Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪದ್ಮಿನಿ ಏಕಾದಶಿ 2023: ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿ!
ಈ ಶ್ರಾವಣ ತಿಂಗಳಿನಲ್ಲಿ ಮೂರು ವರ್ಷದ ನಂತರ ಪದ್ಮಿನಿ ಏಕಾದಶಿ ಬರುತ್ತಿದ್ದು, ಇದನ್ನು ಬಹಳ ವಿಶೇಷ ಅಂತ ಹೇಳಲಾಗುತ್ತದೆ. ಈ ತಿಂಗಳಿನಲ್ಲಿ ನಾವು ಭಕ್ತಿಯಿಂದ ಪೂಜಿಸಿದರೆ ವಿಷ್ಣು ಸಂತುಷ್ಟವಾಗಿ ನಮಗೆ ಮನಸ್ಸ್ ಪೂರ್ವಕವಾಗಿ ಆಶೀರ್ವಾದ ಮಾಡುತ್ತಾನಂತೆ. ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆಯುವ ದೃಷ್ಟಿಯಿಂದ ಏಕಾದಶಿ ತಿಥಿಯು ಅತ್ಯಂತ ಮಹತ್ವದ್ದಾಗಿದೆ. ಈ ದಿನದಂದು ಅವನು ತನ್ನ ಭಕ್ತರ ಕಲ್ಯಾಣವನ್ನು ಮಾಡುತ್ತಾನೆ ಎಂದು ನಂಬಲಾಗಿದೆ.
ಶ್ರಾವಣ ಮಾಸದಲ್ಲಿ ಬರುವ ಪದ್ಮಿನಿ ಏಕಾದಶಿಯನ್ನು ಜುಲೈ 29 ರಂದು ಆಚರಿಸಲಾಗುತ್ತದೆ. ಈ ಏಕಾದಶಿಯನ್ನು ಅತ್ಯಂತ ಮಂಗಳಕರ ಅಂತ ಪರಿಗಣಿಸಲಾಗಿದೆ. ಈ ಏಕಾದಶಿಯಂದು ದಾನಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅಷ್ಟಕ್ಕು ಈ ವರ್ಷ ಪದ್ಮಿನಿ ಏಕಾದಶಿಯಂದು ಲಕ್ಷ್ಮಿ-ನಾರಾಯಣನ ಅನುಗ್ರಹವನ್ನು ಪಡೆಯಲು ನಿಮ್ಮ ರಾಶಿಗೆ ಅನುಗುಣವಾಗಿ ನೀವು ಯಾವ ವಸ್ತುಗಳನ್ನು ದಾನ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳೋಣ.

ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು
ಮೇಷ ರಾಶಿ : ಕೆಂಪು ಬಟ್ಟೆ, ತಾಮ್ರದ ಪಾತ್ರೆಗಳು, ಕುಂಕುಮ, ಬೆಲ್ಲ
ವೃಷಭ ರಾಶಿ : ಬಿಳಿ ಬಟ್ಟೆ, ತುಪ್ಪ, ಸುಗಂಧ, ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬೆಳ್ಳಿ ಕಾಲುಂಗುರಗಳು
ಮಿಥುನ ರಾಶಿ : ಬಟ್ಟೆ, ಹಸಿರು ಹಣ್ಣುಗಳು, ಕಂಚಿನ ಪಾತ್ರೆಗಳು, ಶಂಖಗಳು, ನಾಣ್ಯಗಳು
ಕರ್ಕಾಟಕ ರಾಶಿ : ತುಪ್ಪ, ಅಕ್ಕಿ, ಹಾಲಿನ ವಸ್ತುಗಳು, ಬಿಳಿ ಬಣ್ಣದ ಬಟ್ಟೆಗಳು
ಸಿಂಹ ರಾಶಿ : ಶಂಖ ಚಿಪ್ಪುಗಳು, ಬೆಳ್ಳಿ ಮತ್ತು ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಬೇವಿನ ದಾನ
ಕನ್ಯಾ ರಾಶಿ : ಹಸಿರು ಹಣ್ಣುಗಳು, ವಸ್ತ್ರಗಳು,
ತುಲಾ ರಾಶಿ : ದೇವಸ್ಥಾನದಲ್ಲಿ ಹಾಲು, ಬಿಳಿ ಬಟ್ಟೆ, ಸುಗಂಧ, ಪರಿಮಳಯುಕ್ತ ಹೂವುಗಳಿಂದ ಮಾಡಿದ ಸಿಹಿತಿಂಡಿಗಳು
ವೃಶ್ಚಿಕ ರಾಶಿ : ಕೆಂಪು ಸಿಹಿತಿಂಡಿಗಳು, ಕೇಸರಿ, ಬೆಲ್ಲ, ಜೇನು, ಕೆಂಪು ಬಟ್ಟೆ
ಧನು ರಾಶಿ : ಹಳದಿ ಬಟ್ಟೆ, ಹಣ್ಣುಗಳು, ಲೇಖನ ಸಾಮಗ್ರಿಗಳು
ಮಕರ ರಾಶಿ : ಕಪ್ಪು ಎಳ್ಳು, ಎಣ್ಣೆ, ನೀಲಿ ಬಟ್ಟೆಗಳು, ಕಪ್ಪು ನೀಲಿ ವಸ್ತ್ರಗಳು ಸಿಹಿತಿಂಡಿಗಳು, ಬೇಸನ್ ಲಡ್ಡೂಗಳು, ಪುಸ್ತಕ, ಪೆನ್ಸಿಲ್, ಪೆನ್
ಕುಂಭ ರಾಶಿ : ಕಪ್ಪು ಎಳ್ಳು, ಬಾರ್ಲಿ, ನೀಲಿ ಮತ್ತು ಕಪ್ಪು ಬಟ್ಟೆ
ಮೀನ ರಾಶಿ : ಹಳದಿ ಸಿಹಿತಿಂಡಿಗಳು, ಬೇಸನ್ ಲಡ್ಡುಗಳು, ಪುಸ್ತಕ, ಪೆನ್ಸಿಲ್, ಪೆನ್ನು
ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿದರೆ ಭಗವಾನ್ ವಿಷ್ಣುವಿನ ಆಶೀರ್ವಾದ ಪಡೆಯಬಹುದಂತೆ.



Click it and Unblock the Notifications
