Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಅಯೋಧ್ಯೆ ಮಸೀದಿಗೆ ಪ್ರವಾದಿ ತಂದೆಯ ಹೆಸರು ನಾಮಕರಣ..! ಈ ತಿಂಗಳಲ್ಲಿ ಕೆಲಸ ಆರಂಭ..!
ಅಯೋಧ್ಯೆಯಲ್ಲಿ ರಾಮ ಮಂದಿರ ಹೋರಾಟಕ್ಕೆ 500 ವರ್ಷಗಳ ಇತಿಹಾಸವಿದೆ. ಆದರೆ ಕಳೆದ 2019ರಲ್ಲಿ ಬಂದ ತೀರ್ಪು ರಾಮನ ದೇವಾಲಯ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಮಸೀದಿಗೆ ಪರ್ಯಾಯ ಜಾಗ ಒದಗಿಸಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಲಾಗಿತ್ತು. ಹಾಗೆ ಆಯೋಧ್ಯೆಯಲ್ಲಿ ಮಂದಿರದ ಜೊತೆ ಭವ್ಯ ಮಸೀದಿ ಸಹ ತಲೆ ಎತ್ತಲಿದೆ ಎಂಬುದು ಸಹ ಘೋಷಣೆಯಾಗಿತ್ತು.
ಆದರೆ ಕಳೆದ ಮೂರು ವರ್ಷದಿಂದ ದೇಣಿಗೆ ಸಂಗ್ರಹಿಸುತ್ತಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಮಸೀದಿ ನಿರ್ಮಾಣದ ದಿನಾಂಕ ಘೋಷಣೆ ಮಾಡಿದೆ. ಈ ವರ್ಷದ ಮೇ ತಿಂಗಳಿನಿಂದ ಅಯೋಧ್ಯೆಯಲ್ಲಿ ಭವ್ಯ ಮಸೀದಿ ನಿರ್ಮಾಣವನ್ನು ಪ್ರಾರಂಭಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದು ಪೂರ್ಣಗೊಳ್ಳಲು ಮೂರ್ನಾಲ್ಕು ವರ್ಷ ಬೇಕಾಗುವ ಸಾಧ್ಯತೆ ಇದೆ. ಮಸೀದಿ ಯೋಜನೆಯ ಉಸ್ತುವಾರಿ ವಹಿಸುತ್ತಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಹಾಜಿ ಅರ್ಫತ್ ಶೇಖ್ ಈ ಕುರಿತು ಮಾಹಿತಿ ನೀಡಿದರು. ಯೋಜಿತ ಮಸೀದಿಗೆ ಹಣಕ್ಕಾಗಿ ಕ್ರೌಡ್-ಫಂಡಿಂಗ್ ವೆಬ್‌ಸೈಟ್ ಅನ್ನು ಸ್ಥಾಪಿಸುವ ಸಾಧ್ಯತೆಯಿದೆ ಎಂದಿದ್ದಾರೆ
ಪ್ರವಾದಿ ಮುಹಮ್ಮದ್ ಅವರ ನೆನಪಲ್ಲಿ ಮಸೀದಿಗೆ ಅವರ ತಂದೆಯಾದ "ಮಸ್ಜಿದ್ ಮುಹಮ್ಮದ್ ಬಿನ್ ಅಬ್ದುಲ್ಲಾ" ಎಂದು ಹೆಸರಿಸಲಾಗುವುದು.'ನಮ್ಮ ಪ್ರಯತ್ನವು ಜನರ ನಡುವಿನ ದ್ವೇಷವನ್ನು ಪರಸ್ಪರ ಪ್ರೀತಿಯಾಗಿ ಪರಿವರ್ತಿಸುವುದು ಎಂದಿದ್ದಾರೆ.
1992 ರಲ್ಲಿ ಬಾಬರಿ ಮಸೀದಿ ಧ್ವಂಸ ಕಾನೂನುಬಾಹಿರ ಎಂದು 2019 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಬಾಬರಿ ಮಸೀದಿಯ ಕೆಳಗೆ ಇಸ್ಲಾಮಿಕ್ ಅಲ್ಲದ ಕಟ್ಟಡವಿದೆ ಎಂದು ತೀರ್ಪು ನೀಡಿತು. ವಿವಾದಿತ ಭೂಮಿಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗುವುದು ಮತ್ತು ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರ ಪಾಲಿಗೆ ಭೂಮಿಯನ್ನು ನೀಡಲಾಗುವುದು ಎಂದು ತೀರ್ಪು ನೀಡಿತು.
ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿರುವ ಧನ್ನಿಪುರದಲ್ಲಿ ಪ್ರವಾದಿಯವರ ಹೆಸರಿನಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯನ್ನು ನಿರ್ಮಿಸಲಾಗುತ್ತಿದೆ. ಅಯೋಧ್ಯೆ ರಾಮ ಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಉತ್ತರ ಪ್ರದೇಶ ಸರ್ಕಾರವು ಮುಸ್ಲಿಮರಿಗೆ ಅಲ್ಲಿ ಜಾಗ ನೀಡಿದೆ.
ಮಸೀದಿ ಬಳಿ 300 ಬೆಡ್ ಆಸ್ಪತ್ರೆ
ಈ ಮಸೀದಿ ಬಳಿಯೇ 300 ಹಾಸಿಗೆಗಳ ದತ್ತಿ ಕ್ಯಾನ್ಸರ್ ಆಸ್ಪತ್ರೆಯೊಂದನ್ನು ಕೂಡ ನಿರ್ಮಿಸಲು ಟ್ರಸ್ಟ್ ಮುಂದಾಗಿದೆ. ವೊಖಾರ್ಡ್ ಸಮೂಹ ಫಾರ್ಮಾ ಕಂಪೆನಿಯ ಅಧ್ಯಕ್ಷ ಡಾ ಹಬಿಲ್ ಖೋರಾಕಿವಾಲಾ ಅವರು ಉಚಿತವಾಗಿ ಆಸ್ಪತ್ರೆ ಸ್ಥಾಪಿಸಿ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶವನ್ನು ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಅನುದಾನ ಸಂಗ್ರಹಣೆ ಆಂದೋಲನವನ್ನು ಐಐಸಿಎಫ್ ಟ್ರಸ್ಟ್ ಆರಂಭಿಸಿದೆ.
ವಿನ್ಯಾಸ ಯೋಜನೆಗಳನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ADA) ಅಗತ್ಯ ಶುಲ್ಕಗಳೊಂದಿಗೆ ಟ್ರಸ್ಟ್ ಸಲ್ಲಿಸಿದೆ. ಸಲ್ಲಿಕೆಗಳನ್ನು ಆನ್‌ಲೈನ್‌ನಲ್ಲಿ ಮಾಡಬೇಕು ಎಂದು ಸದಸ್ಯರು ತಿಂಗಳುಗಟ್ಟಲೆ ಕಾದರು. 'ನಾವು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಿದ್ದೇವೆ. ಆದರೆ ವಿನ್ಯಾಸದ ಅಂತಿಮ ಅನುಮೋದನೆಗಾಗಿ ನಾವು ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ಪಡೆಯಬೇಕಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯು ಒಂದು ವರ್ಷದ ಸಮಯವನ್ನು ತೆಗೆದುಕೊಂಡಿತು' ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿರುವ IICF ನ ಟ್ರಸ್ಟಿ ಅರ್ಷದ್ ಅಫ್ಜಾಲ್ ಖಾನ್ ಅವರು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಲು ನಿರ್ಧರಿಸಿದರು. ಎಡಿಎ ಕಚೇರಿ, ಡಿಎಂ ಕಚೇರಿ ಮತ್ತು ಇತರ ಇಲಾಖೆಗಳಿಗೆ ದಾಖಲೆಗಳನ್ನು ನೀಡಿದ್ದಾರೆ. ರಸ್ತೆಗಳನ್ನು ವಿಸ್ತರಿಸಲು ಖಾನ್ ಎಡಿಎಗೆ ಮನವಿ ಮಾಡಿದ್ದಾರೆ. ಆದರೆ ಇದನ್ನು ಪರಿಗಣಿಸುತ್ತಿದ್ದಂತೆ ಮತ್ತೊಂದು ಅಡಚಣೆಯುಂಟಾಯಿತು ಎಂದು ತಿಳಿದುಬಂದಿದೆ.



Click it and Unblock the Notifications
