ಪರಮ ಏಕಾದಶಿ 2023: ಬಡ ಬ್ರಾಹ್ಮಣನಿಗೆ ಶ್ರೀಮಂತಿಕೆ ಒಲಿಯೋದಕ್ಕೆ ಕಾರಣವೇನು?

ಹಿಂದೂ ಧರ್ಮದಲ್ಲಿ ಪರಮ ಏಕಾದಶಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಈ ಪವಿತ್ರ ಏಕಾದಶಿಯ ದಿನ ವಿಶೇಷ ಉಪವಾಸವನ್ನು ಮಾಡಿದರೆ ನಾವು ಮಾಡಿದ ಪಾಪಗಳೆಲ್ಲಾ ಪರಿಹಾರವಾಗುತ್ತೆ ಎಂದು ನಂಬಲಾಗಿದೆ. ಮನುಷ್ಯ ಇಹಲೋಕದಲ್ಲಿ ಸುಖವನ್ನು ಮತ್ತು ಪರಲೋಕದಲ್ಲಿ ಮೋಕ್ಷವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.

Parama Ekadashi 2023: Vrat Katha for Prosperity in Kannada.

ಇನ್ನೂ ಈ ಉಪವಾಸವನ್ನು ನಿಯಮಾನುಸಾರ ಮಾಡಬೇಕು. ಮತ್ತು ವಿಷ್ಣು ದೇವರಿಗೆ ಧೂಪ, ದೀಪ, ನೈವೇದ್ಯ, ಹೂವು ಇತ್ಯಾದಿಗಳಿಂದ ಪೂಜಿಸಬೇಕು. ಹೆಚ್ಚಿನ ಜನರಿಗೆ ಉಪವಾಸದ ಕಥೆಯ ಬಗ್ಗೆ ಗೊತ್ತಿಲ್ಲ. ಆ ಕಥೆಯ ಬಗ್ಗೆ ನಾವಿಂದು ವಿವರವಾಗಿ ತಿಳಿಯೋಣ.

ಪರಮ ಏಕಾದಶಿ ಉಪವಾಸದ ಕಥೆ!

ಕಂಪಿಲ್ಯ ನಗರದಲ್ಲಿ ಸುಮೇಧ ಎಂಬ ಅತ್ಯಂತ ಧರ್ಮನಿಷ್ಠ ಬ್ರಾಹ್ಮಣ ವಾಸಿಸುತ್ತಿದ್ದ. ಅವನ ಹೆಂಡತಿ ತುಂಬಾ ಧರ್ಮನಿಷ್ಠೆ ಮತ್ತು ಪರಿಶುದ್ಧಳು. ಹಿಂದಿನ ಜನ್ಮದ ಪಾಪದ ಕಾರಣದಿಂದ ದಂಪತಿಗಳು ಅತ್ಯಂತ ಬಡತನದ ಜೀವನವನ್ನು ನಡೆಸುತ್ತಿದ್ದರು.

ಭಿಕ್ಷೆ ಬೇಡಿದರೂ ಬ್ರಾಹ್ಮಣನಿಗೆ ಭಿಕ್ಷೆ ಸಿಗಲಿಲ್ಲ. ಆ ಬ್ರಾಹ್ಮಣನ ಹೆಂಡತಿಯು ಅತಿಥಿಗೆ ಅನ್ನವನ್ನು ನೀಡಿದ ನಂತರ ಹಸಿದಿದ್ದರೂ ತನ್ನ ಪತಿಯ ಸೇವೆ ಸಲ್ಲಿಸುತ್ತಿದ್ದಳು. ಮತ್ತು ತನ್ನ ಪತಿಯಿಂದ ಆಕೆ ಏನನ್ನೂ ಬಯಸಿಲ್ಲ. ಹೀಗಾಗಿ ಗಂಡ ಹೆಂಡತಿ ಇಬ್ಬರೂ ತುಂಬಾ ಕಡು ಬಡತನದ ಜೀವನ ನಡೆಸುತ್ತಿದ್ದರು.

ಒಂದು ದಿನ ಒಬ್ಬ ಬ್ರಾಹ್ಮಣ ತನ್ನ ಹೆಂಡತಿಗೆ ಹೇಳಿದನು. ನಾನು ಶ್ರೀಮಂತರಿಂದ ಹಣ ಕೇಳಿದಾಗ ಅವರು ನನ್ನನ್ನು ನಿರಾಕರಿಸುತ್ತಾರೆ. ಹಣವಿಲ್ಲದೆ ಸಂಸಾರ ನಡೆಸುವುದಿಲ್ಲ. ನೀನು ಒಪ್ಪಿದರೆ ನಾನು ವಿದೇಶಕ್ಕೆ ಹೋಗಿ ಏನಾದರೂ ಕೆಲಸ ಮಾಡುತ್ತೇನೆ ಎಂದು ಪತ್ನಿಯ ಬಳಿ ಹೇಳುತ್ತಾನೆ. ಬ್ರಾಹ್ಮಣನ ಹೆಂಡತಿ ನಮ್ರತೆಯಿಂದ ಹೇಳಿದಳು. ಸ್ವಾಮೀ! ನಾನು ನಿಮ್ಮ ದಾಸಿ ಗಂಡ ಒಳ್ಳೆಯದೋ ಕೆಟ್ಟದ್ದೋ ಏನೇ ಹೇಳಿದರೂ ಹೆಂಡತಿಯೂ ಅದನ್ನೇ ಮಾಡಬೇಕು. ಮನುಷ್ಯನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಫಲವನ್ನು ಈ ಜನ್ಮದಲ್ಲಿ ಪಡೆಯುತ್ತಾನೆ.

ಸುಮೇರು ಪರ್ವತದಲ್ಲಿ ವಾಸಿಸುತ್ತಿದ್ದರೂ ಅದೃಷ್ಟವಿಲ್ಲದೆ ಮನುಷ್ಯನಿಗೆ ಚಿನ್ನ ಸಿಗುವುದಿಲ್ಲ. ಯಾರು ಹಿಂದಿನ ಜನ್ಮದಲ್ಲಿ ಜ್ಞಾನ ಮತ್ತು ಭೂಮಿಯನ್ನು ದಾನ ಮಾಡುತ್ತಾರೆಯೋ ಅವರು ಮುಂದಿನ ಜನ್ಮದಲ್ಲಿ ಜ್ಞಾನ ಮತ್ತು ಭೂಮಿಯನ್ನು ಪಡೆಯುತ್ತಾರೆ. ವಿಧಿಯು ಬರೆದದ್ದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಗಂಡನ ಬಳಿ ಹೇಳುತ್ತಾಳೆ. ಹೀಗಾಗಿ ನೀವು ಎಲ್ಲಿಗೂ ಹೋಗಬೇಡಿ ಇಲ್ಲಿಯೇ ಇರಿ ಎಂದು ಹೇಳುತ್ತಾಳೆ.

ಮಹಿಳೆಯ ಸಲಹೆಯಂತೆ ಬ್ರಾಹ್ಮಣನು ವಿದೇಶಕ್ಕೆ ಹೋಗಲಿಲ್ಲ. ಹೀಗೆಯೇ ಸಮಯ ಸಾಗುತ್ತಿತ್ತು. ಒಮ್ಮೆ ಕೌಂಡಿನ್ಯ ಋಷಿ ಅಲ್ಲಿಗೆ ಬಂದ. ಋಷಿಯನ್ನು ನೋಡಿದ ಬ್ರಾಹ್ಮಣ ಸುಮೇಧ ಮತ್ತು ಅವನ ಹೆಂಡತಿ ಅವನಿಗೆ ನಮಸ್ಕರಿಸಿ ಹೇಳಿದರು. ಇಂದು ನಾವು ಧನ್ಯರು. ನಿನ್ನ ದರ್ಶನದಿಂದ ನಮ್ಮ ಜೀವನ ಪಾವನವಾಯ್ತು ಅಂತ ಹೇಳುತ್ತಾರೆ. ಗಂಡ-ಹೆಂಡತಿ ಸೇರಿ ಋಷಿಯನ್ನು ಚೆನ್ನಾಗಿ ಉಪಚರಿಸುತ್ತಾರೆ.

ಇದಾದ ಬಳಿಕ ಬ್ರಾಹ್ಮಣನು ಋಷಿಯ ಬಳಿ ದಯವಿಟ್ಟು ಈ ಬಡತನವನ್ನು ನಾಶಮಾಡುವ ವಿಧಾನವನ್ನು ತಿಳಿಸಿಕೊಡಿ ಅಂತ ಕೇಳಿಕೊಳ್ಳುತ್ತಾನೆ. ನನ್ನ ಗಂಡ ವಿದೇಶಕ್ಕೆ ಹೋಗಿ ಹಣ ಸಂಪಾದಿಸುವುದನ್ನು ತಡೆದಿದ್ದೇನೆ. ನಮ್ಮ ಅದೃಷ್ಟಕ್ಕೆ ನೀನು ಇಲ್ಲಿಗೆ ಬಂದಿದ್ದೀರಿ. ಈಗ ನಮ್ಮ ಬಡತನವು ಶೀಘ್ರದಲ್ಲೇ ನಾಶವಾಗುತ್ತದೆ ಎಂದು ನಮಗೆ ಸಂಪೂರ್ಣ ನಂಬಿಕೆ ಇದೆ. ಆದ್ದರಿಂದ ನೀವು ನಮ್ಮ ಬಡತನವನ್ನು ನಾಶಮಾಡಲು ಏನಾದರೂ ಪರಿಹಾರವನ್ನು ಹೇಳಿ ಎಂದು ಕೇಳಿಕೊಳ್ಳುತ್ತಾರೆ.

ಬ್ರಾಹ್ಮಣನ ಮಾತು ಕೇಳಿ ಕೌಂಡಿನ್ಯ ಋಷಿ ಹೇಳಿದನು. ಓ ಬ್ರಾಹ್ಮಣ ಮಾಳ ಮಾಸದ ಕೃಷ್ಣ ಪಕ್ಷದ ಪರಮ ಏಕಾದಶಿಯಂದು ಉಪವಾಸ ಮಾಡುವುದರಿಂದ ಎಲ್ಲಾ ಪಾಪಗಳು, ದುಃಖಗಳು ಮತ್ತು ದಾರಿದ್ರ್ಯಗಳು ನಾಶವಾಗುತ್ತವೆ. ಈ ವ್ರತವನ್ನು ಆಚರಿಸುವ ವ್ಯಕ್ತಿ ಶ್ರೀಮಂತನಾಗುತ್ತಾನೆ. ಈ ಉಪವಾಸದಲ್ಲಿ ನೃತ್ಯ, ಹಾಡುಗಾರಿಕೆ ಇತ್ಯಾದಿಗಳ ಜೊತೆಗೆ ರಾತ್ರಿ ಜಾಗರಣೆಯನ್ನು ಮಾಡಬೇಕು ಎಂದು ಹೇಳುತ್ತಾನೆ.

ಈ ಏಕಾದಶಿಯು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತದೆ ಮತ್ತು ಪಾಪಗಳನ್ನು ನಾಶಪಡಿಸುತ್ತದೆ. ಶ್ರೀಮಂತನಾದ ಕುಬೇರನೂ ಈ ಏಕಾದಶಿ ವ್ರತವನ್ನು ಆಚರಿಸಿದ್ದನು. ಇದರಿಂದ ಸಂತಸಗೊಂಡು ಭೋಲೇನಾಥನು ಅವನಿಗೆ ಧನಾಧ್ಯಕ್ಷ ಸ್ಥಾನವನ್ನು ನೀಡಿದನು. ಈ ವ್ರತದ ಪ್ರಭಾವದಿಂದ ಸತ್ಯವಂತ ರಾಜ ಹರಿಶ್ಚಂದ್ರನಿಗೆ ಪುತ್ರ, ಪತ್ನಿ, ರಾಜ್ಯ ಲಭಿಸಿತು ಎಂದು ಹೇಳುತ್ತಾರೆ ಋಷಿ ಮುನಿಗಳು.

ಇದಾದ ಬಳಿಕ ಋಷಿ ಕೌಂಡಿನ್ಯನು ಏಕಾದಶಿಯಂದು ಉಪವಾಸದ ಎಲ್ಲಾ ವಿಧಿಗಳನ್ನು ಬ್ರಾಹ್ಮಣನಿಗೆ ಹೇಳಿ ಕೊಡುತ್ತಾರೆ. ಆಗ ಋಷಿ ಹೇಳುತ್ತಾರೆ. ಓ ಬ್ರಾಹ್ಮಣ ಪಂಚರಾತ್ರಿಯ ವ್ರತ ಇದಕ್ಕಿಂತಲೂ ಉತ್ತಮವಾಗಿದೆ. ಪರಮ ಏಕಾದಶಿಯ ದಿನದಂದು ಮುಂಜಾನೆ ದೈನಂದಿನ ಕೆಲಸ ಮುಗಿದ ನಂತರ ನಿಯಮಾನುಸಾರ ಪಂಚರಾತ್ರಿ ವ್ರತವನ್ನು ಪ್ರಾರಂಭಿಸಬೇಕು.

ಐದು ದಿನಗಳ ಕಾಲ ನೀರಿಲ್ಲದೆ ಉಪವಾಸ ಮಾಡುವ ಜನರು ತಮ್ಮ ಹೆತ್ತವರು ಮತ್ತು ಹೆಂಡತಿಯೊಂದಿಗೆ ಸ್ವರ್ಗಕ್ಕೆ ಹೋಗುತ್ತಾರೆ. ಐದು ದಿನಗಳ ಕಾಲ ಸಂಜೆ ಆಹಾರ ಸೇವಿಸುವ ಜನರು ಸ್ವರ್ಗಕ್ಕೆ ಹೋಗುತ್ತಾರೆ. ಯಾರು ಬ್ರಾಹ್ಮಣರಿಗೆ ಐದು ದಿನ ಊಟ ಹಾಕುತ್ತಾರೋ ಅವರು ಇಡೀ ಜಗತ್ತಿಗೆ ಅನ್ನ ನೀಡಿದ ಫಲವನ್ನು ಪಡೆಯುತ್ತಾರೆ.

ಇನ್ನೂ ಈ ವ್ರತದಲ್ಲಿ ಕುದುರೆಯನ್ನು ದಾನ ಮಾಡುವವನು ಮೂರು ಲೋಕಗಳಿಗೂ ದಾನ ಮಾಡಿದ ಫಲವನ್ನು ಪಡೆಯುತ್ತಾನೆ. ಯಾರು ತುಪ್ಪದ ಪಾತ್ರೆಯನ್ನು ದಾನ ಮಾಡುತ್ತಾರೆಯೋ ಅವರು ಸೂರ್ಯಲೋಕಕ್ಕೆ ಹೋಗುತ್ತಾರೆ. ಐದು ದಿನಗಳ ಕಾಲ ಬ್ರಹ್ಮಚಾರಿಯಾಗಿರುವ ಪುರುಷರು ದೇವತೆಗಳೊಂದಿಗೆ ಸ್ವರ್ಗಕ್ಕೆ ಹೋಗುತ್ತಾರೆ. ನೀವು ನಿನ್ನ ಪತಿಯೊಂದಿಗೆ ಈ ಉಪವಾಸವನ್ನು ಆಚರಿಸು. ಇದು ಖಂಡಿತವಾಗಿಯೂ ನಿನ್ನನೂ ಪರಿಪೂರ್ಣತೆಗೆ ಮತ್ತು ಅಂತಿಮವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತದೆ ಎಂದು ಋಷಿ ಹೇಳುತ್ತಾರೆ.

ಋಷಿ ಕೌಂಡಿನ್ಯನ ವಾಗ್ದಾನದಂತೆ ಬ್ರಾಹ್ಮಣ ಮತ್ತು ಅವನ ಹೆಂಡತಿ ಪರಮ ಏಕಾದಶಿಯಂದು ಐದು ದಿನಗಳ ಕಾಲ ಉಪವಾಸ ಮಾಡಿದರು. ಉಪವಾಸವನ್ನು ಮುಗಿಸಿದ ನಂತರ ಬ್ರಾಹ್ಮಣನ ಹೆಂಡತಿ ತಮ್ಮ ಮನೆಗೆ ಒಬ್ಬ ರಾಜಕುಮಾರ ಬರುವುದನ್ನು ನೋಡಿದಳು.

ರಾಜಕುಮಾರನು ಅವರಿಗೆ ವಾಸಿಸಲು ಎಲ್ಲಾ ವಸ್ತುಗಳಿಂದ ತುಂಬಿದ ಪರಿಪೂರ್ಣ ಮನೆಯನ್ನು ಕೊಟ್ಟನು. ಅದರ ನಂತರ ರಾಜಕುಮಾರ ಜೀವನೋಪಾಯಕ್ಕಾಗಿ ಒಂದು ಹಳ್ಳಿಯನ್ನು ಕೊಟ್ಟನು. ಹೀಗೆ ಬ್ರಾಹ್ಮಣ ಮತ್ತು ಅವನ ಹೆಂಡತಿಯ ಬಡತನವು ದೂರವಾಯಿತು. ಮತ್ತು ಭೂಮಿಯ ಮೇಲೆ ಅನೇಕ ವರ್ಷಗಳ ಸುಖವನ್ನು ಅನುಭವಿಸಿದ ನಂತರ ಅವರು ಶ್ರೀ ವಿಷ್ಣುವಿನ ಪರಮ ನಿವಾಸಕ್ಕೆ ತೆರಳಿದರು.

English summary

Parama Ekadashi 2023: Vrat Katha for Prosperity in Kannada.

Parama Ekadashi 2023: Vrat Katha for Prosperity. Read more.
Story first published: Saturday, August 5, 2023, 18:00 [IST]
X
Desktop Bottom Promotion