Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಅಕ್ಟೋಬರ್ 25ಕ್ಕೆ ಪಾಪಾಂಕುಶ ಏಕಾದಶಿ: ಪೂಜಾ ಮುಹೂರ್ತ ಯಾವಾಗ, ಈ ವ್ರತ ಕತೆ ಓದಿದರೆ ಒಳ್ಳೆಯದು
ಏಕಾದಶಿ ಶ್ರೀ ವಿಷ್ಣುವಿನ ಆರಾಧನೆಗೆ ತುಂಬಾ ಶ್ರೇಷ್ಠ ದಿನ. ಈ ದಿನ ಶ್ರೀ ವಿಷ್ಣುವನ್ನು ಉಪವಾಸವಿದ್ದು ಭಕ್ತಿಯಿಂದ ಆರಾಧಿಸಿದರೆ ನಮ್ಮ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು. ಅಕ್ಟೋಬರ್ 25ಕ್ಕೆ ಪಾಪಾಂಕುಶ ಏಕಾದಶಿ. ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ.

ಪಾಪಾಂಕುಶ ಏಕಾದಶಿ ಪೂಜಾ ಮುಹೂರ್ತ
ದಿನಾಂಕ: ಅಕ್ಟೋಬರ್ 25
ಏಕಾದಶಿ ತಿಥಿ ಅಕ್ಟೋಬರ್ 24 ಮಧ್ಯಾಹ್ನ 03:14ಕ್ಕೆ ಆರಂಭವಾಗಿದೆ
ಏಕಾದಶಿ ತಿಥಿ ಅಕ್ಟೋಬರ್ 25 ಮಧ್ಯಾಹ್ನ 12:32ಕ್ಕೆ ಮುಕ್ತಾಯವಾಗುತ್ತದೆ
ಪಾರಣ ಏಕಾದಶಿ: ಅಕ್ಟೋಬರ್ 26 ಬೆಳಗ್ಗೆ 06:28ರಿಂದ 08:43ರವರೆಗೆ
ಈ ದಿನ ಏನು ಮಾಡಬೇಕು?
* ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವನ್ನು ಆರಾಧಿಸಬೇಕು.
* ಈ ದಿನ ಪಾಪಾಂಕುಶ ಏಕಾದಶಿ ಕತೆ ಓದಿದರೆ ಅಥವಾ ಕೇಳಿದರೆ ಒಳ್ಳೆಯದು.
* ಸಂಜೆ ವಿಷ್ಣು ಸಹಸ್ರನಾಮ ಪಠಿಸಿ
* ಆರತಿ ಮಾಡಿದ ಸಾತ್ವಿಕ ಆಹಾರ ಸೇವಿಸಿ
ಈ ದಿನ ಏನು ಮಾಡಬಾರದು?
* ಈ ದಿನ ಕೋಪಗೊಳ್ಳಬಾರದು
* ಕೆಟ್ಟ ಕೆಲಸ ಮಾಡಬಾರದು
* ಮಾಂಸಾಹಾರ, ಮದ್ಯ ಸೇವನೆ ಮಾಡಬಾರದು
ಆಶ್ವಿನ್ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪಾಪಾಂಕುಶ ಏಕಾದಶಿ ಎಂದು ಕರೆಯಲಾಗುತ್ತದೆ. ಮಹಾಭಾರತದಲ್ಲಿ ಈ ಪಾಪಾಂಕುಶ ಏಕಾದಶಿಯ ಮಹತ್ವದ ಬಗ್ಗೆ ಉಲ್ಲೇಖವಿದೆ. ಯುಧಿಷ್ಠರ ಶ್ರೀಕೃಷ್ಣನ ಬಳಿ ಪಾಪಾಂಕುಶ ಏಕಾದಶಿಯ ಮಹತ್ವದ ಬಗ್ಗೆ ಕೇಳುತ್ತಾನೆ, ಆಗ ಶ್ರೀ ಕೃಷ್ಣ ಪರಮಾತ್ಮನು ಪಾಪಾಂಕುಶ ಏಕಾದಶಿಯ ಮಹತ್ವದ ಕುರಿತು ಈ ಕತೆಯನ್ನು ಹೇಳುತ್ತಾನೆ....
ಪಾಪಾಂಕುಶ ಏಕಾದಶಿಯ ಕತೆ
ವಿಂಧ್ಯ ಪರ್ವತದ ಮೇಲೆ ಕ್ರೋಧನ ಎಂಬ ಬೇಟೆಗಾರನಿದ್ದ. ಅವನು ತುಂಬಾ ಕ್ರೂರಿ, ಅವನು ತುಂಬಾ ಪಾಪಗಳನ್ನು ಮಾಡುತ್ತಿದ್ದ. ಅವನ ಪಾಪದ ಕೊಡ ತುಂಬಿದ ಮೇಲೆ ಯಮಧೂತರು ಆತನ ಬಳಿ ಬರುತ್ತಾರೆ. ಯಮಧೂತರು ನಾಳೆ ನಿನ್ನ ಪ್ರಾಣ ಹೋಗಲಿದೆ ಎಂದು ಹೇಳಿ ಹೋಗುತ್ತಾರೆ. ಇದನ್ನು ಕೇಳಿದ ಆ ಕ್ರೂರಿಗೂ ಭಯ ಉಂಟಾಗುವುದು. ಆ ಕೊನೆಯ ಕ್ಷಣದಲ್ಲಿ ಆತನಿಗೆ ತಾನು ಮಾಡಿದ ಪಾಪದ ಅರಿವು ಉಂಟಾಗುತ್ತದೆ. ಆವಾಗ ಆತ ಪಾಪದಿಮದ ಮುಕ್ತನಾಗಲು ಬಯಸುತ್ತಾನೆ. ಆವಾಗ ಅಲ್ಲಿಗೆ ಬರುವ ಋಷಿ ಅವನಿಗೆ ಪಾಪಾಂಕುಶ ಏಕಾದಶಿ ಕುರಿತು ಮಹತ್ವದ ಕುರಿತು ತಿಳಿಸುತ್ತಾರೆ. ಅದರಂತೆ ಕ್ರೋಧನ ಪಾಪಾಂಕುಶ ಏಕಾದಶಿ ವ್ರತ ಮಾಡುತ್ತಾನೆ ಇದರಿಂದ ಆತನ ಪಾಪಗಳು ದೂರಾಗುವುದು. ಯಮಧೂತರು ಬರುತ್ತಾರೆ, ನೋಡಿದರೆ ಆತ ಪಾಪಮುಕ್ತನಾಗಿರುತ್ತಾನೆ, ಆತನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ.
ಪಾಪಾಂಕುಶ ಏಕಾದಶಿಯಂದು ಈ ಮಂತ್ರ ಪಠಿಸಿ
ಶಾಂತಾಕಾರಂ ಭುಜಂಗಶಯನಂ ಪದ್ಮನಾಭಂ ಸುರೇಶಂ|
ವಿಶ್ವಧರಂ ಗಗನ ಸದೃಶಂ ಮೇಘವರ್ಣ ಶುಭಾಂಗಂ|
ಲಕ್ಷ್ಮೀಕಾಂತ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣು ಭವಭಯಹರಂ ಸರ್ವ ಲೋಕೈಕನಾಥಂ||
ಯಂ ಬ್ರಹ್ಮ ವರುಣೈಂದ್ರು ರುದ್ರಮೃತಃ ಸ್ತುನ್ವಾನಿ ದಿವ್ಯೈ ಸ್ತವೈವೇದೇಃ|
ಸಾಂಗ ಪದಕ್ರಮೋಪನಿಷದೈ ಗಾರ್ಯಂತಿ ಯಂ ಸಾಮಗಾಃ||
ಧ್ಯಾನಾವಸ್ಥಿತ ತದ್ಗತೇನ್ ಮನಸಾ ಪಶ್ಯತಿ ಯಂ ಯೋಗಿನೋ|



Click it and Unblock the Notifications
