Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪುರಾಣ: ಮಕ್ಕಳನ್ನು ಪಡೆದರೂ ಕನ್ಯೆರಾಗಿಯೇ ಉಳಿದಿರುವ ಪಂಚಕನ್ಯೆಯರು!
ಶಕ್ತಿ ಎಂದರೆ ಮಹಿಳೆ. ನಮ್ಮಲ್ಲಿ ಪುರುಷರಿಗೆ ಎಷ್ಟು ಮಹತ್ವ ನೀಡಲಾಗುತ್ತದೆಯೋ ಅಷ್ಟೇ ಮಹತ್ವವನ್ನು ಮಹಿಳೆಯರಿಗೂ ನೀಡಲಾಗಿದೆ. ಮಹಾಭಾರತ ಹಾಗೂ ರಾಮಾಯಣದಲ್ಲಿ ಮಹಿಳೆಗಾಗಿ ಕದನ ನಡೆದಿದ್ದೂ ಕೂಡ ನಮಗೆ ಗೊತ್ತಿದೆ. ಅಂತಹ ಮಹಾನ್ ಮುಹಿಳೆಯರ ಬಗ್ಗೆ ನಾವಿಂದು ಹೇಳೋದಕ್ಕೆ ಹೊರಟಿದ್ದೇವೆ.
ಆದರೆ ಆಶ್ಚರ್ಯ ಅಂದ್ರೆ ಆ ಐದು ಜನ ಮಹಿಳೆಯರು ಮದುವೆಯಾಗಿದ್ದರೂ ಕೂಡ ಇನ್ನೂ ಅವರು ಕನ್ಯೆಯರಾಗಿಯೇ ಉಳಿದಿದ್ದಾರೆ. ಅಷ್ಟಕ್ಕು ಆ ಮಹಿಳೆಯರು ಯಾರು? ಮದುವೆಯಾಗಿ ಮಕ್ಕಳಿರೋ ಮಹಿಳೆಯರು ಕನ್ಯೆಯರಾಗಿ ಉಳಿಯೋದಕ್ಕೆ ಹೇಗೆ ಸಾಧ್ಯ ಅನ್ನೋದನ್ನು ತಿಳಿಯೋಣ.

ದ್ರೌಪತಿ
ದ್ರೌಪತಿ ಬಗ್ಗೆ ನಮಗೆಲ್ಲಾ ಚೆನ್ನಾಗಿ ಗೊತ್ತಿದೆ. ಪಂಚ ಪಾಂಡವರ ಪತ್ನಿ ಈಕೆ. ಹಾಗೂ ಹಸ್ತಿನಾಪುರದ ರಾಣಿಯಾಗಿ ಮೆರೆದಿದ್ದವಳು. ಇವಳನ್ನು ಮಹಾಭಾರತ ಕಾಲದಲ್ಲಿ ಇದ್ದ ಏಕೈಕ ಸೌಂದರ್ಯವತಿ ಅಂತಾನೇ ಕರೆಯಲಾಗುತ್ತಿತ್ತು. ದ್ರೌಪತಿಯು ಅಗ್ನಿಯಿಂದ ಹುಟ್ಟನ್ನು ಪಡೆದುಕೊಂಡಿದ್ದು, ಈ ದ್ರೌಪತಿಯಿಂದಲೇ ಕೌರವ ಹಾಗೂ ದ್ರೋಣರ ಅಂತ್ಯ ಆಗುತ್ತೆ ಅಂತ ಮೊದಲೇ ಭವಿಷ್ಯ ನುಡಿಯಲಾಗಿತ್ತಂತೆ. ಒಂದು ಸಾರಿ ದ್ರೌಪತಿ ಸ್ವಯಂವರ ನಡೆಯುತ್ತಿರಬೇಕಾದರೆ ಬ್ರಾಹಣನ ವೇಷದಲ್ಲಿ ಅಲ್ಲಿಗೆ ಹೋಗಿದ್ದ ಅರ್ಜುನನು ಸ್ವಯಂವರದಲ್ಲಿ ಗೆದ್ದು ದ್ರೌಪತಿಯನ್ನು ಪಡೆದುಕೊಳ್ಳುತ್ತಾನೆ.
ಆನಂತರ ಆಕೆ ಐದು ಜನ ಪಾಂಡವರ ಪತ್ನಿಯಾದ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಇನ್ನೂ ಐದು ಜನ ಗಂಡಂದಿರಿಂದಲೂ ಆಕೆ ತಲಾ ಐದು ಗಂಡು ಮಕ್ಕಳನ್ನು ಪಡೆಯುತ್ತಾಳೆ. ಇನ್ನೂ ಪ್ರತಿವರ್ಷವೂ ಆಕೆ ತನ್ನ ಕನ್ಯತ್ವವನ್ನು ಮರಳಿ ಪಡೆಯುತ್ತಾಳಂತೆ. ಅವಳನ್ನು ಗ್ರಾಮ ದೇವತೆಯಾಗಿ ಪೂಜಿಸಲಾಗುತ್ತದೆ ಮತ್ತು ಕೆಲವೊಮ್ಮೆ ಉಗ್ರ ಕಾಳಿಯ ಅವತಾರವನ್ನು ತಾಳುತ್ತಾಳೆ ಅಂತಲೂ ಹೇಳಲಾಗುತ್ತದೆ. ಬೆಂಗಳೂರಿನ ಪ್ರಾಚೀನ ಉತ್ಸವ ಕರಗದಲ್ಲಿ ದ್ರೌಪದಿಯನ್ನು ಆದಿಶಕ್ತಿ ಮತ್ತು ಪಾರ್ವತಿಯ ಅವತಾರವಾಗಿ ಪೂಜಿಸಲಾಗುತ್ತದೆ.
ಕುಂತಿ
ಕುಂತಿಯು ಪಾಂಡು ರಾಜನ ಪತ್ನಿ. ಹಾಗೂ ಯುಧಿಷ್ಠಿರ, ಭೀಮಾ ಹಾಗೂ ಅರ್ಜುನನ ತಾಯಿ. ಕುಂತಿಯು ಯಾದವ ರಾಜ ಶೂರಸೇನನ ಮಗಳು. ಆದರೆ ಮಕ್ಕಳಿಲ್ಲದ ಕಾರಣ ಕುಂತಿಭೋಜನು ಆಕೆಯನ್ನು ದತ್ತು ಪಡೆದಿದ್ದನು. ಕುಂತಿಯು ದೂರ್ವಾಸ ಮುನಿಯಿಂದ ವರವನ್ನು ಪಡೆದಿದ್ದಳು. ಅದೇನೆಂದರೆ ದೂರ್ವಾಸ ಮುನಿಯು ಆಕೆಗೆ ಒಂದು ಮಂತ್ರವನ್ನು ಹೇಳಿಕೊಟ್ಟಿದ್ದ, ಈ ಮಂತ್ರವನ್ನು ಪಠಿಸಿದರೆ ಮಕ್ಕಳಾಗುತ್ತೆ ಅಂತಾನೂ ಹೇಳಿದ್ದ. ಆಗ ಕುಂತಿ ಚಿಕ್ಕವಳಾಗಿದ್ದ ಕಾರಣ ಆಕೆ ಆ ಮಂತ್ರವನ್ನು ಪರೀಕ್ಷಿಸಿಲು ಮುಂದಾಗುತ್ತಾಳೆ.
ಸೂರ್ಯಾ ದೇವನನ್ನು ನೆನೆದು ಕುಂತಿ ಮಂತ್ರವನ್ನು ಹೇಳುತ್ತಾಳೆ. ಆಗ ಹುಟ್ಟಿದವನೇ ಕರ್ಣ. ಆದರೆ ಭಯಪಟ್ಟು ಕುಂತಿ ಆ ಮಗುವನ್ನು ನೀರಿನಲ್ಲಿ ಬಿಡುತ್ತಾಳೆ. ಇದಾದ ಬಳಿಕ ಆಕೆ ಪಾಂಡು ರಾಜನನ್ನು ಮದುವೆಯಾದ ಮೇಲೂ ಆಕೆಗೆ ಅನೇಕ ವರ್ಷಗಳ ಕಾಲ ಮಕ್ಕಳಾಗೋದಿಲ್ಲ. ಮತ್ತೆ ಪುನಃ ಮಕ್ಕಳು ಪಡೆಯೋದಕ್ಕೆ ಆಕೆ ದೂರ್ವಾಸ ಮುನಿ ಹೇಳಿಕೊಟ್ಟ ಮಂತ್ರ ಪಠಿಸುತ್ತಾಳೆ. ಆಗ ಹುಟ್ಟಿದವರೇ ಯುಧಿಷ್ಠಿರ, ಭೀಮಾ ಹಾಗೂ ಅರ್ಜುನರು. ಮೂರು ಮಕ್ಕಳು ಹುಟ್ಟಿದ ನಂತರವು ಕುಂತಿಯ ಕನ್ಯತ್ವ ಪವಿತ್ರ ಅಂತ ಹೇಳಲಾಗುತ್ತದೆ.
ಇನ್ನೂ ಕರ್ಣ ದೊಡ್ಡವನಾದ ಮೇಲೆ ಕೌರವರ ಸೈನ್ಯ ಸೇರಿಕೊಳ್ಳುತ್ತಾನೆ. ಹಾಗೂ ಪಾಂಡವರು ಹಾಗೂ ಕೌರವ ಯುದ್ಧದಲ್ಲಿ ಕರ್ಣ ಸಾವನ್ನಪ್ಪುತ್ತಾನೆ. ಇದಾದ ಬಳಿಕ ಕುಂತಿಯು ಕಾಡಿಗೆ ಹೋಗುತ್ತಾಳೆ. ಜೀವನ ಪೂರ್ತಿ ಕಾಡಿನಲ್ಲೇ ಕಳೆದು ಕೊನೆಗೆ ಬೆಂಕಿಗೆ ಆಹುತಿಯಾಗುತ್ತಾಳೆ.
ಅಹಲ್ಯಾ
ಅಹಲ್ಯಾಳು ಋಷಿ ಗೌತಮ ಮಹರ್ಷಿಯ ಪತ್ನಿ. ಅಹಲ್ಯಾಳ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಅಷ್ಟೊಂದು ಸೌಂದರ್ಯವತಿ ಈಕೆ. ಅಹಲ್ಯೆಯನ್ನು ಪಂಚಕನ್ಯೆಯರ ನಾಯಕಿ ಎಂದು ಕರೆಯಲಾಗುತ್ತದೆ. ಬ್ರಹ್ಮದೇವರು ಈಕೆಯನ್ನು ವಿಶ್ವದ ಸುಂದರ ಮಹಿಳೆಯನ್ನಾಗಿ ಸೃಷ್ಟಿಸಿದ್ದಾನೆ ಅಂತಾನೂ ಹೇಳಲಾಗುತ್ತದೆ. ಗೌತಮ ಮಹರ್ಷಿಯು ಈಕೆಯ ಮೇಲೆ ಅನುಮಾನಪಟ್ಟು ಕಲ್ಲಾಗಿರು ಅಂತ ಶಾಪ ನೀಡುತ್ತಾನೆ. ಶ್ರೀರಾಮನ ಸ್ಪರ್ಶದಿಂದ ಮತ್ತೆ ಆಕೆ ಮರುಜೀವವನ್ನು ಪಡೆಯುತ್ತಾಳೆ. ಹೀಗಾಗಿ ಆಕೆಯನ್ನೂ ಕೂಡ ಕನ್ಯೆ ಅಂತಲೇ ಪರಿಗಣಿಸಲಾಗುತ್ತದೆ.
ತಾರಾ
ತಾರಾ ಕಿಷ್ಕಿಂಧೆಯ ರಾಣಿ ಮತ್ತು ವಾನರ ರಾಜ ವಾಲಿಯ ಪತ್ನಿ. ವಾಲಿಯ ಮರಣದ ನಂತರ ಆಕೆ ಮತ್ತೆ ವಾಲಿಯ ಸಹೋದರ ಸುಗ್ರೀವನನ್ನು ಮದುವೆಯಾಗಿ ಮತ್ತೆ ರಾಣಿಯಾಗುತ್ತಾಳೆ. ಅಷ್ಟೇ ಅಲ್ಲದೇ, ತಾರಾಳು ವಾನರರ ವೈದ್ಯನಾಗಿದ್ದ ಸುಶೇನಾನ ಮಗಳು ಕೂಡ ಹೌದು. ಕೆಲವು ಮೂಲಗಳ ಪ್ರಕಾರ ತಾರಾಳನ್ನು ಸಮುದ್ರ ಮಂಥನದಿಂದ ಬಂದ ಅಪ್ಸರೆ ಅಂತಾನೂ ಹೇಳಲಾಗುತ್ತದೆ. ವಾಲಿಯನ್ನು ಮದುವೆಯಾಗಿದ್ದ ಆಕೆ ಅಂಗದ ಎಂಬ ಮಗನನ್ನು ಪಡೆಯುತ್ತಾಳೆ.
ವಾಲಿಯನ್ನು ಆತನ ಸಹೋದರನಾದ ಸುಗ್ರೀವನು ರಾಮನ ಸಹಾಯದಿಂದ ಕೊಂದಿದ್ದನು. ಹೀಗಾಗಿ ತಾರಾಳು ರಾಮನಿಗೆ ಬಲಿಯ ಕೈಯಿಂದ ಸಾವನ್ನಪ್ಪುವಂತೆ ಶಾಪ ನೀಡುತ್ತಾಳೆ. ಅವಳ ಮಾತಿನಂತೆ ದ್ವಾಪರ ಯುಗದಲ್ಲಿ ಕೃಷ್ಣನಾಗಿ ಜನಿಸಿದವನೇ ಬಲಿಯ ಎರಡನೇ ಜನ್ಮವಾದ ಭಿಲ್ ಜರಾ ಎಂಬ ಭೇಟೆಗಾರನ ಕೈಯಿಂದಲೇ ಸಾವನ್ನಪ್ಪುತ್ತಾನೆ. ಇನ್ನೂ ತಾರಾಳು ಕೂಡ ಕನ್ಯೆಯಾಗಿಯೇ ಉಳಿಯುವ ವರ ಪಡೆದಿದ್ದಳು ಅಂತ ಹೇಳಲಾಗುತ್ತದೆ.
ಮಂಡೋದರಿ
ಮಂಡೋದರಿ ಲಂಕಾದ ರಾಕ್ಷಸ ರಾವಣನ ರಾಣಿ. ಹಿಂದೂ ಮಹಾಕಾವ್ಯಗಳಲ್ಲಿ ಆಕೆಯನ್ನು ಸುಂದರಿ, ಧರ್ಮನಿಷ್ಠೆ ಮತ್ತು ನೀತಿವಂತೆ ಅಂತಳೂ ಕರೆಯಲಾಗುತ್ತದೆ. ಪುರಾಣದ ಕಥೆಗಳ ಪ್ರಕಾರ ಮಧುರಾ ಎಂಬ ಅಪ್ಸರೆಯು ಶಾಪಗ್ರಸ್ತಳಾಗಿ 12 ವರ್ಷಗಳ ಕಾಲ ಬಾವಿಯಲ್ಲಿ ಕಪ್ಪೆಯಾಗಿ ಬಂಧಿಯಾಗಿದ್ದಳು. ಆ ನಂತರ ಆಕೆ ಮತ್ತೆ ತನ್ನ ಸೌಂದರ್ಯವನ್ನು ಮರಳಿ ಪಡೆಯುತ್ತಾಳೆ. ಈ ಎರಡು ಸಂದರ್ಭದಲ್ಲೂ ಆಕೆಯನ್ನು ತನ್ನ ಮಗಳಾಗಿ ಮಯಾಸುರ ದತ್ತು ಪಡೆಯುತ್ತಾನೆ.
ಮಯಾಸುರನ ಮನೆಗೆ ಬಂದಿದ್ದ ರಾವಣನು ಮಂಡೋದರಿಯನ್ನು ಪ್ರೀತಿಸಿ ಮದುವೆಯಾಗಿರುತ್ತಾನೆ. ಅವರಿಗೆ ಮೂರು ಮಕ್ಕಳು ಕೂಡ ಜನಿಸುತ್ತಾರೆ. ಮೇಘನಾದ , ಅತಿಕಾಯ ಮತ್ತು ಅಕ್ಷಯಕುಮಾರ. ಇನ್ನೂ ರಾವಣ ಕೆಟ್ಟವನಾಗಿದ್ದರೂ ಕೂಡ ಆಕೆ ತನ್ನ ಪತಿಯನ್ನು ತುಂಬಾನೇ ಪ್ರೀತಿಸುತ್ತಾಳೆ. ಆತನ ತಪ್ಪಿನ ಬಗ್ಗೆ ಹೇಳುತ್ತಾ ಸನ್ಮಾರ್ಗದಲ್ಲಿ ನಡೆಯುವಂತೆ ಸಲಹೆ ನೀಡುತ್ತಾಳೆ. ಆದರೆ ರಾವಣನ ಕಿವಿ ಇದು ಬೀಳೋದೇ ಇಲ್ಲ. ರಾಮಾಯಣದಲ್ಲಿ ಮಂಡೋದರಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿತ್ತು.
ಈ ಐದು ಜನ ಮಹಿಳೆಯರನ್ನು ಈಗಲೂ ಕೂಡ ಕನ್ಯೆಯರೆಂದು ಪರಿಗಣಿಸಲಾಗುತ್ತದೆ. ಹಾಗೂ ಇವರಿಗೆ ಪವಿತ್ರ ಸ್ಥಾನ ನೀಡಲಾಗಿದೆ.



Click it and Unblock the Notifications


