನ್ನು ಉಪ್ಪಿನ ರಾಶಿಯಲ್ಲಿ ಹುದುಗಿಸಿಟ್ಟಿದ್ದರು.
ಸಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಹರಿದಾಡುತ್ತಿದ್ದ ವಿಚಾರ ನೋಡಿದ್ದ ಅವರು ಗ್ರಾಮಸ್ಥರ ಮಾತಿನಂತೆ ಇಬ್ಬರು ಮಕ್ಕಳನ್ನು ಉಪ್ಪಿನ ರಾಶಿಯಲ್ಲಿ ಹುದುಗಿಸಿ ಬದುಕಿ ಬರುವಂತೆ ಗೋಳಾಡಿದ್ದಾರೆ. ಹೇಮಂತ್ (12) ಮತ್ತು ನಾಗರಾಜ್ (11) ಗ್ರಾಮದ ಕೆರೆಯ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಮಕ್ಕಳಾಗಿದ್ದಾರೆ.
ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಮೃತಪಟ್ಟಿದ್ದರು, ಇಬ್ಬರ ಮೃತದೇಹ ಮೇಲೆತ್ತುವಾಗ ಗಂಟೆಗಳೇ ಕಳೆದಿತ್ತು. ಹೀಗಿದ್ದರೂ ಅವರು ಬದುಕಿ ಬರುತ್ತಾರೆ ಎಂದು ಉಪ್ಪಿನಲ್ಲಿ ಹುದುಗಿಸಿಡಲಾಗಿತ್ತು. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕ ಆಗಮಿಸಿ ಪೋಷಕರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ. ಆದರೆ ಅವರ ನಂಬಿಕೆ ಒಂದೇ ಆಗಿತ್ತು. ಮಕ್ಕಳು ಮತ್ತೆ ಬದುಕುತ್ತಾರೆ ಎಂದು ಪಟ್ಟು ಹಿಡಿದಿದ್ರು. ಆದ್ರೆ ಕೊನೆಯಲ್ಲಿ ಅವರ ಮನವೊಲಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಘಟನೆಯಲ್ಲಿ ಪೋಷಕರನ್ನು ತಪ್ಪುದಾರಿಗೆ ಎಳೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಸಂದೇಶ ಬಹುಕಾಲದಿಂದಲೂ ಹರಡುತ್ತಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನ ರಾಶಿಯಲ್ಲಿ ಹುದುಗಿಸಿಟ್ಟರೆ ಅವರು ಬದುಕುತ್ತಾರೆ ಎಂದು ಸುಳ್ಳು ಹಬ್ಬಿಸಲಾಗಿದೆ. ಈ ಸುಳ್ಳಿಗೆ ಸಿಲುಕುವ ಹಲವರು ವ್ಯರ್ಥ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ.
ಏನಿದು ಸುಳ್ಳು ಸಂದೇಶ
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಈ ಸಂದೇಶ ಹರಡುತ್ತಿದೆ. ಆ ಸಂದೇಶ ಏನೆಂದು ಈ ಕೇಳಗಿದೆ.
ಅತಿ ಮುಖ್ಯ ಮಾಹಿತಿ:-
ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಮತ್ತು ಅವರ ದೇಹವು 3-4 ಗಂಟೆಗಳಲ್ಲಿ ಪತ್ತೆಯಾದರೆ, ನಾವು ಅವನ ಜೀವವನ್ನು ಮರಳಿ ತರಲು ಸಾಧ್ಯವಿದೆ. ಯಾರಾದರೂ ಅಂತಹ ಅಪಘಾತವನ್ನು ನೋಡಿದ್ದರೆ ಅಥವಾ ಕೇಳಿದರೆ, ತಕ್ಷಣ ನಮಗೆ ತಿಳಿಸಿ... ಯಾರದೊ ಜೀವ ಉಳಿಸಬಹುದು. ನಮ್ಮ ಮೊಬೈಲ್ ಸಂಖ್ಯೆ
ಪ್ರಶಾಂತ್ ತ್ರಿಪಾಠಿ +9194543111111
+919335673001 ಆಗಿದೆ
ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಬೇಕಾಗಿ ನಿಮ್ಮೆಲ್ಲರಲ್ಲಿ ವಿನಮ್ರ ವಿನಂತಿ. ನಾವು ಯಾರೊಬ್ಬರ ಜೀವವನ್ನು ಉಳಿಸಲು ಸಾಧ್ಯವಾದರೆ, ನಮ್ಮ ಜೀವನದಲ್ಲಿ ನಾವು ಯಶಸ್ವಿಯಾಗುತ್ತೇವೆ. ಧನ್ಯವಾದಗಳು.
ಮುಳುಗುವಿಕೆಯಿಂದ ಪ್ರಾಣ ಕಳೆದುಕೊಂಡವರಿಗೆ ಚಿಕಿತ್ಸೆ:-
ಒಂದೂವರೆ ಕ್ವಿಂಟಾಲ್ ಉಪ್ಪನ್ನು ಹಾಸಿಗೆಯಂತೆ ಹಾಕಿ, ರೋಗಿಯನ್ನು ಅದರ ಮೇಲೆ ಬಟ್ಟೆಯೊಂದಿಗೆ ಮಲಗಿಸಿ. ಉಪ್ಪು ನಿಧಾನವಾಗಿ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ. ವ್ಯಕ್ತಿಗೆ ನಿಧಾನವಾಗಿ ಪ್ರಜ್ಞೆ ಬರುತ್ತದೆ. ವ್ಯಕ್ತಿಯು ಪ್ರಜ್ಞೆಯನ್ನು ಮರಳಿ ಪಡೆದಾಗ, ಅವನನ್ನು ಆಸ್ಪತ್ರೆಗೆ ಕರೆದೊಯ್ದಿರಿ.
ಇದಕ್ಕೂ ಮುನ್ನ ಆಸ್ಪತ್ರೆಗೆ ಕರೆದೊಯ್ದು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ ವ್ಯಕ್ತಿಯನ್ನು
ಉಪ್ಪಿನ ಚಿಕಿತ್ಸೆ ಮಾಡಿ ಬದುಕಿಸಿದ್ದೇವೆ. ದೇವರ ದಯೆ ಇದ್ದರೆ ಸತ್ತವನೂ ಕೂಡ ಬದುಕುತ್ತಾನೆ. ಪ್ರಯತ್ನ
ಮಾಡುವುದರಲ್ಲಿ ತಪ್ಪೇನಿಲ್ಲ.
ವೈದ್ಯರು ಸತ್ತರು ಎಂದು ಘೋಷಿಸಿದ ನಂತರ ಸಂಸ್ಕಾರ ಮಾಡಲು ಆತುರಪಡಬೇಡಿ.
ಸಾಧ್ಯವಾದಷ್ಟು ಬೇಗ ಉಪ್ಪಿನ ಚಿಕಿತ್ಸೆ ಮಾಡಿ.
ರಾತ್ರಿಯಾದರೂ ಪರವಾಗಿಲ್ಲ. ನಗರಗಳಲ್ಲಿ ಅಂಗಡಿಗಳ ಮುಂದೆ ಉಪ್ಪಿನ ಚೀಲ ಗಳನ್ನು ಇಟ್ಟಿರುತ್ತಾರೆ. ವ್ಯಕ್ತಿಯನ್ನು ಕೂಡಲೇ ಕಾರ್ ಅಥವಾ ಜೀಪಿನಲ್ಲಿ ಅಲ್ಲಿಗೆ ಕರೆದುಕೊಂಡು ಹೋಗಿ, ಉಪ್ಪಿನ ಮೂಟೆಗಳನ್ನು ಬೇಗಬೇಗನೆ ಸುರಿದು ನೀರಿನಲ್ಲಿ ಮುಳುಗಿ ಸತ್ತ ವ್ಯಕ್ತಿಯನ್ನು ಬೇಗನೆ ಉಪ್ಪಿನ ರಾಶಿಯ ಮೇಲೆ ಮಲಗಿಸಿ.
ಅಂಗಡಿಯವನ ಗುರುತನ್ನು ಬೆಳಿಗ್ಗೆ ಪತ್ತೆ ಹಚ್ಚಿ ಆತನಿಗೆ ಹಣ ನೀಡಬಹುದು. ಆದರೆ ಪ್ರಾಣ ಉಳಿಸಲು
ಸಿಗುವ ಒಂದು ಅವಕಾಶವನ್ನು ಸಹ ಬಿಡಬೇಡಿ.
ಸೂಚನೆ:- ಮುಳುಗಿದ ಸಮಯ ಕಡಿಮೆಯಾದಷ್ಟೂ ಬೇಗ ಆ ವ್ಯಕ್ತಿಗೆ ಪ್ರಜ್ಞೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ಪ್ರತಿ ಕೆಲಸವನ್ನು ಯುದ್ಧ ಮಟ್ಟದಲ್ಲಿ ಮಾಡಿ. ಕೆಲವರು ಉಪ್ಪು ತರಲು
ಮುಂದಾದರೆ, ಫಲಿತಾಂಶವು ಶೀಘ್ರದಲ್ಲಿ ಲಭ್ಯವಾಗುತ್ತದೆ.
ಆಫ್, ಸಿ.ರೂಪಾ
ನಾರಾಯಣಗಡ್, ಮಂದಸೌರ್ ಎಂ. ಪ್ರ.
9303237548
ದಯವಿಟ್ಟು ಸಂದೇಶವನ್ನು ಫಾರ್ವಡ್್ರ ಮಾಡಿ, ಯಾರೊಬ್ಬರ ಜೀವವನ್ನು ಉಳಿಸಲು ಇದು ಉಪಯುಕ್ತವಾಗಬಹುದು.
ಧನ್ಯವಾದಗಳು.
ಈ ಸಂದೇಶ ಎಷ್ಟು ಸತ್ಯ
ಈ ಮೇಲಿನ ಸಂದೇಶದಲ್ಲಿರುವ ಪ್ರತಿಯೊಂದು ವಿಚಾರವೂ ಸುಳ್ಳಾಗಿದೆ. ಒಮ್ಮೆ ಸತ್ತ ವ್ಯಕ್ತಿ ಯಾವುದೇ ಚಿಕಿತ್ಸೆ ಇಲ್ಲದೆ ಮತ್ತೆ ಹುಟ್ಟಿಬರಲಾರ, ಒಂದು ವೇಳೆ ಆತ ಮತ್ತೆ ಉಸಿರಾಟ ಪ್ರಕ್ರಿಯೆ ಆರಂಭಿಸಿದ್ದೇ ಆದಲ್ಲಿ ಆತ ಸತ್ತಿರಲು ಸಾಧ್ಯವೇ ಇಲ್ಲ. ಕೆಲವೊಮ್ಮೆ ನೀರಿನಲ್ಲಿ ಮುಳಗಿದ್ದವರು ಪ್ರಜ್ಞೆ ಕಳೆದುಕೊಂಡಿರುತ್ತಾರೆ ಆದರೆ ಜೀವಕ್ಕೆ ಹಾನಿಯಾಗಿರುವುದಿಲ್ಲ. ಇಂತಹ ಸಮಯದಲ್ಲಿ ಬದುಕಿಬಂದರೆ ಅದೇನು ಪವಾಡವಾಗಿರುವುದಿಲ್ಲ.
ಇದರಿಂದ ಹಾನಿ ಯಾರಿಗೆ?
ಇಂತಹ ಸಂದೇಶ ಹರಡುವುದರಿಂದ ಒಬ್ಬನ ಜೀವದ ಜೊತೆ ಆಟವಾಡಿದಂತೆ. ನೀರಿನಲ್ಲಿ ಮುಳುಗಿದವನಿಗೆ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಆಸ್ಪತ್ರೆಗೆ ಸಾಗಿಸಬೇಕು. ಆದರೆ ಈ ಸಂದೇಶದಲ್ಲಿರುವಂತೆ ಆತನನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಬದುಕುವ ಸಾಧ್ಯತೆ ಇದ್ದರೂ ಆತ ಸಾಯುತ್ತಾನೆ. ಹಾಗಾಗಿ ಯಾರು ಕೂಡ ಇಂತಹ ಮೂಢನಂಬಿಕೆಗಳಿಗೆ ಬಲಿಯಾಗಿ ಮತ್ತೊಬ್ಬರ ಜೀವದ ಜೊತೆ ಆಟವಾಡಬಾರದು.



Click it and Unblock the Notifications











