Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪದ್ಮಿನಿ ಏಕಾದಶಿ 2023 : ದಾಂಪತ್ಯ, ಆರ್ಥಿಕ ಸಮಸ್ಯೆಗಳಿಗೆ ಈ ರೀತಿ ಪರಿಹಾರ ಕಂಡುಕೊಳ್ಳಿ!
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದಲ್ಲಿ ಬರುವ ಪದ್ಮಿನಿ ಏಕಾದಶಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪದ್ಮಿನಿ ಏಕಾದಶಿಯು ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಹೀಗಾಗಿ ಪದ್ಮಿಣಿ ಏಕಾದಶಿಯು ಹಿಂದೂಗಳಿಗೆ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಪದ್ಮಿನಿ ಏಕಾದಶಿಯ ದಿನದಂದು ಭಗವಾನ್ ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದರಿಂದ ನಮೆಲ್ಲಾ ಕಷ್ಟಗಳೆಲ್ಲಾ ಬಗೆಹರಿದು ಇಷ್ಟಾರ್ಥಗಳು ಈಡೇರುತ್ತೆ ಎನ್ನುವ ನಂಬಿಕೆಯಿದೆ.
ಪದ್ಮಿನಿ ಏಕಾದಶಿಯ ದಿನದಂದು ಶ್ರೀ ಹರಿಯ ಜೊತೆಗೆ ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ನಿಮಗೆ ಏನಾದರೂ ಆರ್ಥಿಕ ಸಂಕಷ್ಟಗಳಿದ್ದರೆ, ನಿಮ್ಮ ಆರ್ಥಿಕ ಪರಿಸ್ಥಿತಿಯೂ ಸುಧಾರಣೆಯಾಗುತ್ತೆ ಎಂದು ನಂಬಲಾಗಿದೆ. ಅಷ್ಟಕ್ಕು ಪದ್ಮಿನಿ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಯಾವ ರೀತಿ ಪೂಜಿಸಬೇಕು ಅನ್ನೋದನ್ನು ತಿಳಿಯೋಣ.
ಪದ್ಮಿನಿ ಏಕಾದಶಿ 2023 ನಕಾರಾತ್ಮಕತೆಯನ್ನು ತೊಡೆದುಹಾಕಲು ಪರಿಹಾರ

ಪದ್ಮಿನಿ ಏಕಾದಶಿಯಂದು ನಾರಾಯಣ ಕವಚವನ್ನು ಪಠಿಸಿ!
ಪದ್ಮಿನಿ ಏಕಾದಶಿಯನ್ನು ಈ ನಾರಾಯಣ ಕವಚವನ್ನು ಪಠಿಸೋದ್ರಿಂದ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತುಂಬಾನೇ ಒಳ್ಳೆಯದಾಗಲಿದೆ. ನಿಮ್ಮ ಮನಸ್ಸಿನ ಆಂತರಿಕ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಹಾಗೂ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿ ಋಣಾತ್ಮಕ ಆಲೋಚನೆಗಳು ಬಾರದಂತೆ ತಡೆಯುತ್ತದೆ. ಇನ್ನೂ ಈ ನಾರಾಯಣ ಕವಚವನ್ನು ಪಠಿಸುವಾಗ ಆಂತರಿಕ ಹಾಗೂ ಮಾನಸಿಕ ಶುದ್ಧಿಯನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.
ವೈವಾಹಿಕ ಸಮಸ್ಯೆಗೆ ಈ ರೀತಿ ಪರಿಹಾರ ಕಂಡುಕೊಳ್ಳಿ!
ವೈವಾಹಿಕ ಜೀವನ ಎಂದರೆ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ. ಈ ಸಮಸ್ಯೆಗೆ ಎಷ್ಟೇ ಕಷ್ಟ ಪಟ್ಟರೂ ಕೂಡ ಪರಿಹಾರವನ್ನು ಕಂಡುಕೊಳ್ಳೋದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವವರು ಪದ್ಮಿನಿ ಏಕಾದಶಿಯ ದಿನ ನಿಮ್ಮೆಲ್ಲಾ ದಾಂಪತ್ಯ ಸಮಸ್ಯಗಳಿಂದ ಹೊರಬರಬಹುದು. ಅಷ್ಟಕ್ಕು ಏನೆಲ್ಲಾ ಪರಿಹಾರವನ್ನು ಮಾಡೇಕು ಅನ್ನೋದನ್ನು ತಿಳಿಯೋಣ.
- ಪದ್ಮಿನಿ ಏಕಾದಶಿಯ ದಿನ ಆಲದ ಮರವನ್ನು ಪೂಜಿಸುವುದರಿಂದ ವಿಳಂಬವಾಗುತ್ತಿರುವ ವಿವಾಹ ಆದಷ್ಟು ಬೇಗ ನೆರವೇರುತ್ತದೆ
- ಈ ದಿನ ಪತಿ-ಪತ್ನಿಯರು ಭಕ್ತಿಯಿಂದ ಲಕ್ಷ್ಮೀ ಹಾಗೂ ವಿಷ್ಣುವನ್ನು ಪೂಜಿಸಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
- ಪತಿ-ಪತ್ನಿ ಒಟ್ಟಿಗೆ ಬಾಳೆಗಿಡಕ್ಕೆ ಪ್ರದಕ್ಷಿಣೆ ಹಾಕೋದ್ರಿಂದ ನಿಮ್ಮ ನಡುವಿನ ಪ್ರೀತಿ ಹೆಚ್ಚಾಗುತ್ತದೆ
ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದು ಹೇಗೆ?
- ಪದ್ಮಿನಿ ಏಕಾದಶಿಯ ದಿನ ಕಮಾನಿನಲ್ಲಿ ಶಂಖವನ್ನು ಇಡುವುದರಿಂದ ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ
- ಈ ದಿನ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸುವ ಮೂಲಕ ವಿಷ್ಣುವಿನ ಜೊತೆಗೆ ಲಕ್ಷ್ಮೀಯ ಆಶೀರ್ವಾದ ನಿಮ್ಮ ಮೇಲಿರುತ್ತದೆ
- ಪದ್ಮಿನಿ ಏಕಾದಶಿಯ ದಿನದಂದು ಲಕ್ಷ್ಮಿ ದೇವಿಯ ಮಂತ್ರಗಳನ್ನು ಪಠಿಸುವುದರಿಂದ ಹಣದ ಸಮಸ್ಯೆಗಳು ಪರಿಹಾರವಾಗುತ್ತವೆ.
ಪದ್ಮಿನಿ ಏಕಾದಶಿ 2023 ಉದ್ಯೋಗದಲ್ಲಿ ಬಡ್ತಿಗಾಗಿ ಏನು ಮಾಡಬೇಕು?
- ಉದ್ಯೋಗದಲ್ಲಿ ಪ್ರಗತಿ ಹೊಂದಲು ಪದ್ಮಿನಿ ಏಕಾದಶಿಯ ದಿನ ಹಳದಿ ವಸ್ತ್ರವನ್ನು ದಾನ ಮಾಡಬೇಕು.
- ಏಕಾದಶಿಯ ದಾನವನ್ನು ಮಹಾ ದಾನ ಎಂದು ಕರೆಯಲಾಗುತ್ತದೆ
- ಈ ದಿನದಂದು ದಾನ ಮಾಡುವುದರಿಂದ ಆ ದಾನ ಫಲವನ್ನು ಪಡೆಯುತ್ತೀರಿ
- ಬಟ್ಟೆಯ ಹೊರತಾಗಿ, ಧಾನ್ಯಗಳನ್ನು ಅಥವಾ ನಿಮ್ಮ ಆದಾಯದಿಂದ ಸ್ವಲ್ಪ ಮೊತ್ತವನ್ನು ದಾನ ಮಾಡುವುದು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತೀರಿ
ಪದ್ಮಿನಿ ಏಕಾದಶಿಯ ದಿನದಂದು ಈ ಕ್ರಮಗಳನ್ನು ಅನುಸರಿಸೋದ್ರಿಂದ ನೀವು ಭಗವಾನ್ ವಿಷ್ಣುವಿನ ಬೆಂಬಲ ಮತ್ತು ಅನುಗ್ರಹವನ್ನು ಪಡೆಯುವುದು ಮಾತ್ರವಲ್ಲ. ಅದರ ಜೊತೆಗೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹೀಗಾಗಿ ಈ ವಿಶೇಷವಾದ ಶ್ರಾವಣ ಮಾಸದಲ್ಲಿ ಬಂದಿರೋ ಪದ್ಮಿನಿ ಏಕಾದಶಿಯಂದು ಭಕ್ತಿ-ಭಾವದಿಂದ ವಿಷ್ಣುವನ್ನು ಸ್ಮರಿಸಿ.



Click it and Unblock the Notifications
