Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೊಸ ವರ್ಷದಲ್ಲಿ ಆಧಾರ್ ಸೇರಿ ಈ 5 ಬದಲಾವಣೆಯಾಗಲಿದೆ, ಈ ಮಾಹಿತಿ ತಿಳಿದಿದ್ದರೆ ಒಳ್ಳೆಯದು
ಹೊಸ ವರ್ಷ ನಮ್ಮ-ನಿಮ್ಮೆಲ್ಲರ ಜೀವನದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳನ್ನು ತರಲಿ ಎಂಬುವುದೇ ಪ್ರತಿಯೊಬ್ಬರ ಆಶಯ. ಮುಂದೆ ಏನೆಲ್ಲಾ ಬದಲಾವಣೆಯಾಗುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಬದಲಾವಣೆ ಖಂಡಿತ ಆಗಲಿದೆ. ಈ ಬದಲಾವಣೆ ಬಗ್ಗೆ ನೀವು ತಿಳಿದರಲೇಬೇಕು, ಆ ಬದಲಾವಣೆಗಳೇನು ಎಂದು ನೋಡೋಣ ಬನ್ನಿ:

ಡೀಮಾಟ್ ನಾಮಿನೇಷನ್
ಸ್ಟಾಕ್ ಮಾರ್ಕೆಟಿಂಗ್‌ನಲ್ಲಿ ತೊಡಗಿರುವವರಿಗೆ ಇದು ತುಂಬಾ ಮುಖ್ಯವಾಗಿದೆ. SEBI ಜನವರಿ 1 2024ರೊಳಗೆ ಡೀಮಾಟ್ ಅಕೌಂಟ್ ಹೊಂದಿರುವವರಿಗೆ ನಾಮಿನೇಷನ್‌ಗೆ ಹೆಸರು ಸೇರಿಸಲು, ನಾಮಿನೇಷನ್‌ನಿಂದ ಹೆಸರು ತೆಗೆಯಲು ಹೇಳಿದರೆ, ಇದನ್ನು ಮಾಡದವರಿಗೆ ಸ್ಟಾಕ್‌ನಲ್ಲಿ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ ಲಾಕರ್ ಅಗ್ರಿಮೆಂಟ್
ಬ್ಯಾಂಕ್ ಲಾಕರ್ ಅಗ್ರಿಮೆಂಟ್ ಜನವರಿ 1, 2024ರಿಂದ ಬದಲಾಗಲಿದೆ. ಆರ್‌ಬಿಐ ಬ್ಯಾಂಕ್ ಲಾಕರ್ ರಿವೈಸ್ ಮಾಡಲು ಡಿಸೆಂಬರ್ 31, 2023 ಗಡುವು ನೀಡಿದೆ, ಈ ರೀತಿ ಮಾಡದೆ ಇದ್ದರೆ ಆ ಲಾಕರ್ ಫ್ರೋಜ್ ಆಗಲಿದೆ. ಈ ಕುರಿತು ಬ್ಯಾಂಕ್ ಗ್ರಾಹಕರು ಗಮನಹರಿಸಬೇಕು.
ಆಧಾರ್ ಅಪ್‌ಡೇಟ್‌ಗೆ ಗಡುವು
ಆಧಾರ್‌ಗೆ ಕಾರ್ಡ್‌ನಲ್ಲಿ ಏನಾದರೂ ಮಾಹಿತಿ ಬದಲಾವಣೆ ಫ್ರೀ ಆಗಿ ಮಾಡಲು ಡಿಸೆಂಬರ್ 31 ಗಡುವು ನೀಡಿದೆ, ಜನವರಿ 1, 2024ರ ನಂತರ 50 ರುಪಾಯಿ ಪಾವತಿಸಬೇಕಾಗುವುದು.
ಸಿಮ್ ಕಾರ್ಡ್‌ಗೆ ಯಾವುದೇ ಪೇಪರ್ KYC ಇರಲ್ಲ
2024ರಿಂದ ಸಿಮ್ ಕಾರ್ಡ್ ಖರೀದುವಾಗ ಆನ್‌ಲೈನ್ ಮುಖಾಂತರ KYC ಸಲ್ಲಿಸಲಾಗುವುದು, ಯಾವುದೇ ಪೇಪರ್ KYC ಇರಲ್ಲ.
ಕೆನಡಾಕ್ಕೆ ಹೋಗಬೇಕೆಂದರೆ ದುಪ್ಪಟ್ಟು ಹಣ ಬೇಕಾಗುವುದು
ಭಾರತದಿಂದ ತುಂಬಾ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಕೆನಡಾಕ್ಕೆ ಹೋಗಲು ಬಯಸುತ್ತಾರೆ . ಎಜುಕೇಷನ್ ಲೋನ್ ತೆಗೊಂಡು ವಿದೇಶದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡುವ ತುಂಬಾ ವಿದ್ಯಾರ್ಥಿಗಳಿದ್ದಾರೆ. ಆದರೆ 2024ರ ಸಾಲಿನಿಮದ ಕೆನಡಾಕ್ಕೆ ಹೀಗಿ ಓದಲು ಬಯಸಿದರೆ ದುಪ್ಪಟ್ಟು ಹಣ ಖರ್ಚಾಗುವುದು. ಕೆನಡಾ ಜನವರಿ 1ರಿಂದ ಭಾರತ ಸೇರಿ ಇತರ ದೇಶಗಳಿಂದ ಬರುವ ವಿದೇಶಿ ವಿದ್ಯಾರ್ಥಿಗಳಿಗೆ ದುಪ್ಪಟ್ಟು ಫೀಸ್ ಹಾಕಲು ತೀರ್ಮಾನ ಮಾಡಿದೆ.



Click it and Unblock the Notifications
