Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಪ್ರಧಾನಿ ಮೋದಿಗೆ ರಾಖಿ ಕಟ್ಟಲಿದ್ದಾರೆ ಪಾಕಿಸ್ತಾನದ ಸಹೋದರಿ..! ಯಾರು ಈ ಶೇಖ್ ಗೊತ್ತಾ?
ರಕ್ಷಾ ಬಂಧನ ಸಹೋದರ ಸಹೋದರಿಯರ ಹಬ್ಬ. ಈ ದಿನ ಸಹೋದರಿಯರು ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ಹಬ್ಬ ಆಚರಿಸುತ್ತಾರೆ. ರಕ್ಷಾ ಬಂಧನ ಅಥವಾ ರಾಖಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಆಚರಿಸಲಾಗುತ್ತಿದೆ. ಈ ದಿನ ಸಹೋಧರರಿಗೆ ರಾಖಿ ಕಟ್ಟಲೆಂದು ಸಹೋದರಿ ದೂರದ ಊರಿಗೆ ಹೋಗಿ ಸರ್ಪ್ರೈಸ್ ಆಗಿ ಗಿಫ್ಟ್ ನೀಡಿ ರಾಖಿ ಕಟ್ಟುವುದು ಸಹ ನಾವು ನೋಡುತ್ತೇವೆ.
ಇದು ಭಾಂದವ್ಯ ಹೆಚ್ಚಿಸುವ ಒಂದು ಹಬ್ಬವಾಗಿದೆ. ಇನ್ನು ಈ ದಿನವೇ ವಿಶೇಷ ಆಗಿರೋದ್ರಿಂದ ದೇಶದ ಪ್ರಮುಖ ನಾಯಕರು, ನಟ, ನಟಿಯರು ಸೇರಿ ಎಲ್ಲರು ಆಚರಿಸುತ್ತಾರೆ. ಅವರಲ್ಲಿ ಪ್ರಧಾನಿ ಮೋದಿ ಅವರು ಸಹ ರಕ್ಷಾ ಬಂಧನ ಆಚರಿಸುತ್ತಾರೆ. ಹೌದು ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನದ ಸಹೋದರಿಗೆ ಪ್ರತಿ ವರ್ಷವೂ ರಾಖಿ ಕಳುಹಿಸುವುದು ವಿಶೇಷ.

ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನ ಮೂಲದ ಸಹೋದರಿ ಕಮರ್ ಶೇಖ್ ರಾಖಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ. ಅವರು ಮೂರು ದಶಕಗಳಿಂದ ಈ ರಾಖಿ ಕಳುಹಿಸುವ ಸಂಪ್ರದಾಯವನ್ನು ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ಪ್ರಧಾನಿ ಮೋದಿ ಅವರನ್ನು ಖುದ್ದು ಭೇಟಿಯಾಗಿ ರಾಖಿ ಕಟ್ಟುತ್ತಿದ್ದರು. ಆದ್ರೆ ಕೊರೊನಾ ಸಮಯದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರಲಾಗಿರಲಿಲ್ಲ.
ಇನ್ನು ಈ ಬಾರಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ರಾಖಿ ಕಟ್ಟಲು ಮುಂದಾಗಲಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ನಾನೇ ಬಂದು ರಾಖಿ ಕಟ್ಟುತ್ತೇನೆ. ಓದುವ ಹವ್ಯಾಸವಿರುವ ಅವರಿಗೆ ಕೃಷಿ ಸಂಬಂಧಿತ ಪುಸ್ತಕವನ್ನೂ ಉಡುಗೊರೆಯಾಗಿ ನೀಡುತ್ತೇನೆ. ಕಳೆದ 2-3 ವರ್ಷಗಳಿಂದ , ಕೋವಿಡ್‌ನಿಂದಾಗಿ ನನಗೆ ಹೋಗಲು ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ನಾನು ಅವರನ್ನು ಖುದ್ದಾಗಿ ಭೇಟಿಯಾಗುತ್ತೇನೆ ಎಂದು ಕಮರ್ ಶೇಖ್ ಹೇಳಿದ್ದಾರೆ.
ಯಾರು ಈ ಕಮರ್ ಶೇಖ್?
ಕಮರ್ ಶೇಖ್ ಅವರು ಪಾಕಿಸ್ತಾನದ ಕರಾಚಿಯಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು ಮತ್ತು 1981 ರಲ್ಲಿ ಮೊಹ್ಸಿನ್ ಶೇಖ್ ಅವರನ್ನು ವಿವಾಹವಾದರು. "ನಾನು ಅವರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕೋರುತ್ತೇನೆ. ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರತಿದಿನ ಅವರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಾನು ನಂಬುತ್ತೇನೆ.
ಈ ಹಿಂದೆ ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಲಿ ಎಂದು ನಾನು ಪ್ರಾರ್ಥಿಸಿದ್ದೆ ಮತ್ತು ಅವರು ಆಗಿದ್ದರು. ನಾನು ರಾಖಿ ಕಟ್ಟಿ ಅವರು ಭಾರತದ ಪ್ರಧಾನಿಯಾಗಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದೆ ಬಳಿಕ ಅವರು ಪ್ರಧಾನಿಯೂ ಆದರೂ, ಅವರು ದೇಶಕ್ಕಾಗಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ ಎಂದು ಶೇಖ್ ಹೇಳಿದ್ದಾರೆ.
ಕರಮ್ ಶೇಖ್ 1990 ರಲ್ಲಿ ಆಗಿನ ಗುಜರಾತ್ ರಾಜ್ಯಪಾಲರಾಗಿದ್ದ ದಿವಂಗತ ಡಾ. ಸ್ವರೂಪ್ ಸಿಂಗ್ ಮೂಲಕ ಪ್ರಧಾನಿ ಮೋದಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಸ್ವರೂಪ್ ಸಿಂಗ್ ಭೇಟಿಯಾಗಲು ತೆರಳಿದ್ದ ಶೇಖ್‌ಗೆ ಅಚಾನಕ್ ಆಗ ಪ್ರಧಾನಿ ಮೋದಿ ಸಹ ಸಿಕ್ಕಿಬಿಟ್ಟಿದ್ದರು ಅಂದು ಪರಿಚಯವಾದ ಬಳಿಕ ಪ್ರತಿ ವರ್ಷ ರಾಖಿ ಕಟ್ಟಲು ದೆಹಲಿಗೆ ಬರುವುದಾಗಿ ಹೇಳಿದ್ದರು. ಈ ಮಾತಿನಂತೆ ನಡೆದುಕೊಂಡಿದ್ದ ಶೇಖ್ ಪ್ರತಿ ವರ್ಷ ರಾಖಿ ಕಟ್ಟುತ್ತಿದ್ದತು. ಬರಲು ಆಗದೆ ಇದ್ದಾಗ ಪೋಸ್ಟ್ ಮೂಲಕ ಕಳುಹಿಸುತ್ತಿದ್ದರು. ಹೀಗಾಗಿ ಈ ವರ್ಷದ ರಕ್ಷಾ ಬಂಧನದ ವೇಳೆಯೂ ಸಹ ದೆಹಲಿಗೆ ಬರುವುದಾಗಿ ಅವರು ಹೇಳಿದ್ದಾರೆ.



Click it and Unblock the Notifications
