Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪರಮ ಏಕಾದಶಿ 2023 : ಶುಭ ಮುಹೂರ್ತ, ಪೂಜಾ ವಿಧಿ, ಮಹತ್ವವೇನು?
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಏಕಾದಶಿಯನ್ನು ಪರಮ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವಿನ ಆರಾಧನೆಯನ್ನು ಮಾಡೋದ್ರಿಂದ ನೀವು ಅನೇಕ ಶುಭ ಫಲಗಳನ್ನು ಪಡೆದುಕೊಳ್ಳಬಹುದು. ಈ ದಿನವನ್ನು ಕಮಲ ಅಥವಾ ಪುರುಷೋತ್ತಮಿ ಏಕಾದಶಿ ಅಂತಲೂ ಕರೆಯುತ್ತಾರೆ.
ಪರಮ ಏಕಾದಶಿಯಂದು ಭಗವಾನ್ ವಿಷ್ಣುವಿನ ಆರಾಧನೆ ಮಾಡೋದ್ರಿಂದ ನಮ್ಮ ದುಃಖ ಹಾಗೂ ಬಡತನಗಳು ನಿಗ್ರಹವಾಗುತ್ತೆ ಅಂತ ಹೇಳಲಾಗುತ್ತದೆ. ಅಷ್ಟಕ್ಕು ಪರಮ ಏಕಾದಶಿ ಯಾವಾಗ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಪರಮ ಏಕಾದಶಿ ದಿನಾಂಕ :
ಶ್ರಾವಣ ಮಾಸದ ಎರಡನೇ ಏಕಾದಶಿಯಂದು ಪರಮ ಏಕಾದಶಿಯ ಉಪವಾಸವನ್ನು ಆಚರಣೆ ಮಾಡಲಾಗುತ್ತದೆ. ಆಗಸ್ಟ್ 12 ರ ಶನಿವಾರದಂದು ಈ ಶುಭ ದಿನವನ್ನು ಆಚರಿಸಲಾಗುತ್ತದೆ. ಪರಮ ಏಕಾದಶಿಯಂದು ಐದು ದಿನ ಉಪವಾಸ ಮಾಡಬೇಕೆಂಬ ನಿಯಮವಿದೆ. ಶ್ರಾವಣ ಮಾಸದ ಏಕಾದಶಿಯ ಪಂಚರಾತ್ರಿಯು ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಈ ಏಕಾದಶಿಯು ಪರಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ, ಕಾರಣ ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದ್ರೆ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದಂತೆ.
ಪರಮ ಏಕಾದಶಿ ಮುಹೂರ್ತ :
ಪಂಚಾಂಗದ ಪ್ರಕಾರ ಅಧಿಕಮಾಸದ ಕೃಷ್ಣ ಪಕ್ಷದ ಪರಮ ಏಕಾದಶಿಯು ಆಗಸ್ಟ್ 11 ಬೆಳಿಗ್ಗೆ 05.06 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಆಗಸ್ಟ್ 12 ರ ಬೆಳಿಗ್ಗೆ 06.31 ಕ್ಕೆ ಕೊನೆಗೊಳ್ಳುತ್ತದೆ.
ಪೂಜಾ ಸಮಯ - ಬೆಳಗ್ಗೆ 07.28 ರಿಂದ ಬೆಳಗ್ಗೆ 09.07ರವರಗೆ
ಪರಮ ಏಕಾದಶಿಯ ವ್ರತ ಪಾರಾಯಣ ಸಮಯ :
ಶ್ರಾವಣ ಪರಮ ಏಕಾದಶಿಯ ಉಪವಾಸವನ್ನು ಆಗಸ್ಟ್ 13 ರಂದು ಬೆಳಿಗ್ಗೆ 05.49 ರಿಂದ ಬೆಳಗ್ಗೆ 08.19 ರವರೆಗೆ ಆಚರಿಸಲಾಗುತ್ತದೆ.
ಪರಮ ಏಕಾದಶಿ ಮಹತ್ವವೇನು?
ದಂತಕಥೆಗಳ ಪ್ರಕಾರ ಶಂಕರನು ಪರಮ ಏಕಾದಶಿ ವ್ರತವನ್ನು ಆಚರಿಸುವ ಮೂಲಕ ಕುಬೇರನನ್ನು ಸಂಪತ್ತಿನ ಮುಖ್ಯಸ್ಥನನ್ನಾಗಿ ಮಾಡಿದನು. ಈ ವ್ರತದ ಪ್ರಭಾವದಿಂದ ಸತ್ಯವಂತ ರಾಜ ಹರಿಶ್ಚಂದ್ರನಿಗೆ ಪುತ್ರ, ಪತ್ನಿ, ರಾಜ್ಯ ಪುನಃ ಲಭಿಸಿತು. ಕೌಂಡಿನ್ಯ ಋಷಿಯ ವಾಗ್ದಾನದಂತೆ ಬ್ರಾಹ್ಮಣ ಮತ್ತು ಅವನ ಪತ್ನಿ ಪರಮ ಏಕಾದಶಿಯಂದು ಐದು ದಿನಗಳ ಕಾಲ ಉಪವಾಸ ಮಾಡಿದರು. ಈ ಏಕಾದಶಿಯಂದು ಐದು ದಿನಗಳ ಕಾಲ ಸ್ವರ್ಣದಾನ, ವಿದ್ಯಾದಾನ, ಅನ್ನದಾನ, ಭೂದಾನ, ಗೋದಾನವನ್ನು ಮಾಡಬೇಕು. ಇದರಿಂದ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಪರಮ ಏಕಾದಶಿ ಉಪವಾಸ ಮತ್ತು ಪೂಜಾ ವಿಧಾನವೇನು?
* ಪರಮ ಏಕಾದಶಿಯ ದಿನದಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.
* ಇದರ ನಂತರ ನಿಮ್ಮ ಪೂರ್ವಜರ ಶ್ರಾದ್ಧವನ್ನು ಮಾಡಿ
* ನಂತರ ವಿಷ್ಣುವಿನ ಆರಾಧನೆ ಮಾಡಿ
* ಬ್ರಾಹ್ಮಣರಿಗೆ ಫಲ ಆಹಾರವನ್ನು ಅರ್ಪಿಸಿ ಮತ್ತು ಅವರಿಗೆ ದಕ್ಷಿಣೆಯನ್ನು ನೀಡಿ
* ಈ ದಿನ ಪರಮ ಏಕಾದಶಿ ವ್ರತ ಕಥಾವನ್ನು ಕೇಳಿ
* ಪಾರಣ ಮುಹೂರ್ತದಲ್ಲಿ ದ್ವಾದಶಿಯ ದಿನದಂದು ಏಕಾದಶಿ ಉಪವಾಸವನ್ನು ಮಾಡಿ
ಪರಮ ಏಕಾದಶಿಯ ದಿನ ನೀವು ಸಂಪೂರ್ಣವಾಗಿ ದೇವರ ಧ್ಯಾನದಲ್ಲಿ ತಲ್ಲೀನರಾಗಿದ್ದರೆ ನೀವು ಸಲ್ಲಿಸಿದ ಪೂಜೆ ಸಂಪೂರ್ನ ಫಲವನ್ನು ಪಡೆದುಕೊಳ್ಳಬಹುದು.



Click it and Unblock the Notifications
